ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಈ ಲೋಕದ ಅಂತ್ಯವನ್ನು ಹೇಗೆ ಪಾರಾಗಬಲ್ಲಿರಿ?

ನೀವು ಈ ಲೋಕದ ಅಂತ್ಯವನ್ನು ಹೇಗೆ ಪಾರಾಗಬಲ್ಲಿರಿ?

ನೀವು ಈ ಲೋಕದ ಅಂತ್ಯವನ್ನು ಹೇಗೆ ಪಾರಾಗಬಲ್ಲಿರಿ?

ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಬೈಬಲು, “ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ” ಎಂದು ವರ್ಣಿಸುತ್ತದೆ. (ಚೆಫನ್ಯ 1:15) ಇದು, ನೀವು ಸಾಮಾನ್ಯವಾಗಿ ಎದುರುನೋಡುವಂಥ ರೀತಿಯ ದಿನವಲ್ಲ ಎಂಬುದಂತೂ ಖಂಡಿತ! ಆದರೂ ಜೊತೆ ಕ್ರೈಸ್ತರು “ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ” ಇರುವಂತೆ ಅಪೊಸ್ತಲ ಪೇತ್ರನು ಬುದ್ಧಿವಾದ ನೀಡುತ್ತಾನೆ. “ಆ ದಿನದಲ್ಲಿ ಆಕಾಶಮಂಡಲವು ಬೆಂಕಿ ಹತ್ತಿ ಲಯವಾಗಿ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು ಉರಿದು ಕರಗಿ ಹೋಗುವವು. ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”​—2 ಪೇತ್ರ 3:​11-13.

ಪೇತ್ರನು ಇಲ್ಲಿ ಅಕ್ಷರಾರ್ಥಕ ಆಕಾಶ ಮತ್ತು ಭೂಮಿಯ ಕುರಿತಾಗಿ ಮಾತಾಡುತ್ತಿರಲಿಲ್ಲ. ಅವನು ಈ ಸಂದರ್ಭದಲ್ಲಿ ಸೂಚಿಸುತ್ತಿದ್ದ “ಆಕಾಶಮಂಡಲ” ಮತ್ತು ‘ಭೂಮಂಡಲವು’ ಸದ್ಯದ ಭ್ರಷ್ಟ ಮಾನವ ಸರಕಾರಗಳು ಹಾಗೂ ದೈವಭಕ್ತಿಯಿಲ್ಲದ ಮಾನವ ಸಮಾಜವನ್ನು ಸಂಕೇತಿಸುತ್ತವೆ. “ಯೆಹೋವನ ದಿನವು” ಭೂಮಿಯನ್ನು ನಾಶಮಾಡುವುದಿಲ್ಲ ಬದಲಾಗಿ “ಪಾಪಿಗಳನ್ನು ನಿರ್ಮೂಲ”ಮಾಡುವುದು. (ಯೆಶಾಯ 13:9) ಹೀಗಿರುವುದರಿಂದ, ಇಂದಿನ ದುಷ್ಟ ಮಾನವ ಸಮಾಜದಲ್ಲಿ ನಡೆಯುತ್ತಿರುವ “ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ”ವರಿಗಾಗಿ, ಯೆಹೋವನ ದಿನವು ರಕ್ಷಣೆಯ ದಿನವಾಗಿರುವುದು.​—ಯೆಹೆಜ್ಕೇಲ 9:4.

ಹಾಗಾದರೆ, ‘ಯೆಹೋವನ ಭಯಂಕರವಾದ ಮಹಾದಿನದಲ್ಲಿ’ ಒಬ್ಬನು ಹೇಗೆ ರಕ್ಷಿಸಲ್ಪಡಸಾಧ್ಯವಿದೆ? ತನ್ನ ಪ್ರವಾದಿಗಳಲ್ಲಿ ಒಬ್ಬನಿಗೆ ಪ್ರಕಟಿಸಲ್ಪಟ್ಟ ‘ಯೆಹೋವನ ವಾಕ್ಯವು’ ಆ ಪ್ರಶ್ನೆಗೆ ಉತ್ತರವನ್ನು ಕೊಡುತ್ತದೆ: ‘ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ [“ಕರೆಯುವವರೆಲ್ಲರಿಗೆ,” NW] ರಕ್ಷಣೆಯಾಗುವದು.’ (ಯೋವೇಲ 1:1; 2:​31, 32) ಯೆಹೋವನ ನಾಮವನ್ನು ಕರೆಯುವುದರ ಅರ್ಥವೇನೆಂಬುದನ್ನು ಕಲಿಯುವಂತೆ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು.