ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಸಾಧಾರಣ ವೃದ್ಧಿ ತ್ವರಿತ ವಿಸ್ತರಣೆಯನ್ನು ಅವಶ್ಯಪಡಿಸುತ್ತದೆ

ಅಸಾಧಾರಣ ವೃದ್ಧಿ ತ್ವರಿತ ವಿಸ್ತರಣೆಯನ್ನು ಅವಶ್ಯಪಡಿಸುತ್ತದೆ

“ನನ್ನ ಬಳಿಗೆ ಬನ್ನಿರಿ, . . . ನಾನು ನಿಮಗೆ ಚೈತನ್ಯ ನೀಡುವೆನು”

ಅಸಾಧಾರಣ ವೃದ್ಧಿ ತ್ವರಿತ ವಿಸ್ತರಣೆಯನ್ನು ಅವಶ್ಯಪಡಿಸುತ್ತದೆ

“ನನ್ನ ಬಳಿಗೆ ಬನ್ನಿರಿ . . . ನಾನು ನಿಮಗೆ ಚೈತನ್ಯ ನೀಡುವೆನು” ಎಂದು ಯೇಸು ಕ್ರಿಸ್ತನು ಹೇಳಿದನು. (ಮತ್ತಾ. 11:28, NW) ಕ್ರೈಸ್ತ ಸಭೆಯ ತಲೆಯಾಗಿರುವವನಿಂದ ಎಂಥ ಹಾರ್ದಿಕ ಆಮಂತ್ರಣ! (ಎಫೆಸ 5:23) ಆ ಮಾತುಗಳ ಬಗ್ಗೆ ನಾವು ಜಾಗರೂಕತೆಯಿಂದ ಯೋಚಿಸುವಾಗ, ಚೈತನ್ಯದ ಒಂದು ಪ್ರಮುಖ ಮೂಲವನ್ನು ನಾವು ಗಣ್ಯಮಾಡದೆ ಇರಲಾರೆವು. ಅದು ಕ್ರೈಸ್ತ ಕೂಟಗಳಲ್ಲಿ ನಮ್ಮ ಆತ್ಮಿಕ ಸಹೋದರ ಸಹೋದರಿಯರೊಂದಿಗಿನ ಸಹವಾಸವಾಗಿದೆ. “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು” ಎಂದು ಹಾಡಿದ ಕೀರ್ತನೆಗಾರನೊಂದಿಗೆ ನಾವು ಖಂಡಿತವಾಗಿಯೂ ಸಮ್ಮತಿಸುತ್ತೇವೆ.​—ಕೀರ್ತನೆ 133:1.

ಹೌದು, ಅಂಥ ಕೂಟಗಳಲ್ಲಿ ನಮಗೆ ಸಿಗುವ ಒಡನಾಡಿಗಳ ಸಹವಾಸವು ಅತ್ಯುತ್ತಮವಾಗಿದೆ ಮತ್ತು ಅಲ್ಲಿನ ಆತ್ಮಿಕ ವಾತಾವರಣವು ಸುರಕ್ಷಿತವೂ ಹಿತಕರವೂ ಆಗಿದೆ. ಸಕಾರಣದಿಂದಲೇ ಒಬ್ಬ ಕ್ರೈಸ್ತ ಯುವತಿಯು ಹೇಳಿದ್ದು: “ನಾನು ಇಡೀ ದಿನ ಶಾಲೆಯಲ್ಲಿರುತ್ತೇನೆ, ಮತ್ತು ಇದರಿಂದ ನಾನು ಬಳಲಿಹೋಗುತ್ತೇನೆ. ಆದರೆ ಕೂಟಗಳು, ಮರುಭೂಮಿಯಲ್ಲಿ ಓಅಸಿಸ್‌ನಂತಿರುತ್ತವೆ. ಮುಂದಿನ ದಿನವನ್ನು ಶಾಲೆಯಲ್ಲಿ ಕಳೆಯಲು ನಾನು ಆಗ ಚೈತನ್ಯ ಪಡೆಯುತ್ತೇನೆ.” ನೈಜೀರಿಯದ ಒಬ್ಬ ಯುವತಿಯು ಹೇಳಿದ್ದು: “ಯೆಹೋವನನ್ನು ಪ್ರೀತಿಸುವ ಇತರರೊಂದಿಗೆ ಆಪ್ತ ಸಹವಾಸವು, ನಾನು ಆತನಿಗೆ ನಿಕಟವಾಗಿರುವಂತೆ ನನಗೆ ಸಹಾಯಮಾಡುತ್ತದೆಂಬುದನ್ನು ನಾನು ನೋಡಿದ್ದೇನೆ.”

ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹವು, ಅಲ್ಲಿನ ಸಮುದಾಯದಲ್ಲಿ ಸತ್ಯಾರಾಧನೆಯ ಒಂದು ಕೇಂದ್ರದೋಪಾದಿ ಪರಿಣಾಮಕಾರಿಯಾಗಿ ಕಾರ್ಯನಡಿಸುತ್ತದೆ. ಹೆಚ್ಚಿನ ಸ್ಥಳಗಳಲ್ಲಿ ರಾಜ್ಯ ಸಭಾಗೃಹದಲ್ಲಿ ಕೂಟಗಳನ್ನು ವಾರದಲ್ಲಿ ಕಡಿಮೆಪಕ್ಷ ಎರಡು ಸಲ ನಡೆಸಲಾಗುತ್ತದೆ. ಮತ್ತು ಅಲ್ಲಿ ಸಿಗುವ ಚೈತನ್ಯಕರ ಸಹವಾಸದಿಂದ ಪ್ರಯೋಜನವನ್ನು ಪಡೆಯಲಿಕ್ಕಾಗಿ ಬೈಬಲ್‌ ವಿದ್ಯಾರ್ಥಿಗಳು ಸಾಧ್ಯವಿರುವಷ್ಟು ಬೇಗನೆ ಹಾಜರಾಗುವಂತೆ ಅವರನ್ನು ಉತ್ತೇಜಿಸಲಾಗುತ್ತದೆ.​—ಇಬ್ರಿಯ 10:​24, 25.

ಒಂದು ತುರ್ತಿನ ಆವಶ್ಯಕತೆ

ಹಾಗಿದ್ದರೂ, ಗಮನಿಸಬೇಕಾದ ಒಂದು ಸಂಗತಿಯೇನೆಂದರೆ, ಎಲ್ಲ ಯೆಹೋವನ ಸಾಕ್ಷಿಗಳಿಗೆ ಒಂದು ಯೋಗ್ಯವಾದ ರಾಜ್ಯ ಸಭಾಗೃಹವಿಲ್ಲ. ಲೋಕವ್ಯಾಪಕವಾಗಿ ರಾಜ್ಯ ಘೋಷಕರ ಸಂಖ್ಯೆಯಲ್ಲಾಗಿರುವ ಅಸಾಧಾರಣ ವೃದ್ಧಿಯು, ಒಂದು ತುರ್ತಿನ ಆವಶ್ಯಕತೆಯನ್ನು ಉಂಟುಮಾಡಿದೆ. ಈಗಲೂ ಸಾವಿರಾರು ರಾಜ್ಯ ಸಭಾಗೃಹಗಳ ಆವಶ್ಯಕತೆಯಿದೆ. ಇದು ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಸತ್ಯವಾಗಿದೆ.​—ಯೆಶಾಯ 54:2; 60:22.

ದೃಷ್ಟಾಂತಕ್ಕಾಗಿ: ಕಾಂಗೊ ಡೆಮಾಕ್ರೆಟಿಕ್‌ ರಿಪಬ್ಲಿಕ್‌ನ ರಾಜಧಾನಿಯಲ್ಲಿದ್ದ 290 ಸಭೆಗಳಿಗೆ ಕೇವಲ ಹತ್ತು ರಾಜ್ಯ ಸಭಾಗೃಹಗಳಿದ್ದವು. ಆ ದೇಶಕ್ಕೆ ರಾಜ್ಯ ಸಭಾಗೃಹಗಳ ತುರ್ತಿನ ಆವಶ್ಯಕತೆಯಿದೆ. ಅಂಗೋಲದಲ್ಲಿ ಹೆಚ್ಚಿನ ಸಭೆಗಳು ಕೂಟಗಳನ್ನು ಬಯಲಿನಲ್ಲಿ ನಡೆಸುತ್ತಿವೆ, ಯಾಕೆಂದರೆ ರಾಜ್ಯ ಸಭಾಗೃಹಗಳು ತೀರ ಕಡಿಮೆ ಸಂಖ್ಯೆಯಲ್ಲಿವೆ. ಇದೇ ರೀತಿಯ ಆವಶ್ಯಕತೆಯು ಬೇರೆ ದೇಶಗಳಲ್ಲೂ ಇದೆ.

