ದೈವಿಕ ಮೂಲತತ್ತ್ವಗಳು ನಿಮಗೆ ಪ್ರಯೋಜನವನ್ನು ತರಬಲ್ಲವು
ದೈವಿಕ ಮೂಲತತ್ತ್ವಗಳು ನಿಮಗೆ ಪ್ರಯೋಜನವನ್ನು ತರಬಲ್ಲವು
ಮೃಗಗಳು ಸಹಜ ಪ್ರವೃತ್ತಿಯಿಂದ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತವೆ ಎಂಬುದು ನಿಮಗೆ ತಿಳಿದಿರುವ ಸಂಗತಿಯೇ. ಅನೇಕ ಯಂತ್ರಗಳು ನಿರ್ದೇಶನಗಳಿಗೆ ಅಧೀನವಾಗಿರುವಂಥ ರೀತಿಯಲ್ಲಿ ವಿನ್ಯಾಸಿಸಲ್ಪಟ್ಟಿವೆ. ಆದರೆ, ಮನುಷ್ಯರು ವಾಸ್ತವದಲ್ಲಿ ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಡುವಂಥ ರೀತಿಯಲ್ಲಿ ಸೃಷ್ಟಿಸಲ್ಪಟ್ಟರು. ಇದರ ಕುರಿತು ನೀವು ಹೇಗೆ ಖಾತ್ರಿಯಿಂದಿರಬಲ್ಲಿರಿ? ಎಲ್ಲ ನೀತಿಭರಿತ ಮೂಲತತ್ತ್ವಗಳಿಗೆ ಮೂಲನಾಗಿರುವ ಯೆಹೋವನು ಮೊದಲ ಮಾನವರನ್ನು ಸೃಷ್ಟಿಸಿದಾಗ ಘೋಷಿಸಿದ್ದು: “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ.” ಸೃಷ್ಟಿಕರ್ತನು ಆತ್ಮಸ್ವರೂಪಿಯಾಗಿದ್ದಾನೆ; ಆತನಿಗೆ ನಮಗಿರುವ ಪ್ರಕಾರ ಒಂದು ಶಾರೀರಿಕ ದೇಹವಿಲ್ಲ. ಆದುದರಿಂದ, ನಾವು ಆತನ “ಸ್ವರೂಪ”ದಲ್ಲಿ ಉಂಟುಮಾಡಲ್ಪಟ್ಟಿರುವುದರ ಅರ್ಥ, ಆತನ ಅತ್ಯುತ್ತಮವಾದ ಗುಣಗಳನ್ನು ಒಂದಷ್ಟರ ಮಟ್ಟಿಗೆ ಪ್ರದರ್ಶಿಸುತ್ತಾ, ನಾವು ಆತನ ವ್ಯಕ್ತಿತ್ವವನ್ನು ಪ್ರತಿಬಿಂಬಿಸಸಾಧ್ಯವಿರುವುದೇ ಆಗಿದೆ. ಮಾನವರು ತಮ್ಮ ಜೀವಿತಗಳನ್ನು ಮೂಲತತ್ತ್ವಗಳಿಗೆ ತಕ್ಕ ಹಾಗೆ, ಅಂದರೆ ನಡವಳಿಕೆಗಾಗಿರುವ ಯೋಗ್ಯ ನಿಯಮ ಎಂದು ಅವರು ಯಾವುದನ್ನು ನಂಬುತ್ತಾರೋ ಅದರ ಪ್ರಕಾರ ಜೀವಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಯೆಹೋವನು ಇವುಗಳಲ್ಲಿ ಅನೇಕ ಮೂಲತತ್ತ್ವಗಳನ್ನು ತನ್ನ ವಾಕ್ಯದಲ್ಲಿ ದಾಖಲಿಸುವಂತೆ ಮಾಡಿದ್ದಾನೆ.—ಆದಿಕಾಂಡ 1:26; ಯೋಹಾನ 4:24; 17:17.
‘ಆದರೆ ಬೈಬಲಿನಲ್ಲಿ ನೂರಾರು ಮೂಲತತ್ತ್ವಗಳಿವೆ, ಅವೆಲ್ಲವನ್ನು ಮತ್ತಾಯ 22:37-39 ರಲ್ಲಿ ನೋಡಬಹುದು. ಅಲ್ಲಿ ಯೇಸು, ಮೋಶೆಯ ಧರ್ಮಶಾಸ್ತ್ರದ ಕಟ್ಟಳೆಗಳು ಹಾಗೂ ಅನುಗುಣವಾದ ಮೂಲತತ್ತ್ವಗಳಲ್ಲಿ ಕೆಲವು ಬೇರೆಯವುಗಳಿಗಿಂತ ಹೆಚ್ಚು ಪ್ರಾಮುಖ್ಯವಾಗಿದ್ದವು ಎಂಬುದನ್ನು ತೋರಿಸಿದನು.
ತಿಳಿದುಕೊಳ್ಳುವುದು ನನ್ನಿಂದ ಆಗದ ಕೆಲಸ’ ಎಂದು ಒಬ್ಬನು ಹೇಳಬಹುದು. ನಿಜ. ಆದರೂ ಈ ವಾಸ್ತವಾಂಶವನ್ನು ಪರಿಗಣಿಸಿರಿ: ಎಲ್ಲ ದೈವಿಕ ಮೂಲತತ್ತ್ವಗಳು ಪ್ರಯೋಜನಾರ್ಹವಾಗಿರುವುದಾದರೂ, ಅವುಗಳಲ್ಲಿ ಕೆಲವು ಬೇರೆಯವುಗಳಿಗಿಂತ ಹೆಚ್ಚು ಪ್ರಾಮುಖ್ಯವಾಗಿವೆ. ನೀವದನ್ನುಹೆಚ್ಚು ಪ್ರಾಮುಖ್ಯವಾದ ಮೂಲತತ್ತ್ವಗಳು ಯಾವುವು? ಯೆಹೋವನೊಂದಿಗಿನ ನಮ್ಮ ಸಂಬಂಧದ ಮೇಲೆ ನೇರವಾದ ಪ್ರಭಾವವನ್ನು ಬೀರುವ ಮೂಲತತ್ತ್ವಗಳೇ ಪ್ರಾಮುಖ್ಯವಾದ ಮೂಲತತ್ತ್ವಗಳಾಗಿವೆ. ನಾವು ಇವುಗಳಿಗೆ ವಿಧೇಯರಾಗಿ ನಡೆಯುವುದಾದರೆ, ನಮ್ಮ ನೈತಿಕ ದಿಕ್ಸೂಚಿಯ ಮೇಲಿನ ಪ್ರಧಾನ ಪ್ರಭಾವವು ನಮ್ಮ ಸೃಷ್ಟಿಕರ್ತನಾಗುತ್ತಾನೆ. ಮಾತ್ರವಲ್ಲದೆ, ಇತರರೊಂದಿಗಿನ ನಮ್ಮ ಸಂಬಂಧದ ಮೇಲೆ ಪರಿಣಾಮವನ್ನು ಬೀರುವಂಥ ಇತರ ಮೂಲತತ್ತ್ವಗಳಿವೆ. ಇವುಗಳನ್ನು ಅನ್ವಯಿಸಿಕೊಳ್ಳುವುದು, ಅಹಂವಾದವು ಹೇಗೇ ಹೆಸರಿಸಲ್ಪಟ್ಟಿರಲಿ, ಅದನ್ನು ಎದುರಿಸಿ ನಿಲ್ಲಲು ನಮಗೆ ಸಹಾಯಮಾಡುವುದು.
