ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಜರ್ಮನಿಯ ಫೆಡರಲ್‌ ಕಾನ್‌ಸ್ಟಿಟ್ಯೂಷನಲ್‌ ಕೋರ್ಟ್‌, ಧರ್ಮವನ್ನು ಒಳಗೊಂಡಿರುವ ಯಾವ ಕಾನೂನುಬದ್ಧ ವಿಜಯಕ್ಕೆ ಸಹಾಯಮಾಡಿತು?

ಯೆಹೋವನ ಸಾಕ್ಷಿಗಳ ಕುರಿತು ಮತ್ತು ಅವರು ಸಾರ್ವಜನಿಕ ಕಾನೂನಿನ ಸಂಘಟನೆಯಾಗಿ ಕಾನೂನುಬದ್ಧ ಅಂಗೀಕಾರವನ್ನು ಪಡೆದುಕೊಳ್ಳುವುದರ ಕುರಿತು, ಇನ್ನೊಂದು ಕೋರ್ಟ್‌ ನೀಡಿದ ನಕಾರಾತ್ಮಕ ತೀರ್ಮಾನವನ್ನು ಫೆಡರಲ್‌ ಕೋರ್ಟ್‌ ರದ್ದುಗೊಳಿಸಿತು. ವಿಜಯವನ್ನು ನೀಡಿದ ತೀರ್ಮಾನವು ತಿಳಿಸಿದ್ದೇನೆಂದರೆ, ಧಾರ್ಮಿಕ ಸ್ವಾತಂತ್ರ್ಯದ ಮೇರೆಯೊಳಗೆ ಒಬ್ಬನು, ದೇಶದ ಬೇಡಿಕೆಗಳಿಗಿಂತಲೂ ಹೆಚ್ಚಾಗಿ ‘ಧಾರ್ಮಿಕ ನಂಬಿಕೆಗಳಿಗೆ ವಿಧೇಯ’ನಾಗಬಹುದು.​—8/15, ಪುಟ 8.

ಯೋಬನು ಎಷ್ಟು ದೀರ್ಘ ಕಾಲಾವಧಿಯ ವರೆಗೆ ಕಷ್ಟಾನುಭವಿಸಿದನು?

ಯೋಬನು ಅನೇಕ ವರ್ಷಗಳ ವರೆಗೆ ಕಷ್ಟಾನುಭವಿಸಿದನು ಎಂದು ಬೈಬಲಿನ ಯೋಬ ಪುಸ್ತಕವು ಸೂಚಿಸುವುದಿಲ್ಲ. ಯೋಬನ ಕಷ್ಟಾನುಭವ ಮತ್ತು ಅದರಿಂದ ಬಿಡುಗಡೆಯು ಕೆಲವೇ ತಿಂಗಳುಗಳೊಳಗೆ, ಬಹುಶಃ ಒಂದು ವರ್ಷಕ್ಕಿಂತಲೂ ಕಡಿಮೆ ಸಮಯದೊಳಗೆ ಸಂಭವಿಸಿರಬಹುದು.​—8/15, ಪುಟ 31.

ಪಿಶಾಚನು ಅಸ್ತಿತ್ವದಲ್ಲಿದ್ದಾನೆಂಬುದು ಕೇವಲ ಮೂಢನಂಬಿಕೆಯಲ್ಲ ಎಂಬ ವಿಷಯದಲ್ಲಿ ನಾವೇಕೆ ಖಾತ್ರಿಯಿಂದಿರಬಲ್ಲೆವು?

ಪಿಶಾಚನು ನೈಜ ವ್ಯಕ್ತಿಯಾಗಿದ್ದಾನೆ ಎಂಬುದು ಯೇಸು ಕ್ರಿಸ್ತನಿಗೇ ತಿಳಿದಿತ್ತು. ಯೇಸು ತನ್ನ ಆಂತರ್ಯದಲ್ಲಿದ್ದ ಯಾವುದೋ ಕೆಡುಕಿನಿಂದ ಶೋಧನೆಗೊಳಗಾಗಲಿಲ್ಲ, ಬದಲಾಗಿ ಒಬ್ಬ ನೈಜ ವ್ಯಕ್ತಿಯಿಂದ ಶೋಧಿಸಲ್ಪಟ್ಟನು. (ಮತ್ತಾಯ 4:​1-11; ಯೋಹಾನ 8:44; 14:30)​—9/1, ಪುಟ 5-6.

ಜ್ಞಾನೋಕ್ತಿ 10:15 ಹೇಳುವುದು: “ಐಶ್ವರ್ಯವಂತನಿಗೆ ಐಶ್ವರ್ಯವು ಬಲವಾದ ಕೋಟೆ; ಬಡವನಿಗೆ ಬಡತನವು ಅಳಿವು.” ಇದು ಹೇಗೆ ಸತ್ಯವೆಂದು ಕಂಡುಬರುತ್ತದೆ?