ಆದುದರಿಂದ 1999ರಿಂದ, ಎಲ್ಲಿ ಲಭ್ಯವಿರುವ ಸಂಪನ್ಮೂಲಗಳು ಸೀಮಿತವಾಗಿವೆಯೊ ಆ ದೇಶಗಳಲ್ಲಿ ರಾಜ್ಯ ಸಭಾಗೃಹಗಳ ನಿರ್ಮಾಣಕ್ಕೆ ನೆರವು ನೀಡುವ ಒಂದು ಸಂಘಟಿತ ಪ್ರಯತ್ನವನ್ನು ಮಾಡಲಾಗಿದೆ. ಅಂಥ ದೇಶಗಳಲ್ಲಿ ನಿರ್ಮಾಣ ಕಾರ್ಯಯೋಜನೆಗಳನ್ನು ನೋಡಿಕೊಳ್ಳಲು ಸಹಾಯಮಾಡಲಿಕ್ಕಾಗಿ ಅನುಭವೀ ಸಾಕ್ಷಿಗಳು ಮುಂದೆ ಬಂದಿದ್ದಾರೆ. ಇಂಥ ಪ್ರಯತ್ನಗಳಿಗೆ ಸ್ಥಳೀಯ ಸ್ವಯಂಸೇವಕರ ಸಿದ್ಧಮನಸ್ಸು ಮತ್ತು ಲಭ್ಯತೆಯನ್ನು ಕೂಡಿಸುವಾಗ ಸಿಗುವ ಫಲಿತಾಂಶಗಳು ತುಂಬ ಉತ್ತೇಜನೀಯವಾಗಿವೆ. ಹೀಗೆ ಸ್ಥಳಿಕ ಸಾಕ್ಷಿಗಳಿಗೆ ಸಿಗುತ್ತಿರುವ ತರಬೇತಿಯಿಂದ ಅವರು ಪ್ರಯೋಜನಪಡೆಯುತ್ತಿದ್ದಾರೆ. ಇದೆಲ್ಲವೂ, ರಾಜ್ಯ ಸಭಾಗೃಹ ನಿರ್ಮಾಣದ ಅಗತ್ಯಗಳನ್ನು ಆಯಾ ದೇಶಗಳಲ್ಲಿ ಪೂರೈಸಲು ಸಹಾಯಮಾಡುತ್ತಿದೆ.

ರಾಜ್ಯ ಸಭಾಗೃಹ ನಿರ್ಮಾಣದಲ್ಲಿ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಕಾರ್ಯವಿಧಾನವನ್ನು ಉಪಯೋಗಿಸುತ್ತಾ, ಸ್ಥಳಿಕ ವಿಧಾನಗಳು ಮತ್ತು ಸಾಮಗ್ರಿಗಳನ್ನು ಬಳಸುವ ಮೂಲಕ ಪ್ರಾಯೋಗಿಕ ನೆರವನ್ನು ನೀಡಲಾಗುತ್ತದೆ. ರಾಜ್ಯ ಸಭಾಗೃಹಕ್ಕಾಗಿರುವ ಬೃಹತ್ತಾದ ಅಗತ್ಯವನ್ನು ನೀಗಿಸುವುದಷ್ಟೇ ಅಲ್ಲ, ಬದಲಾಗಿ ಸ್ಥಳಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂಥ ಒಂದು ದುರಸ್ತಿ ಕಾರ್ಯಕ್ರಮವನ್ನು ವಿಕಸಿಸುವುದೇ ಇದರ ಗುರಿಯಾಗಿದೆ.​—2 ಕೊರಿಂಥ 8:​14, 15.

