ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಇಡೀ ಜಗತ್ತೇ ನಾಶಗೊಳಿಸಲ್ಪಟ್ಟಿತು!

ಒಂದು ಇಡೀ ಜಗತ್ತೇ ನಾಶಗೊಳಿಸಲ್ಪಟ್ಟಿತು!

ಒಂದು ಇಡೀ ಜಗತ್ತೇ ನಾಶಗೊಳಿಸಲ್ಪಟ್ಟಿತು!

ನಿಮ್ಮ ಸುತ್ತಲಿನ ಜಗತ್ತಿನತ್ತ ಒಮ್ಮೆ ದೃಷ್ಟಿಹಾಯಿಸಿರಿ. ಅದರ ನಗರಗಳು, ಅದರ ಸಂಸ್ಕೃತಿ, ಅದರ ವೈಜ್ಞಾನಿಕ ಸಾಧನೆಗಳು, ಕೋಟಿಗಟ್ಟಲೆ ಸಂಖ್ಯೆಯಲ್ಲಿರುವ ಅದರ ಜನಸಂಖ್ಯೆಯನ್ನು ನೋಡಿರಿ. ಇದು ಶಾಶ್ವತವಾಗಿ ಇರುವಂತೆ ತೋರುತ್ತದೆಂಬ ವಿಚಾರವು ಮನಸ್ಸಿಗೆ ಬರುವುದು ಸುಲಭ, ಅಲ್ಲವೇ? ಈ ಜಗತ್ತು ಯಾವುದಾದರೊಂದು ದಿನ ಸಂಪೂರ್ಣವಾಗಿ ಮಾಯವಾಗಬಲ್ಲದೆಂದು ನೀವು ನೆನಸುತ್ತೀರೊ? ಹಾಗೆ ಊಹಿಸಲು ಕಷ್ಟವಾಗಬಹುದು. ಆದರೆ, ಒಂದು ಅತಿ ವಿಶ್ವಸನೀಯ ಮೂಲಕ್ಕನುಸಾರ, ಈ ಜಗತ್ತಿಗಿಂತಲೂ ಮುಂಚೆ ಒಂದು ಜಗತ್ತು ಅಸ್ತಿತ್ವದಲ್ಲಿತ್ತೆಂದೂ, ಅದು ಸಂಪೂರ್ಣವಾಗಿ ನಾಶಗೊಳಿಸಲ್ಪಟ್ಟಿತೆಂಬುದೂ ನಿಮಗೆ ಗೊತ್ತಿತ್ತೊ?

ಅನಾಗರಿಕ ಬುಡಕಟ್ಟಿನ ಜನರುಳ್ಳ ಒಂದು ಜಗತ್ತಿನ ಕುರಿತಾಗಿ ನಾವು ಮಾತಾಡುತ್ತಿಲ್ಲ. ನಾಶವಾಗಿಹೋದ ಆ ಜಗತ್ತು ನಗರಗಳಿಂದ, ಕಲಾತ್ಮಕ ಸಾಧನೆಗಳಿಂದ, ವೈಜ್ಞಾನಿಕ ಜ್ಞಾನದಿಂದ ನಾಗರಿಕಗೊಂಡಿತ್ತು. ಆದರೆ, ಮೂಲಪಿತನಾಗಿದ್ದ ಅಬ್ರಹಾಮನು ಜನಿಸುವ 352 ವರ್ಷಗಳಿಗಿಂತಲೂ ಮುಂಚೆ, ಎರಡನೆಯ ತಿಂಗಳ 17ನೆಯ ದಿನದಂದು ಒಮ್ಮೆಲೇ ಒಂದು ಜಲಪ್ರಳಯವು ಆರಂಭವಾಗಿ, ಇಡೀ ಜಗತ್ತನ್ನೇ ಝಾಡಿಸಿಕೊಂಡು ಹೋಯಿತೆಂದು ಬೈಬಲ್‌ ದಾಖಲೆಯು ನಮಗೆ ತಿಳಿಸುತ್ತದೆ. *

