ಚೈತನ್ಯದಾಯಕ ಇಬ್ಬನಿಯಂತಿರುವ ಯುವ ಜನರು
“ನನ್ನ ಬಳಿಗೆ ಬನ್ನಿರಿ, . . . ನಾನು ನಿಮಗೆ ಚೈತನ್ಯ ನೀಡುವೆನು”
ಚೈತನ್ಯದಾಯಕ ಇಬ್ಬನಿಯಂತಿರುವ ಯುವ ಜನರು
“ನನ್ನ ಬಳಿಗೆ ಬನ್ನಿರಿ, . . . ನಾನು ನಿಮಗೆ ಚೈತನ್ಯ ನೀಡುವೆನು” ಎಂದು ಯೇಸು ಕ್ರಿಸ್ತನು ಹೇಳಿದಾಗ, ನಿಸ್ಸಂದೇಹವಾಗಿಯೂ ಅವನು ಯುವ ಪ್ರಾಯದ ತನ್ನ ಹಿಂಬಾಲಕರನ್ನು ಒಳಗೂಡಿಸಿದನು. (ಮತ್ತಾಯ 11:28, NW) ಜನರು ತಮ್ಮ ಎಳೆಯ ಮಕ್ಕಳನ್ನು ಅವನ ಬಳಿ ತರುತ್ತಿದ್ದಾಗ, ಅವನ ಶಿಷ್ಯರು ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಯೇಸು ಹೇಳಿದ್ದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ.” ಯೇಸು “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು” ಸಹ. (ಮಾರ್ಕ 10:14-16) ಯೇಸು ಎಳೆಯರನ್ನು ಅಮೂಲ್ಯರಾಗಿ ಪರಿಗಣಿಸಿದನೆಂಬ ವಿಷಯದಲ್ಲಿ ಯಾವ ಪ್ರಶ್ನೆಯೂ ಇಲ್ಲ.
ಬೈಬಲ್ ನಮಗೆ, ದೇವರ ಸೇವೆಮಾಡುವುದರಲ್ಲಿ ಅತ್ಯುತ್ಕೃಷ್ಟವಾದ ಮಾದರಿಗಳನ್ನಿಟ್ಟ ನಂಬಿಗಸ್ತ ಯುವಕಯುವತಿಯರು, ಎಳೆಯರು ಮತ್ತು ಚಿಕ್ಕ ಮಕ್ಕಳ ಕುರಿತಾಗಿಯೂ ತಿಳಿಸುತ್ತದೆ. ಇಬ್ಬನಿಯಷ್ಟು ಚೈತನ್ಯದಾಯಕವಾಗಿರುವ ‘ಯುವಕಸೈನಿಕರ’ ಬಗ್ಗೆ ಕೀರ್ತನೆಗಳ ಪುಸ್ತಕವು ತಿಳಿಸುತ್ತದೆ. ಯೆಹೋವನ ನಾಮವನ್ನು ಸ್ತುತಿಸುತ್ತಿರುವ ‘ಪ್ರಾಯಸ್ಥ ಸ್ತ್ರೀಪುರುಷರ’ ಬಗ್ಗೆಯೂ ಅದು ಹೇಳುತ್ತದೆ.—ಕೀರ್ತನೆ 110:3; 148:12, 13.
ಯುವ ಜನರು ಹಸನಾಗಿ ಬೆಳೆಯಲಿಕ್ಕಾಗಿರುವ ಸ್ಥಳ
ಇಬ್ಬನಿಯ ಹೋಲಿಕೆಯು ಕೊಡಲ್ಪಟ್ಟಿರುವುದು ತಕ್ಕದ್ದಾಗಿದೆ, ಯಾಕೆಂದರೆ ಇಬ್ಬನಿಯನ್ನು ಸಮೃದ್ಧಿ ಹಾಗೂ ಆಶೀರ್ವಾದದೊಂದಿಗೆ ಜೋಡಿಸಲಾಗಿದೆ. (ಆದಿಕಾಂಡ 27:28) ಇಬ್ಬನಿಯು ಸೌಮ್ಯವೂ ಚೈತನ್ಯದಾಯಕವೂ ಆಗಿರುತ್ತದೆ. ಕ್ರಿಸ್ತನ ಸಾನ್ನಿಧ್ಯದ ಈ ಸಮಯದಲ್ಲಿ ಯುವ ಕ್ರೈಸ್ತರು ದೊಡ್ಡ ಸಂಖ್ಯೆಯಲ್ಲಿ ಸಂತೋಷದಿಂದ ಮತ್ತು ಸಿದ್ಧಮನಸ್ಸಿನಿಂದ ತಮ್ಮನ್ನೇ ನೀಡಿಕೊಳ್ಳುತ್ತಿದ್ದಾರೆ. ಚೈತನ್ಯದಾಯಕ ಇಬ್ಬನಿಯಂತೆಯೇ ಅನೇಕ ಯುವ ಸ್ತ್ರೀಪುರುಷರು ಹರ್ಷದಿಂದ ದೇವರ ಸೇವೆಮಾಡುತ್ತಾರೆ ಮತ್ತು ಅವರ ಜೊತೆ ಆರಾಧಕರಿಗೆ ನೆರವು ನೀಡುತ್ತಾರೆ.—ಕೀರ್ತನೆ 71:17.
ಕ್ರೈಸ್ತ ಯುವ ಜನರು ಕೇವಲ ಇತರರಿಗೆ ಮಾತ್ರ ಚೈತನ್ಯದಾಯಕರಾಗಿರುವುದಿಲ್ಲ. ಸ್ವತಃ ಅವರು ತಮ್ಮ ಸೇವೆಯಲ್ಲಿ ಚೈತನ್ಯವನ್ನು ಪಡೆಯುತ್ತಾರೆ. ಅವರು ಹಸನಾಗಿ ಬೆಳೆಯಸಾಧ್ಯವಿರುವ ಒಂದು ಪರಿಸರವನ್ನು ದೇವರ ಸಂಸ್ಥೆಯು ಒದಗಿಸುತ್ತದೆ. ಉಚ್ಛ ನೀತಿಗಳನ್ನು ಕಾಪಾಡಿಕೊಳ್ಳುತ್ತಾ ಯುವ ಸ್ತ್ರೀಪುರುಷರು ದೇವರೊಂದಿಗೆ ಒಂದು ಆಪ್ತ ಸಂಬಂಧದಲ್ಲಿ ಆನಂದಿಸುತ್ತಾರೆ. (ಕೀರ್ತನೆ 119:9) ಸಭೆಯೊಳಗೂ, ಅವರು ಹಿತಕರವಾದ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಮತ್ತು ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಮತ್ತು ಇವು ಒಂದು ತೃಪ್ತಿದಾಯಕ ಹಾಗೂ ಅರ್ಥಪೂರ್ಣ ಬದುಕಿಗೆ ನೆರವು ನೀಡುವ ಅಂಶಗಳಾಗಿವೆ.
‘ಆರೋಗ್ಯವೂ ಚೈತನ್ಯವೂ ಉಂಟಾಗುತ್ತದೆ’
ಸ್ವತಃ ಕ್ರೈಸ್ತ ಯುವ ಜನರಿಗೇ, ತಾವು “ಇಬ್ಬನಿ”ಯಂತಿದ್ದೇವೆಂಬ ಅನಿಸಿಕೆಯಾಗುತ್ತದೊ? ಸಭೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ಮತ್ತು ಶುಶ್ರೂಷೆಯಲ್ಲಿ ಪ್ರತಿ ತಿಂಗಳು 70ಕ್ಕಿಂತಲೂ ಹೆಚ್ಚು ತಾಸುಗಳನ್ನು ಸಂತೋಷದಿಂದ ಅರ್ಪಿಸುವ ಟಾನ್ಯ ಎಂಬ ಯುವತಿಯನ್ನು ಭೇಟಿಮಾಡಿ. ಅವಳಿಗೆ ಹೇಗನಿಸುತ್ತದೆ? “ನನಗೆ ಚೈತನ್ಯಗೊಳಿಸಲ್ಪಟ್ಟಿರುವ ಮತ್ತು ಆತ್ಮೋನ್ನತಿಯಾದ ಅನುಭವವಾಗುತ್ತದೆ. ಯೆಹೋವನೂ ಆತನ ಭೂಸಂಸ್ಥೆಯೂ ನನ್ನ ಜೀವಿತದ ಒಂದು ಭಾಗವಾಗಿರುವುದರಿಂದ ನನಗೆ ‘ಆರೋಗ್ಯವೂ ಚೈತನ್ಯವೂ’ ಉಂಟಾಗುತ್ತದೆ.”—ಜ್ಞಾನೋಕ್ತಿ 3:8, NW.
ಎರೀಯಲ್ ಎಂಬ ಇನ್ನೊಬ್ಬ ಪೂರ್ಣ ಸಮಯದ ಯುವ ಶುಶ್ರೂಷಕಿಯು, ಸಭೆಯಲ್ಲಿ ತಾನು ಪಡೆಯುವ ಆತ್ಮಿಕ ಪೌಷ್ಠಿಕತೆಯನ್ನು ಗಣ್ಯಮಾಡುತ್ತಾಳೆ. “ನಾನು ಕ್ರೈಸ್ತ ಕೂಟಗಳಿಗೆ, ಅಧಿವೇಶನಗಳಿಗೆ, ಮತ್ತು ಸಮ್ಮೇಳನಗಳಿಗೆ ಹೋಗುವಾಗ, ಮತ್ತು ಯೆಹೋವನ ಆತ್ಮಿಕ ಮೇಜಿನಲ್ಲಿ ತಿನ್ನಲು ಶಕ್ತಳಾಗುವಾಗ, ಅದು ನಿಜವಾಗಿಯೂ ನನ್ನನ್ನು ಯಾಕೋಬ 2:23.
ಆತ್ಮಿಕವಾಗಿ ಚೈತನ್ಯಗೊಳಿಸುತ್ತದೆ” ಎಂದವಳು ಹೇಳುತ್ತಾಳೆ. “ಮತ್ತು ಲೋಕದಲ್ಲೆಲ್ಲ, ನನ್ನ ಜೊತೆ ಕೆಲಸದವರಿದ್ದಾರೆಂಬ ಅರಿವು ನನ್ನನ್ನು ಉತ್ತೇಜಿಸುತ್ತದೆ.” ಚೈತನ್ಯದ ಕಟ್ಟಕಡೆಯ ಮೂಲವನ್ನು ವರ್ಣಿಸುತ್ತಾ ಅವಳನ್ನುವುದು: “ಯೆಹೋವನನ್ನು ಒಬ್ಬ ಸ್ನೇಹಿತನಾಗಿ ಹೊಂದಿರುವುದು ಎಷ್ಟು ಚೈತನ್ಯದಾಯಕವಾಗಿದೆ! ಈ ವ್ಯವಸ್ಥೆಯು ಜನರ ಮೇಲೆ ಬೀರುತ್ತಿರುವ ಭೀಕರ ಪರಿಣಾಮಗಳ ಕುರಿತು ನಾನು ಕೇಳಿಸಿಕೊಳ್ಳುವಾಗ ಇಲ್ಲವೆ ನೋಡುವಾಗ ಇದು ವಿಶೇಷವಾಗಿ ಸತ್ಯವಾಗಿರುತ್ತದೆ.”—ಇಪ್ಪತ್ತು ವರ್ಷ ಪ್ರಾಯದವನಾಗಿರುವ ಅಭೀಷೈ, ಪೂರ್ಣ ಸಮಯದ ಸೌವಾರ್ತಿಕನಾಗಿ ಮತ್ತು ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆಸಲ್ಲಿಸುತ್ತಾನೆ. ತನ್ನ ಅನುಭವವನ್ನು ಅವನು ಈ ಮಾತುಗಳಲ್ಲಿ ವರ್ಣಿಸುತ್ತಾನೆ: “ಇಂದು ಯುವ ಜನರು ಎದುರಿಸುವಂಥ ಅನೇಕ ಸಮಸ್ಯೆಗಳೊಂದಿಗೆ ಹೇಗೆ ವ್ಯವಹರಿಸುವುದೆಂದು ನನಗೆ ತಿಳಿದಿರುವುದರಿಂದ ನನಗೆ ಚೈತನ್ಯದ ಅನಿಸಿಕೆಯಾಗುತ್ತದೆ. ಯೆಹೋವನನ್ನು ಪೂರ್ಣ ಪ್ರಾಣದಿಂದ ಸೇವಿಸಲಿಕ್ಕಾಗಿ ನಾನೇನು ಮಾಡಬೇಕೊ ಅದರ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಬೈಬಲ್‌ನಲ್ಲಿರುವ ಸತ್ಯವು ನನಗೆ ಸಹಾಯಮಾಡಿದೆ.”
ಅಂಟ್ವಾನ್ ಎಂಬವನು ಹದಿಪ್ರಾಯದ ಆರಂಭದಲ್ಲಿದ್ದಾಗ ಅವನಿಗೆ ಯಾವಾಗಲೂ ಸಿಟ್ಟು ಮೂಗಿನ ತುದಿಯಲ್ಲಿರುತ್ತಿತ್ತು. ಒಮ್ಮೆ ಅವನು ತನ್ನ ಜೊತೆ ವಿದ್ಯಾರ್ಥಿಯನ್ನು ಒಂದು ಕುರ್ಚಿಯಿಂದ ಹೊಡೆದನು ಮತ್ತು ಇನ್ನೊಬ್ಬ ವಿದ್ಯಾರ್ಥಿಯನ್ನು ಒಂದು ಪೆನ್ಸಿಲ್‌ನಿಂದ ತಿವಿದನು. ಖಂಡಿತವಾಗಿಯೂ ಅಂಟ್ವಾನ್ ಆಗ ಒಬ್ಬ ಚೈತನ್ಯದಾಯಕ ವ್ಯಕ್ತಿಯಾಗಿರಲಿಲ್ಲ! ಆದರೆ ಬೈಬಲ್‌ನಿಂದ ಅವನು ಪಡೆದ ಉಪದೇಶವು ಅವನ ನಡವಳಿಕೆಯನ್ನು ಬದಲಾಯಿಸಿತು. ಈಗ ಅವನು 19 ವರ್ಷದವನಾಗಿದ್ದಾನೆ ಮತ್ತು ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿಯೂ, ಪೂರ್ಣ ಸಮಯದ ಶುಶ್ರೂಷಕನಾಗಿಯೂ ಸೇವೆ ಸಲ್ಲಿಸುತ್ತಿದ್ದಾನೆ. ಅವನು ಹೇಳುವುದು: “ನಾನು ಯೆಹೋವನ ಕುರಿತಾದ ಜ್ಞಾನವನ್ನು ಗಳಿಸುವಂತೆ ಅವಕಾಶವನ್ನು ಕೊಟ್ಟದ್ದಕ್ಕಾಗಿ ಮತ್ತು ಸ್ವನಿಯಂತ್ರಣವನ್ನು ತೋರಿಸಿ, ನನ್ನ ಮಾರ್ಗಕ್ರಮವನ್ನು ಬದಲಾಯಿಸುವ ಅಗತ್ಯವಿದೆ ಎಂಬ ವಿಷಯದಲ್ಲಿ ನನ್ನ ಕಣ್ಣುಗಳನ್ನು ತೆರೆಸಿದ್ದಕ್ಕಾಗಿ ನಾನು ಆತನಿಗೆ ಆಭಾರಿಯಾಗಿದ್ದೇನೆ. ಈ ರೀತಿಯಲ್ಲಿ ನಾನು ಅನೇಕ ಸಮಸ್ಯೆಗಳನ್ನು ದೂರವಿಟ್ಟಿದ್ದೇನೆ.”
ಇತರರು ಸಹ, ಯುವ ಕ್ರೈಸ್ತರ ಚೈತನ್ಯದಾಯಕ ಮನೋಭಾವವನ್ನು ಗಮನಿಸುತ್ತಾರೆ. ಮಾಟೀಯೋ ಎಂಬವನು ಇಟಲಿಯಲ್ಲಿ ಒಬ್ಬ ಯುವ ಸಾಕ್ಷಿಯಾಗಿದ್ದಾನೆ. ತರಗತಿಯಲ್ಲಿರುವ ಯಾವುದೇ ವಿದ್ಯಾರ್ಥಿಯು ಕೆಟ್ಟ ಮಾತನ್ನು ಬಳಸುವಲ್ಲಿ ಅವನು ಒಂದು ಚಿಕ್ಕ ಮೊತ್ತದ ದಂಡವನ್ನು ತೆರಬೇಕಾದೀತೆಂದು ಮಾಟೀಯೋನ ಶಿಕ್ಷಕಿಯು ಹೇಳಿದಳು. ಸ್ವಲ್ಪ ಸಮಯದ ನಂತರ ಕೆಲವು ಮಕ್ಕಳು ಅವಳ ಬಳಿ ಬಂದು, ಆ ನಿಯಮವನ್ನು ರದ್ದುಗೊಳಿಸುವಂತೆ ಕೇಳಿಕೊಂಡರು, ಏಕೆಂದರೆ ಅವರು ಹೇಳಿದ ಪ್ರಕಾರ “ಕೆಟ್ಟ ಮಾತುಗಳನ್ನು ಬಳಸದೇ ಮಾತಾಡಲು ಸಾಧ್ಯವೇ ಇಲ್ಲ.” ಮಾಟೀಯೋ ವಿವರಿಸುವುದು: “ಆದರೆ ಶಿಕ್ಷಕಿಯು ಹಾಗೇನಿಲ್ಲವೆಂದು ಹೇಳಿ, ಯೆಹೋವನ ಸಾಕ್ಷಿಯಾಗಿರುವ ನನ್ನನ್ನು ಒಂದು ಮಾದರಿಯಾಗಿ ಉಪಯೋಗಿಸಿ, ನನ್ನ ಶುದ್ಧವಾದ ಮಾತುಗಳಿಗಾಗಿ ಇಡೀ ತರಗತಿಯ ಮುಂದೆ ನನ್ನನ್ನು ಪ್ರಶಂಸಿಸಿದರು.”
