ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಶಾಫಾನನ ಕುಟುಂಬದ ಕುರಿತು ಕಲಿಯುವುದರಿಂದ ನಾವು ಹೇಗೆ ಪ್ರಯೋಜನಪಡೆಯಬಲ್ಲೆವು?

ಶಾಫಾನನು ಯೆಹೂದದ ರಾಜನಾದ ಯೋಷೀಯನ ಲೇಖಕನೂ ಕಾರ್ಯದರ್ಶಿಯೂ ಆಗಿದ್ದನು. ರಾಜ್ಯದಲ್ಲಿ ತುಂಬ ವರ್ಚಸ್ಸುಳ್ಳ ಒಬ್ಬ ವ್ಯಕ್ತಿಯೋಪಾದಿ ಶಾಫಾನನು ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವ ರಾಜನ ಕಾರ್ಯಾಚರಣೆಯನ್ನು ಬೆಂಬಲಿಸಿದನು. ಶಾಫಾನನ ಮಕ್ಕಳಲ್ಲಿ ಇಬ್ಬರು, ಪ್ರವಾದಿಯಾದ ಯೆರೆಮೀಯನಿಗೆ ನಿಷ್ಠರಾಗಿ ಉಳಿದರು. ಅಂತೆಯೆ ಇನ್ನೊಬ್ಬ ಮಗನು ಹಾಗೂ ಇಬ್ಬರು ಮೊಮ್ಮಕ್ಕಳು, ತಮ್ಮ ಪ್ರಭಾವಶಾಲಿ ಸ್ಥಾನಗಳನ್ನು ಸತ್ಯಾರಾಧನೆಯನ್ನು ಬೆಂಬಲಿಸಲು ಉಪಯೋಗಿಸಿದರು. ತದ್ರೀತಿಯಲ್ಲಿ, ನಾವು ಕೂಡ ನಮ್ಮ ಸಂಪನ್ಮೂಲಗಳನ್ನು ಮತ್ತು ಪ್ರಭಾವವನ್ನು ಸತ್ಯಾರಾಧನೆಯನ್ನು ಬೆಂಬಲಿಸಲಿಕ್ಕಾಗಿ ಉಪಯೋಗಿಸಬೇಕು.​—12/15, ಪುಟಗಳು 19-22.

ಐರೀನ್‌ ಹೋಕ್ಸ್‌ಟೆನ್‌ಬಾಕ್‌ರವರು ಹೇಗೆ ತಮ್ಮ ಅಂಗವಿಕಲತೆಯ ವಿರುದ್ಧ ಹೋರಾಡುತ್ತಾ, ಯೆಹೋವನನ್ನು ಸೇವಿಸಶಕ್ತರಾದರು?

ಅವರು ಏಳು ವರ್ಷದವರಾಗಿದ್ದಾಗ, ಅವರ ಶ್ರವಣಶಕ್ತಿಯನ್ನು ಕಳೆದುಕೊಂಡರು. ಅವರು ಕಿವುಡಿಯಾಗಿದ್ದರೂ, ಇತರರೊಂದಿಗೆ ಸಂವಾದಿಸಲು ಕಲಿತಿದ್ದಾರೆ ಮತ್ತು ಈಗ ಅವರು ಗಂಡನು ಒಬ್ಬ ಸಂಚಾರ ಮೇಲ್ವಿಚಾರಕನಾಗಿ ನೆದರ್ಲೆಂಡ್ಸ್‌ನಲ್ಲಿರುವ ಸಭೆಗಳನ್ನು ಭೇಟಿನೀಡುವಾಗ ಅವರೊಂದಿಗೆ ಪ್ರಯಾಣಿಸುತ್ತಾರೆ.​—1/1, ಪುಟಗಳು 23-6.

“ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನದಲ್ಲಿ ಯಾವ ಎರಡು ಹೊಸ ಅಧ್ಯಯನ ಸಹಾಯಕಗಳು ಬಿಡುಗಡೆಯಾದವು?

ಭೂಸುತ್ತಲಿರುವ ಕ್ರೈಸ್ತರು, ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಎಂಬ ಪುಸ್ತಕವನ್ನು ಪಡೆಯಲು ಸಂತೋಷಿಸಿದರು. ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ಹೊಸಬರೊಂದಿಗೆ ಅಧ್ಯಯನಮಾಡಿದ ಬಳಿಕ, ಈ ಪುಸ್ತಕವನ್ನು ಅವರೊಂದಿಗೆ ಅಧ್ಯಯನ ಮಾಡುವ ಉದ್ದೇಶದಿಂದ ಇದು ತಯಾರಿಸಲ್ಪಟ್ಟಿದೆ. ಇನ್ನೊಂದು ಹೊಸ ಪುಸ್ತಕವು, ಯೆಹೋವನ ಸಮೀಪಕ್ಕೆ ಬನ್ನಿರಿ (ಇಂಗ್ಲಿಷ್‌) ಆಗಿದೆ. ಇದು ಯೆಹೋವನ ಗುಣಗಳು ಮತ್ತು ಆತನು ವ್ಯವಹರಿಸಿದ ರೀತಿಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಆತನ ಗುಣಗಳನ್ನು ಪ್ರದರ್ಶಿಸುವುದರಲ್ಲಿ ನಾವು ಹೇಗೆ ಆತನನ್ನು ಅನುಕರಿಸಬಲ್ಲೆವು ಎಂಬುದನ್ನೂ ಇದು ತೋರಿಸುತ್ತದೆ.​—1/15, ಪುಟಗಳು 23-4.

“ನೀತಿವಂತರ ಆಲೋಚನೆ ನ್ಯಾಯವಾಗಿವೆ” ಎಂಬ ಜ್ಞಾನೋಕ್ತಿ 12:5ರ (ಪರಿಶುದ್ಧ ಬೈಬಲ್‌) ತಾತ್ಪರ್ಯವೇನು?

ಒಳ್ಳೇ ಜನರಿಗಿರುವ ಆಲೋಚನೆಗಳು ಸಹ ನೈತಿಕವಾಗಿ ಸಮರ್ಪಕವಾಗಿರುತ್ತವೆ ಮತ್ತು ನಿಷ್ಪಕ್ಷಪಾತ ಹಾಗೂ ನೀತಿಯ ಕಡೆಗೆ ಮಾರ್ಗದರ್ಶಿಸುವವುಗಳಾಗಿರುತ್ತವೆ. ನೀತಿವಂತರು ದೇವರಿಗಾಗಿರುವ ಹಾಗೂ ಜೊತೆ ಮಾನವರಿಗಾಗಿರುವ ಪ್ರೀತಿಯಿಂದ ಪ್ರಚೋದಿತರಾಗಿರುವುದರಿಂದ, ಅವರ ಆಲೋಚನೆಗಳು ಒಳ್ಳೆಯವುಗಳಾಗಿರುತ್ತವೆ.​—1/15, ಪುಟ 30.

ಕೆಲಸದ ವಿಷಯದಲ್ಲಿ ಸಮತೂಕ ನೋಟವನ್ನು ಬೆಳೆಸಿಕೊಳ್ಳಲು ಒಬ್ಬ ವ್ಯಕ್ತಿಗೆ ಯಾವುದು ಸಹಾಯಮಾಡಬಲ್ಲದು?