ಬೈಬಲಿನಲ್ಲಿರುವ ಅತಿ ಪ್ರಾಮುಖ್ಯವಾದ ಸತ್ಯಗಳಲ್ಲೊಂದರೊಂದಿಗೆ ನಾವು ಆರಂಭಿಸೋಣ. ಆ ಸತ್ಯವು ಯಾವುದು ಮತ್ತು ಅದು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
“ಭೂಲೋಕದಲ್ಲೆಲ್ಲಾ ಸರ್ವೋನ್ನತ”ನು
ಯೆಹೋವನು ನಮ್ಮ ಮಹಾನ್ ಸೃಷ್ಟಿಕರ್ತನು, ಸರ್ವಶಕ್ತ ದೇವರು ಎಂಬುದನ್ನು ಪವಿತ್ರ ಶಾಸ್ತ್ರಗಳು ಸ್ಪಷ್ಟಪಡಿಸುತ್ತವೆ. ಆತನಿಗೆ ಸರಿಸಮಾನನು ಅಥವಾ ಆತನ ಸ್ಥಾನಕ್ಕೆ ಸರಿಯಾದ ಬದಲಿಯು ಯಾರೂ ಇಲ್ಲ. ಇದು ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಪ್ರಾಮುಖ್ಯವಾದ ಸತ್ಯವಾಗಿದೆ.—ಆದಿಕಾಂಡ 17:1; ಪ್ರಸಂಗಿ 12:1.
ಕೀರ್ತನೆಗಳು ಪುಸ್ತಕದ ಬರಹಗಾರರಲ್ಲಿ ಒಬ್ಬನು ಯೆಹೋವನ ಕುರಿತಾಗಿ ತಿಳಿಸಿದ್ದು: “ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತ”ನು. ಪ್ರಾಚೀನ ಕಾಲದ ದಾವೀದನು ಹೇಳಿದ್ದು: “ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವವನಾಗಿರುತ್ತೀ.” ಮತ್ತು ಪ್ರಸಿದ್ಧ ಪ್ರವಾದಿಯಾದ ಯೆರೆಮೀಯನು ಹೀಗೆ ದಾಖಲಿಸುವಂತೆ ಪ್ರೇರಿಸಲ್ಪಟ್ಟನು: “ಯೆಹೋವನೇ, ನಿನ್ನ ಸಮಾನನು ಯಾವನೂ ಇಲ್ಲ; ನೀನು ಮಹತ್ತಮನು, ನಿನ್ನ ನಾಮವೂ ಸಾಮರ್ಥ್ಯದಿಂದ ಕೂಡಿ ಮಹತ್ತಮವಾಗಿದೆ.”—ಕೀರ್ತನೆ 83:18; 1 ಪೂರ್ವಕಾಲವೃತ್ತಾಂತ 29:11; ಯೆರೆಮೀಯ 10:6.
ದೇವರ ಕುರಿತಾದ ಆ ಸತ್ಯಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕು?
ನಮ್ಮ ಜೀವನದಲ್ಲಿ ಯಾರು ನಿಜವಾಗಿಯೂ ಪ್ರಪ್ರಥಮನಾಗಿರಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ—ಆತನು ನಮ್ಮ ಸೃಷ್ಟಿಕರ್ತನು ಮತ್ತು ಜೀವದಾತನೇ. ಆದುದರಿಂದ, ಇತರರಿಗಿಂತ ಕೆಲವರಲ್ಲಿ ಹೆಚ್ಚು ಬಲವಾಗಿರಬಹುದಾದ ಪ್ರವೃತ್ತಿಯನ್ನು, ಅಂದರೆ ನಮ್ಮೆಡೆಗೆ ಗಮನವನ್ನು ಸೆಳೆದುಕೊಳ್ಳುವ ಯಾವುದೇ ಪ್ರವೃತ್ತಿಯನ್ನು ನಾವು ಪ್ರತಿರೋಧಿಸುವುದು ಸೂಕ್ತವಾಗಿರುವುದಿಲ್ಲವೋ? ಒಂದು ವಿವೇಕಯುತವಾದ ನಿರ್ದೇಶಕ ಮೂಲತತ್ತ್ವವು ‘ಎಲ್ಲವನ್ನೂ ದೇವರ ಘನತೆಗಾಗಿ ಮಾಡು’ವುದೇ ಆಗಿದೆ. (1 ಕೊರಿಂಥ 10:31) ಪ್ರವಾದಿಯಾದ ದಾನಿಯೇಲನು ಈ ವಿಷಯದಲ್ಲಿ ಒಂದು ಅತ್ಯುತ್ತಮವಾದ ಮಾದರಿಯನ್ನು ಇಟ್ಟನು.
ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಒಮ್ಮೆ ಒಂದು ಕನಸಿನಿಂದ ಕ್ಷೋಭೆಗೊಂಡು, ಅದರ ಅರ್ಥವನ್ನು ತಿಳಿದುಕೊಳ್ಳಲು ತಗಾದೆಮಾಡಿದನು ಎಂದು ಐತಿಹಾಸಿಕ ದಾಖಲೆಯು ನಮಗೆ ಹೇಳುತ್ತದೆ. ಎಲ್ಲರೂ ತಬ್ಬಿಬ್ಬುಗೊಂಡಿದ್ದಾಗ, ದಾನಿಯೇಲನು ಮಾತ್ರ ರಾಜನು ಏನು ತಿಳಿದುಕೊಳ್ಳಬೇಕೆಂದು ಬಯಸಿದನೋ ಅದನ್ನು ಸ್ಪಷ್ಟವಾಗಿ ತಿಳಿಸಿದನು. ದಾನಿಯೇಲನು ಇದಕ್ಕಾಗಿ ಕೀರ್ತಿಯನ್ನು ಪಡೆದುಕೊಂಡನೋ? ಇಲ್ಲ, ಅವನು ಕೀರ್ತಿಯನ್ನು ‘ಪರಲೋಕದಲ್ಲಿರುವ ರಹಸ್ಯಗಳನ್ನು ವ್ಯಕ್ತಪಡಿಸುವ ದೇವರಿಗೆ’ ಸಲ್ಲಿಸಿದನು. ದಾನಿಯೇಲನು ಮುಂದುವರಿಸುತ್ತಾ ಹೇಳಿದ್ದು: “ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನೆಂತಲ್ಲ . . . ಈ ರಹಸ್ಯವು ನನಗೆ ವ್ಯಕ್ತವಾಗಿದೆ.” ದಾನಿಯೇಲನು ಒಬ್ಬ ನಿಯಮಬದ್ಧ ವ್ಯಕ್ತಿಯಾಗಿದ್ದನು. ಆದುದರಿಂದಲೇ, ದಾನಿಯೇಲನ ಪುಸ್ತಕದಲ್ಲಿ ಅವನನ್ನು ದೇವರ ದೃಷ್ಟಿಯಲ್ಲಿ “ಅತಿಪ್ರಿಯ”ನೆಂದು ಮೂರು ಸಾರಿ ವರ್ಣಿಸಿರುವುದು ಅಚ್ಚರಿಯ ಸಂಗತಿಯೇನಲ್ಲ.—ದಾನಿಯೇಲ 2:28, 30; 9:23; 10:11, 19.
ನೀವು ದಾನಿಯೇಲನನ್ನು ಅನುಕರಿಸುವುದಾದರೆ, ನೀವು ಕೂಡ ಪ್ರಯೋಜನವನ್ನು ಹೊಂದುವಿರಿ. ದಾನಿಯೇಲನ ಮಾದರಿಯನ್ನು ಹಿಂಬಾಲಿಸುವುದರಲ್ಲಿ, ನಿರ್ಣಾಯಕ ಅಂಶವು ಸದುದ್ದೇಶವಾಗಿದೆ. ನೀವು ಏನನ್ನು ಮಾಡುತ್ತೀರೋ ಅದಕ್ಕಾಗಿ ಕೀರ್ತಿಯು ಯಾರಿಗೆ ಸಲ್ಲಬೇಕು? ನಿಮ್ಮ ಪರಿಸ್ಥಿತಿಯು ಏನೇ ಆಗಿರಲಿ, ಯೆಹೋವನೇ ಪರಮಾಧಿಕಾರಿ ಪ್ರಭುವಾಗಿದ್ದಾನೆ ಎಂಬ ಈ ಅತ್ಯಾವಶ್ಯಕವಾಗಿ ಪ್ರಾಮುಖ್ಯವಾಗಿರುವ ಬೈಬಲ್ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿ
ಕಾರ್ಯನಡೆಸುವ ಸಾಮರ್ಥ್ಯವು ನಿಮಗಿದೆ. ನೀವು ಹೀಗೆ ಮಾಡುವುದು ನಿಮ್ಮನ್ನು ಆತನ ದೃಷ್ಟಿಯಲ್ಲಿ “ಅತಿಪ್ರಿಯ”ರನ್ನಾಗಿ ಮಾಡುವುದು.ಈಗ, ಮಾನವ ಸಂಬಂಧಗಳ ಕ್ಷೇತ್ರದಲ್ಲಿ ನಮ್ಮನ್ನು ನಿರ್ದೇಶಿಸಬಹುದಾದ ಎರಡು ಮೂಲಭೂತ ತತ್ತ್ವಗಳನ್ನು ನಾವು ಪರಿಗಣಿಸೋಣ. ಸ್ವಾರ್ಥಪರ ವಿಷಯಗಳಿಗೆ ವ್ಯಾಪಕವಾಗಿ ಕೊಡಲ್ಪಡುವ ಪ್ರಾಮುಖ್ಯತೆಯಿಂದಾಗಿ, ಜೀವಿತದ ಈ ಕ್ಷೇತ್ರವು ಹೆಚ್ಚು ಪಂಥಾಹ್ವಾನದಾಯಕವಾಗಿದೆ.
