ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನನಗೆ ದೇವರ ಕುರಿತು ಹೆಚ್ಚು ತಿಳಿದಿರಲಿಲ್ಲ”

“ನನಗೆ ದೇವರ ಕುರಿತು ಹೆಚ್ಚು ತಿಳಿದಿರಲಿಲ್ಲ”

“ನನಗೆ ದೇವರ ಕುರಿತು ಹೆಚ್ಚು ತಿಳಿದಿರಲಿಲ್ಲ”

“ಕಳೆದ ವರ್ಷದಿಂದ ಯೆಹೋವನ ಸಾಕ್ಷಿಗಳು ನನ್ನನ್ನು ಭೇಟಿಮಾಡುತ್ತಿದ್ದಾರೆ ಮತ್ತು ದೇವರ ರಾಜ್ಯದ ಕುರಿತಾದ ಅದ್ಭುತಕರ ಸುದ್ದಿಯನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಎಂಟು ವರ್ಷಗಳವರೆಗೆ ನಾನು ಕ್ಯಾಥೊಲಿಕನಾಗಿದ್ದರೂ, ನನಗೆ ದೇವರ ಕುರಿತು ಹೆಚ್ಚು ತಿಳಿದಿರಲಿಲ್ಲ. ಕೇವಲ ಈ ಒಂದು ವರ್ಷದಲ್ಲಿ ನಾನು ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ” ಎಂದು, ಭಾರತದ ಕೇರಳ ರಾಜ್ಯದಲ್ಲಿರುವ ಒಬ್ಬ ವ್ಯಕ್ತಿಯು ಬರೆದನು. ಅವನು ಮುಂದುವರಿಸುವುದು: “ಕಾವಲಿನಬುರುಜು 139 [ಈಗ 146] ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತಿದೆ ಎಂಬದನ್ನು ತಿಳಿದು ನಾನು ತುಂಬಾ ಸಂತೋಷಪಟ್ಟೆ. ದೇವರ ಕುರಿತಾದ ಸಂದೇಶವನ್ನು ಎಲ್ಲಾ ಭಾಷಾ ಗುಂಪುಗಳ ಜನರು ತಿಳಿದುಕೊಳ್ಳುತ್ತಿರುವುದು ಆಶ್ಚರ್ಯಕರ ಸಂಗತಿ.”

ದೇವರ ಕುರಿತು ತಿಳಿದುಕೊಳ್ಳುವುದು ಅಸಾಧ್ಯವೆಂದು ಅನೇಕ ತತ್ತ್ವಜ್ಞಾನಿಗಳು ವಾದಿಸುವುದಾದರೂ, ಅದು ಸಾಧ್ಯವೆಂದು ಅಪೊಸ್ತಲ ಪೌಲನು ಸ್ಪಷ್ಟಪಡಿಸಿದನು. “ತಿಳಿಯದ ದೇವರಿಗೆ” ಮೀಸಲಾಗಿದ್ದ ಒಂದು ಬಲಿಪೀಠದ ಬಳಿಯಲ್ಲಿ ಆರಾಧಿಸುತ್ತಿದ್ದ ಅಥೇನೆಯ ಜನರ ಒಂದು ಗುಂಪನ್ನು ಸಂಬೋಧಿಸುತ್ತಾ ಪೌಲನು ತಿಳಿಸಿದ್ದು: “ನೀವು ಯಾವದನ್ನು ತಿಳಿಯದೆ ಪೂಜಿಸುತ್ತೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ, ಕೇಳಿರಿ. ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟುಮಾಡಿದ ದೇವರು . . . ತಾನೇ ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ . . . ಆತನು ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ . . . ಭೂಮಂಡಲದಲ್ಲೆಲ್ಲಾ ವಾಸಮಾಡಿಸಿ”ದನು.​—ಅ. ಕೃತ್ಯಗಳು 17:​23-26.

“ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” ಆದ್ದರಿಂದ ಸೃಷ್ಟಿಕರ್ತನನ್ನು ತಿಳಿಯಲು ಪ್ರಯತ್ನಿಸುವಂತೆ ಪೌಲನು ತನ್ನ ಕೇಳುಗರನ್ನು ಪ್ರಚೋದಿಸಿದನು. (ಅ. ಕೃತ್ಯಗಳು 17:27) ನೀವು ಸತ್ಯ ದೇವರನ್ನು ಮತ್ತು ಆತನ ಆಕರ್ಷಕ ಗುಣಗಳನ್ನು ತಿಳಿದುಕೊಳ್ಳುವಂತೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ.