ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಪೂರ್ವಕ ದಯೆಯು ಎಷ್ಟು ಪ್ರಾಮುಖ್ಯವಾಗಿದೆ?

ಪ್ರೀತಿಪೂರ್ವಕ ದಯೆಯು ಎಷ್ಟು ಪ್ರಾಮುಖ್ಯವಾಗಿದೆ?

ಪ್ರೀತಿಪೂರ್ವಕ ದಯೆಯು ಎಷ್ಟು ಪ್ರಾಮುಖ್ಯವಾಗಿದೆ?

“ಮನುಪುತ್ರನಲ್ಲಿ ಅಪೇಕ್ಷಣೀಯವಾದ ವಿಷಯವು ಅವನ ಪ್ರೀತಿಪೂರ್ವಕ ದಯೆಯೇ,” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 19:​22, NW) ನಿಶ್ಚಯವಾಗಿಯೂ, ಪ್ರೀತಿಯಿಂದ ಪ್ರೇರೇಪಿಸಲ್ಪಟ್ಟ ದಯಾಕಾರ್ಯಗಳು ನಿಜವಾಗಿಯೂ ಅಪೇಕ್ಷಣೀಯವಾಗಿವೆ. ಬೈಬಲಿನಲ್ಲಿ “ಪ್ರೀತಿಪೂರ್ವಕ ದಯೆ”ಯನ್ನು, ಈ ಮೊದಲೇ ಇರುವ ಸಂಬಂಧ​—ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಈ ಹಿಂದೆ ಮಾಡಿರುವ ದಯಾಕಾರ್ಯದಿಂದಾಗಿ ಉಂಟಾಗಿರುವಂಥ ರೀತಿಯ ಸಂಬಂಧದ​—ಮೇಲೆ ಆಧಾರಿಸಿರಬಹುದಾದ ದಯೆಗೆ ಸೂಚಿಸಲಾಗಿದೆ. ಆದುದರಿಂದ, ಇದರಲ್ಲಿ ನಿಷ್ಠೆಯೂ ಒಳಗೊಂಡಿದೆ.

ಈ ಅಪೇಕ್ಷಣೀಯವಾದ ಗುಣವನ್ನು ಬೆಳೆಸಿಕೊಳ್ಳುವುದರಲ್ಲಿ ಯೆಹೂದದ ರಾಜನಾದ ಯೆಹೋವಾಷನು ತಪ್ಪಿಹೋದನು. ಅವನು ತನ್ನ ಸೋದರತ್ತೆ ಮತ್ತು ಮಾವನಾದ ಯೆಹೋಯಾದನಿಗೆ ಋಣಿಯಾಗಿದ್ದನು. ಯೆಹೋವಾಷನು ಒಂದು ವರುಷ ಪ್ರಾಯಕ್ಕಿಂತಲೂ ಚಿಕ್ಕವನಾಗಿದ್ದಾಗ, ಅವನ ದುಷ್ಟ ಅಜ್ಜಿಯು ಸ್ವತಃ ತನ್ನನ್ನೇ ರಾಣಿಯಾಗಿ ಮಾಡಿಕೊಂಡು, ರಾಜಸಂತಾನದವರಾದ ಅವನ ಎಲ್ಲಾ ಸಹೋದರರನ್ನು ಕೊಲ್ಲಿಸಿದಳು. ಆದರೆ ಅವಳು ಪುಟ್ಟ ಯೆಹೋವಾಷನನ್ನು ಕೊಲ್ಲಲು ಸಾಧ್ಯವಾಗಲಿಲ್ಲ, ಏಕೆಂದರೆ ಅವನ ಸೋದರತ್ತೆ ಮತ್ತು ಮಾವನವರು ಅವನನ್ನು ಜಾಗರೂಕತೆಯಿಂದ ಬಚ್ಚಿಟ್ಟಿದ್ದರು. ಅಷ್ಟುಮಾತ್ರವಲ್ಲದೆ ಅವರು ಅವನಿಗೆ ದೇವರ ಧರ್ಮಶಾಸ್ತ್ರವನ್ನೂ ಬೋಧಿಸಿದರು. ಯೆಹೋವಾಷನು ಏಳು ವರುಷದವನಾದಾಗ, ಅವನ ಮಾವನು ತನ್ನ ಮಾಹಾಯಾಜಕ ಅಧಿಕಾರವನ್ನು ಉಪಯೋಗಿಸಿ ಆ ದುಷ್ಟ ರಾಣಿಯನ್ನು ಕೊಲ್ಲಿಸಿದನು ಮತ್ತು ಯೆಹೋವಾಷನನ್ನು ಪಟ್ಟಾಭಿಷೇಕ ಮಾಡಿಸಿದನು.​—2 ಪೂರ್ವಕಾಲವೃತ್ತಾಂತ 22:​10-23:15.

