ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧುನಿಕ ದಿನದ ಹುತಾತ್ಮರು ಸ್ವೀಡನ್‌ನಲ್ಲಿ ಸಾಕ್ಷಿಕೊಡುತ್ತಾರೆ

ಆಧುನಿಕ ದಿನದ ಹುತಾತ್ಮರು ಸ್ವೀಡನ್‌ನಲ್ಲಿ ಸಾಕ್ಷಿಕೊಡುತ್ತಾರೆ

ರಾಜ್ಯ ಘೋಷಕರು ವರದಿ ಮಾಡುತ್ತಾ

ಆಧುನಿಕ ದಿನದ ಹುತಾತ್ಮರು ಸ್ವೀಡನ್‌ನಲ್ಲಿ ಸಾಕ್ಷಿಕೊಡುತ್ತಾರೆ

“ಸಾಕ್ಷಿ” ಎಂಬ ಶಬ್ದದ ಗ್ರೀಕ್‌ ಪದವು ಮಾರ್ಟೀರ್‌ ಎಂದಾಗಿದೆ. ಆ ಪದದಿಂದಲೇ “ಮಾರ್ಟರ್‌” ಎಂಬ ಇಂಗ್ಲಿಷ್‌ ಪದವು ಬಂದಿದೆ. ಇದರರ್ಥ, “ತನ್ನ ಮರಣದ ಮೂಲಕ ಸಾಕ್ಷಿ ಕೊಡುವವನು” ಎಂದಾಗಿದೆ. ಪ್ರಥಮ ಶತಮಾನದ ಅನೇಕ ಕ್ರೈಸ್ತರು ತಮ್ಮ ನಂಬಿಕೆಗೋಸ್ಕರ ಸಾಯುವ ಮೂಲಕ ಯೆಹೋವನ ಕುರಿತಾಗಿ ಸಾಕ್ಷಿಯನ್ನು ಕೊಟ್ಟರು.

ಅಂತೆಯೇ, 20ನೆಯ ಶತಮಾನದಲ್ಲಿ ಸಾವಿರಾರು ಸಾಕ್ಷಿಗಳು, ರಾಜಕೀಯ ಮತ್ತು ರಾಷ್ಟ್ರೀಯ ವಿವಾದಾಂಶಗಳ ಕುರಿತು ತಾಟಸ್ಥ್ಯವನ್ನು ಕಾಪಾಡಿಕೊಂಡದ್ದರಿಂದ, ಹಿಟ್ಲರನ ಕಟ್ಟಾಭಿಮಾನಿಗಳಿಂದ ಕೊಲ್ಲಲ್ಪಟ್ಟರು. ಆಧುನಿಕ ದಿನದ ಈ ಹುತಾತ್ಮರು ಸಹ ಒಂದು ಪ್ರಬಲವಾದ ಸಾಕ್ಷಿಯನ್ನು ಕೊಡುತ್ತಾರೆ. ಇತ್ತೀಚೆಗೆ ಸ್ವೀಡನ್‌ನಲ್ಲಿ ಇದೇ ಸಂಭವಿಸಿತು.

ಎರಡನೇ ವಿಶ್ವ ಯುದ್ಧವು ಅಂತ್ಯಗೊಂಡದ್ದಕ್ಕಾಗಿ ಆಚರಿಸಲಾಗುತ್ತಿರುವ 50ನೆಯ ವಾರ್ಷಿಕೋತ್ಸವದ ಸಂಬಂಧದಲ್ಲಿ ಸ್ವೀಡನ್‌ ಸರಕಾರವು, ಯೆಹೂದ್ಯರ ಸಾಮೂಹಿಕ ಹತ್ಯಾಕಾಂಡದ ಬಗ್ಗೆ ಒಂದು ರಾಷ್ಟ್ರವ್ಯಾಪಿ ಶೈಕ್ಷಣಿಕ ಕಾರ್ಯಾಚರಣೆಯನ್ನು ಆರಂಭಿಸಿತು. ಆ ಕಾರ್ಯಯೋಜನೆಯನ್ನು, ಜೀವಂತ ಇತಿಹಾಸ ಎಂದು ಕರೆಯಲಾಯಿತು. ಯೆಹೋವನ ಸಾಕ್ಷಿಗಳು ಅದರಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಆಮಂತ್ರಿಸಲಾಯಿತು.

ಯೆಹೋವನ ಸಾಕ್ಷಿಗಳು ಈ ಆಮಂತ್ರಣಕ್ಕೆ ಪ್ರತಿಕ್ರಿಯಿಸುತ್ತಾ, ಯೆಹೂದ್ಯರ ಸಾಮೂಹಿಕ ಹತ್ಯಾಕಾಂಡದ ಮರೆಯಲ್ಪಟ್ಟಿರುವ ಬಲಿಗಳು ಎಂಬ ಶೀರ್ಷಿಕೆಯುಳ್ಳ ವಸ್ತುಪ್ರದರ್ಶನವನ್ನು ಯೋಜಿಸಿದರು. ಇದು, ಸ್ಟ್ರಾಂಗ್ನಾಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಸಮ್ಮೇಳನ ಸಭಾಗೃಹದಲ್ಲಿ ಆರಂಭವಾಯಿತು. ಮೊದಲನೆಯ ದಿನದಂದು ಆಗಮಿಸಿದ 8,400 ಸಂದರ್ಶಕರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಸಾಮೂಹಿಕ ಹತ್ಯಾಕಾಂಡದಿಂದ ಪಾರಾಗಿ ಉಳಿದ ಸಾಕ್ಷಿಗಳು ಸಹ ಅಲ್ಲಿ ಉಪಸ್ಥಿತರಿದ್ದರು! 1999ರ ಅಂತ್ಯದೊಳಗೆ, ಈ ವಸ್ತುಪ್ರದರ್ಶನವು 100ಕ್ಕಿಂತಲೂ ಹೆಚ್ಚು ವಸ್ತುಸಂಗ್ರಹಾಲಯಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪ್ರದರ್ಶಿಸಲ್ಪಟ್ಟಿತು ಮತ್ತು ಸುಮಾರು 1,50,000 ಜನರು ಅದನ್ನು ನೋಡಿದ್ದರು. ಈ ಸಂದರ್ಶಕರಲ್ಲಿ ಅನೇಕ ಸರಕಾರಿ ಅಧಿಕಾರಿಗಳೂ ಇದ್ದರು. ತಾವೇನನ್ನು ನೋಡಿದ್ದರೊ ಅದರ ಬಗ್ಗೆ ಅವರು ಮೆಚ್ಚಿಕೆಯಿಂದ ಮಾತಾಡಿದರು.

