ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅವರು ತಳವನ್ನು ಸೇರಿದರು’

‘ಅವರು ತಳವನ್ನು ಸೇರಿದರು’

‘ಅವರು ತಳವನ್ನು ಸೇರಿದರು’

“ಸಾಗರವು ಅವರನ್ನು ಮುಚ್ಚಿಬಿಟ್ಟಿತು; ಕಲ್ಲಿನಂತೆ ಧಡಲ್ಲೆಂದು ಸಮುದ್ರದ ತಳವನ್ನು ಸೇರಿದರು.”

ಆಮಾತುಗಳೊಂದಿಗೆ ಮೋಶೆ ಮತ್ತು ಇಸ್ರಾಯೇಲ್ಯರು, ಕೆಂಪು ಸಮುದ್ರದ ಮುಖಾಂತರ ತಮ್ಮ ಬಿಡುಗಡೆ ಮತ್ತು ತಮ್ಮನ್ನು ಬೆನ್ನಟ್ಟಿಕೊಂಡು ಬರುತ್ತಿದ್ದ ಐಗುಪ್ತದ ಸೈನ್ಯ, ಫರೋಹ ಮತ್ತು ಅವನ ಮಿಲಿಟರಿ ಪಡೆಗಳ ವಿನಾಶವನ್ನು ಹಾಡಿನ ಮೂಲಕ ಆಚರಿಸಿದರು.​—ವಿಮೋಚನಕಾಂಡ 15:4, 5.

ಆ ಪ್ರೇಕ್ಷಣೀಯವಾದ ಘಟನೆಯನ್ನು ಕಣ್ಣಾರೆನೋಡಿದ ಯಾವುದೇ ವ್ಯಕ್ತಿಗೆ, ಅದರ ಪಾಠವು ಸುಸ್ಪಷ್ಟವಾಗಿತ್ತು. ಅದೇನೆಂದರೆ, ಯಾವನೂ ಯೆಹೋವನ ಅಧಿಕಾರಕ್ಕೆ ಯಶಸ್ವಿಯಾಗಿ ಸವಾಲನ್ನೊಡ್ಡಿ ಇಲ್ಲವೆ ವಿರೋಧಿಸಿ ಬದುಕಿರಲಾರನು. ಆದರೆ ತದನಂತರ ಕೆಲವೇ ತಿಂಗಳುಗಳೊಳಗೆ ಪ್ರಮುಖ ಇಸ್ರಾಯೇಲ್ಯರಾಗಿದ್ದ ಕೋರಹ, ದಾತಾನ್‌ ಮತ್ತು 250 ಮಂದಿ ಬೆಂಬಲಿಗರು ಮೋಶೆ ಮತ್ತು ಆರೋನರ ದೇವದತ್ತ ಅಧಿಕಾರಕ್ಕೆ ಬಹಿರಂಗವಾಗಿ ಸವಾಲೆಸೆದರು.​—ಅರಣ್ಯಕಾಂಡ 16:​1-3.

