ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಲವರು ಉತ್ತರಗಳನ್ನು ಪಡೆದುಕೊಂಡಿರುವ ವಿಧ

ಕೆಲವರು ಉತ್ತರಗಳನ್ನು ಪಡೆದುಕೊಂಡಿರುವ ವಿಧ

ಕೆಲವರು ಉತ್ತರಗಳನ್ನು ಪಡೆದುಕೊಂಡಿರುವ ವಿಧ

ಕೋಟಿಗಟ್ಟಲೆ ಜನರು ಪ್ರಾರ್ಥಿಸುತ್ತಾರೆ. ಕೆಲವರಿಗೆ ತಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡುತ್ತವೆ ಎಂಬ ಭರವಸೆಯಿದೆ. ಇತರರು ತಮ್ಮ ಪ್ರಾರ್ಥನೆಗಳು ಎಂದಾದರೂ ಆಲಿಸಲ್ಪಟ್ಟಿವೆಯೋ ಎಂದು ಶಂಕಿಸುತ್ತಾರೆ. ಇನ್ನಿತರರು ಉತ್ತರಗಳಿಗಾಗಿ ಹುಡುಕುತ್ತಾರಾದರೂ, ಪ್ರಾರ್ಥನೆಯಲ್ಲಿ ತಮ್ಮ ಬಿನ್ನಹಗಳನ್ನು ದೇವರಿಗೆ ಪ್ರಸ್ತುತಪಡಿಸುವುದರ ಕುರಿತು ಯೋಚಿಸುವುದೇ ಇಲ್ಲ.

ಸತ್ಯ ದೇವರನ್ನು, ‘ಪ್ರಾರ್ಥನೆಯನ್ನು ಕೇಳುವವನು’ ಎಂದು ಬೈಬಲ್‌ ಗುರುತಿಸುತ್ತದೆ. (ಕೀರ್ತನೆ 65:2) ನೀವು ಪ್ರಾರ್ಥಿಸುವುದಾದರೆ, ನಿಮ್ಮ ಪ್ರಾರ್ಥನೆಗಳು ಸತ್ಯ ದೇವರಿಗೆ ನಿರ್ದೇಶಿಸಲ್ಪಡುತ್ತವೆ ಎಂಬ ಖಾತ್ರಿಯು ನಿಮಗಿದೆಯೋ? ನಿಮ್ಮ ಪ್ರಾರ್ಥನೆಗಳು ಆತನು ಉತ್ತರಿಸುವಂತವುಗಳಾಗಿವೆಯೋ?

ಲೋಕದ ಎಲ್ಲಾ ಭಾಗಗಳಲ್ಲಿರುವ ಅನೇಕ ಜನರ ಉತ್ತರವು, ಹೌದು! ಎಂದಾಗಿದೆ. ಅವರು ಉತ್ತರಗಳನ್ನು ಪಡೆದುಕೊಂಡದ್ದು ಹೇಗೆ? ಅವರು ಏನನ್ನು ಕಲಿತಿದ್ದಾರೆ?

ದೇವರು​—ಆತನು ಯಾರು?

ಪೋರ್ಚುಗಲ್‌ನ ಒಬ್ಬ ಶಾಲಾ ಅಧ್ಯಾಪಕಿಯು, ಸಂನ್ಯಾಸಿನಿಯರು ಮತ್ತು ಪಾದ್ರಿಗಳಿಂದ ಶಿಕ್ಷಣವನ್ನು ಪಡೆದಿದ್ದಳು. ಅವಳು ಯಥಾರ್ಥತೆಯಿಂದ ತನ್ನ ನಂಬಿಕೆಗೆ ಅಂಟಿಕೊಂಡಿದ್ದಳು. ಆದರೆ ಚರ್ಚ್‌ ಬದಲಾವಣೆಗಳನ್ನು ಮಾಡಿ, ಪ್ರಾಮುಖ್ಯವೆಂದು ತನಗೆ ಬೋಧಿಸಲ್ಪಟ್ಟಿದ್ದ ಮತಾಚರಣೆಗಳನ್ನು ತೊರೆದಾಗ ಇವಳು ಗಲಿಬಿಲಿಗೊಂಡಳು. ಮತ್ತೊಂದು ದೇಶಕ್ಕೆ ಮಾಡಿದ ಪ್ರಯಾಣವು ಈಕೆಗೆ ಪೌರಸ್ತ್ಯ ರೀತಿಯ ಆರಾಧನೆಗಳನ್ನು ಪರಿಚಯಿಸಿತು, ಮತ್ತು ಒಬ್ಬ ಸತ್ಯ ದೇವರಿದ್ದಾನೋ ಎಂದು ಅವಳು ಯೋಚಿಸತೊಡಗಿದಳು. ಅವಳು ಹೇಗೆ ಆರಾಧಿಸಬೇಕು? ಬೈಬಲಿನಲ್ಲಿರುವ ವಿಷಯಗಳ ಕುರಿತು ಅವಳು ತನ್ನ ಪಾದ್ರಿಯನ್ನು ಕೇಳಿದಾಗ, ಅವಳ ಪ್ರಶ್ನೆಗಳನ್ನು ಕಡೆಗಣಿಸಲಾಯಿತು ಮತ್ತು ಇದರಿಂದಾಗಿ ಅವಳು ಹತಾಶಳಾದಳು.