ಪೌಳಿಗೋಡೆಯಿರುವ ಪಟ್ಟಣವು ಹೇಗೆ ಅದರಲ್ಲಿ ವಾಸಿಸುವವರಿಗೆ ಒಂದಿಷ್ಟು ಪ್ರಮಾಣದ ಭದ್ರತೆಯನ್ನು ಕೊಡುತ್ತದೋ, ಹಾಗೆಯೇ ಸಿರಿಸಂಪತ್ತುಗಳು ಜೀವನದ ಕೆಲವು ಅನಿಶ್ಚಿತತೆಗಳಿಗೆ ಆಶ್ರಯವಾಗಿರಬಲ್ಲವು. ಇನ್ನೊಂದು ಕಡೆಯಲ್ಲಿ, ಅನಿರೀಕ್ಷಿತ ಬದಲಾವಣೆಗಳು ಬರುವಾಗ ಬಡತನವು ವಿನಾಶಕರವಾಗಿರಬಲ್ಲದು.​—9/15, ಪುಟ 24.

ಎನೋಷನ ದಿನಗಳಲ್ಲಿ, ಯಾವ ಅರ್ಥದಲ್ಲಿ “ಜನರು ದೇವರನ್ನು ಯೆಹೋವ ಎಂದು ಕರೆಯಲಾರಂಭಿಸಿದರು”? (ಆದಿಕಾಂಡ 4:26)

ಮಾನವ ಇತಿಹಾಸದ ಆರಂಭದಿಂದಲೂ ದೇವರ ನಾಮವು ಉಪಯೋಗದಲ್ಲಿತ್ತು; ಆದುದರಿಂದ, ಎನೋಷನ ಕಾಲದಲ್ಲಿ ಏನು ಪ್ರಾರಂಭಿಸಿತೋ ಅದು, ಯೆಹೋವನನ್ನು ನಂಬಿಕೆ ಮತ್ತು ಶುದ್ಧಾರಾಧನೆಯಿಂದ ಕರೆಯುವುದಾಗಿರಲಿಲ್ಲ. ಮನುಷ್ಯರು ದೇವರ ಹೆಸರನ್ನು ಹೊಲೆಮಾಡುತ್ತಾ ಸ್ವತಃ ತಮಗೆ ಅಥವಾ ಇನ್ನಿತರ ಮಾನವರಿಗೆ ಅದನ್ನು ಅನ್ವಯಿಸಿಕೊಂಡಿದ್ದಿರಬಹುದು ಮತ್ತು ಇಂಥವರ ಮೂಲಕವಾಗಿ ದೇವರನ್ನು ಆರಾಧಿಸುತ್ತಿರುವಂತೆ ನಟಿಸಿದ್ದಿರಬಹುದು.​—9/15, ಪುಟ 29.

ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ, “ಶಿಸ್ತು” ಎಂಬ ಪದದ ಅರ್ಥವೇನು?

ಈ ಪದವು ಯಾವುದೇ ರೀತಿಯ ದೌರ್ಜನ್ಯ ಅಥವಾ ಕ್ರೂರತೆಯನ್ನು ಸೂಚಿಸುವುದಿಲ್ಲ. (ಜ್ಞಾನೋಕ್ತಿ 4:13; 22:​15, NW) “ಶಿಸ್ತು” ಎಂಬುದರ ಗ್ರೀಕ್‌ ಪದರೂಪವು ಮುಖ್ಯವಾಗಿ ಬೋಧನೆ, ಶಿಕ್ಷಣ, ತಿದ್ದುಪಾಟು ಮತ್ತು ಕೆಲವು ಸಲ ಕಟ್ಟುನಿಟ್ಟಿನ, ಆದರೆ ಪ್ರೀತಿಯಿಂದ ಕೂಡಿದ ದಂಡನೆಯಾಗಿದೆ. ಹೆತ್ತವರು ಯೆಹೋವನನ್ನು ಅನುಕರಿಸಸಾಧ್ಯವಿರುವ ಒಂದು ಪ್ರಾಮುಖ್ಯ ವಿಧವು, ತಮ್ಮ ಮಕ್ಕಳೊಂದಿಗೆ ಒಳ್ಳೆಯ ಸಂವಾದವನ್ನು ಕಾಪಾಡಿಕೊಳ್ಳಲು ಪ್ರಯಾಸಪಡುವುದೇ ಆಗಿದೆ. (ಇಬ್ರಿಯ 12:​7-10)​—10/1, ಪುಟ 8, 10.

