ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸಂತರ” ವಿಷಯದಲ್ಲಿ ಆಧುನಿಕ ಆಸಕ್ತಿ

“ಸಂತರ” ವಿಷಯದಲ್ಲಿ ಆಧುನಿಕ ಆಸಕ್ತಿ

“ಸಂತರ” ವಿಷಯದಲ್ಲಿ ಆಧುನಿಕ ಆಸಕ್ತಿ

“ವೀರರ ಹೆಸರೆತ್ತಿದ್ದರೆ ನಾವು ಬೇಸತ್ತುಹೋಗುತ್ತಿದ್ದಂತೆ ತೋರುತ್ತಿದ್ದ ಸಮಯ ನಿಮಗೆ ನೆನಪಿದೆಯೊ? ಆದರೆ ಈ ಭಾವನೆಯು, ಸೆಪ್ಟೆಂ. 13ರಂದು ಮದರ್‌ ತೆರೆಸಾ ಅವರ ಅಂತ್ಯಕ್ರಿಯೆಯನ್ನು ವೀಕ್ಷಿಸುತ್ತಿದ್ದ 42 ಲಕ್ಷ ಅಮೆರಿಕನರನ್ನು ಸ್ವಲ್ಪವೂ ತಟ್ಟಲಿಲ್ಲವೆಂದು ತೋರುತ್ತದೆ. ಮದರ್‌ ತೆರೆಸಾ ಸೆಪ್ಟೆಂ. 5ರಂದು ಮರಣಹೊಂದಿದಂದಿನಿಂದ, ಅವರನ್ನು ಅಧಿಕೃತವಾಗಿ ಒಬ್ಬ ಸಂತಳೆಂದು ಘೋಷಿಸುವಂತೆ ಜನರು ವ್ಯಾಟಿಕನಿನ ಮೇಲೆ ವಿನಂತಿಗಳ ಮಳೆಗರೆದಿದ್ದಾರೆ. ಮತ್ತು ಹಾಗೆಯೇ ಆಗುವುದೆಂದು ಶಂಕಿಸುವವರು ತೀರ ಕಡಿಮೆ.”​—ಸನ್‌-ಸೆಂಟಿನೆಲ್‌, ಅಮೆರಿಕ, ಅಕ್ಟೋಬರ್‌ 3, 1997.

ಕ್ಯಾಥೊಲಿಕ್‌ ಮಿಷನೆರಿಯಾಗಿದ್ದ ಮದರ್‌ ತೆರೆಸಾ ಅವರ ಮಾನವೀಯ ಹಿತ ಸಾಧನೆ ಮತ್ತು ಧರ್ಮಕಾರ್ಯವನ್ನು ಅನೇಕರು ಒಬ್ಬ ನೈಜ ಸಂತಳ ಅವಶ್ಯಗುಣ ಎಂದು ಪರಿಗಣಿಸುತ್ತಾರೆ. ಇತರ ಧರ್ಮಗಳಲ್ಲೂ ಉದಾತ್ತ ವ್ಯಕ್ತಿತ್ವಗಳಿರುವ ಜನರಿದ್ದಾರೆ. ಆದರೆ ಪ್ರಾಯಶಃ, ರೋಮನ್‌ ಕ್ಯಾಥೊಲಿಕ್‌ ಚರ್ಚು ಮಾಡುವಂತೆ ಅವರಲ್ಲಿ ಯಾರೂ ಅಧಿಕೃತರಾಗಿ ಸಂತರೆಂದು ಅಂಗೀಕರಿಸಲ್ಪಟ್ಟಿಲ್ಲ.

