ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಇಬ್ರಿಯ 12:4ರಲ್ಲಿರುವ, “ನೀವು . . . ಪ್ರಾಣಾಪಾಯದ [“ರಕ್ತದ,” NW] ತನಕ ಇನ್ನೂ ಅದನ್ನು ಎದುರಿಸಲಿಲ್ಲ” ಎಂಬ ಮಾತುಗಳ ಅರ್ಥವೇನು?

‘ರಕ್ತದ ತನಕ ಎದುರಿಸಲಿಲ್ಲ’ ಎಂಬ ವಾಕ್ಸರಣಿಯು, ಸಾಯುವ ಅಥವಾ ಅಕ್ಷರಾರ್ಥವಾಗಿ ಒಬ್ಬನ ಜೀವರಕ್ತವನ್ನು ಸುರಿಸುವಂಥ ಕೊನೆಯ ಹಂತದ ತನಕ ಹೋಗುವ ವಿಷಯವನ್ನು ಸೂಚಿಸುತ್ತದೆ.

ಕೆಲವು ಇಬ್ರಿಯ ಕ್ರೈಸ್ತರು ತಮ್ಮ ನಂಬಿಕೆಯ ಪರಿಣಾಮವಾಗಿ ಈಗಾಗಲೇ “ಕಷ್ಟಾನುಭವವೆಂಬ ಬಲು ಹೋರಾಟವನ್ನು ಸಹಿಸಿ”ಕೊಂಡಿದ್ದರೆಂಬುದು ಅಪೊಸ್ತಲ ಪೌಲನಿಗೆ ತಿಳಿದಿತ್ತು. (ಇಬ್ರಿಯ 10:​32, 33) ಇದನ್ನು ಹೇಳುತ್ತಿರುವಾಗ, ಪೌಲನು ಒಂದು ಗ್ರೀಕ್‌ ಸ್ಪರ್ಧಾಕೂಟದಲ್ಲಿ ನಡೆಯುವ ಒಂದು ಹೋರಾಟದ ರೂಪಕವನ್ನು ಬಳಸುತ್ತಿದ್ದನೆಂದು ತೋರುತ್ತದೆ. ಇದರಲ್ಲಿ ಓಟ, ಮಲ್ಲಯುದ್ಧ, ಮುಷ್ಟಿಕಾಳಗ, ಮತ್ತು ಎಸೆಬಿಲ್ಲೆ ಹಾಗೂ ಭರ್ಜಿಯ ಎಸೆತವು ಸೇರಿರಸಾಧ್ಯವಿತ್ತು. ಅಂತೆಯೇ ಅವನು ಜೊತೆ ಕ್ರೈಸ್ತರಿಗೆ ಇಬ್ರಿಯ 12:​1, 2ರಲ್ಲಿ ಪ್ರೇರೇಪಿಸಿದ್ದು: “ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.”​—ಓರೆ ಅಕ್ಷರಗಳು ನಮ್ಮವು.

ಎರಡು ವಚನಗಳ ನಂತರ, ಇಬ್ರಿಯ 12:4ರಲ್ಲಿ ಪೌಲನು, ಒಂದು ಓಟದ ಚಿತ್ರಣದಿಂದ ಮುಷ್ಟಿಕಾಳಗದ ಚಿತ್ರಣಕ್ಕೆ ಬದಲಾಯಿಸುತ್ತಿದ್ದಿರಬಹುದು. (1 ಕೊರಿಂಥ 9:26ರಲ್ಲಿ ಓಟಗಾರರು ಹಾಗೂ ಕುಸ್ತಿಪಟುಗಳು, ಹೀಗೆ ಇಬ್ಬರ ಬಗ್ಗೆಯೂ ತಿಳಿಸಲಾಗಿದೆ.) ಪ್ರಾಚೀನಕಾಲದ ಕುಸ್ತಿಪಟುಗಳ ಮುಷ್ಟಿಗಳು ಮತ್ತು ಮಣಿಕಟ್ಟುಗಳಿಗೆ ಚರ್ಮದ ಪಟ್ಟಿಗಳು ಕಟ್ಟಲ್ಪಡುತ್ತಿದ್ದವು. ಆ ಪಟ್ಟಿಗಳು “ಸೀಸ, ಕಬ್ಬಿಣ ಇಲ್ಲವೇ ಲೋಹದ ಗುಬಟುಗಳ” ಜೋಡಣೆಯಿಂದ ಭಾರಗೊಳಿಸಲ್ಪಟ್ಟಿದ್ದು, ಇವು “ಕುಸ್ತಿಪಟುಗಳಿಗೆ ಗಂಭೀರವಾದ ಗಾಯಗಳನ್ನು” ಮಾಡುತ್ತಿದ್ದವು. ಇಂಥ ಪಾಶವೀಯ ಆಟಗಳು ರಕ್ತಸ್ರಾವವನ್ನು, ಕೆಲವೊಮ್ಮೆ ಮರಣವನ್ನೂ ಉಂಟುಮಾಡುತ್ತಿದ್ದವು.

“ರಕ್ತದ ತನಕ” ಅಂದರೆ ಮರಣದ ವರೆಗೂ, ಹಿಂಸೆ ಮತ್ತು ಕ್ರೂರವಾದ ದೌರ್ಜನ್ಯವನ್ನು ಅನುಭವಿಸಿದ್ದ ದೇವರ ನಂಬಿಗಸ್ತ ಸೇವಕರ ಸಾಕಷ್ಟು ಮಾದರಿಗಳು ಇಬ್ರಿಯ ಕ್ರೈಸ್ತರಿಗಿದ್ದವು. ಪ್ರಾಚೀನಕಾಲದ ನಂಬಿಗಸ್ತರು ಏನನ್ನು ಅನುಭವಿಸಿದರೆಂಬುದಕ್ಕೆ ಪೌಲನು ಯಾವುದಕ್ಕೆ ಗಮನವನ್ನು ಸೆಳೆದನೋ ಆ ಪೂರ್ವಾಪರವನ್ನು ಗಮನಿಸಿರಿ:

“ಕೆಲವರನ್ನು ಜನರು ಕಲ್ಲೆಸೆದು ಕೊಂದರು; ಕೆಲವರನ್ನು ಗರಗಸದಿಂದ ಕೊಯ್ದು ಕೊಂದರು; . . . ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ ಹಿಂಸೆ ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ತಿರುಗಾಡಿದರು.” ತದನಂತರ, ಪೌಲನು ನಮ್ಮ ನಂಬಿಕೆಯನ್ನು ಪೂರೈಸುವವನಾದ ಯೇಸುವಿನ ಮೇಲೆ ಗಮನವನ್ನು ಕೇಂದ್ರೀಕರಿಸಿದನು: “ಆತನು . . . ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ [“ಯಾತನಾ ಕಂಭದ,” NW] ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.”​—ಇಬ್ರಿಯ 11:37; 12:2.

ಹೌದು, “ರಕ್ತದ ತನಕ” ಅಂದರೆ ಮರಣದ ತನಕ ತಾಳಿಕೊಂಡಿದ್ದ ಅನೇಕರು ಇದ್ದರು. ಅವರ ಹೋರಾಟವು, ನಂಬಿಕೆಯ ಕೊರತೆಯೆಂಬ ಪಾಪದ ವಿರುದ್ಧವಾದ ಆಂತರಿಕ ಹೋರಾಟಕ್ಕಿಂತ ಹೆಚ್ಚಾಗಿತ್ತು. ಬಾಹ್ಯ ಮೂಲಗಳಿಂದ ಬಂದ ಪಾಶವೀಯ ದೌರ್ಜನ್ಯದ ಕೆಳಗೂ ಮರಣದ ತನಕ ತಮ್ಮ ನಂಬಿಗಸ್ತಿಕೆಯನ್ನು ಕಾಪಾಡಿಕೊಳ್ಳುತ್ತಾ ಅವರು ನಿಷ್ಠಾವಂತರಾಗಿದ್ದರು.