ಕೆಲಸವನ್ನು ಅಮೂಲ್ಯವಾಗಿ ಪರಿಗಣಿಸಲು ಬಾಲ್ಯದಿಂದಲೇ ತರಬೇತಿಪಡೆಯುವುದು ಬಹಳ ಉಪಯುಕ್ತವಾಗಿದೆ. ಕೆಲಸದ ಒಳ್ಳೇ ರೀತಿನೀತಿಗಳುಳ್ಳವರಾಗಿದ್ದು, ಮೈಗಳ್ಳತನದಿಂದ ದೂರವಿರುವಂತೆ ಬೈಬಲ್‌ ನಮಗೆ ಉತ್ತೇಜಿಸುತ್ತದೆ. (ಜ್ಞಾನೋಕ್ತಿ 20:4) ಅದೇ ಸಮಯದಲ್ಲಿ, ಕೆಲಸದಲ್ಲಿಯೇ ವಿಪರೀತವಾಗಿ ತಲ್ಲೀನರಾಗಿರಬಾರದೆಂದು ಸಹ ಅದು ಕ್ರೈಸ್ತರನ್ನು ಉತ್ತೇಜಿಸುತ್ತದೆ. ನಮ್ಮ ಜೀವಿತದಲ್ಲಿ ದೇವರ ಸೇವೆಗೆ ಅತಿ ಪ್ರಾಮುಖ್ಯ ಸ್ಥಾನವಿರಬೇಕು ಎಂಬುದನ್ನು ನಾವು ಮನಗಾಣಬೇಕು. (1 ಕೊರಿಂಥ 7:29-31) ಅಷ್ಟುಮಾತ್ರವಲ್ಲದೆ, ದೇವರು ತಮ್ಮನ್ನು ತೊರೆದುಬಿಡುವುದಿಲ್ಲವೆಂದು ಸತ್ಯ ಕ್ರೈಸ್ತರು ಭರವಸೆಯಿಂದಿದ್ದಾರೆ.​—2/1, ಪುಟಗಳು 4-6.

ಬೈಬಲಿನಲ್ಲಿ ಮೊಟ್ಟಮೊದಲಾಗಿ ಒಂದು ಯಜ್ಞವೇದಿಯ ಕುರಿತು ಎಲ್ಲಿ ತಿಳಿಸಲ್ಪಟ್ಟಿದೆ?

ಆದಿಕಾಂಡ 8:20ರಲ್ಲಿ ಅದು ತಿಳಿಸಲ್ಪಟ್ಟಿದೆ. ಅಲ್ಲಿ, ನೋಹನು ಜಲಪ್ರಳಯದ ನಂತರ ನಾವೆಯಿಂದ ಹೊರಬಂದಾಗ ಕಟ್ಟಿದ ಯಜ್ಞವೇದಿಗೆ ಸೂಚಿಸಲಾಗಿದೆ. ಹಾಗಿದ್ದರೂ, ಕಾಯಿನ ಮತ್ತು ಹೇಬೆಲರು ಯಜ್ಞವೇದಿಗಳನ್ನು ಉಪಯೋಗಿಸಿ ತಮ್ಮ ಕಾಣಿಕೆಗಳನ್ನು ಅರ್ಪಿಸಿರಬಹುದು. (ಆದಿಕಾಂಡ 4:​3, 4)​—2/15, ಪುಟ 28.

ಕೆಲವು ಕ್ರೈಸ್ತರು, ಬದಲಾಗಿರುವಂಥ ಪರಿಸ್ಥಿತಿಗಳ ಸದುಪಯೋಗವನ್ನು ಹೇಗೆ ಮಾಡಬಲ್ಲರು?

ಶುಶ್ರೂಷೆಯಲ್ಲಿ ಹೆಚ್ಚಿನ ತಾಸು ಕಳೆಯುವುದನ್ನು ಸಾಧ್ಯಗೊಳಿಸಲು ಕೆಲವರು ತಮ್ಮ ಉದ್ಯೋಗದಲ್ಲಾಗಿರುವ ಬದಲಾವಣೆಗಳನ್ನು ಸ್ವೀಕರಿಸಿದ್ದಾರೆ ಅಥವಾ ಸ್ವತಃ ಬದಲಾವಣೆಗಳನ್ನು ಬರಮಾಡಿಕೊಂಡಿದ್ದಾರೆ. ಇನ್ನಿತರರು ತಮ್ಮ ಕೌಟುಂಬಿಕ ಜವಾಬ್ದಾರಿಗಳು ಕಡಿಮೆಯಾದಾಗ, ಉದಾಹರಣೆಗೆ ತಮ್ಮ ಮಕ್ಕಳು ದೊಡ್ಡವರಾಗಿ ಮದುವೆಯಾದಾಗ, ದೇವರ ಸೇವೆಯಲ್ಲಿ ತಮ್ಮ ಸಮಯ ಮತ್ತು ಸುಯೋಗಗಳನ್ನು ಹೆಚ್ಚಿಸಿಕೊಂಡಿದ್ದಾರೆ.​—3/1, ಪುಟಗಳು 19-22.

