ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಪರಾನುಭೂತಿ ಎಂದರೇನು, ಮತ್ತು ಅದನ್ನು ಕ್ರೈಸ್ತರು ಏಕೆ ಬೆಳೆಸಿಕೊಳ್ಳಬೇಕು?

ಅದು ಬೇರೊಬ್ಬ ವ್ಯಕ್ತಿಯ ಸ್ಥಾನದಲ್ಲಿ ತನ್ನನ್ನೇ ಇರಿಸಿಕೊಳ್ಳುವ, ಬೇರೊಬ್ಬ ವ್ಯಕ್ತಿಯ ದುಃಖವನ್ನು ನಮ್ಮ ಹೃದಯದಲ್ಲಿ ಅನುಭವಿಸುವ ಶಕ್ತಿಯಾಗಿದೆ. ಕ್ರೈಸ್ತರು, ‘[ಅನುಕಂಪ], ಪ್ರೀತಿ, ಮತ್ತು ಕರುಣೆ’ಯನ್ನು ತೋರಿಸುವಂತೆ ಅವರಿಗೆ ಸಲಹೆ ನೀಡಲಾಗಿದೆ. (1 ಪೇತ್ರ 3:8) ಪರಾನುಭೂತಿಯನ್ನು ತೋರಿಸುವುದರಲ್ಲಿ ಯೆಹೋವನು ನಮಗೆ ಒಂದು ಮಾದರಿಯನ್ನು ಇಟ್ಟನು. (ಕೀರ್ತನೆ 103:14; ಜೆಕರ್ಯ 2:8) ಕಿವಿಗೊಡುವ, ಗಮನಿಸುವ ಮತ್ತು ಕಲ್ಪಿಸಿಕೊಳ್ಳುವ ಮೂಲಕ ನಾವು ಈ ವಿಷಯದಲ್ಲಿ ನಮ್ಮ ಪ್ರತಿಕ್ರಿಯೆಯನ್ನು ತೀವ್ರಗೊಳಿಸಬಹುದು.​—4/15, ಪುಟಗಳು 24-6.

ನಿಜ ಸಂತೋಷವನ್ನು ಪಡೆದುಕೊಳ್ಳಲಿಕ್ಕಾಗಿ, ಶಾರೀರಿಕ ಅಂಗವಿಕಲತೆಗಳಿಗೆ ಕೊನೆಯ ಪರಿಹಾರವು ಬರುವ ಮುನ್ನ ಆತ್ಮಿಕ ವಾಸಿಮಾಡುವಿಕೆ ಏಕೆ ಇರಬೇಕು?

ಶಾರೀರಿಕವಾಗಿ ಆರೋಗ್ಯವಂತರಾಗಿರುವ ಅನೇಕರು, ಸಮಸ್ಯೆಗಳಿಂದ ಮುಳುಗಿಹೋಗಿರುವ ಕಾರಣ ಅಸಂತುಷ್ಟರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಇಂದು ಶಾರೀರಿಕ ಅಂಗವಿಕಲತೆಗಳಿರುವ ಅನೇಕ ಕ್ರೈಸ್ತರು ಯೆಹೋವನನ್ನು ಸೇವಿಸುವುದರಲ್ಲಿ ತುಂಬ ಸಂತೋಷದಿಂದಿದ್ದಾರೆ. ಆತ್ಮಿಕ ವಾಸಿಮಾಡುವಿಕೆಯಿಂದ ಪ್ರಯೋಜನವನ್ನು ಪಡೆದುಕೊಳ್ಳುವವರಿಗೆ, ಹೊಸ ಲೋಕದಲ್ಲಿ ಶಾರೀರಿಕ ಅಂಗವಿಕಲತೆಗಳು ಇಲ್ಲದಂತೆ ಮಾಡಲ್ಪಡುವ ಅನುಭವವನ್ನು ಪಡೆದುಕೊಳ್ಳುವ ಅವಕಾಶವಿರುವುದು.​—5/1, ಪುಟಗಳು 6-7.

ಇಬ್ರಿಯ 12:​16, ಏಸಾವನನ್ನು ಜಾರರ ವರ್ಗಕ್ಕೆ ಸೇರಿಸಿ ಮಾತಾಡುವುದೇಕೆ?

ಏಸಾವನು ತತ್‌ಕ್ಷಣದ ಪ್ರತಿಫಲಗಳ ಮೇಲೆ ಕೇಂದ್ರೀಕರಿಸಿದಂಥ ಒಂದು ಮನೋವೃತ್ತಿಯನ್ನು ಮತ್ತು ಪವಿತ್ರ ವಿಷಯಗಳಿಗಾಗಿ ಉಪೇಕ್ಷೆಯನ್ನು ತೋರಿಸಿದನು ಎಂದು ಬೈಬಲ್‌ ದಾಖಲೆಯು ತೋರಿಸುತ್ತದೆ. ಇಂದು ಆ ರೀತಿಯ ಮನೋವೃತ್ತಿಯು ಬೆಳೆಯುವಂತೆ ಒಬ್ಬನು ಅನುಮತಿಸುವಲ್ಲಿ, ಅದು ಜಾರತ್ವದಂಥ ಗಂಭೀರವಾದ ಪಾಪಕ್ಕೆ ನಡೆಸಬಲ್ಲದು.​—5/1, ಪುಟಗಳು 10, 11.

• ಟೆರ್ಟಲ್ಯನ್‌ ಯಾರು, ಮತ್ತು ಅವನು ಯಾವುದಕ್ಕಾಗಿ ಪ್ರಸಿದ್ಧನಾಗಿದ್ದಾನೆ?

ಅವನು ಸಾ.ಶ. ಎರಡನೆಯ ಮತ್ತು ಮೂರನೆಯ ಶತಮಾನಗಳಲ್ಲಿ ಜೀವಿಸಿದ್ದ ಒಬ್ಬ ಲೇಖಕನೂ ದೇವತಾಶಾಸ್ತ್ರಜ್ಞನೂ ಆಗಿದ್ದನು. ಅವನು ನಾಮಮಾತ್ರದ ಕ್ರೈಸ್ತತ್ವವನ್ನು ಸಮರ್ಥಿಸುತ್ತಾ ಅನೇಕ ಸಾಹಿತ್ಯಕ ಕೃತಿಗಳನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಪ್ರಸಿದ್ಧನಾಗಿದ್ದಾನೆ. ಅವನು ತನ್ನ ಸಮರ್ಥನೆಯನ್ನು ಒಪ್ಪಿಸುವಾಗ, ತ್ರಯೈಕ್ಯದಂಥ ತಾತ್ತ್ವಿಕ ಕಲ್ಮಶಗಳಿಗೆ ಆಧಾರವನ್ನು ಒದಗಿಸಿದ ವಿಚಾರಗಳು ಮತ್ತು ತತ್ತ್ವಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಚಯಿಸಿದನು.​—5/15, ಪುಟಗಳು 29-31.

• ಮಾನವ ರೋಗಗಳು, ವರ್ತನೆಗಳು, ಮತ್ತು ಮರಣಕ್ಕೆ ನಮ್ಮ ಆನುವಂಶಿಕತೆಯೇ ಸಂಪೂರ್ಣವಾಗಿ ಕಾರಣವಾಗಿಲ್ಲ ಏಕೆ?

ವಿಭಿನ್ನವಾದ ಮಾನವ ರೋಗಗಳಿಗೆ ಒಂದು ಆನುವಂಶಿಕ ಕಾರಣವಿದೆ ಎಂದು ವಿಜ್ಞಾನಿಗಳು ನಿರ್ಣಯಿಸಿದ್ದಾರೆ, ಮತ್ತು ವರ್ತನೆಗಳು ನಮ್ಮ ಜೀನ್‌ಗಳಿಂದ ನಿರ್ಧರಿಸಲ್ಪಡುತ್ತವೆ ಎಂದು ಕೆಲವರು ನಂಬುತ್ತಾರೆ. ಆದರೂ, ಮಾನವಕುಲದ ಮೂಲದ ಕುರಿತು ಹಾಗೂ ಪಾಪ ಮತ್ತು ಅಪರಿಪೂರ್ಣತೆಯು ಹೇಗೆ ಮಾನವಕುಲವನ್ನು ಬಾಧಿಸಲಾರಂಭಿಸಿತು ಎಂಬುದರ ಕುರಿತು ಬೈಬಲು ಒಳನೋಟವನ್ನು ಒದಗಿಸುತ್ತದೆ. ಜೀನ್‌ಗಳು ವ್ಯಕ್ತಿತ್ವಗಳನ್ನು ರೂಪಿಸುವುದರಲ್ಲಿ ಪಾತ್ರ ವಹಿಸಬಹುದಾದರೂ, ನಮ್ಮ ಅಪರಿಪೂರ್ಣತೆ ಮತ್ತು ನಮ್ಮ ಪರಿಸರವು ಕೂಡ ಪ್ರಧಾನ ಪ್ರಭಾವಗಳಾಗಿವೆ.​—6/1, ಪುಟಗಳು 9-11.