ಈ ಅಧ್ಯಾಪಕಿಯು ವಾಸಿಸುತ್ತಿದ್ದ ನಗರದಲ್ಲಿ, ಯೆಹೋವನ ಸಾಕ್ಷಿಗಳೊಂದಿಗೆ ಸಂವಾದಿಸಬಾರದು ಎಂದು ಚರ್ಚಿನ ಸದಸ್ಯರನ್ನು ಎಚ್ಚರಿಸುತ್ತಾ, ಕ್ಯಾಥೊಲಿಕ್‌ ಚರ್ಚು ಒಂದು ಕರಪತ್ರವನ್ನು ಹಂಚಿತ್ತು. ಆದರೆ ಈಕೆಯ ಪ್ರಶ್ನೆಗಳು ಉತ್ತರಿಸಲ್ಪಡದೇ ಇದ್ದವು. ಒಂದು ದಿನ ಸಾಕ್ಷಿಗಳು ಇವಳ ಮನೆಗೆ ಬಂದರು, ಇವಳು ಕಿವಿಗೊಟ್ಟಳು ಮತ್ತು ತಾನು ಕೇಳಿಸಿಕೊಂಡ ವಿಷಯದಲ್ಲಿ ಆಸಕ್ತಿಯನ್ನೂ ವ್ಯಕ್ತಪಡಿಸಿದಳು. ಅವಳು ಸಾಕ್ಷಿಗಳೊಂದಿಗೆ ಮಾತನಾಡಿದ್ದು ಇದೇ ಪ್ರಪ್ರಥಮ ಬಾರಿಯಾಗಿತ್ತು.

ತನ್ನ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು, ಈಕೆ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನ ಮಾಡಲಾರಂಭಿಸಿದಳು. ಪ್ರತಿ ವಾರ ತಾನು ಉತ್ತರವನ್ನು ಪಡೆಯಬಯಸಿದಂಥ ಪ್ರಶ್ನೆಗಳ ಒಂದು ದೊಡ್ಡ ಪಟ್ಟಿಯನ್ನೇ ಮಾಡಿಡುತ್ತಿದ್ದಳು. ದೇವರಿಗೆ ಒಂದು ಹೆಸರಿದೆಯೋ, ಇರುವುದು ಒಬ್ಬನೇ ಸತ್ಯ ದೇವರೋ, ಆರಾಧನೆಯಲ್ಲಿ ಮೂರ್ತಿಗಳನ್ನು ಉಪಯೋಗಿಸುವುದು ಆತನಿಗೆ ಸಮ್ಮತವಾಗಿದೆಯೋ ಎಂಬಂಥ ಅನೇಕ ವಿಚಾರಗಳನ್ನು ತಿಳಿದುಕೊಳ್ಳಲು ಈಕೆ ಬಯಸಿದಳು. ತಾನು ಪಡೆದುಕೊಂಡ ಎಲ್ಲಾ ಉತ್ತರಗಳು ವೈಯಕ್ತಿಕ ಅನಿಸಿಕೆಗಳಾಗಿರಲಿಲ್ಲ, ಬೈಬಲಿನಿಂದ ಹೇಳಲ್ಪಟ್ಟವು ಎಂಬುದನ್ನು ಗ್ರಹಿಸಿಕೊಂಡ ಈಕೆಯು ತಾನು ಕಲಿಯುತ್ತಿರುವ ವಿಷಯಗಳ ಬಗ್ಗೆ ಆಶ್ಚರ್ಯಚಕಿತಳಾದಳು, ಸಂತೋಷಗೊಂಡಳು. ಕ್ರಮೇಣ, ತನ್ನ ಅನೇಕ ಪ್ರಶ್ನೆಗಳಿಗೆ ಈಕೆ ಉತ್ತರಗಳನ್ನು ಪಡೆದುಕೊಂಡಳು. ಇಂದು ಈಕೆ ಯೆಹೋವನನ್ನು ಆತ್ಮ ಮತ್ತು ಸತ್ಯದೊಂದಿಗೆ ಆರಾಧಿಸುತ್ತಿದ್ದಾಳೆ—“ಸತ್ಯಭಾವದಿಂದ ದೇವಾರಾಧನೆಮಾಡುವವರು” ಇಂತಹದ್ದೇ ಆರಾಧನೆಯನ್ನು ಸಲ್ಲಿಸುವರು ಎಂದು ಯೇಸು ಕ್ರಿಸ್ತನು ಹೇಳಿದ್ದನು.​—ಯೋಹಾನ 4:23.

ಶ್ರೀ ಲಂಕದಲ್ಲಿ ಒಂದು ಕುಟುಂಬದ ಸದಸ್ಯರು ಒಟ್ಟಿಗೆ ಸೇರಿ ಕ್ರಮವಾಗಿ ಬೈಬಲನ್ನು ಓದುತ್ತಿದ್ದರು. ಆದರೆ ಅವರಿಗೆ ಪ್ರಾಮುಖ್ಯವಾಗಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರವು ಸಿಗುತ್ತಿರಲಿಲ್ಲ. ಅವರಿಗೆ ಸಹಾಯದ ಅಗತ್ಯವಿದ್ದಾಗಲೂ, ಅವರ ಪಾದ್ರಿಗೆ ಅದನ್ನು ಒದಗಿಸಲು ಸಾಧ್ಯವಾಗಲಿಲ್ಲ. ಆದರೆ, ಯೆಹೋವನ ಸಾಕ್ಷಿಗಳು ಅವರನ್ನು ಸಂದರ್ಶಿಸಿದರು ಮತ್ತು ಸಹಾಯಕರವಾದ ಬೈಬಲ್‌ ಸಾಹಿತ್ಯವನ್ನು ಆ ಕುಟುಂಬದವರಿಗೆ ಬಿಟ್ಟುಹೋದರು. ನಂತರ, ಅವರ ಬೈಬಲ್‌ ಪ್ರಶ್ನೆಗಳಿಗೆ ಯೆಹೋವನ ಸಾಕ್ಷಿಗಳು ತೃಪ್ತಿಕರವಾದ ಉತ್ತರಗಳನ್ನು ಕೊಟ್ಟಾಗ, ಅವರು ಒಂದು ಬೈಬಲ್‌ ಅಧ್ಯಯನಕ್ಕಾಗಿ ಒಪ್ಪಿಕೊಂಡರು. ತಮ್ಮ ಅಧ್ಯಯನಗಳಲ್ಲಿ ಕಲಿತಂಥ ವಿಷಯಗಳು ಅವರಿಗೆ ಹೆಚ್ಚು ಆಸಕ್ತಿಕರವಾಗಿದ್ದವು.