“ದೀನಭಾವದಿಂದ” ವರ್ತಿಸುವುದು
ತಮಗೇ ಮೊದಲ ಸ್ಥಾನವನ್ನು ಕೊಟ್ಟುಕೊಳ್ಳುವವರು ತೃಪ್ತರಾಗಿರುವುದು ತುಂಬ ಅಪರೂಪ. ಹೆಚ್ಚಿನವರಿಗೆ ಸದಾ ಹೆಚ್ಚು ಉತ್ತಮವಾದ ಜೀವನವು ಬೇಕು, ಮತ್ತು ಅದು ಈಗಲೇ ಬೇಕು. ಅವರಿಗೆ ಮಿತಭಾವವು ಒಂದು ರೀತಿಯ ದೌರ್ಬಲ್ಯವಾಗಿದೆ. ಅವರ ದೃಷ್ಟಿಯಲ್ಲಿ ತಾಳ್ಮೆಯು ಕೇವಲ ಇತರರು ತೋರಿಸಬೇಕಾದ ಗುಣವಾಗಿದೆ. ಆದರೆ ಯಶಸ್ಸನ್ನು ಗಳಿಸಲಿಕ್ಕಾಗಿ ಅವರು ಏನು ಮಾಡಿದರೂ ನಡೆಯುತ್ತದೆ. ಅವರು ವರ್ತಿಸುವಂತೆಯೇ ವರ್ತಿಸದಿರಲು ಬೇರೇನಾದರೂ ಬದಲಿ ಆಯ್ಕೆ ನಿಮಗಿದೆಯೆಂದು ನೀವು ನೆನಸುತ್ತೀರೋ?
ದೇವರ ಸೇವಕರು ಆ ಮನೋಭಾವವನ್ನು ಪ್ರತಿದಿನ ಎದುರಿಸುತ್ತಾರೆ, ಆದರೆ ಅದು ಅವರ ಮೇಲೆ ಪ್ರಭಾವ ಬೀರಬಾರದು. ಪ್ರೌಢ ಕ್ರೈಸ್ತರು, “ತನ್ನನ್ನು ತಾನೇ ಹೊಗಳಿಕೊಳ್ಳುವವನು [ಯೋಗ್ಯನೆಂದು ಒಪ್ಪಿಕೊಳ್ಳಲ್ಪಡುವುದಿಲ್ಲ]; [ಯೆಹೋವನು] ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು” ಎಂಬ ಮೂಲತತ್ತ್ವವನ್ನು ಸ್ವೀಕರಿಸುತ್ತಾರೆ.—2 ಕೊರಿಂಥ 10:18.
ಫಿಲಿಪ್ಪಿ 2:3, 4 ರಲ್ಲಿರುವ ಮೂಲತತ್ತ್ವವನ್ನು ಅನ್ವಯಿಸುವುದು ಸಹಾಯಕರವಾಗಿರುವುದು. ಆ ವಚನವು ನಿಮ್ಮನ್ನು, “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ” ಎಂದು ಪ್ರೋತ್ಸಾಹಿಸುತ್ತದೆ. ಹೀಗೆ ನೀವು “ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ” ನೋಡುವಿರಿ.
