ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕಿರಲು ಅತ್ಯುತ್ತಮವಾದ ಸಮಯ

ಬದುಕಿರಲು ಅತ್ಯುತ್ತಮವಾದ ಸಮಯ

ಬದುಕಿರಲು ಅತ್ಯುತ್ತಮವಾದ ಸಮಯ

ಪರೀಕ್ಷಾತ್ಮಕ ಪರಿಸ್ಥಿತಿಗಳನ್ನು ಎದುರಿಸುವಾಗ ನೀವು “ಹಳೆಯ ಸುದಿನ”ಗಳಿಗಾಗಿ ಹಂಬಲಿಸುತ್ತೀರೋ? ಹಾಗಾದರೆ ವಿವೇಕಿ ಅರಸನಾದ ಸೊಲೊಮೋನನ ಮಾತುಗಳನ್ನು ಪರಿಗಣಿಸಿರಿ: “ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ; ನೀನು ಈ ವಿಷಯದಲ್ಲಿ ವಿಚಾರಿಸುವದು ಜ್ಞಾನಕಾರ್ಯವಲ್ಲ.”​—ಪ್ರಸಂಗಿ 7:10.

ಸೊಲೊಮೋನನು ಏಕೆ ಈ ಬುದ್ಧಿವಾದವನ್ನು ಕೊಟ್ಟನು? ಏಕೆಂದರೆ ಗತ ಸಮಯಗಳ ಕುರಿತಾದ ವಾಸ್ತವಿಕ ನೋಟವು, ಸದ್ಯದ ಅಹಿತಕರ ಸನ್ನಿವೇಶಗಳನ್ನು ಯಶಸ್ವಿಕರವಾಗಿ ನಿಭಾಯಿಸುವುದರಲ್ಲಿ ಒಂದು ಅಮೂಲ್ಯವಾದ ಸಹಾಯಕವಾಗಿದೆ ಎಂಬುದು ಅವನಿಗೆ ತಿಳಿದಿತ್ತು. ಯಾರು “ಹಳೆಯ ಸುದಿನ”ಗಳಿಗಾಗಿ ಹಂಬಲಿಸುತ್ತಾರೋ ಅವರು, ಆ ಹಳೇ ದಿನಗಳು ಸಹ ಸಮಸ್ಯೆಗಳು ಹಾಗೂ ತೊಂದರೆಗಳಿಂದ ತುಂಬಿದ್ದವು ಮತ್ತು ಜೀವಿತವು ಎಂದೂ ನಿಜವಾಗಿಯೂ ಆದರ್ಶಪ್ರಾಯವಾಗಿರಲಿಲ್ಲ ಎಂಬುದನ್ನು ವಾಸ್ತವದಲ್ಲಿ ಮರೆತುಬಿಡಬಹುದು. ಗತ ಸಮಯಗಳಲ್ಲಿ ಕೆಲವೊಂದು ವಿಷಯಗಳು ಸ್ವಲ್ಪ ಉತ್ತಮವಾಗಿದ್ದಿರಬಹುದು, ಆದರೆ ಇತರ ಸಂಗತಿಗಳು ಹಾಗಿಲ್ಲದೆ ಇದ್ದಿರಬಹುದು. ಸೊಲೊಮೋನನು ಗಮನಿಸಿದಂತೆ, ಗತ ಸಮಯದ ಬಗ್ಗೆ ಅವಾಸ್ತವಿಕವಾಗಿ ಆಲೋಚಿಸುತ್ತಾ ಇರುವುದು ಜ್ಞಾನಕಾರ್ಯವಲ್ಲ, ಏಕೆಂದರೆ ಹೇಗಿದ್ದರೂ ನಾವು ಗತ ಕಾಲದ ಪರಿಸ್ಥಿತಿಗೆ ಹಿಂದಿರುಗಲು ಸಾಧ್ಯವಿಲ್ಲ ಎಂಬುದು ಸುವ್ಯಕ್ತ.

ಗತ ಸಮಯಕ್ಕಾಗಿ ಹಂಬಲಿಸುವುದರಲ್ಲಿ ಏನಾದರೂ ಹಾನಿಯಿದೆಯೋ? ಹೌದು, ಅದು ನಾವು ಸದ್ಯದ ಪರಿಸ್ಥಿತಿಗೆ ಮಣಿಯುವುದರಿಂದ ಮತ್ತು ಹೊಂದಿಕೊಳ್ಳುವುದರಿಂದ ನಮ್ಮನ್ನು ತಡೆಯುವಾಗ ಅಥವಾ ನಾವು ಜೀವಿಸುತ್ತಿರುವ ಕಾಲಗಳು ಹಾಗೂ ನಮ್ಮದಾಗಸಾಧ್ಯವಿರುವ ನಿರೀಕ್ಷೆಯನ್ನು ಕೃತಜ್ಞತಾಭಾವದಿಂದ ನೋಡುವುದನ್ನು ತಡೆಯುವಾಗ, ಇದು ಖಂಡಿತವಾಗಿಯೂ ಹಾನಿಕರವಾಗಿದೆ.

ನಿಜವಾಗಿ ಹೇಳುವುದಾದರೆ, ಲೋಕದ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿರುವುದಾದರೂ, ಇದೇ ಬದುಕಿರಲು ಅತ್ಯುತ್ತಮವಾದ ಸಮಯವಾಗಿದೆ. ಏಕೆ? ನಮ್ಮ ಭೂಮಿಯ ಕುರಿತಾದ ದೇವರ ಉದ್ದೇಶ ಹಾಗೂ ಆತನ ರಾಜ್ಯದ ಶಾಂತಿಭರಿತ ಆಳ್ವಿಕೆಯ ಆಶೀರ್ವಾದಗಳ ನೆರವೇರಿಕೆಯನ್ನು ನಾವು ಸಮೀಪಿಸುತ್ತಿದ್ದೇವೆ. ಬೈಬಲು ವಾಗ್ದಾನಿಸುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4) ಹೀಗೆ, ಪರಿಸ್ಥಿತಿಗಳು ಹೆಚ್ಚು ಸುಧಾರಣೆಗೊಂಡಿರುವಾಗ, “ಹಳೆಯ ಸುದಿನ”ಗಳಿಗಾಗಿ ಹಂಬಲಿಸಲು ಯಾರೊಬ್ಬರಿಗೂ ಯಾವುದೇ ಕಾರಣವಿರುವುದಿಲ್ಲ.