ಸ್ವೀಡನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಚಟುವಟಿಕೆಗಳ ಸಂಬಂಧದಲ್ಲಿ ಬೇರೆ ಯಾವುದೇ ಘಟನೆಗೂ ಇಷ್ಟೊಂದು ವಿಸ್ತಾರವಾದ ರೀತಿಯಲ್ಲಿ ವಾರ್ತಾಮಾಧ್ಯಮದ ವರದಿಗಳು ಮತ್ತು ಒಳ್ಳೆಯ ಪ್ರಚಾರವು ದೊರೆತಿರಲಿಲ್ಲ. “ಸಾಮೂಹಿಕ ಹತ್ಯಾಕಾಂಡದ ಸಮಯದಲ್ಲಿನ ನಿಮ್ಮ ಅನುಭವಗಳನ್ನು ನೀವು ನಮಗೆ ಈ ಹಿಂದೆ ಏಕೆ ಹೇಳಲಿಲ್ಲ?” ಎಂದು ಅನೇಕ ಸಂದರ್ಶಕರು ಕೇಳಿದರು.

ಒಂದು ಸಭೆಯ ಕ್ಷೇತ್ರದಲ್ಲಿ ಆ ಪ್ರದರ್ಶನ ನಡೆದ ಬಳಿಕ, ಮನೆ ಬೈಬಲ್‌ ಅಧ್ಯಯನಗಳಲ್ಲಿ 30 ಪ್ರತಿಶತ ವೃದ್ಧಿಯನ್ನು ವರದಿಸಲಾಯಿತು! ಒಬ್ಬ ಸಾಕ್ಷಿಯು ತನ್ನ ಸಹೋದ್ಯೋಗಿಗೆ ಆ ವಸ್ತುಪ್ರದರ್ಶನವನ್ನು ನೋಡಲು ಬರುವಂತೆ ಆಮಂತ್ರಿಸಿದನು. ಅವನು ಸಂತೋಷದಿಂದ ಒಪ್ಪಿಕೊಂಡನು, ಮತ್ತು ಬರುವಾಗ ಒಬ್ಬ ಸ್ನೇಹಿತೆಯನ್ನೂ ಕರೆತಂದನು. ತಮ್ಮ ನಂಬಿಕೆಯನ್ನು ತೊರೆಯುವ ಒಂದು ಡಾಕ್ಯುಮೆಂಟಿಗೆ ಸಹಿಹಾಕುವ ಬದಲು, ಮರಣಕ್ಕೀಡಾಗಲು ಸಿದ್ಧರಾಗುವಷ್ಟು ಬಲವಾದ ನಂಬಿಕೆಯು ಜನರಿಗೆ ಹೇಗಿರಬಲ್ಲದೆಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ತದನಂತರ ಆ ಸ್ನೇಹಿತೆಯು ಹೇಳಿದಳು. ಇದರಿಂದಾಗಿ ಇನ್ನೂ ಹೆಚ್ಚಿನ ಚರ್ಚೆಗಳು ನಡೆದವು, ಮತ್ತು ಅವಳೊಂದಿಗೆ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು.

ಇಪ್ಪತ್ತನೆಯ ಶತಮಾನದ ಈ ನಂಬಿಗಸ್ತ ಹುತಾತ್ಮರು, ತಮ್ಮ ಪ್ರಥಮ ಶತಮಾನದ ಪ್ರತಿರೂಪಗಳಂತೆ ಕೇವಲ ಯೆಹೋವನೊಬ್ಬನೇ ಸತ್ಯ ದೇವರು ಮತ್ತು ಆತನು ಮಾತ್ರ ನಮ್ಮ ಅಚಲವಾದ ನಂಬಿಕೆ ಹಾಗೂ ನಿಷ್ಠೆಗೆ ಅರ್ಹನಾಗಿದ್ದಾನೆಂಬುದಕ್ಕೆ ಧೈರ್ಯದಿಂದ ಸಾಕ್ಷಿಯನ್ನು ಕೊಟ್ಟಿದ್ದಾರೆ.​—ಪ್ರಕಟನೆ 4:11.

[ಪುಟ 13ರಲ್ಲಿರುವ ಚಿತ್ರ ಕೃಪೆ]

ಶಿಬಿರ ಸೆರೆವಾಸಿ: Państwowe Muzeum Oświęcim-Brzezinka, courtesy of the USHMM Photo Archives