ತನ್ನ ಕುರಿತು ಯೋಗ್ಯವಾದ ಮನೋಭಾವವಿದ್ದ ಮತ್ತು ತನ್ನ ಸ್ವಂತ ಯೋಗ್ಯತೆಯ ಕುರಿತು ಹಿತಕರವಾದ ಅಂದಾಜನ್ನು ಮಾಡಿದ್ದ ಒಬ್ಬ ವ್ಯಕ್ತಿಯು, ಪುರಾತನ ಇಬ್ರಿಯರ ಮಧ್ಯೆ ನ್ಯಾಯಸ್ಥಾಪಕನಾಗಿದ್ದ ಗಿದ್ಯೋನನೇ ಆಗಿದ್ದನು. ಅವನು ಇಸ್ರಾಯೇಲಿನ ನಾಯಕನಾಗಲು ಆಶಿಸಲಿಲ್ಲ. ಆದರೂ, ಆ ನ್ಯಾಯಸ್ಥಾಪಕರು 6:12-16.
ಸ್ಥಾನವನ್ನು ವಹಿಸಿಕೊಳ್ಳುವಂತೆ ಕೇಳಿಕೊಳ್ಳಲ್ಪಟ್ಟಾಗ, ತನ್ನ ಅಯೋಗ್ಯತೆಯ ಕಡೆಗೆ ಗಿದ್ಯೋನನು ಗಮನ ಸೆಳೆದನು. “ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು” ಎಂದು ಅವನು ವಿವರಿಸಿದನು.—ಮಾತ್ರವಲ್ಲದೆ, ಗಿದ್ಯೋನನಿಗೆ ಯೆಹೋವನು ಒಂದು ವಿಜಯವನ್ನು ಕೊಟ್ಟ ನಂತರ, ಎಫ್ರಾಯೀಮ್ಯರು ಅವನೊಂದಿಗೆ ಕಲಹಮಾಡಿದರು. ಗಿದ್ಯೋನನು ಹೇಗೆ ಪ್ರತಿಕ್ರಿಯಿಸಿದನು? ಆ ಜಯಗಳಿಸುವಿಕೆಯು, ತಾನು ಒಬ್ಬ ಪ್ರಾಮುಖ್ಯ ವ್ಯಕ್ತಿಯಾಗಿದ್ದೇನೆ ಎಂಬ ಅನಿಸಿಕೆಯನ್ನು ಅವನಲ್ಲಿ ಮೂಡಿಸಿತೋ? ಇಲ್ಲ. ಶಾಂತವಾದ ಪ್ರತ್ಯುತ್ತರವನ್ನು ಕೊಡುವ ಮೂಲಕ ಅವನು ದುರಂತವನ್ನು ತಪ್ಪಿಸಿದನು. “ನೀವು ಮಾಡಿದ ಕಾರ್ಯಕ್ಕೆ ಸಮಾನವಾದದ್ದನ್ನು ನಾನೇನು ಮಾಡಿದೆನು?” ಗಿದ್ಯೋನನು ದೀನಭಾವದವನಾಗಿದ್ದನು.—ನ್ಯಾಯಸ್ಥಾಪಕರು 8:1-3.
ಗಿದ್ಯೋನನ ಜೀವನದಲ್ಲಿ ನಡೆದ ಘಟನೆಗಳು ತುಂಬ ಕಾಲದ ಹಿಂದೆ ಸಂಭವಿಸಿದವೆಂಬುದು ನಿಜವೇ. ಆದರೂ, ಆ ವೃತ್ತಾಂತವನ್ನು ಪರಿಗಣಿಸುವುದರಲ್ಲಿ ಪ್ರಯೋಜನವಿದೆ. ಇಂದು ಸರ್ವಸಾಮಾನ್ಯವಾಗಿರುವ ಮನೋಭಾವಕ್ಕಿಂತ ತೀರ ವ್ಯತಿರಿಕ್ತವಾದ ಮನೋಭಾವವು ಗಿದ್ಯೋನನಿಗಿತ್ತು ಎಂಬುದನ್ನು ನೀವು ನೋಡಬಹುದು, ಮತ್ತು ಅವನು ಅದಕ್ಕನುಸಾರ ಜೀವಿಸಿದನು, ಅದು ಅವನಿಗೇ ಪ್ರಯೋಜನವನ್ನು ತಂದಿತು.
ಈಗ ಚಾಲ್ತಿಯಲ್ಲಿರುವ, ಸ್ವಾರ್ಥಪರ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂಥ ಮನೋಭಾವವು, ಸ್ವಯೋಗ್ಯತೆಯ ಕುರಿತಾದ ನಮ್ಮ ದೃಷ್ಟಿಕೋನವನ್ನು ವಕ್ರಗೊಳಿಸಬಹುದು. ಸೃಷ್ಟಿಕರ್ತನ ಮತ್ತು ಇತರರ ಸಂಬಂಧದಲ್ಲಿ ನಮ್ಮ ನಿಜ ಮೌಲ್ಯವನ್ನು ನಮಗೆ ಕಲಿಸುವ ಮೂಲಕ, ಬೈಬಲ್ ಮೂಲತತ್ತ್ವಗಳು ಆ ವಕ್ರಗೊಳಿಸುವಿಕೆಯನ್ನು ಸರಿಪಡಿಸುತ್ತವೆ.
ಬೈಬಲ್ ಮೂಲತತ್ತ್ವಗಳಿಗೆ ಅಧೀನರಾಗುವ ಮೂಲಕ, ನಾವು ಅಹಂವಾದದ ಈ ಪ್ರವೃತ್ತಿಯ ಮೇಲೆ ಮೇಲುಗೈ ಪಡೆಯುತ್ತೇವೆ. ನಾವು ಇನ್ನು ಮುಂದೆ ಭಾವನೆಗಳಿಂದ ಅಥವಾ ವ್ಯಕ್ತಿತ್ವಗಳಿಂದ ದಾರಿತಪ್ಪಿಸಲ್ಪಡುವುದಿಲ್ಲ. ನಾವು ನೀತಿಯ ಮೂಲತತ್ತ್ವಗಳ ಕುರಿತು ಎಷ್ಟು ಹೆಚ್ಚು ಕಲಿಯುತ್ತೇವೋ, ಅಷ್ಟು ಉತ್ತಮವಾಗಿ ಅವುಗಳ ಮೂಲಕರ್ತನೊಂದಿಗೆ ಪರಿಚಿತರಾಗುತ್ತೇವೆ. ಹೌದು, ಬೈಬಲನ್ನು ಓದುವಾಗ ದೈವಿಕ ಮೂಲತತ್ತ್ವಗಳಿಗೆ ವಿಶೇಷವಾದ ಗಮನವನ್ನು ಕೊಡುವುದು ಸಾರ್ಥಕವಾಗಿರುವುದು.—ರೇಖಾಚೌಕವನ್ನು ನೋಡಿರಿ.
ಯೆಹೋವನು ಮನುಷ್ಯರನ್ನು, ಮೂಲತಃ ಸಹಜ ಪ್ರವೃತ್ತಿಯಿಂದ ಚಲಿಸುವ ಪ್ರಾಣಿಗಳಿಗಿಂತ ಶ್ರೇಷ್ಠರನ್ನಾಗಿ ಮಾಡಿದ್ದಾನೆ. ದೇವರ ಚಿತ್ತವನ್ನು ಮಾಡುವುದು ದೈವಿಕ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದನ್ನು ಒಳಗೂಡುತ್ತದೆ. ಹೀಗೆ, ನಾವು ನಮ್ಮ ನೈತಿಕ ದಿಕ್ಸೂಚಿಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು; ಈ ದಿಕ್ಸೂಚಿಯು ನಮ್ಮನ್ನು ದೇವರ ಕೈಕೆಲಸವಾಗಿರುವ ಒಂದು ಹೊಸ ವ್ಯವಸ್ಥೆಯೊಳಗೆ ಹೋಗುವಂತೆ ಮಾರ್ಗದರ್ಶಿಸುವುದು. “ನೀತಿಯು ವಾಸವಾಗಿರುವ” ಒಂದು ಭೂವ್ಯಾಪಕ ಹೊಸ ವ್ಯವಸ್ಥೆಯನ್ನು ಬೇಗನೆ ನಿರೀಕ್ಷಿಸಲು ಬೈಬಲು ನಮಗೆ ಸಕಾರಣವನ್ನು ನೀಡುತ್ತದೆ.—2 ಪೇತ್ರ 3:13.
[ಪುಟ 6ರಲ್ಲಿರುವ ಚೌಕ/ಚಿತ್ರ]
ಉಪಯುಕ್ತವಾದ ಕೆಲವು ಬೈಬಲ್ ಮೂಲತತ್ತ್ವಗಳು
ಕುಟುಂಬದಲ್ಲಿ:
“ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.”—1 ಕೊರಿಂಥ 10:24.
“ಪ್ರೀತಿಯು . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ.”—1 ಕೊರಿಂಥ 13:4, 5.
“ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು.”—ಎಫೆಸ 5:33.
“ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.”—ಕೊಲೊಸ್ಸೆ 3:18.
“ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ.”—ಜ್ಞಾನೋಕ್ತಿ 23:22.
ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ, ಅಥವಾ ವ್ಯಾಪಾರ-ವ್ಯವಹಾರದಲ್ಲಿ:
‘ಮೋಸದ ತ್ರಾಸು ಅಸಹ್ಯ; ಅಧರ್ಮಿಯ ಸಂಬಳವು ಜೊಳ್ಳು.’—ಜ್ಞಾನೋಕ್ತಿ 11:1, 18.
“ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ . . . ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ.”—ಎಫೆಸ 4:28.
‘ಕೆಲಸಮಾಡಲೊಲ್ಲದವನು ಊಟಮಾಡಬಾರದು.’—2 ಥೆಸಲೊನೀಕ 3:10.
“ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು . . . [ಯೆಹೋವನಿಗೋಸ್ಕರವೇ] ಎಂದು ಮನಃಪೂರ್ವಕವಾಗಿ ಮಾಡಿರಿ.”—ಕೊಲೊಸ್ಸೆ 3:23.
“ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸು”ತ್ತೇವೆ.—ಇಬ್ರಿಯ 13:18.
ಐಶ್ವರ್ಯದ ಕಡೆಗಿನ ಮನೋಭಾವದಲ್ಲಿ:
“ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದಿರನು.”—ಜ್ಞಾನೋಕ್ತಿ 28:20.
“ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು.”—ಪ್ರಸಂಗಿ 5:10.
ಒಬ್ಬನ ಸ್ವಯೋಗ್ಯತೆಯನ್ನು ಅಂದಾಜುಮಾಡುವುದರಲ್ಲಿ:
“ಸ್ವಂತಮಾನವನ್ನು ಹೆಚ್ಚಾಗಿ ಯೋಚಿಸುವದು ಮಾನವಲ್ಲ.”—ಜ್ಞಾನೋಕ್ತಿ 25:27.
“ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ, ಮತ್ತೊಬ್ಬನು ಹೊಗಳಿದರೆ ಹೊಗಳಲಿ.”—ಜ್ಞಾನೋಕ್ತಿ 27:2.
“ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳ”ಬಾರದು.—ರೋಮಾಪುರ 12:3.
“ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿದವನಾಗಿದ್ದಾನೆ.”—ಗಲಾತ್ಯ 6:3.
[ಪುಟ 5ರಲ್ಲಿರುವ ಚಿತ್ರ]
ದಾನಿಯೇಲನು ತಕ್ಕ ಕೀರ್ತಿಯನ್ನು ದೇವರಿಗೆ ಸಲ್ಲಿಸಿದನು
[ಪುಟ 7ರಲ್ಲಿರುವ ಚಿತ್ರ]
ಇತರರೊಂದಿಗೆ ದೈವಿಕ ಮೂಲತತ್ತ್ವಗಳ ಪ್ರಕಾರ ವ್ಯವಹರಿಸುವುದು, ಹಿತಕರವಾದ ಸಂಬಂಧಗಳು ಹಾಗೂ ಸಂತೋಷಕ್ಕೆ ಹೆಚ್ಚನ್ನು ಕೂಡಿಸುತ್ತದೆ
[ಪುಟ 7ರಲ್ಲಿರುವ ಚಿತ್ರ ಕೃಪೆ]
U.S. Fish & Wildlife Service, Washington, D.C./Robert Bridges