ಆದರೂ, ಬಾಲ್ಯಾವಸ್ಥೆಯಿಂದ ಏಕಪಕ್ಷೀಯ ಸಿದ್ಧಾಂತಗಳನ್ನು ಚರ್ಚು ಅವಳ ತಲೆಯಲ್ಲಿ ತುಂಬಿಸಿದ್ದ ಕಾರಣ, ಯೇಸು ಹೇಳಿದಂತೆಯೇ, ‘ಒಬ್ಬನೇ ಸತ್ಯದೇವರು’ ಯೇಸು ಕ್ರಿಸ್ತನ ತಂದೆಯಾಗಿದ್ದಾನೆ ಎಂಬುದನ್ನು ಗ್ರಹಿಸುವುದರಿಂದ ಹೆಂಡತಿಯನ್ನು ತಡೆಯಿತು. (ಯೋಹಾನ 17:1, 3) ಯೇಸು ತಂದೆಗೆ ಸರಿಸಮಾನನು ಮತ್ತು ಈ “ದೈವಿಕ ರಹಸ್ಯ”ದ ಕುರಿತು ಪ್ರಶ್ನೆಯೆಬ್ಬಿಸಬಾರದು ಎಂದು ಅವಳಿಗೆ ಬೋಧಿಸಲಾಗಿತ್ತು. ಯಥಾರ್ಥತೆ ಮತ್ತು ಉತ್ಕಟ ಬಯಕೆಯೊಂದಿಗೆ, ವಾಸ್ತವವಾಗಿ ಯೇಸು ಯಾರಾಗಿದ್ದಾನೆ ಎಂಬುದನ್ನು ತನಗೆ ತೋರಿಸಿಕೊಡುವಂತೆ ಯೆಹೋವನಿಗೆ ಆತನ ಹೆಸರನ್ನು ಉಪಯೋಗಿಸುತ್ತಾ ಅವಳು ಪ್ರಾರ್ಥಿಸಿದಳು. ನಂತರ ಅವಳು ಸಂಬಂಧಿತ ಶಾಸ್ತ್ರವಚನಗಳನ್ನು ಪುನಃ ಒಮ್ಮೆ ಜಾಗರೂಕತೆಯಿಂದ ಪರಿಶೀಲಿಸಿದಳು. (ಯೋಹಾನ 14:28; 17:21; 1 ಕೊರಿಂಥ 8:5, 6) ತನ್ನ ಕಣ್ಣಿನಿಂದ ಪರೆಗಳು ಬಿದ್ದುಹೋದವೋ ಎಂಬಂತೆ, ಯೆಹೋವನು​—ಭೂಮ್ಯಾಕಾಶಗಳ ಸೃಷ್ಟಿಕರ್ತನೂ ಯೇಸು ಕ್ರಿಸ್ತನ ತಂದೆಯೂ ಆಗಿರುವಾತನು​—ಸತ್ಯ ದೇವರಾಗಿದ್ದಾನೆ ಎಂಬುದನ್ನು ಈಗ ಸ್ಪಷ್ಟವಾಗಿ ಕಾಣಶಕ್ತಳಾದಳು.​—ಯೆಶಾಯ 42:8; ಯೆರೆಮೀಯ 10:10-12.

ಕಷ್ಟಾನುಭವ​—ಏಕೆ?

ಯೋಬನು ಅತಿ ತೀವ್ರ ಪ್ರಮಾಣದಲ್ಲಿ ಕಷ್ಟಾನುಭವವನ್ನು ಅನುಭವಿಸಿದ ವ್ಯಕ್ತಿಯಾಗಿದ್ದನು. ಅವನ ಎಲ್ಲಾ ಮಕ್ಕಳು ಒಂದು ಚಂಡಮಾರುತದಲ್ಲಿ ಕೊಲ್ಲಲ್ಪಟ್ಟರು, ಮತ್ತು ಅವನು ದಾರಿದ್ರ್ಯಕ್ಕಿಳಿಸಲ್ಪಟ್ಟನು. ಅವನು ಒಂದು ಯಾತನಾಮಯ ರೋಗದಿಂದ ನರಳುತ್ತಿದ್ದನು ಮಾತ್ರವಲ್ಲದೆ ನಾಮಮಾತ್ರದ ಸ್ನೇಹಿತರಿಂದ ಮನೋವ್ಯಥೆಯನ್ನೂ ಸಹಿಸಿಕೊಳ್ಳಬೇಕಾಗಿತ್ತು. ಈ ಎಲ್ಲಾದರ ಮಧ್ಯೆ ಯೋಬನು ಆಲೋಚಿಸದೇ ಕೆಲವು ಮಾತುಗಳನ್ನಾಡಿದನು. (ಯೋಬ 6:3) ಆದರೆ ದೇವರು ಪರಿಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಂಡನು. (ಯೋಬ 35:15) ಯೋಬನ ಹೃದಯಾವಸ್ಥೆಯು ದೇವರಿಗೆ ತಿಳಿದಿತ್ತು ಮತ್ತು ಆತನು ಯೋಬನಿಗೆ ಅಗತ್ಯವಿದ್ದ ಬುದ್ಧಿವಾದವನ್ನೂ ಕೊಟ್ಟನು. ಈ ರೀತಿಯ ಬುದ್ಧಿವಾದವನ್ನು ಆತನು ಇಂದು ಸಹ ಜನರಿಗೆ ಕೊಡುತ್ತಾನೆ.