ಪ್ರಾಯಶಃ ಗತಕಾಲದಲ್ಲಿನ ತೀವ್ರವಾದ ಹಿಂಸೆಯು ಆರಿಹೋದ ನಂತರ ಕ್ರೈಸ್ತರಾಗಿ ಪರಿಣಮಿಸಿದಂಥ ಯೆರೂಸಲೇಮಿನ ಸಭೆಯಲ್ಲಿನ ಹೊಸಬರು, ಅಂಥ ಕಠಿನ ಪರೀಕ್ಷೆಗಳನ್ನು ಎಂದೂ ಎದುರಿಸಿರಲಿಲ್ಲ. (ಅ. ಕೃತ್ಯಗಳು 7:​54-60; 12:​1, 2; ಇಬ್ರಿಯ 13:7) ಆದರೂ, ಚಿಕ್ಕಪುಟ್ಟ ಕಷ್ಟಗಳು, ಅವರಲ್ಲಿ ಕೆಲವರು ಆ ಹೋರಾಟವನ್ನು ಮುಂದುವರಿಸುವುದರಿಂದ ಅವರನ್ನು ನಿರುತ್ತೇಜಿಸುತ್ತಿದ್ದವು; ಅವರು ‘ಮನಗುಂದಿದವರಾಗಿ ಬೇಸರಗೊಳ್ಳುತ್ತಿದ್ದರು.’ (ಇಬ್ರಿಯ 12:3) ಅವರು ಪ್ರೌಢತೆಯ ಕಡೆಗೆ ಪ್ರಗತಿಯನ್ನು ಮಾಡಬೇಕಾಗಿತ್ತು. ಏನೇ ಬರಲಿ, ಅಂದರೆ ಇದರಲ್ಲಿ ತಮ್ಮ ಜೀವರಕ್ತವನ್ನೇ ಸುರಿಸುವ ಹಂತದ ತನಕ ಎಷ್ಟೇ ಶಾರೀರಿಕ ದೌರ್ಜನ್ಯವು ಒಳಗೂಡಿರಲಿ, ಅದನ್ನು ತಾಳಿಕೊಳ್ಳುವ ಅವರ ಸಾಮರ್ಥ್ಯವನ್ನು ಇದು ಬಲಗೊಳಿಸಲಿತ್ತು.​—ಇಬ್ರಿಯ 6:​1, NW; ಇಬ್ರಿಯ 12:​7-11.

ಆಧುನಿಕ ಸಮಯಗಳಲ್ಲಿ ಅನೇಕ ಕ್ರೈಸ್ತರು, ತಮ್ಮ ಕ್ರೈಸ್ತತ್ವವನ್ನು ರಾಜಿಮಾಡಿಕೊಳ್ಳದಿದ್ದ ಕಾರಣ ಹತಿಸಲ್ಪಟ್ಟು, ಹೀಗೆ ‘ರಕ್ತದ ತನಕ ಎದುರಿಸಿದ್ದಾರೆ.’ ಇಬ್ರಿಯ 12:4ರಲ್ಲಿರುವ ಪೌಲನ ಮಾತುಗಳು ಭೀತಿಗೆ ಕಾರಣವಾಗುವಂತೆ ಬಿಡುವ ಬದಲು, ನಾವು ದೇವರಿಗೆ ನಿಷ್ಠಾವಂತರಾಗಿರಲು ಎಷ್ಟರ ತನಕ ಹೋಗುವ ದೃಢನಿರ್ಧಾರವನ್ನು ಮಾಡಿದ್ದೇವೆಂಬುದನ್ನು ಸೂಚಿಸುವಂಥವುಗಳಾಗಿ ಅವುಗಳನ್ನು ಪರಿಗಣಿಸಬೇಕು. ಇಬ್ರಿಯರಿಗೆ ಬರೆಯಲ್ಪಟ್ಟ ಅದೇ ಪತ್ರದಲ್ಲಿ ತದನಂತರ ಪೌಲನು ಬರೆದುದು: “ನಾವು ಕೃತಜ್ಞತೆಯುಳ್ಳವರಾಗಿದ್ದು ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಭಯದಿಂದಲೂ ಮಾಡೋಣ.”​—ಇಬ್ರಿಯ 12:28.