ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪ್ರೀತಿಯನ್ನು ನೀವು ಗ್ರಹಿಸಬಲ್ಲಿರೊ?

ದೇವರ ಪ್ರೀತಿಯನ್ನು ನೀವು ಗ್ರಹಿಸಬಲ್ಲಿರೊ?

ದೇವರ ಪ್ರೀತಿಯನ್ನು ನೀವು ಗ್ರಹಿಸಬಲ್ಲಿರೊ?

ಯೋಬನೆಂಬ ವ್ಯಕ್ತಿಯು, ಅಪರಿಪೂರ್ಣ ಮಾನವರ ಸ್ಥಿತಿಯನ್ನು ಒಮ್ಮೆ ಈ ಮಾತುಗಳಲ್ಲಿ ವರ್ಣಿಸಿದನು: “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು. ಹೂವಿನ ಹಾಗೆ ಅರಳಿ ಬಾಡುವನು, ನೆರಳಿನಂತೆ ನಿಲ್ಲದೆ ಓಡಿಹೋಗುವನು.” (ಯೋಬ 14:1, 2) ಆ ಸಮಯದಲ್ಲಿ ಯೋಬನು ಅನುಭವಿಸುತ್ತಿದ್ದಂತೆ, ಜೀವನವು ಕಷ್ಟಸಂಕಟಗಳಿಂದ ತುಂಬಿತ್ತು. ನಿಮಗೂ ಎಂದಾದರೂ ಹಾಗನಿಸಿದೆಯೊ?

ಆದರೆ ನಾವು ಅನುಭವಿಸುತ್ತಿರಬಹುದಾದ ಎಲ್ಲ ಕಷ್ಟಸಮಸ್ಯೆಗಳ ಎದುರಿನಲ್ಲೂ ನಮಗೊಂದು ದೃಢವಾದ ನಿರೀಕ್ಷೆಯಿದೆ. ಅದು ದೇವರ ಕರುಣೆ ಮತ್ತು ಪ್ರೀತಿಯ ಮೇಲಾಧಾರಿತವಾಗಿದೆ. ಮೊತ್ತಮೊದಲಾಗಿ, ನಮ್ಮ ಕರುಣಾಭರಿತ ಸ್ವರ್ಗೀಯ ತಂದೆಯು, ಮಾನವಕುಲವನ್ನು ಅದರ ಪತಿತ, ಪಾಪಪೂರ್ಣ ಸ್ಥಿತಿಯಿಂದ ಬಿಡಿಸಲು ಪ್ರಾಯಶ್ಚಿತ್ತ ಯಜ್ಞವನ್ನು ಕೊಟ್ಟಿದ್ದಾನೆ. ಯೋಹಾನ 3:​16, 17ಕ್ಕನುಸಾರ ಯೇಸು ಕ್ರಿಸ್ತನು ತಿಳಿಸಿದ್ದು: “ದೇವರು [ಮಾನವಕುಲದ] ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ದೇವರು ತನ್ನ ಮಗನ [ಯೇಸು] ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ.”

ಅಪರಿಪೂರ್ಣ ಮಾನವರಾದ ನಮ್ಮ ಕಡೆಗಿನ ದೇವರ ದಯಾಪರ ಮನೋಭಾವವನ್ನು ಸಹ ಪರಿಗಣಿಸಿರಿ. ಅಪೊಸ್ತಲ ಪೌಲನು ಘೋಷಿಸಿದ್ದು: “ಆತನು ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ವಾಸಮಾಡಿಸಿ ಒಂದು ವೇಳೆ ಅವರು ತಡವಾಡಿ ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” (ಅ. ಕೃತ್ಯಗಳು 17:26, 27) ಅದರ ಕುರಿತಾಗಿ ಸ್ವಲ್ಪ ಯೋಚಿಸಿರಿ! ನಾವು ಅಪರಿಪೂರ್ಣ ಮಾನವರಾಗಿದ್ದರೂ, ನಾವು ನಮ್ಮ ಪ್ರೀತಿಯ ಸೃಷ್ಟಿಕರ್ತನಾದ ಯೆಹೋವ ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧದಲ್ಲಿ ಆನಂದಿಸಬಹುದು.

ಹಾಗಾದರೆ, ದೇವರು ನಮ್ಮ ಕುರಿತಾಗಿ ಚಿಂತಿಸುತ್ತಾನೆ ಮತ್ತು ನಮ್ಮ ನಿತ್ಯ ಪ್ರಯೋಜನಕ್ಕಾಗಿ ಪ್ರೀತಿಯಿಂದ ಏರ್ಪಾಡುಮಾಡಿದ್ದಾನೆಂದು ತಿಳಿದವರಾಗಿ, ನಾವು ದೃಢಭರವಸೆಯೊಂದಿಗೆ ಭವಿಷ್ಯವನ್ನು ಎದುರುನೋಡಬಲ್ಲೆವು. (1 ಪೇತ್ರ 5:7; 2 ಪೇತ್ರ 3:13) ಹಾಗಾದರೆ, ಆತನ ವಾಕ್ಯವಾದ ಬೈಬಲಿನ ಅಧ್ಯಯನದ ಮೂಲಕ ನಮ್ಮ ಪ್ರೀತಿಯ ದೇವರ ಬಗ್ಗೆ ಇನ್ನೂ ಹೆಚ್ಚನ್ನು ಕಲಿಯಲು ನಮಗೆ ಪ್ರತಿಯೊಂದು ಕಾರಣವಿದೆ.