ಮೊಸಾಂಬೀಕ್‌ನಲ್ಲಿ, ಕಾಸ್ಟ್ರೂವಿನ ತಾಯಿಯು ತೀರಿಕೊಂಡಾಗ ಅವನಿಗೆ ಕೇವಲ ಹತ್ತು ವರ್ಷ ಪ್ರಾಯವಾಗಿತ್ತು. ಅವನ ಮನಸ್ಸು ಛಿನ್ನವಿಚ್ಛಿನ್ನಗೊಂಡಿತು. “ಆಕೆ ಮೃತಪಟ್ಟು ಏಕೆ ನಮ್ಮನ್ನು ಬಿಟ್ಟುಹೋಗಬೇಕಾಗಿತ್ತು?” ಎಂದು ಅವನು ಕೇಳಿದನು. ಅವನು ದೇವಭಕ್ತ ಹೆತ್ತವರಿಂದ ಬೆಳೆಸಲ್ಪಟ್ಟಿದ್ದನಾದರೂ, ಈಗ ಅವನಿಗೆ ಅದು ಯಾವುದೂ ಪ್ರಯೋಜನದಾಯಕವಾಗಿ ಕಂಡುಬರಲಿಲ್ಲ. ಅವನ ಹೃದಮನಗಳನ್ನು ಯಾವುದು ಸಂತೈಸಸಾಧ್ಯವಿತ್ತು? ಒಂದು ಚಿಕ್ಕ ಚಿಚವ ಬೈಬಲನ್ನು ಓದಿ ತನ್ನ ದೊಡ್ಡಣ್ಣನೊಂದಿಗೆ ಅದನ್ನು ಚರ್ಚಿಸುವುದರಲ್ಲಿ ಅವನು ಸಾಂತ್ವನವನ್ನು ಕಂಡುಕೊಂಡನು.

ಕ್ರಮೇಣ, ತನ್ನ ತಾಯಿಯ ಮರಣವು, ದೇವರು ಮಾಡಿದ ಅನ್ಯಾಯ ಕೃತ್ಯದಿಂದಲ್ಲ ಬದಲಿಗೆ ಬಾಧ್ಯತೆಯಾಗಿ ಪಡೆದಿದ್ದ ಅಪರಿಪೂರ್ಣತೆಯಿಂದಾಗಿ ಸಂಭವಿಸಿತು ಎಂಬುದನ್ನು ಕಾಸ್ಟ್ರೂ ಅರ್ಥಮಾಡಿಕೊಂಡನು. (ರೋಮಾಪುರ 5:12; 6:23) ಬೈಬಲಿನ ಪುನರುತ್ಥಾನದ ವಾಗ್ದಾನವು ಅವನಿಗೆ ಮಹಾ ಸಾಂತ್ವನವನ್ನು ತಂದಿತು, ಏಕೆಂದರೆ ಅವನು ತನ್ನ ತಾಯಿಯನ್ನು ಪುನಃ ನೋಡಬಹುದು ಎಂಬ ದೃಢಭರವಸೆಯನ್ನು ಅದರಲ್ಲಿ ಕಂಡುಕೊಂಡನು. (ಯೋಹಾನ 5:28, 29; ಅ. ಕೃತ್ಯಗಳು 24:15) ವಿಷಾದಕರವಾಗಿ, ಕೇವಲ ನಾಲ್ಕು ವರ್ಷಗಳ ನಂತರ ಅವನ ತಂದೆಯೂ ತೀರಿಕೊಂಡರು. ಆದರೆ ಈ ಸಲ, ತನ್ನ ಈ ನಷ್ಟವನ್ನು ಕಾಸ್ಟ್ರೂವಿಗೆ ಹೆಚ್ಚು ಸಮರ್ಥನಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಯಿತು. ಇಂದು, ಕಾಸ್ಟ್ರೂ ಯೆಹೋವನನ್ನು ಪ್ರೀತಿಸುತ್ತಾನೆ ಮತ್ತು ದೇವರ ಸೇವೆಯಲ್ಲಿ ತನ್ನ ಜೀವನವನ್ನು ನಿಷ್ಠೆಯಿಂದ ಉಪಯೋಗಿಸುತ್ತಿದ್ದಾನೆ. ಅವನ ಸಂತೋಷಕ್ಕೆ ಅವನ ಪರಿಚಯಸ್ಥರೆಲ್ಲರೂ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ.

ತಮ್ಮ ಪ್ರಿಯ ವ್ಯಕ್ತಿಗಳನ್ನು ಕಳೆದುಕೊಂಡಿರುವ ಅನೇಕ ಜನರು, ಕಾಸ್ಟ್ರೂವನ್ನು ಸಂತೈಸಿದ ಅದೇ ಬೈಬಲ್‌ ಸತ್ಯಗಳಲ್ಲಿ ಸಾಂತ್ವನವನ್ನು ಕಂಡುಕೊಳ್ಳುತ್ತಾರೆ. ದುಷ್ಟರ ವರ್ತನೆಗಳ ಕಾರಣ ಮಹಾ ಸಂಕಷ್ಟವನ್ನು ಅನುಭವಿಸಿರುವ ಕೆಲವರು ಯೋಬನು ಕೇಳಿದಂತೆ ಹೀಗೆ ಕೇಳುತ್ತಾರೆ: ‘ದುಷ್ಟರು ಬಾಳಿ ವೃದ್ಧರಾಗುವದಕ್ಕೆ ಕಾರಣವೇನು?’ (ಯೋಬ 21:7) ಈ ಪ್ರಶ್ನೆಗೆ ತನ್ನ ವಾಕ್ಯದ ಮೂಲಕ ಪ್ರತ್ಯುತ್ತರವನ್ನು ಕೊಡುವ ದೇವರ ಮಾತಿಗೆ ನಿಜವಾಗಿಯೂ ಕಿವಿಗೊಡುವವರು, ದೇವರು ವಿಷಯಗಳನ್ನು ನಿರ್ವಹಿಸುವ ರೀತಿಯು ತಮ್ಮ ಸ್ವಂತ ಪ್ರಯೋಜನಾರ್ಥವಾಗಿ ಕಾರ್ಯವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ.​—2 ಪೇತ್ರ 3:9.

