ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನೀನು ಗುಣವಂತೆ”

“ನೀನು ಗುಣವಂತೆ”

“ನೀನು ಗುಣವಂತೆ”

ಈ ಮೆಚ್ಚುಗೆಸೂಸುವ ಮಾತುಗಳನ್ನು ಯುವ ಪ್ರಾಯದ ಒಬ್ಬ ಮೋವಾಬ್ಯ ಸ್ತ್ರೀಗೆ ಸಂಬೋಧಿಸಲಾಯಿತು. ಅವಳು ರೂತಳೆಂಬ ಹೆಸರಿನ ವಿಧವೆಯಾಗಿದ್ದಳು. ಅವಳು ನೊವೊಮಿ ಎಂಬ ಇಸ್ರಾಯೇಲ್ಯ ಸ್ತ್ರೀಯೊಬ್ಬಳ ಸೊಸೆಯಾಗಿದ್ದಳು. ನ್ಯಾಯಸ್ಥಾಪಕರು ಆಳುತ್ತಿದ್ದ ಸಮಯದಲ್ಲಿ, ಅಂದರೆ ಸುಮಾರು 3,000 ವರ್ಷಗಳ ಹಿಂದೆ ಇಸ್ರಾಯೇಲಿನಲ್ಲಿ ಜೀವಿಸಿದ ರೂತಳು, ಗುಣವಂತೆ ಎಂಬ ಒಳ್ಳೇ ಹೆಸರನ್ನು ಗಳಿಸಿದ್ದಳು. (ರೂತ 3:11) ಅವಳಿಗೆ ಈ ಹೆಸರು ದಕ್ಕಿದ್ದು ಹೇಗೆ? ಅವಳ ಮಾದರಿಯಿಂದ ಯಾರು ಪ್ರಯೋಜನಪಡೆಯಬಲ್ಲರು?

‘ಸೋಮಾರಿತನದ ಅನ್ನವನ್ನು ತಿನ್ನದ’ ಸ್ತ್ರೀಯಾಗಿ, ಅವಳು ಹೊಲದಲ್ಲಿ ಹಕ್ಕಲಾಯುವವಳೋಪಾದಿ ದೀರ್ಘ ಸಮಯಗಳ ವರೆಗೆ ಮತ್ತು ಕಷ್ಟಪಟ್ಟು ದುಡಿಯುತ್ತಿದ್ದಳು. ಅವಳ ಕೆಲಸದಲ್ಲಿನ ಈ ಶ್ರದ್ಧೆಯು ಅವಳಿಗೆ ಶ್ಲಾಘನೆಯನ್ನು ತಂದುಕೊಟ್ಟಿತು. ಅವಳ ಕೆಲಸದ ಭಾರವನ್ನು ಕಡಿಮೆಗೊಳಿಸುವ ನೀಡಿಕೆಯು ಮಾಡಲ್ಪಟ್ಟಾಗಲೂ, ಅವಳು ತನ್ನಿಂದ ನಿರೀಕ್ಷಿಸಲ್ಪಟ್ಟದ್ದಕ್ಕಿಂತಲೂ ಹೆಚ್ಚನ್ನು ಮಾಡುತ್ತಾ, ದುಡಿಯುವುದನ್ನು ಮುಂದುವರಿಸಿದಳು. ಬೈಬಲಿನಲ್ಲಿ ಒಬ್ಬ ಸ್ತುತ್ಯಾರ್ಹ, ಸಮರ್ಥ, ಮತ್ತು ಉದ್ಯೋಗಶೀಲ ಪತ್ನಿಯ ಕುರಿತಾಗಿ ಕೊಡಲ್ಪಟ್ಟಿರುವ ವರ್ಣನೆಯು ಎದ್ದುಕಾಣುವಂಥ ರೀತಿಯಲ್ಲಿ ಅವಳಿಗೆ ಅನುರೂಪವಾದದ್ದಾಗಿತ್ತು.​—ಜ್ಞಾನೋಕ್ತಿ 31:​10-31; ರೂತಳು 2:​7, 15-17.

ರೂತಳ ಆತ್ಮಿಕ ಗುಣಗಳು, ಅಂದರೆ ಅವಳ ನಮ್ರ, ಸ್ವತ್ಯಾಗದ ಮನೋಭಾವ ಮತ್ತು ಅವಳ ನಿಷ್ಠಾವಂತ ಪ್ರೀತಿಯೇ ಅವಳಿಗೆ ಸಿಕ್ಕಿದ ಒಳ್ಳೆಯ ಹೆಸರಿಗೆ ಪ್ರಧಾನ ಕಾರಣವಾಗಿತ್ತು. ತನ್ನ ಹೆತ್ತವರನ್ನೂ ಸ್ವದೇಶವನ್ನೂ ಬಿಟ್ಟುಬಂದು, ಮದುವೆಯಿಂದ ಸಿಗಸಾಧ್ಯವಿರುವ ಭದ್ರತೆಯ ಕೊಂಚ ಪ್ರತೀಕ್ಷೆಯೊಂದಿಗೆ ಮಾತ್ರ, ಅವಳು ನೊವೊಮಿಗೆ ಅಂಟಿಕೊಂಡಳು. ಅದೇ ಸಮಯದಲ್ಲಿ, ತನ್ನ ಅತ್ತೆಯ ದೇವರಾಗಿದ್ದ ಯೆಹೋವನನ್ನು ಸೇವಿಸುವ ಬಯಕೆಯನ್ನು ರೂತಳು ವ್ಯಕ್ತಪಡಿಸಿದಳು. ಅವಳ ಬೆಲೆಯನ್ನು ಒತ್ತಿಹೇಳುತ್ತಾ, ಅವಳು ‘[ನೊವೊಮಿಗೆ] ಏಳು ಮಂದಿ ಮಕ್ಕಳಿಗಿಂತ ಉತ್ತಮ’ಳಾಗಿದ್ದಳೆಂದು ಶಾಸ್ತ್ರೀಯ ವೃತ್ತಾಂತವು ತಿಳಿಸುತ್ತದೆ.​—ರೂತಳು 1:​16, 17; 2:​11, 12; 4:15.

ರೂತಳ ಮಾನವ ಸಂಗಡಿಗರ ಮಧ್ಯದಲ್ಲಿ ಆಕೆಯ ಗುಣವಂತಿಕೆಯ ಕುರಿತಾದ ದಾಖಲೆಯು ಸ್ತುತ್ಯಾರ್ಹವಾಗಿದ್ದರೂ, ಅವಳ ಗುಣಗಳ ಬಗ್ಗೆ ದೇವರ ಪ್ರಸನ್ನಕರವಾದ ವಿಮರ್ಶೆ ಮತ್ತು ಅವಳು ಯೇಸು ಕ್ರಿಸ್ತನ ಒಬ್ಬ ಪೂರ್ವಜೆಯಾಗುವ ಸುಯೋಗವನ್ನು ಆತನು ಅವಳಿಗೆ ಕೊಟ್ಟು ಬಹುಮಾನಿಸಿದ್ದರ ಸಂಗತಿಯು ಹೆಚ್ಚು ಮಹತ್ವಪೂರ್ಣವಾದ ಸಂಗತಿಯಾಗಿದೆ. (ಮತ್ತಾಯ 1:5; 1 ಪೇತ್ರ 3:4) ರೂತಳು ಕ್ರೈಸ್ತ ಸ್ತ್ರೀಯರಿಗೆ ಮಾತ್ರವಲ್ಲ ಯೆಹೋವನನ್ನು ಆರಾಧಿಸುತ್ತಿದ್ದೇವೆಂದು ಹೇಳಿಕೊಳ್ಳುವವರೆಲ್ಲರಿಗೂ ಎಂಥ ಉತ್ತಮ ಮಾದರಿಯಾಗಿದ್ದಾಳೆ!