ಉತ್ತೇಜನದಾಯಕ ಬೆಳವಣಿಗೆಗಳು

ಆರಾಧನಾ ಸ್ಥಳಗಳನ್ನು ಒದಗಿಸಲಿಕ್ಕಾಗಿ ಮಾಡಲಾಗುತ್ತಿರುವ ಈ ಪ್ರಯತ್ನಗಳ ಪರಿಣಾಮವೇನು? 2001ರ ಆರಂಭದ ಭಾಗದಲ್ಲಿ, ಮಲಾವಿಯಿಂದ ಬಂದ ಒಂದು ವರದಿಯು ತಿಳಿಸಿದ್ದು: “ಈ ದೇಶದಲ್ಲಿ ಏನನ್ನು ಸಾಧಿಸಲಾಗಿದೆಯೊ ಅದು ನಿಜವಾಗಿಯೂ ಭಾವೋತ್ತೇಜಕವಾದದ್ದಾಗಿದೆ. ಮುಂದಿನ ಎರಡು ತಿಂಗಳುಗಳಲ್ಲಿ, ನಾವು ಇನ್ನೂ ಕೆಲವು ರಾಜ್ಯ ಸಭಾಗೃಹಗಳನ್ನು ಪೂರ್ಣಗೊಳಿಸುವೆವು.” (ಚಿತ್ರಗಳು 1 ಮತ್ತು 2) ಟೋಗೋದಲ್ಲಿ ಸ್ವಯಂಸೇವಕರು ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಸರಳವಾದ ಸಭಾಗೃಹಗಳನ್ನು ಕಟ್ಟಲು ಶಕ್ತರಾಗಿದ್ದರು. (ಚಿತ್ರ 3) ಸಿದ್ಧಮನಸ್ಸಿನ ಸ್ವಯಂಸೇವಕರು ಮಾಡುತ್ತಿರುವ ಒಳ್ಳೇ ಕೆಲಸವು, ಮೆಕ್ಸಿಕೊ, ಬ್ರಸಿಲ್‌ ಮತ್ತು ಇತರ ದೇಶಗಳಲ್ಲಿ ಯೋಗ್ಯವಾದ ರಾಜ್ಯ ಸಭಾಗೃಹಗಳನ್ನು ಒದಗಿಸಲಿಕ್ಕಾಗಿಯೂ ಸಹಾಯಮಾಡುತ್ತಿದೆ.

ಒಂದು ರಾಜ್ಯ ಸಭಾಗೃಹವು ಕಟ್ಟಲ್ಪಡುವಾಗ, ಯೆಹೋವನ ಸಾಕ್ಷಿಗಳು ಅಲ್ಲಿ ಕಾಯಂ ಆಗಿ ತಳವೂರಲಿದ್ದಾರೆಂಬುದನ್ನು ಸ್ಥಳಿಕ ಜನರು ಗ್ರಹಿಸುತ್ತಾರೆಂದು ಸಭೆಗಳು ಗಮನಿಸಿವೆ. ಯೋಗ್ಯವಾದ ಆರಾಧನಾ ಸ್ಥಳವು ಲಭ್ಯವಾಗುವ ವರೆಗೂ ಅನೇಕ ಜನರು ಸಾಕ್ಷಿಗಳೊಂದಿಗೆ ಸಹವಾಸಮಾಡಲು ಹಿಂಜರಿಯುತ್ತಿದ್ದಂತೆ ತೋರುತ್ತಿತ್ತು. ಮಲಾವಿಯಲ್ಲಿರುವ ನಾಫೀಸೆ ಸಭೆಯು ವರದಿಸುವುದು: “ಈಗ ನಮಗೊಂದು ಯೋಗ್ಯವಾದ ರಾಜ್ಯ ಸಭಾಗೃಹವಿರುವುದರಿಂದ, ಅದು ಒಂದು ಒಳ್ಳೇ ಸಾಕ್ಷಿಯನ್ನು ಕೊಡುತ್ತಿದೆ. ಇದರಿಂದಾಗಿ ಬೈಬಲ್‌ ಅಭ್ಯಾಸಗಳನ್ನು ಆರಂಭಿಸುವುದು ಸುಲಭವಾಗಿಬಿಟ್ಟಿದೆ.”