ಅಮೆರಿಕದಲ್ಲಿ ಬೆಳೆಸಲ್ಪಟ್ಟ ಬಾರ್‌ಬ್ರ, ವೈಯಕ್ತಿಕವಾಗಿ ಯುದ್ಧದ ಘೋರತೆಯನ್ನು ಅನುಭವಿಸಿರಲಿಲ್ಲವಾದರೂ ಯುದ್ಧ ಹೂಡಿದ್ದ ಒಂದು ಲೋಕದ ಮಧ್ಯೆ ಆಕೆ ಬೆಳೆದಿದ್ದಳು. ಯುದ್ಧದ ಭೀಕರತೆಗಳ ಕುರಿತಾದ ವರದಿಗಳು ದಿನನಿತ್ಯದ ಸಮಾಚಾರವಾಗಿದ್ದವು. ಶಾಲೆಯಲ್ಲಿ ತಾನು ಶಿಕ್ಷಣ ಪಡೆಯುತ್ತಿದ್ದಾಗ, ಯೋಚಿಸಲೂ ಅಸಾಧ್ಯವೆಂದೆಣಿಸಿದ ರೀತಿಯಲ್ಲಿ ಐತಿಹಾಸಿಕ ಘಟನೆಗಳು ನಡೆದಿರುವುದರನ್ನು ನೋಡಿ ಆಕೆ ಕ್ಷೋಭೆಗೊಂಡಳು. ಇವುಗಳಿಗೆ ಕಾರಣವೇನಾಗಿತ್ತು? ಸಂಭವಿಸುತ್ತಿರುವ ವಿಷಯಗಳ ಕುರಿತು ದೇವರು ಚಿಂತಿತನಾಗಿದ್ದನೋ? ದೇವರೊಬ್ಬನು ಅಸ್ತಿತ್ವದಲ್ಲಿದ್ದಾನೆ ಎಂದು ಅವಳು ನಂಬಿದಳು, ಆದರೆ ಆತನ ಕುರಿತು ಆಕೆಗೆ ಮಿಶ್ರ ಅನಿಸಿಕೆಗಳಿದ್ದವು.

ಆದರೂ, ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಿಸಿದಂತೆ ಜೀವಿತದ ಕುರಿತಾದ ಬಾರ್‌ಬ್ರಳ ಹೊರನೋಟವು ಕ್ರಮೇಣ ಬದಲಾಯಿತು. ಅವಳು ಅವರಿಗೆ ಕಿವಿಗೊಟ್ಟಳು ಮತ್ತು ಅವರೊಂದಿಗೆ ಬೈಬಲನ್ನು ಅಧ್ಯಯನ ಮಾಡಿದಳು. ಅವಳು ಒಂದು ರಾಜ್ಯ ಸಭಾಗೃಹದಲ್ಲಿ ಕೂಟಗಳಿಗಾಗಿ ಹಾಜರಾದಳು. ಅವಳು ಅವರ ಒಂದು ದೊಡ್ಡ ಅಧಿವೇಶನಕ್ಕೂ ಹಾಜರಾದಳು. ಮಾತ್ರವಲ್ಲದೆ, ಅವಳು ಪ್ರಶ್ನೆಗಳನ್ನು ಕೇಳಿದಾಗ, ಬೇರೆ ಬೇರೆ ಸಾಕ್ಷಿಗಳಿಂದ ತನಗೆ ಬೇರೆ ಬೇರೆ ಉತ್ತರಗಳು ದೊರಕುತ್ತಿಲ್ಲ ಎಂಬುದನ್ನೂ ಅವಳು ಗಮನಿಸಿದಳು. ಸಾಕ್ಷಿಗಳು ತಮ್ಮ ಯೋಚನಾಧಾಟಿಯನ್ನು ಬೈಬಲಿನ ಮೇಲೆ ಆಧರಿಸಿದ್ದುದರಿಂದ ಅವರು ಒಮ್ಮತದಲ್ಲಿ ಮಾತನಾಡಿದರು.