ಥಾಯ್‌ಲೆಂಡ್‌ನಲ್ಲಿನ ಒಂದು ಗದ್ದಲಭರಿತ ತರಗತಿಯಲ್ಲಿ, ಶಿಕ್ಷಕಿಯು 11 ವರ್ಷ ಪ್ರಾಯದ ರಾಟ್ಯಾ ಎಂಬವನನ್ನು ತರಗತಿಯ ಮುಂದೆ ನಿಲ್ಲಿಸಿ, ಅವನ ನಡವಳಿಕೆಗಾಗಿ ಶ್ಲಾಘಿಸಿ ಹೇಳಿದ್ದು: “ನೀವೆಲ್ಲರೂ ಇವನಂತೆ ಆಗಬಾರದೇಕೆ? ಅವನು ಶ್ರದ್ಧೆಯಿಂದ ತನ್ನ ಪಾಠಗಳನ್ನು ಅಭ್ಯಾಸಮಾಡುತ್ತಾನೆ ಮತ್ತು ಸಭ್ಯ ರೀತಿಯಲ್ಲಿ ನಡೆದುಕೊಳ್ಳುತ್ತಾನೆ.” ಅನಂತರ ಅವಳು ತನ್ನ ವಿದ್ಯಾರ್ಥಿಗಳಿಗೆ, “ನಿಮ್ಮ ನಡತೆಯನ್ನು ಸುಧಾರಿಸಲು ನೀವು ರಾಟ್ಯಾನಂತೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಬೇಕಾದೀತೆಂದು ಎಣಿಸುತ್ತೇನೆ” ಎಂದು ಹೇಳಿದಳು.
ಸಾವಿರಾರು ಮಂದಿ ಕ್ರೈಸ್ತ ಯುವ ಜನರು ಯೆಹೋವನನ್ನು ತಿಳಿದುಕೊಂಡು ಆತನ ಚಿತ್ತವನ್ನು ಮಾಡುವುದನ್ನು ನೋಡುವುದು ಹರ್ಷದಾಯಕ ಸಂಗತಿಯಾಗಿದೆ. ಅಂಥ ಉತ್ತಮ ಯುವ ಜನರು ತಮ್ಮ ವಯಸ್ಸಿಗೆ ಮೀರಿದ ವಿವೇಕವನ್ನು ಪ್ರದರ್ಶಿಸುತ್ತಾರೆ. ದೇವರು ಅವರ ಸದ್ಯದ ಜೀವನವನ್ನು ಯಶಸ್ವಿಗೊಳಿಸಲು ಸಹಾಯಮಾಡಬಲ್ಲನು ಹಾಗೂ ಬರಲಿರುವ ಹೊಸ ಲೋಕದಲ್ಲಿ ಮಹಿಮಾಭರಿತ ಭವಿಷ್ಯತ್ತನ್ನು ಕೊಡಬಲ್ಲನು. (1 ತಿಮೊಥೆಯ 4:8) ಅತೃಪ್ತ ಹಾಗೂ ನಿರಾಶಾಭರಿತ ಯುವ ಜನರಿಂದ ತುಂಬಿರುವ ಈ ಸದ್ಯದ ವಿಷಯಗಳ ವ್ಯವಸ್ಥೆಯೆಂಬ ಬರಡು ಭೂಮಿಯಲ್ಲಿ, ಈ ಕ್ರೈಸ್ತ ಯುವ ಜನರು ಎಷ್ಟೊಂದು ಚೈತನ್ಯದಾಯಕ ರೀತಿಯಲ್ಲಿ ಭಿನ್ನರಾಗಿದ್ದಾರೆ!