ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ದೇವರ ವಾಕ್ಯವು ಕಾರ್ಯಸಾಧಕ’

‘ದೇವರ ವಾಕ್ಯವು ಕಾರ್ಯಸಾಧಕ’

ರಾಜ್ಯ ಘೋಷಕರು ವರದಿ ಮಾಡುತ್ತಾರೆ

‘ದೇವರ ವಾಕ್ಯವು ಕಾರ್ಯಸಾಧಕ’

ಜಮೇಕಾದ ಕರಿಬೀಅನ್‌ ದ್ವೀಪದಲ್ಲಿ ಹೆಚ್ಚಿನ ಜನರು ಬೈಬಲಿನ ಪರಿಚಯವುಳ್ಳವರು. ಕಿಂಗ್‌ ಜೇಮ್ಸ್‌ ವರ್ಷನ್‌ ಬೈಬಲು ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲಿಯೂ ಇದೆ. ಮತ್ತು ಕೆಲವರು “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಎಂಬುದನ್ನು ಅನುಭವಿಸಿ ತಿಳಿದಿದ್ದಾರೆ. (ಇಬ್ರಿಯ 4:12) ಈ ಕಾರ್ಯಸಾಧಕ ಶಕ್ತಿಯು ಜೀವನಗಳನ್ನು ಬದಲಾಯಿಸಬಲ್ಲದು. ಮತ್ತು ಇದನ್ನು ಕೆಳಗಿನ ಅನುಭವವು ಚಿತ್ರಿಸುತ್ತದೆ.

ಕ್ಲೀವ್ಲೆಂಡ್‌ ಎಂಬವನು ಆಗ ತಾನೆ ಕೆಲಸದಿಂದ ಮನೆಗೆ ಬಂದಿರಲಾಗಿ ಯೆಹೋವನ ಸಾಕ್ಷಿಯೊಬ್ಬನು ಅವನನ್ನು ಭೇಟಿಯಾದನು. ಶಾಸ್ತ್ರವಚನಗಳಿಂದ ಕೆಲವು ಸಂಗತಿಗಳನ್ನು ತಿಳಿಯಪಡಿಸಿದ ಬಳಿಕ ಸಾಕ್ಷಿಯು, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ಬಿಟ್ಟುಹೋದನು. ದೇವರ ವಾಕ್ಯವು ತನ್ನ ಜೀವನದ ಮೇಲೆ ಅಷ್ಟೊಂದು ಪ್ರಭಾವವನ್ನು ಬೀರುವುದೆಂಬುದನ್ನು ಕ್ಲೀವ್ಲೆಂಡ್‌ ಗ್ರಹಿಸಿರಲಿಲ್ಲ.

ಕ್ಲೀವ್ಲೆಂಡ್‌ಗೆ ದಿನಕ್ಕೆ ಮೂರಾವರ್ತಿ ಪ್ರಾರ್ಥಿಸುವ ರೂಢಿಯಿತ್ತು. ಅವನು ದೇವರನ್ನು ಆರಾಧಿಸುವ ಸರಿಯಾದ ವಿಧವನ್ನು ಹುಡುಕಲಿಕ್ಕಾಗಿ ದೇವರ ಸಹಾಯವನ್ನು ಕೋರುತ್ತಿದ್ದನು. ತನ್ನ ಹೆತ್ತವರ ಆರಾಧನೆ ಸರಿಯಾದ ಆರಾಧನೆಯಾಗಿರಲಿಲ್ಲ ಎಂಬುದನ್ನು ನಿಶ್ಚಯವಾಗಿ ತಿಳಿದಿದ್ದ ಕ್ಲೀವ್ಲೆಂಡ್‌, ಬೇರೆ ಧರ್ಮಗಳನ್ನು ಪರೀಕ್ಷಿಸಿಯಾದ ಮೇಲೆ ನಿರಾಶೆಪಟ್ಟನು. ಅವನಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ತಿಳಿದಿತ್ತಾದರೂ ಅವರಲ್ಲಿ ಸತ್ಯವಿದೆಯೊ ಇಲ್ಲವೊ ಎಂಬ ವಿಷಯದಲ್ಲಿ ಸಂಶಯವಿತ್ತು. ಇಂತಹ ಸಂದೇಹದ ಎದುರಿನಲ್ಲಿಯೂ, ತನ್ನ ಮನೆಗೆ ಭೇಟಿಯಿತ್ತ ಆ ಸಾಕ್ಷಿಯೊಂದಿಗೆ ಅವನು ಬೈಬಲನ್ನು ಅಧ್ಯಯನ ಮಾಡಲು ಒಪ್ಪಿಕೊಂಡನು. ಏಕೆ? ಸಾಕ್ಷಿಗಳು ತಪ್ಪೆಂದು ರುಜುಪಡಿಸಲಿಕ್ಕಾಗಿಯೆ!

ಆದರೆ ತಾನು ಇಬ್ಬರು ಸ್ತ್ರೀಯರೊಂದಿಗೆ ಇಟ್ಟುಕೊಂಡಿರುವ ಅನೈತಿಕ ಸಂಬಂಧವು ದೇವರಿಗೆ ಮೆಚ್ಚಿಕೆಯಾಗಿರುವುದಿಲ್ಲವೆಂದು ಕ್ಲೀವ್ಲೆಂಡ್‌ಗೆ ಬೇಗನೆ ತಿಳಿದುಬಂತು. (1 ಕೊರಿಂಥ 6:​9, 10) ಕೇವಲ ಎರಡೇ ಅಧ್ಯಯನಗಳ ಬಳಿಕ, ಅವನು ಆ ಸ್ತ್ರೀಯರೊಂದಿಗೆ ತನಗಿದ್ದ ಸಂಬಂಧವನ್ನು ಕಡಿಯಲು ಧೈರ್ಯ ತೆಗೆದುಕೊಂಡನು. ಅವನು ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಸಹ ಹಾಜರಾಗಲು ಪ್ರಾರಂಭಿಸಿದನು. ಆದರೆ ಇದು ಇನ್ನೊಂದು ಪರೀಕ್ಷೆಯಾಗಿ ಪರಿಣಮಿಸಿತು.

ಕ್ಲೀವ್ಲೆಂಡ್‌ ತನ್ನ ಸಮಾಜದ ಫುಟ್‌ಬಾಲ್‌ ತಂಡದಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸುತ್ತಿದ್ದುದರಿಂದ, ಆ ಆಟಗಳು ಅವನ ಕೂಟದ ಹಾಜರಿಗೆ ಅಡ್ಡಬರುತ್ತಿದ್ದವು. ಈಗ ಅವನೇನು ಮಾಡಿಯಾನು? ತನ್ನ ತಂಡದಿಂದ, ಕೋಚ್‌ ಮತ್ತು ಸ್ನೇಹಿತರಿಂದ ಭಾರೀ ಒತ್ತಡವು ಬಂದರೂ ಕ್ಲೀವ್ಲೆಂಡ್‌ ಆ ತಂಡವನ್ನು ಬಿಡಲು ನಿಶ್ಚಯಿಸಿದನು. ಹೌದು, ದೇವರ ವಾಕ್ಯವು ಶಕ್ತಿಯನ್ನು ಬೀರಲಾರಂಭಿಸಿ, ಅವನ ಪ್ರಯೋಜನಾರ್ಥವಾಗಿ ಅವನನ್ನು ಪ್ರಭಾವಿಸಿತು!

ಕ್ಲೀವ್ಲೆಂಡ್‌ ತನ್ನ ಬೈಬಲ್‌ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳತೊಡಗಿದಾಗ ದೇವರ ವಾಕ್ಯದ ಕಾರ್ಯಸಾಧಕತೆಯು ಪುನಃ ತೋರಿಬಂತು. (ಅ. ಕೃತ್ಯಗಳು 1:8) ಇದರ ಪರಿಣಾಮವಾಗಿ ಅವನ ಹಿಂದಿನ ತಂಡದಲ್ಲಿದ್ದ ಇಬ್ಬರು, ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಉಪಸ್ಥಿತರಾಗತೊಡಗಿದರು. ಕ್ಲೀವ್ಲೆಂಡ್‌ ಸುವಾರ್ತಾ ಪ್ರಚಾರಕನಾಗಲು ಯೋಗ್ಯತೆ ಪಡೆದಾಗ, ಇತರರಿಗೆ ಸಹಾಯಮಾಡಲು ದೇವರ ವಾಕ್ಯವನ್ನು ಉಪಯೋಗಿಸುವ ಸೇವೆಯಲ್ಲಿ ಮಹಾ ಸಂತೋಷವನ್ನು ಕಂಡುಕೊಂಡನು.

ದೇವರ ವಾಕ್ಯದ ಕಾರ್ಯಸಾಧಕತೆಯಿಂದ ಪ್ರೇರಿತನಾಗುತ್ತಾ, ಕ್ಲೀವ್ಲೆಂಡ್‌ ಕೊನೆಗೆ ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತನ್ನ ಸಮರ್ಪಣೆಯನ್ನು ಸೂಚಿಸಿ, ಸಭೆಯಲ್ಲಿ ಪೂರ್ಣ ಸಮಯದ ಶುಶ್ರೂಷಕನಾಗಿಯೂ ಶುಶ್ರೂಷಾ ಸೇವಕನಾಗಿಯೂ ಸೇವೆಮಾಡುವ ಸದವಕಾಶವನ್ನು ಪಡೆದನು.

ಜಮೇಕಾದಲ್ಲಿಯೂ ಲೋಕಾದ್ಯಂತವೂ, ದೇವರ ವಾಕ್ಯವು ನಿಶ್ಚಯವಾಗಿಯೂ “ಸಜೀವವಾದದ್ದು, ಕಾರ್ಯಸಾಧಕವಾದದ್ದು” ಎಂಬುದನ್ನು ಸಾವಿರಾರು ಜನರು ಕಲಿಯುವಂತಾಗಿದೆ.

[ಪುಟ 8ರಲ್ಲಿರುವ ಭೂಪಟ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಜಮೇಕಾ

[ಕೃಪೆ]

ಭೂಪಟ ಮತ್ತು ಭೂಗೋಳ: Mountain High Maps® Copyright © 1997 Digital Wisdom, Inc.