ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಹಸ್ಯವಾಗಿಡಲ್ಪಟ್ಟ ವಿಷಯವನ್ನು ತಿಳಿಸುವ ಸಮಯ

ರಹಸ್ಯವಾಗಿಡಲ್ಪಟ್ಟ ವಿಷಯವನ್ನು ತಿಳಿಸುವ ಸಮಯ

ರಹಸ್ಯವಾಗಿಡಲ್ಪಟ್ಟ ವಿಷಯವನ್ನು ತಿಳಿಸುವ ಸಮಯ

ನಿರ್ದಿಷ್ಟ ವಿಷಯಗಳನ್ನು ರಹಸ್ಯವಾಗಿಡುವುದು, ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಕಲಹವನ್ನು ದೂರವಿರಿಸಲು ಸಹಾಯಮಾಡಬಲ್ಲದು. ಆದರೆ ರಹಸ್ಯವಾಗಿಡಲ್ಪಟ್ಟ ವಿಷಯವನ್ನು ತಿಳಿಸುವ ಸಮಯವೂ ಇದೆಯೊ? ತನ್ನ ದೇವರ ಕುರಿತಾಗಿ ಪ್ರವಾದಿಯಾದ ಆಮೋಸನು ಏನು ಹೇಳುತ್ತಾನೆಂಬುದನ್ನು ಗಮನಿಸಿರಿ: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.” (ಆಮೋಸ 3:7) ಈ ಮಾತುಗಳಿಂದ ನಾವು ಗೋಪ್ಯತೆಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಒಂದು ಪಾಠವನ್ನು ಕಲಿಯಬಲ್ಲೆವು. ಯೆಹೋವನು ನಿರ್ದಿಷ್ಟ ವಿಷಯಗಳನ್ನು ಒಂದು ನಿರ್ದಿಷ್ಟ ಸಮಯಾವಧಿಯ ವರೆಗೆ ರಹಸ್ಯವಾಗಿಡಬಹುದು ಮತ್ತು ಕಟ್ಟಕಡೆಗೆ ಅದನ್ನು ಕೆಲವು ವ್ಯಕ್ತಿಗಳಿಗೆ ತಿಳಿಸಬಹುದು. ಈ ವಿಷಯದಲ್ಲಿ ನಾವು ಯೆಹೋವನನ್ನು ಹೇಗೆ ಅನುಕರಿಸಬಲ್ಲೆವು?

ಕೆಲವೊಮ್ಮೆ, ಕ್ರೈಸ್ತ ಸಭೆಯಲ್ಲಿರುವ ನೇಮಿತ ಕುರುಬರು, ಒಂದು ನಿರ್ದಿಷ್ಟ ವಿಷಯವನ್ನು ಗೋಪ್ಯವಾಗಿಡುವುದು ಒಳ್ಳೇದೆಂದು ಎಣಿಸುತ್ತಾರೆ. (ಅ. ಕೃತ್ಯಗಳು 20:28) ಉದಾಹರಣೆಗಾಗಿ, ಸಭೆಯ ಪ್ರಯೋಜನವನ್ನು ಮನಸ್ಸಿನಲ್ಲಿಟ್ಟವರಾಗಿ, ಅವರು ಸಭಾ ಜವಾಬ್ದಾರಿಗಳಲ್ಲಿನ ಕೆಲವೊಂದು ಏರ್ಪಾಡುಗಳು ಇಲ್ಲವೆ ಬದಲಾವಣೆಗಳ ಕುರಿತಾದ ವಿವರಗಳನ್ನು ನಿರ್ದಿಷ್ಟ ಸಮಯದ ವರೆಗೆ ರಹಸ್ಯವಾಗಿಡಲು ನಿರ್ಣಯಿಸಬಹುದು.

ಆದರೆ ಅಂಥ ಸಂದರ್ಭದಲ್ಲಿ, ಆ ವಿಷಯವು ತಿಳಿಸಲ್ಪಡಬೇಕೊ ಇಲ್ಲವೊ, ತಿಳಿಸಲ್ಪಡಬೇಕಾದರೆ ಯಾವಾಗ ಮತ್ತು ಹೇಗೆ ತಿಳಿಸಲ್ಪಡಬೇಕೆಂಬುದನ್ನು ಸಂಬಂಧಪಟ್ಟವರಿಗೆ ಸ್ಪಷ್ಟಪಡಿಸುವುದು ಪ್ರಾಮುಖ್ಯವಾಗಿದೆ. ಒಂದು ವಿಷಯವು ಯಾವಾಗ ಬಹಿರಂಗಗೊಳಿಸಲ್ಪಡುವುದು ಎಂಬುದನ್ನು ತಿಳಿದಿರುವುದು, ಅವರಿಗೆ ಆ ಗೋಪ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯಮಾಡಬಹುದು.​—ಜ್ಞಾನೋಕ್ತಿ 25:9.