• ಈಜಿಪ್ಟಿನ ಆಕ್ಸಿರಿಂಕಸ್‌ನಲ್ಲಿ ಕಂಡುಕೊಳ್ಳಲ್ಪಟ್ಟ ಒಂದು ಪಪೈರಸ್‌ ಅವಶಿಷ್ಟವು, ದೇವರ ನಾಮದ ಉಪಯೋಗದ ವಿಷಯದಲ್ಲಿ ಹೇಗೆ ಬೆಳಕನ್ನು ಬೀರುತ್ತದೆ?

ಗ್ರೀಕ್‌ ಸೆಪ್ಟ್ಯೂಅಜಿಂಟ್‌ನಿಂದ ಯೋಬ 42:​11, 12ರ ಈ ಅವಿಶಿಷ್ಟದಲ್ಲಿ ಟೆಟ್ರಗ್ರ್ಯಾಮಟಾನ್‌ (ದೇವರ ಹೆಸರಿಗಾಗಿರುವ ನಾಲ್ಕು ಹೀಬ್ರು ಅಕ್ಷರಗಳು) ಇದೆ. ಇದು, ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಬರಹಗಾರರಿಂದ ಅನೇಕಬಾರಿ ಉಲ್ಲೇಖಿಸಲ್ಪಟ್ಟ ಸೆಪ್ಟ್ಯೂಅಜಿಂಟ್‌ನಲ್ಲಿ ದೇವರ ನಾಮವು ಹೀಬ್ರುವಿನಲ್ಲಿ ಕಂಡುಬಂದಿತು ಎಂಬುದಕ್ಕೆ ಹೆಚ್ಚಿನ ಪುರಾವೆಯಾಗಿದೆ.​—6/1, ಪುಟ 30.

• ರೋಮ್‌ ಸಾಮ್ರಾಜ್ಯದ ಹಿಂಸಾತ್ಮಕ ಮತ್ತು ಜೀವಘಾತಕ ಖಡ್ಗಮಲ್ಲರ ಸ್ಪರ್ಧೆಗಳನ್ನು, ಇಂದಿನ ಯಾವ ಪ್ರೇಕ್ಷಕ ಕ್ರೀಡೆಗಳಿಗೆ ಹೋಲಿಸಲಾಗಿದೆ?

ಇಟಲಿ, ರೋಮ್‌ನ ಕಾಲಸೀಯಮ್‌ನಲ್ಲಿ ಇತ್ತೀಚೆಗೆ ನಡೆದ ವಸ್ತುಪ್ರದರ್ಶನವು, ಗೂಳಿಕಾಳಗ, ವೃತ್ತಿಪರ ಬಾಕ್ಸಿಂಗ್‌, ಕಾರ್‌ ಮತ್ತು ಮೋಟಾರ್‌ಸೈಕಲ್‌ ರೇಸ್‌ಗಳು, ಮತ್ತು ಇನ್ನಿತರ ಆಧುನಿಕ ಸ್ಪರ್ಧೆಗಳಲ್ಲಿ ಪ್ರೇಕ್ಷಕರ ದೊಂಬಿಗಳ ವಿಡಿಯೊ ಚಿತ್ರಗಳನ್ನು ಒಳಗೂಡಿಸುವ ಮೂಲಕ ಆಧುನಿಕ ಹೋಲಿಕೆಗಳನ್ನು ನೆನಪಿಗೆ ತಂದಿತು. ಆದಿ ಕ್ರೈಸ್ತರು ಮನದಟ್ಟು ಮಾಡಿಕೊಂಡಿದ್ದ ವಿಷಯವೇನೆಂದರೆ, ಯೆಹೋವನು ಹಿಂಸಾಚಾರವನ್ನಾಗಲಿ ಹಿಂಸಾತ್ಮಕರನ್ನಾಗಲಿ ಇಷ್ಟಪಡುವುದಿಲ್ಲ; ಇದೇ ಇಂದಿನ ಕ್ರೈಸ್ತರ ವಿಷಯದಲ್ಲಿಯೂ ಸತ್ಯವಾಗಿರಬೇಕು. (ಕೀರ್ತನೆ 11:5)​—6/15, ಪುಟ 29.

ನಾವು ಪರಿಣಾಮಕಾರಿಯಾದ ಬೋಧಕರಾಗಲು ಪ್ರಯಾಸಪಡುತ್ತಿರುವಾಗ, ಎಜ್ರನ ಉದಾಹರಣೆಯಿಂದ ಏನನ್ನು ಕಲಿಯಬಲ್ಲೆವು?