ಆ ದಾಖಲೆಯು ಸರಿಯೊ? ಅಂಥ ಸಂಗತಿಯು ನಿಜವಾಗಿಯೂ ನಡೆಯಿತೊ? ಇಂದಿನ ಜಗತ್ತಿಗಿಂತಲೂ ಮುಂಚೆ, ಉಚ್ಛ್ರಾಯ ಸ್ಥಿತಿಗೇರಿ ಅನಂತರ ನಾಶಗೊಂಡ ಒಂದು ಪ್ರಾಚೀನ ಜಗತ್ತು ನಿಜವಾಗಿಯೂ ಇತ್ತೊ? ಹಾಗಿದ್ದಲ್ಲಿ, ಅದು ಅಂತ್ಯವಾದದ್ದೇಕೆ? ಸಮಸ್ಯೆಯೇನಾಗಿತ್ತು? ಅದರ ನಾಶನದಿಂದ ನಾವು ಯಾವುದೇ ಪಾಠವನ್ನು ಕಲಿಯಸಾಧ್ಯವಿದೆಯೊ?

ಒಂದು ಪ್ರಾಚೀನ ಜಗತ್ತು ನಿಜವಾಗಿಯೂ ನಾಶವಾಯಿತೊ?

ಅಂಥ ಒಂದು ಅಸಾಧಾರಣವಾದ ವಿಪತ್ತು ನಿಜವಾಗಿಯೂ ಸಂಭವಿಸಿದ್ದಲ್ಲಿ ಅದು ಸಂಪೂರ್ಣವಾಗಿ ಮರೆಯಲ್ಪಡದೆ ಇರುವುದು. ಆದುದರಿಂದಲೇ, ಆ ನಾಶನದ ಬಗ್ಗೆ ಅನೇಕ ದೇಶಗಳಲ್ಲಿ ಮರುಜ್ಞಾಪನಗಳಿವೆ. ಉದಾಹರಣೆಗಾಗಿ, ಶಾಸ್ತ್ರವಚನಗಳಲ್ಲಿ ದಾಖಲಿಸಲ್ಪಟ್ಟಿರುವ ನಿಖರವಾದ ತಾರೀಖನ್ನು ಪರಿಗಣಿಸಿರಿ. ನಮ್ಮ ಈಗಿನ ಕ್ಯಾಲೆಂಡರಿಗನುಸಾರ, ಪ್ರಾಚೀನಕಾಲದ ಎರಡನೆಯ ತಿಂಗಳು, ಅಕ್ಟೋಬರ್‌ ತಿಂಗಳ ಮಧ್ಯಭಾಗದಿಂದ ನವೆಂಬರ್‌ ತಿಂಗಳ ಮಧ್ಯಭಾಗದ ವರೆಗೆ ವ್ಯಾಪಿಸುತ್ತದೆ. ಹೀಗಿರುವುದರಿಂದ 17ನೇ ದಿನವು ನವೆಂಬರ್‌ ತಿಂಗಳ ಮೊದಲನೇ ತಾರೀಖಿಗೆ ತಾಳೆಬೀಳುತ್ತದೆ. ಆದುದರಿಂದ ಅನೇಕ ದೇಶಗಳಲ್ಲಿ ವರ್ಷದ ಆ ಸಮಯದಲ್ಲಿ, ಮೃತರಿಗೆ ಸಂಬಂಧಪಟ್ಟ ಹಬ್ಬಗಳು ಆಚರಿಸಲ್ಪಡುತ್ತಿರುವುದು ಒಂದು ಆಕಸ್ಮಿಕ ಘಟನೆಯಾಗಿರಲಿಕ್ಕಿಲ್ಲ.