ಲೋಕವು ಅದರ ನಾಯಕನಾದ ಪಿಶಾಚನಾದ ಸೈತಾನನಿಂದ ಪ್ರಭಾವಿಸಲ್ಪಡುತ್ತದೆ, ಮತ್ತು ಅವನ ಆತ್ಮವನ್ನು ಪ್ರದರ್ಶಿಸುತ್ತದೆ ಎಂಬುದನ್ನು ಸಾಕ್ಷಿಗಳು ಬೈಬಲಿನ ಆಧಾರದಿಂದ ತೋರಿಸಿಕೊಟ್ಟರು. (ಯೋಹಾನ 14:30; 2 ಕೊರಿಂಥ 4:4; ಎಫೆಸ 2:1-3; 1 ಯೋಹಾನ 5:19) ಬಾರ್‌ಬ್ರಳನ್ನು ಕ್ಷೋಭೆಗೊಳಪಡಿಸಿದ ಘಟನೆಗಳು ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿದ್ದವು ಎಂದು ಅವರು ವಿವರಿಸಿದರು. (ದಾನಿಯೇಲ, ಅಧ್ಯಾಯಗಳು 2, 7, ಮತ್ತು 8) ದೇವರು ಅವುಗಳನ್ನು ಮುಂತಿಳಿಸಲು ಕಾರಣವೇನೆಂದರೆ, ಆತನು ಬಯಸಿದಲ್ಲಿ ಭಾವೀ ಘಟನೆಗಳನ್ನು ಮುನ್ನೋಡುವ ಸಾಮರ್ಥ್ಯ ಆತನಿಗಿದೆ. ಅವುಗಳಲ್ಲಿ ಕೆಲವು ಘಟನೆಗಳನ್ನು ದೇವರೇ ಸಂಭವಿಸುವಂತೆ ಮಾಡಿದ್ದನು. ಇತರ ಘಟನೆಗಳನ್ನು ಆತನು ಸಂಭವಿಸುವಂತೆ ಅನುಮತಿಸಿದನಷ್ಟೆ. ಬೈಬಲು ನಮ್ಮ ದಿನಗಳಿಗಾಗಿ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಸಹ ಮುಂತಿಳಿಸುತ್ತದೆ ಮತ್ತು ಅವುಗಳ ಅರ್ಥವೇನೆಂಬುದನ್ನೂ ವಿವರಿಸುತ್ತದೆ ಎಂದು ಸಾಕ್ಷಿಗಳು ಬಾರ್‌ಬ್ರಳಿಗೆ ತೋರಿಸಿದರು. (ಮತ್ತಾಯ 24:3-14) ನೀತಿಯು ಪ್ರಚಲಿತವಾಗಿರುವ ಮತ್ತು ಕಷ್ಟಾನುಭವವು ಗತಿಸಿಹೋದ ವಿಷಯವಾಗಿರುವ ಒಂದು ಹೊಸ ಲೋಕದ ಕುರಿತಾದ ಬೈಬಲ್‌ ವಾಗ್ದಾನಗಳನ್ನು ಅವರು ಅವಳಿಗೆ ತೋರಿಸಿದರು.​—2 ಪೇತ್ರ 3:13; ಪ್ರಕಟನೆ 21:3, 4.

ಯೆಹೋವನು ಮಾನವ ಕಷ್ಟಾನುಭವಕ್ಕೆ ಕಾರಣವಲ್ಲವಾದರೂ, ಮನುಷ್ಯರು ಆತನ ಆಜ್ಞೆಗಳಿಗೆ ಅವಿಧೇಯರಾಗಲು ಆಯ್ದುಕೊಳ್ಳುವಲ್ಲಿ, ಅವರನ್ನು ವಿಧೇಯರಾಗುವಂತೆ ನಿರ್ಬಂಧಿಸುತ್ತಾ ಕಷ್ಟಾನುಭವವನ್ನು ದೇವರು ನಿಲ್ಲಿಸುವುದಿಲ್ಲವೆಂದು ಕ್ರಮೇಣ ಬಾರ್‌ಬ್ರ ತಿಳಿದುಕೊಂಡಳು. (ಧರ್ಮೋಪದೇಶಕಾಂಡ 30:19, 20) ದೇವರು ನಾವು ಸಂತೋಷದಿಂದ ಸದಾ ಜೀವಿಸಲು ಏರ್ಪಾಡುಗಳನ್ನು ಮಾಡಿದ್ದಾನೆ. ಆದರೆ ನಾವು ಆತನ ನೀತಿಯ ಮಾರ್ಗಗಳಿಗನುಸಾರವಾಗಿ ಜೀವಿಸುವೆವೋ ಎಂಬುದನ್ನು ತೋರಿಸಲು ಈಗ ನಮಗೆ ಅವಕಾಶವನ್ನು ಕೊಟ್ಟಿದ್ದಾನೆ. (ಪ್ರಕಟನೆ 14:6, 7) ಬಾರ್‌ಬ್ರ ದೇವರ ಅಪೇಕ್ಷೆಗಳನ್ನು ಕಲಿತುಕೊಂಡು ಅವುಗಳಿಗನುಸಾರ ಜೀವಿಸಬೇಕೆಂಬ ದೃಢನಿರ್ಧಾರವನ್ನು ಮಾಡಿದಳು. ಮತ್ತು, ಯೇಸು ತನ್ನ ನಿಜ ಶಿಷ್ಯರನ್ನು ಗುರುತಿಸುವುದೆಂದು ಹೇಳಿದ ರೀತಿಯ ಪ್ರೀತಿಯನ್ನು ಆಕೆ ಯೆಹೋವನ ಸಾಕ್ಷಿಗಳಲ್ಲಿ ಕಂಡುಕೊಂಡಳು.​—ಯೋಹಾನ 13:34, 35.

ಅವಳಿಗೆ ಸಹಾಯಮಾಡಿದ ಒದಗಿಸುವಿಕೆಗಳಿಂದ ನೀವೂ ಪ್ರಯೋಜನ ಪಡೆಯಬಲ್ಲಿರಿ.