ಯುವ ಯೆಹೋವಾಷನು ತನ್ನ ಮಾವನ ಮರಣದ ತನಕ ಒಳ್ಳೆಯ ರೀತಿಯಲ್ಲಿ ರಾಜ್ಯಭಾರಮಾಡಿದನು, ಆದರೆ ನಂತರ ಅವನು ವಿಗ್ರಹಾರಾಧನೆಯನ್ನು ಆರಂಭಿಸಿದನು. ಯೆಹೋವಾಷನ ಧರ್ಮಭ್ರಷ್ಟತೆಯ ವಿರುದ್ಧ ಅವನನ್ನು ಎಚ್ಚರಿಸಲು, ಯೆಹೋಯಾದನ ಮಗನಾದ ಜೆಕರ್ಯನನ್ನು ದೇವರು ಕಳುಹಿಸಿದನು. ಯೆಹೋವಾಷನು ಜೆಕರ್ಯನನ್ನು ಕಲ್ಲೆಸೆದು ಕೊಲ್ಲಿಸಿದನು. ಯಾವ ಕುಟುಂಬಕ್ಕೆ ಅವನು ಚಿರಋಣಿಯಾಗಿರಬೇಕಿತ್ತೋ ಆ ಕುಟುಂಬದ ಕಡೆಗೆ ಎಂಥ ನಿಷ್ಠಾಹೀನತೆಯ ತಲ್ಲಣಿಸುವಂಥ ಒಂದು ಕೃತ್ಯವಿದು!​—2 ಪೂರ್ವಕಾಲವೃತ್ತಾಂತ 24:17-21.

ಬೈಬಲ್‌ ತಿಳಿಸುವುದು: “ಇವನು [ರಾಜ ಯೆಹೋವಾಷನು] ಜೆಕರೀಯನ ತಂದೆಯಾದ ಯೆಹೋಯಾದನಿಂದ ತನಗುಂಟಾದ ಕೃಪೆಯನ್ನು [“ಪ್ರೀತಿಪೂರ್ವಕ ದಯೆಯನ್ನು,” NW] ನೆನಪುಮಾಡಿಕೊಳ್ಳದೆ ಅವನ ಮಗನನ್ನು ಕೊಲ್ಲಿಸಿದನು.” ಸಾಯುವ ಸಮಯದಲ್ಲಿ ಜೆಕರ್ಯನು ಹೀಗಂದನು: “ಯೆಹೋವನೇ ನೋಡಿ ವಿಚಾರಿಸಲಿ.” ಜೆಕರ್ಯನ ಮಾತುಗಳಿಗೆ ಅನುಸಾರವಾಗಿ, ಯೆಹೋವಾಷನು ಕಠಿನರೋಗಕ್ಕೆ ತುತ್ತಾಗಿ, ಅವನ ಸೇವಕರಿಂದಲೇ ಕೊಲ್ಲಲ್ಪಟ್ಟನು.​—2 ಪೂರ್ವಕಾಲವೃತ್ತಾಂತ 24:17-25.

ರಾಜ ಯೆಹೋವಾಷನಂತೆ ಆಗುವ ಬದಲಾಗಿ, “ಪ್ರೀತಿಪೂರ್ವಕ ದಯೆ ಮತ್ತು ಸತ್ಯತೆಗಳು ನಿನ್ನನ್ನು ಬಿಡದಿರಲಿ, . . . ಇದರಿಂದ ನೀನು ದೇವರ ಮತ್ತು ಮನುಷ್ಯರ . . . ಸಮ್ಮತಿಯನ್ನು ಪಡೆದುಕೊಳ್ಳುವಿ” ಎಂಬ ಈ ಬುದ್ಧಿವಾದವನ್ನು ಅನುಸರಿಸುವ ಪ್ರತಿಯೊಬ್ಬರಿಗೂ ಒಂದು ಆಶೀರ್ವದಿತ ಭವಿಷ್ಯತ್ತು ಇರುವುದು.​—ಜ್ಞಾನೋಕ್ತಿ 3:​3, 4NW.