ಬೆನಿನ್‌ನಲ್ಲಿರುವ ಕ್ರಾಕ್‌ ಸಭೆಯ ಸದಸ್ಯರು, ಈ ಹಿಂದೆ ಬಹಳಷ್ಟು ಅಪಹಾಸ್ಯವನ್ನು ಸಹಿಸಿಕೊಂಡಿದ್ದರು. ಏಕೆಂದರೆ ಕೆಲವೊಂದು ಚರ್ಚುಗಳಿಗೆ ಹೋಲಿಸುವಾಗ ಅವರ ಹಿಂದಿನ ರಾಜ್ಯ ಸಭಾಗೃಹವು ತೀರ ಸರಳವಾಗಿತ್ತು. (ಚಿತ್ರ 4) ಈಗ ಆ ಸಭೆಗೆ ಒಂದು ಒಳ್ಳೆಯ ನವೀನ ರಾಜ್ಯ ಸಭಾಗೃಹವಿದೆ ಮತ್ತು ಇದು ಸತ್ಯಾರಾಧನೆಯನ್ನು ಸರಳವಾದರೂ ಘನಭರಿತ ರೀತಿಯಲ್ಲಿ ಪ್ರತಿನಿಧಿಸುತ್ತದೆ. (ಚಿತ್ರ 5) ಈ ಸಭೆಯಲ್ಲಿ 34 ರಾಜ್ಯ ಪ್ರಚಾರಕರಿದ್ದರು ಮತ್ತು ಭಾನುವಾರದ ಕೂಟಗಳಂದು ಸರಾಸರಿ ಹಾಜರಿಯು 73 ಆಗಿರುತ್ತಿತ್ತು, ಆದರೆ ರಾಜ್ಯ ಸಭಾಗೃಹದ ಸಮರ್ಪಣೆಯ ಕಾರ್ಯಕ್ರಮಕ್ಕೆ 651 ಮಂದಿ ಹಾಜರಿದ್ದರು. ಇವರಲ್ಲಿ ಹೆಚ್ಚಿನವರು ಆ ಪಟ್ಟಣದ ಜನರೇ ಆಗಿದ್ದರು. ಇಷ್ಟೊಂದು ಅಲ್ಪ ಸಮಯದಲ್ಲಿ ಸಾಕ್ಷಿಗಳು ಒಂದು ಸಭಾಗೃಹವನ್ನು ಕಟ್ಟಲು ಶಕ್ತರಾಗಿರುವುದನ್ನು ನೋಡಿ ಅವರು ಪ್ರಭಾವಿತರಾಗಿದ್ದರು. ಈ ರೀತಿಯೇ ಹಿಂದೆ ನಡೆದಿರುವ ಸಂಭವಗಳನ್ನು ಮರುಜ್ಞಾಪಿಸಿಕೊಳ್ಳುತ್ತಾ, ಸಿಂಬಾಬ್ವೆ ಬ್ರಾಂಚ್‌ ವರದಿಸುವುದು: “ಒಂದು ಹೊಸ ರಾಜ್ಯ ಸಭಾಗೃಹವನ್ನು ಕಟ್ಟಿದ ಒಂದು ತಿಂಗಳೊಳಗೆ, ಕೂಟಗಳ ಹಾಜರಿಯು ಸಾಮಾನ್ಯವಾಗಿ ಇಮ್ಮಡಿಯಾಗುತ್ತದೆ.”​—ಚಿತ್ರಗಳು 6 ಮತ್ತು 7.