ಜಲಪ್ರಳಯದ ಕುರಿತಾದ ಇನ್ನಿತರ ಪುರಾವೆಗಳು ಮನುಷ್ಯರ ಸಂಪ್ರದಾಯಗಳಲ್ಲಿ ಈಗಲೂ ಇವೆ. ಬಹುಮಟ್ಟಿಗೆ ಎಲ್ಲಾ ಪ್ರಾಚೀನ ನಾಗರಿಕತೆಗಳಲ್ಲಿ, ಒಂದು ಭೌಗೋಲಿಕ ಜಲಪ್ರಳಯವನ್ನು ಪಾರಾಗಿ ಉಳಿದಂಥ ಪೂರ್ವಜರ ಕುರಿತಾದ ಒಂದು ಪುರಾಣ ಕಥೆಯಿದೆ. ಆಫ್ರಿಕದ ಪಿಗ್ಮಿಗಳು, ಯೂರೋಪಿನ ಕೆಲ್ಟ್‌ ಜನಾಂಗದವರು, ದಕ್ಷಿಣ ಅಮೆರಿಕದ ಇಂಕಾ ಜನಾಂಗದವರು, ಹಾಗೂ ಅಲಾಸ್ಕ, ಆಸ್ಟ್ರೇಲಿಯ, ನ್ಯೂ ಸೀಲೆಂಡ್‌, ಚೀನಾ, ಭಾರತ, ಮೆಕ್ಸಿಕೊ, ಮೈಕ್ರೊನೇಷಿಯಾ, ಲಿತ್ಯುಏನಿಯಾ ಮತ್ತು ಉತ್ತರ ಅಮೆರಿಕದ ಭಾಗಗಳ ಜನರಿಗೂ ಒಂದಕ್ಕೊಂದು ಹೋಲುವಂಥ ಪುರಾಣ ಕಥೆಗಳಿವೆ. ಇವು ಕೇವಲ ಕೆಲವು ಉದಾಹರಣೆಗಳಾಗಿವೆ.

ಸಮಯ ದಾಟಿದಂತೆ ಈ ಪುರಾಣ ಕಥೆಗಳಿಗೆ ಬಣ್ಣಹಚ್ಚಲಾಗಿದೆಯೆಂಬುದು ನಿಜ. ಆದರೆ ಅವುಗಳೆಲ್ಲೆಲ್ಲಾ, ಇವು ಒಂದೇ ಕಥನರೂಪದಿಂದ ಬಂದಿವೆಯೆಂದು ತೋರಿಸುವ ಇಂಥ ಹಲವಾರು ಸಮಾನ ವಿವರಗಳಿವೆ: ದೇವರು ಮಾನವಕುಲದ ದುಷ್ಟತನದಿಂದ ಸಿಟ್ಟಿಗೆದ್ದನು. ಆತನೊಂದು ದೊಡ್ಡ ಜಲಪ್ರಳಯವನ್ನು ತಂದನು. ಇಡೀ ಮಾನವಕುಲವು ನಾಶಗೊಳಿಸಲ್ಪಟ್ಟಿತು. ಆದರೆ ಕೇವಲ ಕೆಲವೇ ಮಂದಿ ನೀತಿವಂತರು ರಕ್ಷಿಸಲ್ಪಟ್ಟರು. ಅವರು ಒಂದು ಹಡಗನ್ನು ಕಟ್ಟಿದರು ಮತ್ತು ಅದರಲ್ಲಿ ಮನುಷ್ಯರು ಮತ್ತು ಪ್ರಾಣಿಗಳು ರಕ್ಷಿಸಲ್ಪಟ್ಟವು. ಸಮಯಾನಂತರ, ಒಣನೆಲಕ್ಕಾಗಿ ಹುಡುಕುವಂತೆ ಹಕ್ಕಿಗಳನ್ನು ಹೊರಗೆ ಕಳುಹಿಸಲಾಯಿತು. ಕೊನೆಗೆ, ಹಡಗು ಒಂದು ಪರ್ವತದ ಮೇಲೆ ನೆಲೆಸಿತು. ಅದರಿಂದ ಹೊರಬಂದ ನಂತರ, ಪಾರಾಗಿ ಉಳಿದವರು ಒಂದು ಯಜ್ಞವನ್ನು ಅರ್ಪಿಸಿದರು.

ಇದೇನನ್ನು ರುಜುಪಡಿಸುತ್ತದೆ? ಈ ಎಲ್ಲ ಹೋಲಿಕೆಗಳು ಆಕಸ್ಮಿಕವಾಗಿರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಈ ಪುರಾಣ ಕಥೆಗಳ ಪುರಾವೆಯು, ಬೈಬಲಿನ ಈ ಪುರಾತನ ಸಾಕ್ಷ್ಯವನ್ನು ಪುಷ್ಟೀಕರಿಸುತ್ತದೆ. ಅದೇನೆಂದರೆ, ಎಲ್ಲ ಮನುಷ್ಯರು ಮಾನವಕುಲದ ಒಂದು ಜಗತ್ತನ್ನು ನಾಶಮಾಡಿದ ಜಲಪ್ರಳಯದಿಂದ ಪಾರಾಗಿ ಉಳಿದವರ ವಂಶಜರಾಗಿದ್ದಾರೆ. ಆದುದರಿಂದ, ಏನು ನಡೆಯಿತೆಂಬುದನ್ನು ತಿಳಿದುಕೊಳ್ಳಲು ನಾವು ಯಾವುದೇ ಪುರಾಣ ಕಥೆಗಳು ಇಲ್ಲವೆ ಮಿಥ್ಯೆಗಳ ಮೇಲೆ ಅವಲಂಬಿಸುವ ಅಗತ್ಯವಿಲ್ಲ. ನಮ್ಮ ಬಳಿ, ಬೈಬಲಿನ ಹೀಬ್ರು ಶಾಸ್ತ್ರಗಳ ದಾಖಲೆಯಿದೆ.​—ಆದಿಕಾಂಡ, 6-8ನೆಯ ಅಧ್ಯಾಯಗಳು.

ಬೈಬಲಿನಲ್ಲಿ, ಜೀವವು ಆರಂಭವಾದಂಥ ಸಮಯದಷ್ಟು ಹಿಂದಿನ ಇತಿಹಾಸದ ಬಗ್ಗೆ ಪ್ರೇರಿತ ದಾಖಲೆಯಿದೆ. ಆದರೆ ಅದು ಬರಿಯ ಇತಿಹಾಸಕ್ಕಿಂತಲೂ ಹೆಚ್ಚಾಗಿದೆಯೆಂದು ಪುರಾವೆಯು ರುಜುಪಡಿಸುತ್ತದೆ. ಅದು ಮಾನವಕುಲದೊಂದಿಗೆ ದೇವರ ಸಂಪರ್ಕಸಾಧನವಾಗಿದೆಯೆಂದು ಬೈಬಲ್‌ ಹೇಳುತ್ತದೆ. ಮತ್ತು ಬೈಬಲಿನ ಈ ಹೇಳಿಕೆಯನ್ನು, ಖಂಡಿತವಾಗಿಯೂ ನೆರವೇರುವ ಅದರ ಪ್ರವಾದನೆ ಹಾಗೂ ಗಾಢವಾದ ವಿವೇಕವು ನಿಜವೆಂದು ಪ್ರದರ್ಶಿಸುತ್ತದೆ. ಮಿಥ್ಯೆಗಳಂತಿರದೆ, ಬೈಬಲು ತನ್ನ ಐತಿಹಾಸಿಕ ವೃತ್ತಾಂತಗಳಲ್ಲಿ ಹೆಸರುಗಳನ್ನು, ತಾರೀಖುಗಳನ್ನು ಹಾಗೂ ವಂಶಾವಳಿಯನ್ನು ಮತ್ತು ಭೂಗೋಳಶಾಸ್ತ್ರದ ವಿವರಗಳನ್ನು ಕೊಡುತ್ತದೆ. ಜಲಪ್ರಳಯಕ್ಕೆ ಮುಂಚೆ ಜೀವನವು ಹೇಗಿತ್ತು, ಮತ್ತು ಒಂದು ಇಡೀ ಜಗತ್ತು ಒಮ್ಮೆಲೇ ಏಕೆ ಅಂತ್ಯಗೊಂಡಿತು ಎಂಬುದನ್ನು ಅದು ಪ್ರಕಟಪಡಿಸುತ್ತದೆ.

ಜಲಪ್ರಳಯಕ್ಕೆ ಮುಂಚಿನ ಆ ಸಮಾಜವು ತಪ್ಪಿಬಿದ್ದದ್ದು ಎಲ್ಲಿ? ಮುಂದಿನ ಲೇಖನವು ಈ ಪ್ರಶ್ನೆಯನ್ನು ಪರಿಗಣಿಸುವುದು. ನಮ್ಮ ಸದ್ಯದ ನಾಗರಿಕತೆಯು ಎಷ್ಟು ಸುರಕ್ಷಿತವಾಗಿದೆ ಎಂಬುದರ ಬಗ್ಗೆ ಕುತೂಹಲಪಡುವವರಿಗೆ ಅದು ಒಂದು ಪ್ರಾಮುಖ್ಯ ಪ್ರಶ್ನೆಯಾಗಿದೆ.

[ಪಾದಟಿಪ್ಪಣಿ]

[ಪುಟ 4ರಲ್ಲಿರುವ ಚಾರ್ಟು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಜಲಪ್ರಳಯದ ಬಗ್ಗೆ ಲೋಕವ್ಯಾಪಕ ಪುರಾಣ ಕಥೆಗಳು

ದೇಶ ಸರಿಹೋಲುವ ವಿವರಗಳು 1 2 3 4 5 6 7 8 9 10

ಗ್ರೀಸ್‌ 7 ◆ ◆ ◆ ◆ ◆ ◆ ◆

ರೋಮ್‌ 6 ◆ ◆ ◆ ◆ ◆ ◆

ಲಿತ್ಯುಏನಿಯ 6 ◆ ◆ ◆ ◆ ◆ ◆

ಅಸಿರಿಯಾ 9 ◆ ◆ ◆ ◆ ◆ ◆ ◆ ◆ ◆

ಟಾನ್ಸೇನಿಯ 7 ◆ ◆ ◆ ◆ ◆ ◆ ◆

ಭಾರತ - ಹಿಂದೂ 6 ◆ ◆ ◆ ◆ ◆ ◆

ನ್ಯೂ ಸೀಲೆಂಡ್‌ - ಮಾಓರಿ 5 ◆ ◆ ◆ ◆ ◆

ಮೈಕ್ರೊನೇಷಿಯ 7 ◆ ◆ ◆ ◆ ◆ ◆ ◆

ವಾಷಿಂಗ್ಟನ್‌ ಅಮೆರಿಕ - ಯಾಕೀಮಾ 7 ◆ ◆ ◆ ◆ ◆ ◆ ◆

ಮಿಸ್ಸಿಸಿಪಿ ಅಮೆರಿಕ - ಚಾಕ್‌ಟಾ 7 ◆ ◆ ◆ ◆ ◆ ◆ ◆

ಮೆಕ್ಸಿಕೊ - ಮಿಚೋನ್ಯಾನ್ಸ್‌ 5 ◆ ◆ ◆ ◆ ◆

ದಕ್ಷಿಣ ಅಮೆರಿಕ - ಕೆಚೂವಾ 4 ◆ ◆ ◆ ◆

ಬೊಲಿವಿಯ - ಕಿರಿಗುವಾನೊ 5 ◆ ◆ ◆ ◆ ◆

ಗಯಾನ - ಅರಾವಾಕ್‌ 6 ◆ ◆ ◆ ◆ ◆ ◆

1: ದುಷ್ಟತನದಿಂದಾಗಿ ದೇವರು ಕುಪಿತನಾಗುತ್ತಾನೆ

2: ಜಲಪ್ರಳಯದ ಮೂಲಕ ನಾಶನ

3: ದೇವರಿಂದ ಆದೇಶಿಸಲ್ಪಟ್ಟದ್ದು

4: ದೈವಿಕ ಎಚ್ಚರಿಕೆಯು ಕೊಡಲ್ಪಟ್ಟದ್ದು

5: ಮಾನವಕುಲದಲ್ಲಿ ಕೆಲವರೇ ಪಾರಾಗುತ್ತಾರೆ

6: ಒಂದು ಹಡಗಿನಲ್ಲಿ ರಕ್ಷಿಸಲ್ಪಡುತ್ತಾರೆ

7: ಪ್ರಾಣಿಗಳು ರಕ್ಷಿಸಲ್ಪಡುತ್ತವೆ

8: ಪಕ್ಷಿ ಇಲ್ಲವೆ ಬೇರೊಂದು ಜೀವಿಯು ಹೊರಗೆ ಕಳುಹಿಸಲ್ಪಡುತ್ತದೆ

9: ಕೊನೆಗೆ ಒಂದು ಪರ್ವತದ ಮೇಲೆ ಬಂದು ನೆಲೆಸುತ್ತದೆ

10: ಯಜ್ಞವು ಅರ್ಪಿಸಲ್ಪಡುತ್ತದೆ