ಎಜ್ರ 7:​10, (NW) ಎಜ್ರನು ಮಾಡಿದ ನಾಲ್ಕು ವಿಷಯಗಳನ್ನು ಎತ್ತಿಹೇಳುತ್ತದೆ, ಮತ್ತು ನಾವು ಹಾಗೆ ಮಾಡಲು ಪ್ರಯಾಸಪಡಬಹುದು. ಅದು ಹೇಳುವುದು: “ಎಜ್ರನು ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸಿ, ಅದನ್ನು ಮಾಡಿ, ಇಸ್ರಾಯೇಲಿನಲ್ಲಿ ವಿಧಿ ಮತ್ತು ನ್ಯಾಯವನ್ನು ಬೋಧಿಸಲಿಕ್ಕಾಗಿ ತನ್ನ ಹೃದಯವನ್ನು ಸಿದ್ಧಮಾಡಿಕೊಂಡನು.”​—7/1, ಪುಟ 20.

• ಚಟುವಟಿಕೆಯ ಯಾವ ಎರಡು ಕ್ಷೇತ್ರಗಳಲ್ಲಿ ಒಬ್ಬ ಕ್ರೈಸ್ತ ಸ್ತ್ರೀಯು ತಲೆಗೆ ಮುಸುಕನ್ನು ಹಾಕಿಕೊಳ್ಳುವುದು ಯೋಗ್ಯವಾಗಿರುವುದು?

ಒಂದು, ಕೌಟುಂಬಿಕ ಸನ್ನಿವೇಶದಲ್ಲಿ ಎದ್ದುಬರುವ ಸಂದರ್ಭಗಳಾಗಿವೆ. ಆಗ ಅವಳು ತಲೆಗೆ ಮುಸುಕನ್ನು ಹಾಕಿಕೊಳ್ಳುವುದು, ಪ್ರಾರ್ಥನೆ ಮತ್ತು ಬೈಬಲ್‌ ಉಪದೇಶದಲ್ಲಿ ನಾಯಕತ್ವ ವಹಿಸಲು ತನ್ನ ಗಂಡನು ಜವಾಬ್ದಾರನಾಗಿದ್ದಾನೆ ಎಂಬುದಕ್ಕೆ ಮನ್ನಣೆಯನ್ನು ವ್ಯಕ್ತಪಡಿಸುವಂಥದ್ದಾಗಿರುವುದು. ಮತ್ತೊಂದು ಸಭಾ ಚಟುವಟಿಕೆಗಳಲ್ಲಾಗಿದೆ. ಇಲ್ಲಿ ಸ್ನಾತ ಪುರುಷರು ಬೋಧಿಸಲು ಮತ್ತು ಮಾರ್ಗದರ್ಶನವನ್ನು ಒದಗಿಸಲು ಶಾಸ್ತ್ರೀಯವಾಗಿ ಅಧಿಕಾರ ಹೊಂದಿದ್ದಾರೆ ಎಂಬುದಕ್ಕೆ ಅವಳು ಮನ್ನಣೆಯನ್ನು ತೋರಿಸುತ್ತಾಳೆ. (1 ಕೊರಿಂಥ 11:3-10)​—7/15, ಪುಟಗಳು 26-7.

• ಯೋಗದಲ್ಲಿ ವ್ಯಾಯಾಮಕ್ಕಿಂತ ಹೆಚ್ಚಿನದ್ದು ಒಳಗೂಡಿದೆ ಮತ್ತು ಅದು ಅಪಾಯಕರವಾಗಿದೆ ಎಂಬುದನ್ನು ಕ್ರೈಸ್ತರು ಏಕೆ ಗ್ರಹಿಸುತ್ತಾರೆ?

ಯೋಗ ಶಿಕ್ಷಣದ ಗುರಿಯು ಒಬ್ಬನನ್ನು ಒಂದು ಅತಿಮಾನುಷ ಆತ್ಮದೊಂದಿಗೆ ಐಕ್ಯಗೊಳಿಸುವುದೇ ಆಗಿದೆ. ದೇವರ ಮಾರ್ಗದರ್ಶನಕ್ಕೆ ವ್ಯತಿರಿಕ್ತವಾಗಿ, ಯೋಗದಲ್ಲಿ ಸಹಜ ಯೋಚಿಸುವಿಕೆಯನ್ನು ನಿಲ್ಲಿಸುವುದು ಒಳಗೂಡಿದೆ. (ರೋಮಾಪುರ 12:​1, 2) ಯೋಗವು ಒಬ್ಬನನ್ನು ಪ್ರೇತವ್ಯವಹಾರ ಮತ್ತು ಮಾಂತ್ರಿಕತೆಯ ಅಪಾಯಗಳಿಗೆ ಒಡ್ಡಬಲ್ಲದು. (ಧರ್ಮೋಪದೇಶಕಾಂಡ 18:10, 11)​—8/1, ಪುಟಗಳು 20-2.