ತನ್ನ ಪೋಪ್‌ ಪ್ರಭುತ್ವದ ಸಮಯದಲ್ಲಿ ಪೋಪ್‌ ಜಾನ್‌ ಪಾಲ್‌ II 450ಕ್ಕಿಂತಲೂ ಹೆಚ್ಚು ವ್ಯಕ್ತಿಗಳನ್ನು ವಿಧಿಪೂರ್ವಕವಾಗಿ ಸಂತರನ್ನಾಗಿಸಿದ್ದಾರೆ. ಇದು, 20ನೆಯ ಶತಮಾನದಲ್ಲಿದ್ದ ಬೇರೆ ಎಲ್ಲ ಪೋಪರು ಸೇರಿ ವಿಧಿಪೂರ್ವಕವಾಗಿ ಸಂತರನ್ನಾಗಿಸಿರುವ ಸಂಖ್ಯೆಗಿಂತಲೂ ಹೆಚ್ಚಾಗಿದೆ. * ಯಾರ ಪೈಕಿ ಹೆಚ್ಚಿನವರ ಬಗ್ಗೆ ಸಾಮಾನ್ಯವಾಗಿ ಕ್ಯಾಥೊಲಿಕರಿಗೆ ಸ್ವಲ್ಪವೇ ತಿಳಿದಿದೆಯೊ ಆ “ಸಂತರಿಗೆ” ಇಂಥ ಬಾಳುವ ಭಕ್ತಿಯನ್ನು ಏಕೆ ತೋರಿಸಲಾಗುತ್ತದೆ?

ನೋಟರ್‌ ಡಾಮ್‌ ವಿಶ್ವವಿದ್ಯಾನಿಲಯದ ದೇವತಾಶಾಸ್ತ್ರಜ್ಞ ಲಾರೆನ್ಸ್‌ ಕನಿಂಗ್‌ಹಾಮ್‌ ವಿವರಿಸುವುದು: “ಜನರು, ಈ ಜಗತ್ತಿನಲ್ಲಿರುವ ಪವಿತ್ರತೆಯ ವಿಚಾರದಲ್ಲಿ ಆಸಕ್ತರಾಗಿರುತ್ತಾರೆ. ಇಂದು ಸಹ, ಒಂದು ವೀರೋಚಿತ ಬದುಕಿನ ಸಾಧ್ಯತೆಯನ್ನು ಸಂತರು ತೋರಿಸುತ್ತಾರೆ.” ಅಷ್ಟುಮಾತ್ರವಲ್ಲದೆ, ದೇವರನ್ನು “ಸಂತರು” ವಿಶೇಷವಾದ ರೀತಿಯಲ್ಲಿ ಸುಲಭವಾಗಿ ತಲಪಸಾಧ್ಯವಿದೆ, ಮತ್ತು ಈ ಕಾರಣದಿಂದ ಜೀವಿತರಿಗೋಸ್ಕರ ಪರಿಣಾಮಕಾರಿಯಾದ ರೀತಿಯಲ್ಲಿ ಮಧ್ಯಸ್ಥಗಾರರಾಗಿರಸಾಧ್ಯವಿದೆ ಎಂದು ಹೇಳಲಾಗುತ್ತದೆ. ಒಬ್ಬ “ಸಂತನ” ವಸ್ತುಗಳು ಇಲ್ಲವೇ ಶಾರೀರಿಕ ಅವಶೇಷಗಳು ಸಿಗುವಾಗ, ಅವುಗಳಿಂದ ಶಕ್ತಿಯು ಹೊರಡುತ್ತದೆಂಬ ನಂಬಿಕೆಯಿಂದ ಇವುಗಳನ್ನು ಪೂಜಿಸಲಾಗುತ್ತದೆ.