ಈ ಅನೇಕ ಹೊಸ ರಾಜ್ಯ ಸಭಾಗೃಹಗಳು, ಸಮರ್ಪಿತ ಕ್ರೈಸ್ತರಿಗೂ ಆಸಕ್ತ ಜನರಿಗೂ ಆತ್ಮಿಕ ಚೈತನ್ಯದ ಸ್ಥಳಗಳನ್ನು ಒದಗಿಸಲು ಸಹಾಯಮಾಡುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಯೂಕ್ರೇನ್‌ನಲ್ಲಿರುವ ಒಬ್ಬ ಸಾಕ್ಷಿಯು, ಸ್ಥಳಿಕ ಸಭೆಯು ಅದರ ಹೊಸ ರಾಜ್ಯ ಸಭಾಗೃಹವನ್ನು ಉಪಯೋಗಿಸಲು ಆರಂಭಿಸಿದ ಬಳಿಕ ಹೇಳಿದ್ದು: “ನಮಗೆ ಅಪಾರ ಆನಂದವಾಗುತ್ತದೆ. ಯೆಹೋವನು ತನ್ನ ಜನರಿಗೆ ಹೇಗೆ ಸಹಾಯಮಾಡುತ್ತಾನೆಂಬುದನ್ನು ನಾವು ಕಣ್ಣಾರೆ ನೋಡಿದೆವು.”

[ಪುಟ 10, 11ರಲ್ಲಿರುವ ಚೌಕ/ಚಿತ್ರಗಳು]

ಉದಾರವಾದ ಬೆಂಬಲವನ್ನು ಗಣ್ಯಮಾಡಲಾಗುತ್ತದೆ

ಭೂಗೋಳದ ಸುತ್ತಲೂ ರಾಜ್ಯ ಸಭಾಗೃಹಗಳಿಗಾಗಿರುವ ತುರ್ತಿನ ಆವಶ್ಯಕತೆಯನ್ನು ಪೂರೈಸುವುದರಲ್ಲಿ ಮಾಡಲಾಗುತ್ತಿರುವ ತ್ವರಿತವಾದ ಪ್ರಗತಿಯನ್ನು ನೋಡಿ ಯೆಹೋವನ ಸಾಕ್ಷಿಗಳು ಪುಳಕಿತರಾಗಿದ್ದಾರೆ. ವಿಭಿನ್ನ ದೇಶಗಳಲ್ಲಿ ಯೆಹೋವನ ಆರಾಧಕರ ಸಂಖ್ಯೆಯಲ್ಲಾಗುತ್ತಿರುವ ಸತತವಾದ ವೃದ್ಧಿಯು, ಭವಿಷ್ಯದಲ್ಲಿ ಅನೇಕ ಹೊಸ ರಾಜ್ಯ ಸಭಾಗೃಹಗಳ ಕಟ್ಟುವಿಕೆಯನ್ನು ಅಗತ್ಯಪಡಿಸುತ್ತದೆ. 2001ರ ಸೇವಾ ವರ್ಷದಲ್ಲಿ, ಪ್ರತಿ ವಾರ ಸರಾಸರಿ 32 ಹೊಸ ಸಭೆಗಳು ರಚಿಸಲ್ಪಟ್ಟವು! ಅಂಥ ಸಭೆಗಳಿಗೆ, ಕೂಡಿಬರಲಿಕ್ಕಾಗಿ ಮತ್ತು ಆರಾಧನೆಗಾಗಿ ಸ್ಥಳಗಳ ಆವಶ್ಯಕತೆ ಇದೆ.

‘ಹೊಸ ರಾಜ್ಯ ಸಭಾಗೃಹಗಳ ನಿಮಾರ್ಣದಂಥ ಯೋಜನೆಗಳಿಗಾಗಿ, ವಿಶೇಷವಾಗಿ ಸೀಮಿತ ಹಣಕಾಸುಳ್ಳ ಸಹೋದರರಿರುವ ದೇಶಗಳಲ್ಲಿ ಹಣವು ಎಲ್ಲಿಂದ ಬರುತ್ತದೆ?’ ಎಂಬ ಪ್ರಶ್ನೆಯೇಳಬಹುದು. ಇದಕ್ಕೆ ಉತ್ತರ, ದೈವಿಕ ಬೆಂಬಲ ಮತ್ತು ಮಾನವ ಉದಾರಭಾವನೆಯಾಗಿದೆ.

