ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂಗವಿಕಲತೆಗಳಿಗೆ ಯಾವುದೇ ಗಡಿರೇಖೆಯಿಲ್ಲ

ಅಂಗವಿಕಲತೆಗಳಿಗೆ ಯಾವುದೇ ಗಡಿರೇಖೆಯಿಲ್ಲ

ಅಂಗವಿಕಲತೆಗಳಿಗೆ ಯಾವುದೇ ಗಡಿರೇಖೆಯಿಲ್ಲ

ಆಫ್ರಿಕದ ಒಂದು ದೇಶದಲ್ಲಿ ವಾಸಿಸುತ್ತಿರುವ ಕ್ರಿಸ್‌ಚನ್‌ ಎಂಬಾತನು, ಸೇನೆಗೆ ಸೇರುವಂತೆ ಒತ್ತಾಯಿಸಲು ಪ್ರಯತ್ನಿಸಿದ ಸೈನಿಕರಿಂದ ಬಲವಂತವಾಗಿ ಕರೆದೊಯ್ಯಲ್ಪಟ್ಟನು. ಆದರೆ ತನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಕಾರಣ ಅವನು ಅವರ ಅಪ್ಪಣೆಗನುಸಾರ ಮಾಡಲು ನಿರಾಕರಿಸಿದನು. ತದನಂತರ ಆ ಸೈನಿಕರು ಅವನನ್ನು ಒಂದು ಮಿಲಿಟರಿ ಶಿಬಿರಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಾಲ್ಕು ದಿನಗಳ ವರೆಗೆ ಅವನಿಗೆ ಹೊಡೆದ ಬಳಿಕ, ಅವರಲ್ಲಿ ಒಬ್ಬನು ಕ್ರಿಸ್‌ಚನ್‌ನ ಕಾಲಿಗೆ ಗುಂಡುಹಾರಿಸಿದನು. ಕ್ರಿಸ್‌ಚನ್‌ ಹೇಗೊ ಒಂದು ಆಸ್ಪತ್ರೆಗೆ ಬಂದು ತಲಪಲು ಶಕ್ತನಾದನು, ಆದರೆ ಅವನ ಕಾಲನ್ನು ಮಂಡಿಯ ಕೆಳಗೆ ಕತ್ತರಿಸಿ ತೆಗೆಯಬೇಕಾಯಿತು. ಆಫ್ರಿಕದ ಇನ್ನೊಂದು ದೇಶದಲ್ಲಿ, ಶಸ್ತ್ರಸಜ್ಜಿತ ದಂಗೆಕೋರರು ಚಿಕ್ಕ ಮಕ್ಕಳ ಕೈಕಾಲುಗಳನ್ನು ಸಹ ಕಡಿದುಹಾಕಿದ್ದಾರೆ. ಮತ್ತು ಕ್ಯಾಂಬೊಡಿಯದಿಂದ ಹಿಡಿದು ಬಾಲ್ಕನ್ಸ್‌ನ ತನಕ, ಅಫಘಾನಿಸ್ತಾನದಿಂದ ಹಿಡಿದು ಅಂಗೋಲದ ತನಕ, ನೆಲಬಾಂಬುಗಳು ಯುವ ಜನರನ್ನೂ ವೃದ್ಧರನ್ನೂ ಭೇದಭಾವವಿಲ್ಲದೆ ಏಕಪ್ರಕಾರವಾಗಿ ಅಂಗಹೀನರನ್ನಾಗಿಯೂ ದೈಹಿಕ ಅಸಾಮರ್ಥ್ಯವುಳ್ಳವರನ್ನಾಗಿಯೂ ಮಾಡುವುದನ್ನು ಮುಂದುವರಿಸಿವೆ.

ಅಪಘಾತಗಳು ಹಾಗೂ ಮಧುಮೂತ್ರ ವ್ಯಾಧಿಯಂತಹ ರೋಗಗಳಿಂದ ಉಂಟಾಗುವ ಅಂಗವಿಕಲತೆಗಳು ಸಹ ಹಾನಿಯನ್ನು ಉಂಟುಮಾಡುತ್ತಿವೆ. ಪರಿಸರದಲ್ಲಿರುವ ವಿಷವಸ್ತುಗಳು ಸಹ ಅಂಗವಿಕಲತೆಗಳಿಗೆ ಕಾರಣವಾಗಸಾಧ್ಯವಿದೆ. ಉದಾಹರಣೆಗೆ, ಪೂರ್ವ ಯೂರೋಪಿನ ನಗರದಲ್ಲಿರುವ ನೆರೆಹೊರೆಯಲ್ಲಿ, ಅನೇಕ ಮಕ್ಕಳು ಮುಂದೋಳುಗಳಲ್ಲಿ ಒಂದು ಇಲ್ಲದೇ ಜನಿಸಿದ್ದಾರೆ. ಅವರ ಮೊಣಕೈಯ ಕೆಳಗೆ ಒಂದು ಚಿಕ್ಕ ಮೋಟು ಮಾತ್ರ ಇದೆ. ರಾಸಾಯನಿಕ ಮಾಲಿನ್ಯದಿಂದ ಉಂಟುಮಾಡಲ್ಪಟ್ಟ ಆನುವಂಶಿಕ ಹಾನಿಯೇ ಇದಕ್ಕೆ ಕಾರಣವಾಗಿದೆ ಎಂದು ಪುರಾವೆಯು ತೋರಿಸುತ್ತದೆ. ಇತರ ಅಸಂಖ್ಯಾತ ಜನರಿಗೆ ಕೈಕಾಲುಗಳಿವೆಯಾದರೂ, ಪಾರ್ಶ್ವವಾಯು ಅಥವಾ ಇನ್ನಿತರ ಬಾಧೆಗಳಿಂದಾಗಿ ಅವರು ಅಂಗವಿಕಲರಾಗಿದ್ದಾರೆ. ಖಂಡಿತವಾಗಿಯೂ ಅಂಕವಿಕಲತೆಗಳಿಗೆ ಯಾವುದೇ ಗಡಿರೇಖೆಯಿಲ್ಲ.

ಕಾರಣವು ಏನೇ ಇರಲಿ, ಅಂಗವಿಕಲತೆಗಳು ಧ್ವಂಸಕರವಾಗಿರಬಲ್ಲವು. 20 ವರ್ಷ ಪ್ರಾಯದವನಾಗಿದ್ದಾಗ ಜೂನ್ಯರ್‌ ತನ್ನ ಎಡಗಾಲಿನ ಕೆಳಭಾಗವನ್ನು ಕಳೆದುಕೊಂಡನು. ತದನಂತರ ಅವನು ಹೇಳಿದ್ದು: “ನನಗೆ ಭಾವನಾತ್ಮಕವಾಗಿ ಅನೇಕ ತೊಡಕುಗಳಿದ್ದವು. ಇನ್ನೆಂದೂ ನನಗೆ ಒಂದು ಕಾಲು ಇರುವುದಿಲ್ಲ ಎಂಬ ವಾಸ್ತವಾಂಶವು ಅರಿವಿಗೆ ಬಂದಾಗ ನಾನು ತುಂಬ ಅತ್ತೆ. ನನಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ನಾನು ಸಂಪೂರ್ಣವಾಗಿ ಗಲಿಬಿಲಿಗೊಂಡಿದ್ದೆ.” ಆದರೂ, ಸಕಾಲದಲ್ಲಿ ಜೂನ್ಯರ್‌ನ ಮನೋಭಾವವು ಬಹಳಷ್ಟು ಬದಲಾಯಿತು. ಅವನು ಬೈಬಲ್‌ ಅಧ್ಯಯನವನ್ನು ಆರಂಭಿಸಿದನು ಮತ್ತು ತನ್ನ ಅಂಗವಿಕಲತೆಯೊಂದಿಗೆ ಯಶಸ್ವಿಕರವಾಗಿ ನಿಭಾಯಿಸಲು ಸಹಾಯಮಾಡುವಂಥ ವಿಷಯಗಳನ್ನು ಕಲಿತನು. ಅಷ್ಟುಮಾತ್ರವಲ್ಲ, ಇದೇ ಭೂಮಿಯಲ್ಲಿ ಒಂದು ಸಂತೋಷಭರಿತ ಭವಿಷ್ಯತ್ತಿನ ಕುರಿತಾದ ಅದ್ಭುತಕರ ನಿರೀಕ್ಷೆಯನ್ನೂ ಅವನು ಮನಗಂಡನು. ಒಂದುವೇಳೆ ನೀವು ಅಂಗವಿಕಲರಾಗಿರುವಲ್ಲಿ, ನೀವು ಸಹ ಈ ನಿರೀಕ್ಷೆಯಲ್ಲಿ ಪಾಲ್ಗೊಳ್ಳಲು ಬಯಸುವಿರೋ?

ಹಾಗಿರುವಲ್ಲಿ, ದಯಮಾಡಿ ಮುಂದಿನ ಲೇಖನವನ್ನು ಓದಿ. ತನ್ನ ಉದ್ದೇಶದ ಕುರಿತು ಕಲಿಯುವವರಿಗೆ ಮತ್ತು ಅದಕ್ಕನುಸಾರ ತಮ್ಮ ಜೀವಿತಗಳನ್ನು ಹೊಂದಿಸಿಕೊಳ್ಳುವವರಿಗೆ, ಭವಿಷ್ಯತ್ತಿನಲ್ಲಿ ಸೃಷ್ಟಿಕರ್ತನು ಏನನ್ನು ಕಾದಿರಿಸಿದ್ದಾನೆ ಎಂಬುದನ್ನು ನೀವಾಗಿಯೇ ನೋಡಲಿಕ್ಕಾಗಿ, ಕೊಡಲ್ಪಟ್ಟಿರುವ ಶಾಸ್ತ್ರವಚನಗಳನ್ನು ನಿಮ್ಮ ಸ್ವಂತ ಬೈಬಲಿನಲ್ಲಿ ತೆರೆದು ನೋಡುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.