ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೇವರ ರಾಜ್ಯದಲ್ಲಿ ಭೇಟಿಯಾಗೋಣ”

“ದೇವರ ರಾಜ್ಯದಲ್ಲಿ ಭೇಟಿಯಾಗೋಣ”

“ದೇವರ ರಾಜ್ಯದಲ್ಲಿ ಭೇಟಿಯಾಗೋಣ”

“ಪ್ರೀತಿಯ ಗೆಳೆಯ ರೂಪರ್ಟ್‌, ಇಂದು ನನಗೆ ಮರಣದಂಡನೆಯ ಶಿಕ್ಷೆ ವಿಧಿಸಲ್ಪಟ್ಟಿತು. ನನಗೋಸ್ಕರ ಶೋಕಿಸದಿರು. ನಿನಗೆ ಮತ್ತು ಮನೆಯಲ್ಲಿರುವ ಎಲ್ಲರಿಗೂ ನನ್ನ ಪ್ರೀತಿಯನ್ನು ಕಳುಹಿಸುತ್ತೇನೆ. ದೇವರ ರಾಜ್ಯದಲ್ಲಿ ಭೇಟಿಯಾಗೋಣ.”

ಫ್ರಾಂಟ್ಸ್‌ ಡ್ರಾಸ್ಗ್‌ ಎಂಬ ವ್ಯಕ್ತಿಯು, 1942ರ ಜೂನ್‌ 8ರಂದು ನಾಸಿ ಸೈನಿಕರಿಂದ ಗುಂಡಿಕ್ಕಿ ಕೊಲ್ಲಲ್ಪಡುವ ಕೆಲವೇ ನಿಮಿಷಗಳಿಗೆ ಮೊದಲು ಈ ಮೇಲಿನ ಮಾತುಗಳನ್ನು ಬರೆದನು. ಅವನನ್ನು ಏಕೆ ಕೊಲ್ಲಲಾಯಿತು?

ಸ್ಲೊವೇನಿಯದ ಮಾರೀಬಾರ್‌ನಲ್ಲಿರುವ ನ್ಯಾಷನಲ್‌ ಲಿಬರೇಷನ್‌ ಮ್ಯೂಸಿಯಮ್‌ನ ದಾಖಲೆಗಳಿಗನುಸಾರ, 38 ವರ್ಷ ಪ್ರಾಯದ ಈ ಕಮ್ಮಾರನು ಜರ್ಮನರು ಸ್ವಾಧೀನಪಡಿಸಿಕೊಂಡಿದ್ದ ಸ್ಲೊವೇನಿಯದ ವೇರ್‌ಮಾನ್‌ಶಾಫ್ಟ್‌ ಎಂಬ ಪ್ಯಾರಮಿಲಿಟರಿ ಸೇನಾದಳಕ್ಕೆ ಸೇರಲು ನಿರಾಕರಿಸಿದ್ದೇ ಇದಕ್ಕೆ ಕಾರಣವಾಗಿತ್ತು. ಅವನು ಒಬ್ಬ ಬೀಬಲ್‌ಫಾರ್‌ಷರ್‌ ಅಥವಾ ಬೈಬಲ್‌ ವಿದ್ಯಾರ್ಥಿಯಾಗಿದ್ದನು; ಆ ಕ್ಷೇತ್ರದಲ್ಲಿ ಯೆಹೋವನ ಸಾಕ್ಷಿಗಳು ಹೀಗೆ ಪ್ರಸಿದ್ಧರಾಗಿದ್ದರು. ಯೆಶಾಯ 2:4ಕ್ಕೆ ಹೊಂದಿಕೆಯಲ್ಲಿ ಕಾರ್ಯನಡಿಸುತ್ತಾ ಅವನು ನಾಸಿ ಯುದ್ಧ ಕಾರ್ಯಾಚರಣೆಯನ್ನು ಬೆಂಬಲಿಸಲು ನಿರಾಕರಿಸಿದನು ಮತ್ತು ತಾನು ದೇವರ ರಾಜ್ಯದ ಪ್ರಜೆಯಾಗಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡನು.​—ಮತ್ತಾಯ 6:33.

ತನ್ನ ಸ್ವಂತ ಸ್ಥಳವಾದ ಪ್ಟೂಯ್‌ನಲ್ಲಿ ಫ್ರಾಂಟ್ಸ್‌, ದೇವರ ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಸಾರುವವನೆಂದು ಪ್ರಸಿದ್ಧನಾಗಿದ್ದನು. (ಮತ್ತಾಯ 24:14) ಅನೇಕ ಕಷ್ಟತೊಂದರೆಗಳ ಮಧ್ಯೆಯೂ, 1942ರ ಮೇ ತಿಂಗಳಿನಲ್ಲಿ ಬಂಧಿಸಲ್ಪಡುವ ತನಕ ಅವನು ಎಡೆಬಿಡದೆ ಸುವಾರ್ತೆಯನ್ನು ಸಾರಿದನು.

ಸ್ಲೊವೇನಿಯದ ಅನೇಕ ಯೆಹೋವನ ಸಾಕ್ಷಿಗಳು ನಾಸಿಗಳಿಂದ ಕ್ರೂರ ರೀತಿಯಲ್ಲಿ ಹಿಂಸಿಸಲ್ಪಟ್ಟರು. ತಮ್ಮ ಧಾರ್ಮಿಕ ನಂಬಿಕೆಗಳಿಗಾಗಿ ಕೊಲ್ಲಲ್ಪಟ್ಟ ಅನೇಕರಲ್ಲಿ ಫ್ರಾಂಟ್ಸ್‌ ಮೊದಲಿಗನಾಗಿದ್ದನು. ಪ್ರಥಮ ಶತಮಾನದ ಕ್ರೈಸ್ತರಂತೆ, ಈ ಮಾತುಗಳಿಂದ ಅವನು ಬಲಗೊಳಿಸಲ್ಪಟ್ಟನು: ‘ನಾವು ಬಹು ಸಂಕಟಗಳನ್ನು ತಾಳಿಕೊಂಡು ದೇವರ ರಾಜ್ಯದೊಳಗೆ ಸೇರಬೇಕು.’ (ಅ. ಕೃತ್ಯಗಳು 14:22) ಆ ಸ್ವರ್ಗೀಯ ಸರಕಾರದ ವಾಸ್ತವಿಕತೆಯಲ್ಲಿನ ಅವನ ನಂಬಿಕೆಯು, “ದೇವರ ರಾಜ್ಯದಲ್ಲಿ ಭೇಟಿಯಾಗೋಣ” ಎಂಬ ಅವನ ಅಂತಿಮ ನುಡಿಗಳಲ್ಲಿ ಸುವ್ಯಕ್ತವಾಗಿತ್ತು.

[ಪುಟ 32ರಲ್ಲಿರುವ ಚಿತ್ರ ಕೃಪೆ]

ಫ್ರಾಂಟ್ಸ್‌ ಡ್ರಾಸ್ಗ್‌: Photo Archive-Museum of National Liberation Maribor, Slovenia; ಪತ್ರ: Original kept in Museum of National Liberation Maribor, Slovenia