ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತಿಹಾಸದಲ್ಲೇ ಅತಿ ಪ್ರಾಮುಖ್ಯ ಘಟನೆ

ಇತಿಹಾಸದಲ್ಲೇ ಅತಿ ಪ್ರಾಮುಖ್ಯ ಘಟನೆ

ಇತಿಹಾಸದಲ್ಲೇ ಅತಿ ಪ್ರಾಮುಖ್ಯ ಘಟನೆ

ಅದು ಯೇಸು ಕ್ರಿಸ್ತನ ಮರಣ ಆಗಿತ್ತು. ಅದು ಏಕೆ ಅಷ್ಟೊಂದು ಪ್ರಾಮುಖ್ಯವಾಗಿತ್ತು? ಅನೇಕ ಕಾರಣಗಳಿಂದಾಗಿ.

ಮರಣದ ತನಕ ಯೇಸು ತೋರಿಸಿದ ನಂಬಿಗಸ್ತಿಕೆಯು, ಒಬ್ಬ ಮಾನವನು ದೇವರಿಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಸಾಧ್ಯವಿದೆ ಎಂಬುದನ್ನು ರುಜುಪಡಿಸಿತು.

ಕೆಲವರು ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಜೊತೆ ಅರಸರಾಗುವಂತೆ ಅವನ ಮರಣವು ಸದವಕಾಶವನ್ನು ನೀಡಿತು. ಇನ್ನೂ ಅನೇಕರು ಭೂಪರದೈಸಿನಲ್ಲಿ ನಿತ್ಯ ಜೀವವನ್ನು ಆನಂದಿಸುವ ಮಾರ್ಗವನ್ನೂ ಅದು ತೆರೆಯಿತು.

ಯೇಸು ತನ್ನ ಮರಣದ ಹಿಂದಿನ ಸಾಯಂಕಾಲ, ತನ್ನ ಪ್ರೀತಿಭರಿತ ಮಾನವ ಯಜ್ಞದ ಸಂಕೇತಗಳೋಪಾದಿ ಹುಳಿಯಿಲ್ಲದ ರೊಟ್ಟಿ ಹಾಗೂ ಕೆಂಪು ದ್ರಾಕ್ಷಾರಸವನ್ನು ಉಪಯೋಗಿಸಿದನು. ಮತ್ತು ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19) ಈ ಪ್ರಾಮುಖ್ಯ ಘಟನೆಯನ್ನು ನೀವು ಜ್ಞಾಪಿಸಿಕೊಳ್ಳುವಿರೋ?

ಯೇಸುವಿನ ಮರಣದ ಜ್ಞಾಪಕಾಚರಣೆಯನ್ನು ಆಚರಿಸುವುದರಲ್ಲಿ ತಮ್ಮೊಂದಿಗೆ ಜೊತೆಗೂಡುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತ್ತಾರೆ. ಈ ವರ್ಷ ಈ ಆಚರಣೆಗಾಗಿರುವ ತಾರೀಖು, ಮಾರ್ಚ್‌ 28ರ ಗುರುವಾರದ ಸೂರ್ಯಾಸ್ತಮಾನದ ನಂತರ ಆಗಿದೆ. ನಿಮ್ಮ ಮನೆಗೆ ಅತಿ ಸಮೀಪದಲ್ಲಿರುವ ರಾಜ್ಯ ಸಭಾಗೃಹದಲ್ಲಿ ನೀವು ಹಾಜರಾಗಬಹುದು. ನಿರ್ದಿಷ್ಟ ಸಮಯ ಹಾಗೂ ಸ್ಥಳದ ಕುರಿತು ಸ್ಥಳಿಕವಾಗಿ ಯೆಹೋವನ ಸಾಕ್ಷಿಗಳನ್ನು ಕೇಳಿ ನೋಡಿ.