ಯೆಹೋವನು ತನ್ನ ಮಾತಿಗನುಸಾರವಾಗಿ, ತನ್ನ ಪವಿತ್ರಾತ್ಮವನ್ನು ತನ್ನ ಸೇವಕರ ಮೇಲೆ ಸುರಿಸಿ, ಅವರು “ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ ಆಗಿ”ರುವಂತೆ ಮಾಡುತ್ತಾನೆ. (1 ತಿಮೊಥೆಯ 6:18) ಕ್ರೈಸ್ತ ಚಟುವಟಿಕೆಗಳಿಗಾಗಿ ತಮ್ಮ ಸಮಯ, ಶಕ್ತಿ, ವೈಯಕ್ತಿಕ ದುಡಿಮೆ ಮತ್ತು ಇತರ ಸಂಪನ್ಮೂಲಗಳನ್ನು ಕೊಡುತ್ತಾ, ಹೀಗೆ ಪ್ರತಿಯೊಂದು ವಿಧದಲ್ಲೂ ರಾಜ್ಯ ಸಾರುವಿಕೆಯ ಕೆಲಸವನ್ನು ಬೆಂಬಲಿಸುವಂತೆ ದೇವರಾತ್ಮವು ಯೆಹೋವನ ಸಾಕ್ಷಿಗಳನ್ನು ಪ್ರಚೋದಿಸುತ್ತದೆ.

ವಿಸ್ತರಣೆ ಮತ್ತು ನಿರ್ಮಾಣ ಕೆಲಸಕ್ಕೆ ಆರ್ಥಿಕ ರೀತಿಯಲ್ಲಿ ನೆರವು ನೀಡುವ ಸಾಕ್ಷಿಗಳನ್ನು ಮತ್ತು ಇತರರನ್ನು ಒಂದು ಉದಾರಭಾವದ ಆತ್ಮವು ಪ್ರಚೋದಿಸುತ್ತದೆ. ಸ್ಥಳಿಕ ಸಭೆಯ ನಿತ್ಯದ ವೆಚ್ಚಗಳನ್ನು ಪೂರೈಸಲು ಸಹಾಯಮಾಡುವುದರೊಂದಿಗೆ, ಭೂಮಿಯ ಇತರ ಭಾಗಗಳಲ್ಲಿ ನಿರ್ಮಾಣ ಕೆಲಸಕ್ಕಾಗಿ ಅವರು ದಾನಗಳನ್ನು ಕೊಡುತ್ತಾರೆ.

ಪ್ರತಿಯೊಂದು ಸಭೆಯಲ್ಲಿ, “ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು​—ಮತ್ತಾಯ 24:14.” ಎಂಬ ನಾಮಪಟ್ಟಿಯಿರುವ ಪೆಟ್ಟಿಗೆಗಳಿರುತ್ತವೆ. ಯಾರಿಗೆ ಮನಸ್ಸಿದೆಯೊ ಅವರು ಸ್ವಯಂ ಪ್ರೇರಣೆಯಿಂದ ಅವುಗಳಲ್ಲಿ ದಾನಗಳನ್ನು ಹಾಕಬಹುದು. (2 ಅರಸುಗಳು 12:9) ಈ ದಾನಗಳು ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಅವುಗಳನ್ನು ಗಣ್ಯಮಾಡಲಾಗುತ್ತದೆ. (ಮಾರ್ಕ 12:​42-44) ಈ ಹಣವನ್ನು, ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯವನ್ನೂ ಸೇರಿಸಿ, ಅಗತ್ಯಕ್ಕನುಸಾರವಾಗಿ ವಿವಿಧ ರೀತಿಗಳಲ್ಲಿ ಬಳಸಲಾಗುತ್ತದೆ. ಈ ಹಣವನ್ನು ಸಂಬಳ ಪಡೆಯುತ್ತಿರುವ ಮ್ಯಾನೇಜರುಗಳಿಗೆ ತೆರಲಾಗುವುದಿಲ್ಲ, ಯಾಕೆಂದರೆ ಯೆಹೋವನ ಸಾಕ್ಷಿಗಳಲ್ಲಿ ಅಂಥ ಹುದ್ದೆಗಳೇ ಇಲ್ಲ.