ಯೆಹೋವನ ನಿರ್ದೇಶನಕ್ಕನುಸಾರ, ಮೋಶೆಯು ಇಸ್ರಾಯೇಲ್ಯರಿಗೆ ಆ ದಂಗೆಕೋರರ ಗುಡಾರಗಳಿಂದ ದೂರಸರಿಯುವಂತೆ ಎಚ್ಚರಿಸಿದನು. ತಮ್ಮ ಮನೆತನಗಳ ಸದಸ್ಯರೊಂದಿಗೆ ದಾತಾನ್‌ ಮತ್ತು ಅಬೀರಾಮರು ಭಂಡತನದಿಂದ ತಮ್ಮ ಮನೋಭಾವವನ್ನು ಬದಲಾಯಿಸಲು ನಿರಾಕರಿಸಿದರು. ಈ ಪುರುಷರು “ಯೆಹೋವನನ್ನು ಉಲಂಘಿಸಿದ”ರು ಎಂಬುದನ್ನು ಯೆಹೋವನು ತನ್ನ ಸ್ವಂತ ವಿಧದಲ್ಲಿ ಸ್ಪಷ್ಟಪಡಿಸುವನೆಂದು ಮೋಶೆಯು ಅನಂತರ ಘೋಷಿಸಿದನು. ಆ ಕ್ಷಣವೇ, ಯೆಹೋವನು ಅವರ ಪಾದಗಳ ಕೆಳಗಿದ್ದ ಭೂಮಿಯನ್ನು ಸೀಳಿದನು. “ಅವರು ಸಜೀವಿಗಳಾಗಿ ತಮ್ಮ ಸರ್ವಸ್ವವು ಸಹಿತ ಪಾತಾಳಕ್ಕೆ ಹೋಗಿಬಿಟ್ಟರು; ಭೂಮಿಯು ಅವರನ್ನು ಮುಚ್ಚಿಕೊಂಡಿತು.” ಕೋರಹ ಮತ್ತು ಉಳಿದ ದಂಗೆಕೋರರಿಗೇನಾಯಿತು? “ಯೆಹೋವನ ಬಳಿಯಿಂದ ಬೆಂಕಿಹೊರಟು ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ಭಸ್ಮಮಾಡಿತು.”​—ಅರಣ್ಯಕಾಂಡ 16:23-35; 26:10.

ಫರೋಹನು ಮತ್ತು ಅವನ ಪಡೆಗಳು ಹಾಗೂ ಅರಣ್ಯದಲ್ಲಿನ ಆ ದಂಗೆಕೋರರು, ಯೆಹೋವನ ಅಧಿಕಾರವನ್ನೂ ತನ್ನ ಜನರ ವ್ಯವಹಾರಗಳಲ್ಲಿ ಆತನಿಗಿರುವ ಆಸಕ್ತಿಯನ್ನು ಅಂಗೀಕರಿಸಲು ತಪ್ಪಿಹೋದದ್ದರಿಂದಲೇ ನಾಶವಾಗಿಹೋದರು. ಹೀಗಿರುವುದರಿಂದ, ಈ ಕಷ್ಟಕರ ಸಮಯಗಳಲ್ಲಿ ಯೆಹೋವನ ಸಂರಕ್ಷಣೆಯನ್ನು ಪಡೆಯಲು ಬಯಸುವವರೆಲ್ಲರೂ ಯೆಹೋವನು ‘ಪರಾತ್ಪರನು’ ಮತ್ತು ‘ಸರ್ವಶಕ್ತನು’ ಎಂಬದನ್ನು ಕಲಿತು ಆತನಿಗೆ ವಿಧೇಯರಾಗುವುದು ತುರ್ತಿನದ್ದಾಗಿದೆ. ಹಾಗೆ ಮಾಡುವಾಗ, ಅವರು ಯೆಹೋವನ ಪುನರಾಶ್ವಾಸನಾದಾಯಕ ಮಾತುಗಳನ್ನು ಮನಸ್ಸಿನಲ್ಲಿಡಬಹುದು: “ನಿನ್ನ ಮಗ್ಗುಲಲ್ಲಿ ಸಾವಿರ ಜನರು, ನಿನ್ನ ಬಲಗಡೆಯಲ್ಲಿ ಹತ್ತುಸಾವಿರ ಜನರು ಸತ್ತು ಬಿದ್ದರೂ ನಿನಗೇನೂ ತಟ್ಟದು. ನೀನು ಅದನ್ನು ಕಣ್ಣಾರೆ ಕಂಡು ದುಷ್ಟರಿಗೆ ಪ್ರತಿದಂಡನೆಯುಂಟೆಂಬದಕ್ಕೆ ಸಾಕ್ಷಿಯಾಗಿರುವಿಯಷ್ಟೆ. ಯೆಹೋವನೇ ನನ್ನ ಶರಣನು! ಪರಾತ್ಪರನನ್ನು ನಿವಾಸಸ್ಥಾನ ಮಾಡಿಕೊಂಡಿದ್ದೀಯಲ್ಲಾ.”​—ಕೀರ್ತನೆ 91:​1, 7-9.