ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರೇ ನಿಮ್ಮ ಮಕ್ಕಳ ಆವಶ್ಯಕತೆಯನ್ನು ಪೂರೈಸಿರಿ!

ಹೆತ್ತವರೇ ನಿಮ್ಮ ಮಕ್ಕಳ ಆವಶ್ಯಕತೆಯನ್ನು ಪೂರೈಸಿರಿ!

ಹೆತ್ತವರೇ ನಿಮ್ಮ ಮಕ್ಕಳ ಆವಶ್ಯಕತೆಯನ್ನು ಪೂರೈಸಿರಿ!

ಮಕ್ಕಳಿಗೆ ಮಾರ್ಗದರ್ಶನ ಹಾಗೂ ಪ್ರೀತಿಭರಿತ ಶಿಸ್ತಿನ ಆವಶ್ಯಕತೆಯಿದೆ. ಮತ್ತು ಇದನ್ನು ವಿಶೇಷವಾಗಿ ಅವರ ಹೆತ್ತವರು ಪೂರೈಸುವ ಅಗತ್ಯವಿದೆ. ಈ ವಿಷಯದಲ್ಲಿ ಬ್ರಸಿಲ್‌ನ ಟಾನ್ಯ ಸಾಗೂರೀ ಎಂಬ ಒಬ್ಬ ಶಿಕ್ಷಕಿಯು ಹೇಳುವುದು: “ಮಜಾ ಮಾಡಲು ಪ್ರಯತ್ನಿಸುವುದೇ ಪ್ರತಿಯೊಂದು ಮಗುವಿನ ಪ್ರವೃತ್ತಿಯಾಗಿರುತ್ತದೆ. ಆದುದರಿಂದ ಈ ವಿಷಯದಲ್ಲಿ ನಿರ್ಬಂಧಗಳನ್ನು ಒಡ್ಡುವ ಅಗತ್ಯವಿದೆ. ಇದನ್ನು ಹೆತ್ತವರೇ ಮಾಡಬೇಕಾಗಿದೆ. ಅವರು ಹಾಗೆ ಮಾಡದಿದ್ದಲ್ಲಿ, ಮಕ್ಕಳು ಹದ್ದುಮೀರಿಹೋಗುತ್ತಾರೆ.”

ಆದರೂ, ಅನೇಕ ದೇಶಗಳಲ್ಲಿರುವ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಉಚ್ಚ ಸ್ಥಾನವನ್ನು ನೀಡುವಂತಹ ಸ್ವೇಚ್ಛಾ ಸಮಾಜದ ಪ್ರಭಾವವು, ಈ ಮೇಲಿನ ಸಲಹೆಯನ್ನು ಅನುಸರಿಸುವುದನ್ನು ತುಂಬ ಕಷ್ಟಕರವಾದದ್ದಾಗಿ ಮಾಡಸಾಧ್ಯವಿದೆ. ಹಾಗಾದರೆ, ಹೆತ್ತವರು ಸಹಾಯಕ್ಕಾಗಿ ಯಾರ ಕಡೆಗೆ ತಿರುಗಸಾಧ್ಯವಿದೆ? ತಮ್ಮ ಮಕ್ಕಳು “ಯೆಹೋವನಿಂದ ಬಂದ ಸ್ವಾಸ್ತ್ಯ”ವಾಗಿದ್ದಾರೆ ಎಂದು ದೇವಭಯವುಳ್ಳ ಹೆತ್ತವರು ಗ್ರಹಿಸುತ್ತಾರೆ. (ಕೀರ್ತನೆ 127:3) ಹೀಗೆ, ಮಕ್ಕಳನ್ನು ಬೆಳೆಸುವುದರಲ್ಲಿ ಮಾರ್ಗದರ್ಶನವನ್ನು ಪಡೆದುಕೊಳ್ಳಲಿಕ್ಕಾಗಿ, ದೇವರ ವಾಕ್ಯವಾಗಿರುವ ಬೈಬಲಿನ ಕಡೆಗೆ ಅವರು ನೋಡುತ್ತಾರೆ. ಉದಾಹರಣೆಗೆ, ಜ್ಞಾನೋಕ್ತಿ 13:24 ಹೇಳುವುದು: “ಬೆತ್ತಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ [“ಶಿಸ್ತನ್ನು ನೀಡುವ,” NW] ಪಿತ ಪುತ್ರನಿಗೆ ಮಿತ್ರ.”

ಬೈಬಲಿನಲ್ಲಿ “ಬೆತ್ತ” ಎಂಬ ಶಬ್ದದ ಪ್ರಯೋಗವು, ಶಾರೀರಿಕ ಶಿಕ್ಷೆಯನ್ನು ಮಾತ್ರ ಅರ್ಥೈಸುತ್ತದೆ ಎಂದು ನೆನಸುವ ಆವಶ್ಯಕತೆಯಿಲ್ಲ. ಶಿಸ್ತು ಯಾವುದೇ ರೂಪದಲ್ಲಿರಲಿ, ಅದು ತಿದ್ದುಪಾಟಿನ ಮಾಧ್ಯಮವನ್ನು ಸೂಚಿಸುತ್ತದೆ. ವಾಸ್ತವದಲ್ಲಿ, ಒಂದು ಮಗುವಿನ ಹಟಮಾರಿ ಸ್ವಭಾವವನ್ನು ಸರಿಪಡಿಸಲು ಅನೇಕವೇಳೆ ಕೇವಲ ಮಾತಿನ ಮೂಲಕ ಶಿಸ್ತು ನೀಡುವುದಷ್ಟೇ ಸಾಕಾಗಿರಬಹುದು. ಜ್ಞಾನೋಕ್ತಿ 29:17 ಹೇಳುವುದು: “ಮಗನನ್ನು ಶಿಕ್ಷಿಸು [“ಮಗನಿಗೆ ಶಿಸ್ತು ನೀಡು,” NW]; ನಿನ್ನನ್ನು ಸುದಾರಿಸುವನು; ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.”

ಅನಪೇಕ್ಷಿತ ಪ್ರವೃತ್ತಿಗಳನ್ನು ತೆಗೆದುಹಾಕಲಿಕ್ಕಾಗಿ ಮಕ್ಕಳಿಗೆ ಪ್ರೀತಿಭರಿತ ಶಿಸ್ತನ್ನು ನೀಡುವ ಅಗತ್ಯವಿದೆ. ಅಂತಹ ದೃಢವಾದ ಹಾಗೂ ದಯಾಪರ ತಿದ್ದುಪಾಟು, ಹೆತ್ತವರು ಮಗುವಿನ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಪುರಾವೆಯನ್ನು ಕೊಡುತ್ತದೆ. (ಜ್ಞಾನೋಕ್ತಿ 22:6) ಆದುದರಿಂದ, ಹೆತ್ತವರೇ ಪ್ರಯತ್ನವನ್ನು ಬಿಟ್ಟುಬಿಡಬೇಡಿ, ಪ್ರೋತ್ಸಾಹವನ್ನು ಪಡೆದುಕೊಳ್ಳಿ! ಬೈಬಲಿನ ಸದೃಢವಾದ ಹಾಗೂ ಪ್ರಾಯೋಗಿಕವಾದ ಸಲಹೆಯನ್ನು ಅನುಸರಿಸುವ ಮೂಲಕ, ನೀವು ಯೆಹೋವ ದೇವರನ್ನು ಮೆಚ್ಚಿಸುವಿರಿ ಹಾಗೂ ನಿಮ್ಮ ಮಗುವಿನ ಗೌರವವನ್ನು ಸಂಪಾದಿಸುವಿರಿ.