ಲೋಕವ್ಯಾಪಕ ಕೆಲಸಕ್ಕಾಗಿ ಕೊಡಲಾಗುತ್ತಿರುವ ಕಾಣಿಕೆಗಳು ತಮ್ಮ ಉದ್ದೇಶವನ್ನು ಪೂರೈಸುತ್ತವೊ? ಹೌದು, ಪೂರೈಸುತ್ತವೆ. ಅಂತರ್ಯುದ್ಧದಿಂದ ಛಿದ್ರಗೊಂಡಿರುವ ಒಂದು ದೇಶವಾದ ಲೈಬೀರಿಯದಲ್ಲಿರುವ ಬ್ರಾಂಚ್‌ ಆಫೀಸು ವರದಿಸುವುದೇನೆಂದರೆ, ಸ್ಥಳಿಕ ಸಾಕ್ಷಿಗಳಲ್ಲಿ ಹೆಚ್ಚಿನವರು ನಿರುದ್ಯೋಗ ಮತ್ತು ಗಂಭೀರವಾದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ದೇಶಗಳಲ್ಲಿರುವ ಯೆಹೋವನ ಜನರು ಆರಾಧನೆಗಾಗಿ ಸೂಕ್ತವಾದ ಸ್ಥಳಗಳನ್ನು ಹೇಗೆ ಪಡೆಯಬಲ್ಲರು? “ಬೇರೆ ದೇಶಗಳಲ್ಲಿರುವ ಸಹೋದರರು ಮಾಡಿರುವ ಉದಾರವಾದ ಕಾಣಿಕೆಗಳನ್ನು ಆ ಕೆಲಸಕ್ಕಾಗಿ ಉಪಯೋಗಿಸಲಾಗುವುದು. ಎಂಥ ವಿವೇಕಭರಿತ ಹಾಗೂ ಪ್ರೀತಿಪರವಾದ ಏರ್ಪಾಡು!” ಎಂದು ಆ ಬ್ರಾಂಚ್‌ ಆಫೀಸು ಹೇಳುತ್ತದೆ.

ಸ್ಥಳಿಕ ಸಹೋದರರಿಗೆ ಸೀಮಿತ ಸಂಪಾದನೆಯಿರುವುದಾದರೂ, ಅವರು ಸಹ ಕಾಣಿಕೆಕೊಡುತ್ತಾರೆ. ಸೀಎರ ಲಿಯೋನ್‌ ಎಂಬ ಆಫ್ರಿಕದ ಒಂದು ದೇಶವು ವರದಿಸುವುದು: “ಸ್ಥಳಿಕ ಸಹೋದರರು ಈ ಪ್ರಯಾಸಕ್ಕೆ ಬೆಂಬಲವನ್ನು ಕೊಡುತ್ತಿದ್ದಾರೆ, ಮತ್ತು ರಾಜ್ಯ ಸಭಾಗೃಹಗಳ ನಿರ್ಮಾಣವನ್ನು ಬೆಂಬಲಿಸಲಿಕ್ಕಾಗಿ ತಮ್ಮ ದುಡಿಮೆ ಮತ್ತು ಸಾಧ್ಯವಿರುವ ಯಾವುದೇ ಆರ್ಥಿಕ ಕಾಣಿಕೆಯನ್ನು ಕೊಡಲು ಸಂತೋಷಪಡುತ್ತಾರೆ.”

ಕಟ್ಟಕಡೆಗೆ ಈ ಕಟ್ಟಡವು ಯೆಹೋವನಿಗೆ ಸ್ತುತಿಯನ್ನು ತರುತ್ತದೆ. ಲೈಬೀರಿಯದ ಸಹೋದರರು ಉತ್ಸಾಹದಿಂದ ಹೀಗನ್ನುತ್ತಾರೆ: “ಈ ದೇಶದಾದ್ಯಂತ ಯೋಗ್ಯವಾಗಿರುವ ಆರಾಧನಾ ಸ್ಥಳಗಳ ನಿರ್ಮಾಣವು, ಸತ್ಯಾರಾಧನೆಯು ಕಾಯಂ ಇಲ್ಲಿರುವುದೆಂಬುದನ್ನು ಜನರಿಗೆ ತೋರಿಸುವುದು ಮತ್ತು ನಮ್ಮ ದೇವರ ಮಹಾ ನಾಮವನ್ನು ಘನತೆಗೇರಿಸುವುದು ಮತ್ತು ಅದನ್ನು ಶೋಭಾಯಮಾನವಾಗಿ ಮಾಡುವುದು.”