ಅರ್ಥ ಹೊಂದಿರುವ ಜೀವನ

ಜೀವನವನ್ನು ಸುಗಮವಾಗಿ ಸಾಗಿಸುತ್ತಿರುವವರು ಕೂಡ ತಮ್ಮನ್ನು ತಬ್ಬಿಬ್ಬುಗೊಳಿಸುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಬಹುದು. ಉದಾಹರಣೆಗೆ, ಬ್ರಿಟನ್‌ನ ಒಬ್ಬ ಯುವ ಪುರುಷ ಮ್ಯಾಥ್ಯೂಗೆ ಯಾವಾಗಲೂ ಸತ್ಯ ದೇವರನ್ನು ಮತ್ತು ಜೀವಿತದಲ್ಲಿ ಉದ್ದೇಶವನ್ನು ಕಂಡುಕೊಳ್ಳಬೇಕು ಎಂಬ ತೀವ್ರ ಹಂಬಲವಿತ್ತು. ಮ್ಯಾಥ್ಯೂ 17 ವರ್ಷ ಪ್ರಾಯದವನಾಗಿದ್ದಾಗ ಅವನ ತಂದೆ ತೀರಿಹೋದರು. ತದನಂತರ, ಮ್ಯಾಥ್ಯೂ ಸಂಗೀತದಲ್ಲಿ ವಿಶ್ವವಿದ್ಯಾನಿಲಯದ ಪದವಿಯನ್ನು ಪಡೆದುಕೊಂಡನು. ಅನಂತರವೇ, ಅವನು ತನ್ನ ಪ್ರಾಪಂಚಿಕ ಜೀವನ ರೀತಿಯ ವ್ಯರ್ಥತೆಯ ಪ್ರಜ್ಞೆಯನ್ನು ಹೆಚ್ಚೆಚ್ಚಾಗಿ ಗ್ರಹಿಸಿದನು. ಲಂಡನ್‌ನಲ್ಲಿ ಜೀವಿಸಲಿಕ್ಕಾಗಿ ಅವನು ಮನೆಯನ್ನು ಬಿಟ್ಟುಹೋದನು, ಮತ್ತು ಅಲ್ಲಿ ಅಮಲೌಷಧ, ನೈಟ್‌ಕ್ಲಬ್‌ಗಳು, ಜ್ಯೋತಿಷ್ಯ, ಪ್ರೇತಾತ್ಮವ್ಯವಹಾರ, ಮತ್ತು ಸೆನ್‌ ಬೌದ್ಧಮತ ಹಾಗೂ ಇತರ ವೇದಾಂತಗಳಲ್ಲಿ ತನ್ನನ್ನು ತೊಡಗಿಸಿಕೊಂಡನು​—ಇದೆಲ್ಲವನ್ನು ಸಂತೃಪ್ತಿಕರವಾದ ಒಂದು ಜೀವನ ರೀತಿಯ ಅನ್ವೇಷಣೆಗಾಗಿ ಮಾಡಿದನು. ಬೇಸತ್ತವನಾಗಿ, ತಾನು ಸತ್ಯವನ್ನು ಕಂಡುಕೊಳ್ಳಲು ತನಗೆ ಸಹಾಯಮಾಡುವಂತೆ ದೇವರಿಗೆ ಪ್ರಾರ್ಥಿಸಿದನು.

ಎರಡು ದಿನಗಳು ಕಳೆದ ನಂತರ ಮ್ಯಾಥ್ಯೂ ತನ್ನ ಒಬ್ಬ ಹಳೆಯ ಸ್ನೇಹಿತನನ್ನು ಭೇಟಿಯಾದನು ಮತ್ತು ತನ್ನ ಗೋಳಿನ ಕಥೆಯನ್ನು ಹೇಳಿಕೊಂಡನು. ಈ ವ್ಯಕ್ತಿ ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನ ಮಾಡಿದ್ದನು. ಮ್ಯಾಥ್ಯೂಗೆ 2 ತಿಮೊಥೆಯ 3:1-5 ತೋರಿಸಲ್ಪಟ್ಟಾಗ, ಬೈಬಲು ಅದೆಷ್ಟು ನಿಷ್ಕೃಷ್ಟವಾಗಿ ನಮ್ಮ ಸುತ್ತಲಿನ ಲೋಕವನ್ನು ವರ್ಣಿಸುತ್ತದೆ ಎಂಬುದನ್ನು ನೋಡಿ ಆಶ್ಚರ್ಯಚಕಿತನಾದನು. ಪರ್ವತ ಪ್ರಸಂಗದ ಕುರಿತು ಓದಿದಾಗ, ಅದು ಅವನ ಮನಸ್ಸನ್ನು ಸ್ಪರ್ಶಿಸಿತು. (ಮತ್ತಾಯ, ಅಧ್ಯಾಯಗಳು 5-7) ಯೆಹೋವನ ಸಾಕ್ಷಿಗಳ ಕುರಿತು ನಿಂದಾತ್ಮಕವಾದ ಯಾವುದೋ ಮಾಹಿತಿಯನ್ನು ಓದಿದ್ದರಿಂದ ಮೊದಲು ಅವನು ಹಿಂಜರಿದನು, ಆದರೆ ಕೊನೆಗೆ ಹತ್ತಿರದಲ್ಲಿದ್ದ ಒಂದು ರಾಜ್ಯ ಸಭಾಗೃಹಕ್ಕೆ ಹಾಜರಾಗಲು ತೀರ್ಮಾನಿಸಿದನು.

ಮ್ಯಾಥ್ಯೂ ತಾನು ಕೇಳಿಸಿಕೊಂಡ ವಿಷಯದಲ್ಲಿ ಆನಂದಿಸಿದನು ಮತ್ತು ಸಭೆಯ ಒಬ್ಬ ಹಿರಿಯನೊಂದಿಗೆ ಅಧ್ಯಯನ ಮಾಡಲು ಆರಂಭಿಸಿದನು. ತಾನು ಹುಡುಕುತ್ತಿದ್ದ ಅದೇ ವಿಷಯಗಳನ್ನು ಕಲಿಯುತ್ತಿದ್ದೇನೆಂದು ಅವನು ಶೀಘ್ರವಾಗಿ ಗ್ರಹಿಸಿಕೊಂಡನು, ಅದು ಅವನು ದೇವರಿಗೆ ಮಾಡಿದ ಪ್ರಾರ್ಥನೆಗೆ ಪ್ರತ್ಯುತ್ತರದಂತಿತ್ತು. ಯೆಹೋವನಿಗೆ ಮೆಚ್ಚಿಕೆಯಿಲ್ಲದ ಅಭ್ಯಾಸಗಳನ್ನು ಅವನು ತೊರೆದುಬಿಟ್ಟಾಗ ಹಲವಾರು ಪ್ರಯೋಜನಗಳನ್ನು ಪಡೆದುಕೊಂಡನು. ದೇವರಿಗಾಗಿ ಹಿತಕರವಾದ ಭಯವನ್ನು ಬೆಳೆಸಿಕೊಂಡಾಗ, ಅವನು ದೇವರ ನಿಯಮಗಳಿಗನುಸಾರ ತನ್ನ ಜೀವಿತವನ್ನು ಹೊಂದಿಸಿಕೊಳ್ಳುವಂತೆ ಪ್ರೇರಿಸಲ್ಪಟ್ಟನು. ಇಂತಹ ಜೀವನಕ್ಕೆ ನಿಜವಾದ ಅರ್ಥವಿದೆ ಎಂಬುದನ್ನು ಮ್ಯಾಥ್ಯೂ ಅರಿತುಕೊಂಡನು.​—ಪ್ರಸಂಗಿ 12:13.

ಈ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಮ್ಯಾಥ್ಯೂ ಅಥವಾ ಇತರರು, ಸಂತೃಪ್ತಿಕರವಾದ ಜೀವನ ರೀತಿಯನ್ನು ಕಂಡುಕೊಳ್ಳಬೇಕೆಂಬುದು ಮುಂಚಿತವಾಗಿಯೇ ನಿರ್ಧರಿಸಲ್ಪಟ್ಟಿರಲಿಲ್ಲ. ಬದಲಾಗಿ, ತನ್ನ ನಿಯಮಗಳಿಗೆ ವಿಧೇಯರಾಗಲು ಸಂತೋಷದಿಂದ ಆರಿಸಿಕೊಳ್ಳುವ ಎಲ್ಲರನ್ನೂ ಆವರಿಸುವ ಒಂದು ಪ್ರೀತಿಯುಳ್ಳ ಉದ್ದೇಶವು ಯೆಹೋವ ದೇವರಿಗಿದೆ ಎಂಬುದನ್ನು ಅವರು ಕಲಿತುಕೊಂಡರು. (ಅ. ಕೃತ್ಯಗಳು 10:34, 35) ಯುದ್ಧದಿಂದ, ರೋಗ ಹಸಿವೆಗಳಿಂದ, ಮತ್ತು ಮರಣದಿಂದಲೂ ವಿಮುಕ್ತವಾಗಿರುವ ಒಂದು ಲೋಕದಲ್ಲಿ ನಿತ್ಯವಾಗಿ ಜೀವಿಸುವುದು ಆ ಉದ್ದೇಶದಲ್ಲಿ ಒಳಗೂಡಿದೆ. (ಯೆಶಾಯ 2:4; 25:6-8; 33:24; ಯೋಹಾನ 3:16) ನೀವು ಬಯಸುವುದು ಅದನ್ನೇ ಅಲ್ಲವೇ? ಹೌದಾದರೆ, ಒಂದು ಸಂತೃಪ್ತಿಕರ ಜೀವಿತಕ್ಕಾಗಿರುವ ಕೀಲಿ ಕೈಯನ್ನು ಕಂಡುಕೊಳ್ಳಲಿಕ್ಕಾಗಿ ಹೆಚ್ಚನ್ನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ನಡೆಯುವ ಬೈಬಲ್‌ ಆಧಾರಿತ ಕೂಟಗಳಿಗೆ ಹಾಜರಾಗುವುದರ ಮೂಲಕ ಕಲಿತುಕೊಳ್ಳಬಹುದು. ನೀವು ಹೀಗೆ ಮಾಡುವಂತೆ ಹಾರ್ದಿಕವಾಗಿ ಸ್ವಾಗತಿಸಲ್ಪಟ್ಟಿದ್ದೀರಿ.

[ಪುಟ 7ರಲ್ಲಿರುವ ಚಿತ್ರ]

ದೇವರ ವೈಯಕ್ತಿಕ ನಾಮವನ್ನು ಉಪಯೋಗಿಸುತ್ತಾ ಆತನಿಗೆ ಶ್ರದ್ಧೆಯಿಂದ ಪ್ರಾರ್ಥಿಸಿರಿ

[ಪುಟ 7ರಲ್ಲಿರುವ ಚಿತ್ರ]

ನಿಜವಾಗಿಯೂ ಬೈಬಲಿನಲ್ಲಿರುವುದನ್ನೇ ಬೋಧಿಸುವವರೊಂದಿಗೆ ಬೈಬಲನ್ನು ಅಧ್ಯಯನ ಮಾಡಿರಿ

[ಪುಟ 7ರಲ್ಲಿರುವ ಚಿತ್ರಗಳು]

ರಾಜ್ಯ ಸಭಾಗೃಹದಲ್ಲಿ ಕೂಟಗಳಿಗಾಗಿ ಹಾಜರಾಗಿರಿ

[ಪುಟ 4ರಲ್ಲಿರುವ ಚಿತ್ರ ಕೃಪೆ]

ಪಾದಯಾತ್ರಿ: Chad Ehlers/Index Stock Photography