ಇಂದು ಸತ್ಯ ಕ್ರೈಸ್ತರು ತಾವು ದೇವರ ಆಳ್ವಿಕೆಯ ಪರವಹಿಸುತ್ತೇವೆ ಎಂಬುದನ್ನು ಹೇಗೆ ತೋರಿಸುತ್ತಾರೆ?

ದೇವರ ರಾಜ್ಯವನ್ನು ಸಮರ್ಥಿಸುವಾಗ ಯೆಹೋವನ ಸಾಕ್ಷಿಗಳು ರಾಜಕೀಯದಲ್ಲಿ ಕೈಹಾಕುವುದಿಲ್ಲ ಅಥವಾ ಐಹಿಕ ಸರಕಾರಗಳ ವಿರುದ್ಧವಾಗಿ ದಂಗೆಯನ್ನು ಕೆರಳಿಸುವುದಿಲ್ಲ. ಇದು ಸಾಕ್ಷಿಗಳು ಯಾವ ದೇಶಗಳಲ್ಲಿ ನಿಷೇಧಿಸಲ್ಪಟ್ಟಿದ್ದಾರೋ ಅಲ್ಲಿಯೂ ಸತ್ಯವಾಗಿದೆ. (ತೀತ 3:1) ಯೇಸು ಮತ್ತು ಅವನ ಆರಂಭದ ಶಿಷ್ಯರು ಮಾಡಿದಂತೆಯೇ, ಸಕಾರಾತ್ಮಕ ರೀತಿಯಲ್ಲಿ ಸಹಾಯಮಾಡಲು ಅವರು ಪ್ರಯತ್ನಿಸುತ್ತಾರೆ. ಮತ್ತು ಯಥಾರ್ಥತೆ, ನೈತಿಕ ಶುದ್ಧತೆ, ಹಾಗೂ ಸತ್ಕಾರ್ಯಗಳೆಂಬ ಹಿತಕರವಾದ ಬೈಬಲ್‌ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಜನರಿಗೆ ಸಹಾಯಮಾಡಲು ಅವರು ಪ್ರಯಾಸಪಡುತ್ತಾರೆ.​—10/15, ಪುಟ 6.

ಆ್ಯಂಡಿಸ್‌ನಲ್ಲಿ ಹೇಗೆ ಜೀವದಾಯಕ ನೀರು ಹರಿಯುತ್ತಿದೆ?

ಅಲ್ಲಿ ಯೆಹೋವನ ಸಾಕ್ಷಿಗಳು, ಕೆಚವ ಅಥವಾ ಐಮಾರ ಎಂಬ ಎರಡು ಸ್ಥಳಿಕ ಭಾಷೆಗಳಲ್ಲೂ ಬೈಬಲ್‌ ಸತ್ಯತೆಗಳನ್ನು ಜನರಿಗೆ ಕೊಂಡೊಯ್ಯಲು ಪ್ರಯತ್ನವನ್ನು ಮಾಡುತ್ತಿದ್ದಾರೆ. ಸರೋವರದ ನೀರಿನಲ್ಲಿ ಬೆಳೆಯುವಂಥ ಆಪುಹುಲ್ಲಿನಿಂದ ಮಾಡಲ್ಪಟ್ಟಿರುವ “ತೇಲುವ” ದ್ವೀಪ ದಿಬ್ಬಗಳಲ್ಲಿ ವಾಸಿಸುವವರನ್ನೊಳಗೊಂಡು, ಟಿಟಿಕಾಕ ಸರೋವರದ ದ್ವೀಪಗಳಲ್ಲಿ ವಾಸಿಸುತ್ತಿರುವ ಜನರನ್ನು ಸಾಕ್ಷಿಗಳು ಭೇಟಿಮಾಡುತ್ತಾರೆ.​—10/15, ಪುಟ 8-10.

ಆಧುನಿಕ ಸಮಯದ ಪ್ರಯಾಣಿಕ ವಿಮಾನಗಳಲ್ಲಿರುವ ಕಂಪ್ಯೂಟರ್‌ ಮಾರ್ಗದರ್ಶನ ವ್ಯವಸ್ಥೆಗೆ ಹೋಲಿಸಬಹುದಾದ ಯಾವುದನ್ನು ದೇವರು ನಮ್ಮ ಮಾರ್ಗದರ್ಶನಕ್ಕಾಗಿ ಕೊಟ್ಟಿದ್ದಾನೆ?

ದೇವರು ಮಾನವರನ್ನು ನೈತಿಕ ಮಾರ್ಗದರ್ಶನಕ್ಕಾಗಿರುವ ಸಾಮರ್ಥ್ಯದೊಂದಿಗೆ, ಅಂದರೆ ಆಂತರಿಕ ನೈತಿಕ ಪರಿಜ್ಞಾನದೊಂದಿಗೆ ಸಜ್ಜುಗೊಳಿಸಿದ್ದಾನೆ. ಇದು ಬಾಧ್ಯತೆಯಾಗಿ ಬಂದಿರುವ ನಮ್ಮ ಮನಸ್ಸಾಕ್ಷಿಯೇ ಆಗಿದೆ. (ರೋಮಾಪುರ 2:​14, 15)​—11/1, ಪುಟ 3-4.

ಯೇಸುವಿನ ಮರಣವು ಭಾರೀ ಮೌಲ್ಯವುಳ್ಳದ್ದಾಗಿದೆ ಏಕೆ?

ಪರಿಪೂರ್ಣ ಮನುಷ್ಯನಾಗಿದ್ದ ಆದಾಮನು ಪಾಪಮಾಡಿದಾಗ, ಸ್ವತಃ ತನಗಾಗಿ ಮತ್ತು ತನ್ನ ಸಂತತಿಯವರಿಗಾಗಿ ಮಾನವ ಜೀವಿತವನ್ನು ಕಳೆದುಕೊಂಡನು. (ರೋಮಾಪುರ 5:12) ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದ ಯೇಸು, ತನ್ನ ಮಾನವ ಜೀವಿತವನ್ನು ಯಜ್ಞವಾಗಿ ಅರ್ಪಿಸಿ, ನಂಬಿಗಸ್ತ ಮಾನವರು ನಿತ್ಯಜೀವವನ್ನು ಪಡೆದುಕೊಳ್ಳುವಂತೆ ಸಾಧ್ಯಮಾಡುವ ವಿಮೋಚನೆಯನ್ನು ಒದಗಿಸಿದನು.​—11/15, ಪುಟ 5-7.

ಕೊಲೊಸ್ಸೆ 3:11ರಲ್ಲಿ ತಿಳಿಸಲ್ಪಟ್ಟಿರುವ ಹೂಣರು ಯಾರಾಗಿದ್ದರು?

ಹೂಣರು, ಸುಮಾರು ಸಾ.ಶ.ಪೂ. 700ರಿಂದ 300ರ ತನಕ ಯೂರೇಷಿಯದ ಬೆಂಗಾಡಿನ ಮೇಲೆ ಆಧಿಪತ್ಯ ನಡೆಸುತ್ತಿದ್ದ ಅಲೆಮಾರಿ ಜನಾಂಗವಾಗಿದ್ದರು. ಅವರು ಅದ್ಭುತ ಕುದುರೆ ಸವಾರರಾಗಿದ್ದರು ಮತ್ತು ಯುದ್ಧವೀರರಾಗಿದ್ದರು. ಕೊಲೊಸ್ಸೆ 3:11ನೆಯ ವಚನವು, ಒಂದು ನಿರ್ದಿಷ್ಟ ಜನಾಂಗವನ್ನಲ್ಲ, ಬದಲಾಗಿ ಅನಾಗರಿಕ ಜನರಲ್ಲಿ ತೀರ ಹೀನರಾದವರನ್ನು ಸೂಚಿಸಿದ್ದಿರಬಹುದು.​—11/15, ಪುಟ 24-5.

ಸುವರ್ಣ ನಿಯಮವು, ಯಾವಾಗಲೂ ನಮ್ಮ ಗಮನಕ್ಕೆ ಅರ್ಹವಾಗಿರುವಂಥ ಒಂದು ಬೋಧನೆಯಾಗಿದೆ ಎಂದು ನಾವೇಕೆ ಹೇಳಸಾಧ್ಯವಿದೆ?

ಈ ನೀತಿಸೂತ್ರವು ಯೆಹೂದಮತ, ಬೌದ್ಧಮತ, ಗ್ರೀಕ್‌ ತತ್ತ್ವಜ್ಞಾನ ಮತ್ತು ಕನ್‌ಫ್ಯೂಷಿಯಸ್‌ ಧರ್ಮದಲ್ಲಿಯೂ ವಿವರಿಸಲ್ಪಟ್ಟಿದೆ. ಆದರೂ, ಪರ್ವತ ಪ್ರಸಂಗದಲ್ಲಿ ಯೇಸು ಏನನ್ನು ಮಾರ್ಗದರ್ಶಿಸಿದನೋ ಅದರಂತೆ ಸಕಾರಾತ್ಮಕ ಕ್ರಿಯೆಗಳನ್ನು ಮಾಡುವ ಅಗತ್ಯವಿದೆ. ಮತ್ತು ಇದು ಎಲ್ಲಾ ಕಡೆಗಳಲ್ಲಿರುವ ಮತ್ತು ಎಲ್ಲ ವಯಸ್ಸಿನ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. (ಮತ್ತಾಯ 7:12)​—12/1, ಪುಟ 3.