ಯೆಹೋವನಂತೆಯೇ ಇತರರನ್ನು ವೀಕ್ಷಿಸಲು, ಯೋನ ಮತ್ತು ಅಪೊಸ್ತಲ ಪೇತ್ರನ ಉದಾಹರಣೆಗಳು ನಮಗೆ ಹೇಗೆ ಸಹಾಯಮಾಡುತ್ತವೆ?

ಯೋನ ಮತ್ತು ಪೇತ್ರ, ಇವರಿಬ್ಬರ ಆಲೋಚನಾರೀತಿ ಮತ್ತು ಅವರು ನಂಬಿಕೆ ಹಾಗೂ ವಿಧೇಯತೆಯ ಪರೀಕ್ಷೆಗಳಿಗೆ ಪ್ರತಿಕ್ರಿಯಿಸಿದ ವಿಧದಲ್ಲಿ ಎಲ್ಲರಿಗೂ ತಿಳಿದಿರುವಂಥ ಕುಂದುಕೊರತೆಗಳಿದ್ದವು. ಆದರೂ, ಯೆಹೋವನು ಅವರಲ್ಲಿ ಒಳ್ಳೆಯ ಗುಣಗಳನ್ನು ಸ್ಪಷ್ಟವಾಗಿ ನೋಡಿದನು ಮತ್ತು ತನ್ನ ಸೇವೆಯಲ್ಲಿ ಅವರನ್ನು ಉಪಯೋಗಿಸುವುದನ್ನು ಮುಂದುವರಿಸಿದನು. ಇತರರು ನಮ್ಮನ್ನು ನೋಯಿಸುವಾಗ ಅಥವಾ ಆಶಾಭಂಗಗೊಳಿಸುವಾಗ, ಹಿಂದೆ ಅವರಲ್ಲಿ ನಾವು ಕಂಡಿರಬಹುದಾದ ಅಪೇಕ್ಷಣೀಯ ಗುಣಗಳ ಮತ್ತು ದೇವರು ಅವರಲ್ಲಿ ನೋಡುವ ಒಳ್ಳೆಯತನದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಸಾಧ್ಯವಿದೆ.​—3/15, ಪುಟಗಳು 15-19.

ಕೀರ್ತನೆಗಳ ಪುಸ್ತಕದಲ್ಲಿ ಪ್ರತಿಯೊಂದು ಕೀರ್ತನೆಗೆ ಕೊಡಲ್ಪಟ್ಟಿರುವ ಸಂಖ್ಯೆಗಳು ಬೇರೆ ಬೇರೆ ಬೈಬಲ್‌ ಭಾಷಾಂತರಗಳಲ್ಲಿ ಏಕೆ ಭಿನ್ನ ಭಿನ್ನವಾಗಿವೆ?

ಮೂಲ ಹೀಬ್ರು ಭಾಷೆ ಮತ್ತು ಸೆಪ್ಟೂಅಜಂಟ್‌ನಲ್ಲಿ ಈ ಪುಸ್ತಕದ ಭಾಷಾಂತರದಲ್ಲಿ ಕೊಡಲ್ಪಟ್ಟ ಸಂಖ್ಯೆಗಳು ವಿಭಿನ್ನವಾಗಿವೆ. ಇತ್ತೀಚಿನ ಭಾಷಾಂತರಗಳು ಯಾವುದರ​—ಹೀಬ್ರು ಮೂಲಪಾಠದ ಅಥವಾ ಸೆಪ್ಟೂಅಜಂಟ್‌​—ಮೇಲೆ ಆಧರಿತವಾಗಿವೆಯೋ ಅದಕ್ಕೆ ಹೊಂದಿಕೊಂಡು ವ್ಯತ್ಯಾಸಗಳು ಕಂಡುಬರಬಹುದು.​—4/1, ಪುಟ 31.