ಕ್ಯಾಥೊಲಿಕ್‌ ನಂಬಿಕೆಗಳನ್ನು ಪುನರ್‌ದೃಢೀಕರಿಸಲು 16ನೆಯ ಶತಮಾನದಲ್ಲಿ ಪ್ರಕಾಶಿಸಲ್ಪಟ್ಟ ಕ್ಯಾಟಕಿಸಮ್‌ ಆಫ್‌ ದ ಕೌನ್ಸಿಲ್‌ ಆಫ್‌ ಟ್ರೆಂಟ್‌ ಹೀಗೆ ವಿಧಿಸಿತು: “‘ಕರ್ತನಲ್ಲಿ ನಿದ್ರೆಹೋಗಿರುವ’ ಸಂತರನ್ನು ಸನ್ಮಾನಿಸುವುದು, ಅವರ ಮಧ್ಯಸ್ಥಿಕೆಯನ್ನು ಬೇಡಿಕೊಳ್ಳುವುದು, ಮತ್ತು ಅವರ ಪವಿತ್ರ ಸ್ಮಾರಕಗಳನ್ನು ಹಾಗೂ ಬೂದಿಯನ್ನು ಪೂಜಿಸುವುದು, ದೇವರಿಗೆ ಸಲ್ಲುವ ಮಹಿಮೆಯನ್ನು ಕಡಿಮೆಗೊಳಿಸುವುದರ ಬದಲು, ಅದನ್ನು ಗಣನೀಯ ಮಟ್ಟದಲ್ಲಿ ಹೆಚ್ಚಿಸುತ್ತದೆಂಬ ನಿರ್ಧಾರಕ್ಕೆ ಬರುವುದು ನ್ಯಾಯೋಚಿತವಾಗಿದೆ. ಏಕೆಂದರೆ ಅದು ಕ್ರೈಸ್ತ ವ್ಯಕ್ತಿಯ ನಿರೀಕ್ಷೆಯನ್ನು ಸಜೀವಗೊಳಿಸಿ, ಬಲಪಡಿಸುತ್ತದೆ ಮತ್ತು ಅವನು ಆ ಸಂತರ ಸದ್ಗುಣಗಳನ್ನು ಅನುಕರಿಸಲು ಉತ್ತೇಜಿಸಲ್ಪಡುತ್ತಾನೆ.” (ದ ಕ್ಯಾಟಕಿಸಮ್‌ ಆಫ್‌ ದ ಕೌನ್ಸಿಲ್‌ ಆಫ್‌ ಟ್ರೆಂಟ್‌, 1905) ಸತ್ಯ ಕ್ರೈಸ್ತರು ಸದ್ಗುಣಭರಿತ ಜೀವನಗಳನ್ನು ನಡೆಸಲು, ದೇವರನ್ನು ಯೋಗ್ಯ ರೀತಿಯಲ್ಲಿ ಸಮೀಪಿಸಲು ಮತ್ತು ದೈವಿಕ ಸಹಾಯವನ್ನು ಪಡೆಯಲು ಬಯಸುತ್ತಾರೆಂಬುದು ನಿಶ್ಚಿತ. (ಯಾಕೋಬ 4:​7, 8) ಆದುದರಿಂದ ದೇವರ ವಾಕ್ಯಕ್ಕನುಸಾರ, ಯಾರು ನಿಜ ಸಂತರಾಗಿರುವ ಯೋಗ್ಯತೆಯನ್ನು ಪಡೆದಿರುತ್ತಾರೆ? ಮತ್ತು ಈ ಸಂತರ ಪಾತ್ರವೇನು?

[ಪಾದಟಿಪ್ಪಣಿ]

^ ಪ್ಯಾರ. 4 ವಿಧಿಪೂರ್ವಕವಾಗಿ ಸಂತನನ್ನಾಗಿಸುವುದು, ಒಬ್ಬ ಮೃತ ರೋಮನ್‌ ಕ್ಯಾಥೊಲಿಕ್‌ ವ್ಯಕ್ತಿಯನ್ನು, ಸಾರ್ವತ್ರಿಕ ಹಾಗೂ ಬಂಧಕಪೂಜ್ಯತೆಗೆ ಪಾತ್ರನೆಂದು ಅಧಿಕೃತವಾಗಿ ಅಂಗೀಕರಿಸುತ್ತದೆ.