ರಕ್ತದ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಸಹಾಯ
ರಾಜ್ಯ ಘೋಷಕರು ವರದಿ ಮಾಡುತ್ತಾರೆ
ರಕ್ತದ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಸಹಾಯ
ಲೋಕದಾದ್ಯಂತ ಯೆಹೋವನ ಸೇವಕರು, ರಕ್ತದ ಪಾವಿತ್ರ್ಯದ ವಿಷಯದಲ್ಲಿ ದೇವರಿಗೆ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. (ಅ. ಕೃತ್ಯಗಳು 15:28, 29) ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದಿಂದ ಕ್ರೈಸ್ತ ಸಹೋದರರ ಬಳಗಕ್ಕೆ ಸಹಾಯವು ಒದಗಿಸಲ್ಪಟ್ಟಿದೆ. (ಮತ್ತಾಯ 24:45-47) ಈ ಸಹಾಯದಿಂದ ಫಿಲಿಪ್ಪೀನ್ಸ್ನಲ್ಲಿ ಯಾವ ಫಲಿತಾಂಶ ದೊರಕಿತು ಎಂಬುದನ್ನು ನಾವು ನೋಡೋಣ.
ಫಿಲಿಪ್ಪೀನ್ಸ್ ಬ್ರಾಂಚ್ ವರದಿಸುವುದು: “ಫಿಲಿಪ್ಪೀನ್ಸ್ನಲ್ಲಿ, 1990ರಲ್ಲಿ, ಬ್ರೂಕ್ಲಿನ್ ಬೆತೆಲ್ನಿಂದ ಬರುವ ಪ್ರತಿನಿಧಿಗಳು ಒಂದು ಮಾಹಿತಿ ಕೂಟವನ್ನು ನಡಿಸುವರೆಂದು ನಮಗೆ ತಿಳಿಸಲಾಯಿತು. ಕೊರಿಯ, ಟೈವಾನ್ ಮತ್ತು ಹಾಂಗ್ ಕಾಂಗ್ ಅನ್ನು ಸೇರಿಸಿ ಆಸ್ಯಸೀಮೆಯ ಅನೇಕ ಬ್ರಾಂಚ್ಗಳಿಂದ ಸಹೋದರರನ್ನು ಆಮಂತ್ರಿಸಲಾಯಿತು. ಅವರವರ ಬ್ರಾಂಚ್ಗಳಲ್ಲಿ ಹಾಸ್ಪಿಟಲ್ ಇನ್ಫರ್ಮೇಷನ್ ಸರ್ವಿಸಸ್ (ಏಚ್ಐಎಸ್) ಅನ್ನು ಸ್ಥಾಪಿಸಲು ಸಹಾಯಮಾಡುವುದು ಮತ್ತು ಹಾಸ್ಪಿಟಲ್ ಲಿಯೆಸಾನ್ ಕಮಿಟಿಗಳಿಗಾಗಿ ವ್ಯವಸ್ಥೆಗಳನ್ನು ಮಾಡುವುದು ಇದರ ಉದ್ದೇಶವಾಗಿತ್ತು. ಮೊದಲಾಗಿ ಫಿಲಿಪ್ಪೀನ್ಸ್ನ ನಾಲ್ಕು ಮುಖ್ಯ ನಗರಗಳಲ್ಲಿ ಈ ಕಮಿಟಿಗಳನ್ನು ಏರ್ಪಡಿಸಲಾಯಿತು.” ರಕ್ತದ ಕುರಿತಾದ ನಮ್ಮ ಕ್ರೈಸ್ತ ನಿಲುವಿನೊಂದಿಗೆ ಸಹಕರಿಸಲು ಸಿದ್ಧರಿರುವ ವೈದ್ಯರನ್ನು ಹುಡುಕಲು ಈ ಕಮಿಟಿಗಳು ಸತತ ಪ್ರಯತ್ನವನ್ನು ಮಾಡಿದವು. ರಕ್ತದ ವಿಷಯವನ್ನು ಒಳಗೊಂಡ ಸಮಸ್ಯೆಗಳು ಉಂಟಾದಾಗ ಇವರು ಸಹೋದರರಿಗೆ ಸಹಾಯವನ್ನೂ ಮಾಡುತ್ತಿದ್ದರು.
ಬಾಗೀಓ ನಗರದ ಹಾಸ್ಪಿಟಲ್ ಲಿಯೆಸಾನ್ ಕಮಿಟಿಯ ಸದಸ್ಯನಾಗಿ ಸೇವೆಮಾಡಲು ರೆಮೀಕ್ಯೋ ಎಂಬವರನ್ನು ಆಯ್ಕೆಮಾಡಲಾಯಿತು. ಸಮಯಾನಂತರ, ಈ ಕಮಿಟಿಯು ಸಲ್ಲಿಸುವ ಸೇವೆಯ ಪರಿಣಾಮವನ್ನು ವೈದ್ಯರು ಗಮನಿಸತೊಡಗಿದರು. ರಕ್ತವನ್ನು ನಿರಾಕರಿಸುವ ಸಾಕ್ಷಿ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ವಿಧದ ಕುರಿತು ತಿಳಿದುಕೊಳ್ಳಲು, ಅನೇಕ ವೈದ್ಯರು ಹಾಸ್ಪಿಟಲ್ ಲಿಯೆಸಾನ್ ಕಮಿಟಿಗೆ ಭೇಟಿನೀಡಿದ ಒಂದು ಸಂದರ್ಭವನ್ನು ರೆಮೀಕ್ಯೋ ಜ್ಞಾಪಿಸಿಕೊಳ್ಳುತ್ತಾರೆ. ರೆಮೀಕ್ಯೋ ಹೇಳುವುದು: “ವೈದ್ಯರು ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಆ ಪ್ರಶ್ನೆಗಳು ಬಹಳ ತಾಂತ್ರಿಕವಾಗಿದ್ದ ಕಾರಣ ನಾನು ಸ್ತಬ್ಧನಾದೆ.” ಈ ಪಂಥಾಹ್ವಾನವನ್ನು ನಿಭಾಯಿಸಲು ಸಾಧ್ಯವಾಗುವಂತೆ ಅವರು ಯೆಹೋವನಲ್ಲಿ ಸಹಾಯಕ್ಕಾಗಿ ಪ್ರಾರ್ಥಿಸಿದರು. ರೆಮೀಕ್ಯೋ ಮುಂದುವರಿಸಿದ್ದು: “ಪ್ರತಿಯೊಂದು ಪ್ರಶ್ನೆಯ ನಂತರ, ಇತರ ವೈದ್ಯರು ತಮ್ಮ ಕೈಗಳನ್ನೆತ್ತಿ, ತದ್ರೀತಿಯ ಸಂದರ್ಭವು ತಮಗೆ ಎದುರಾದಾಗ ತಾವದನ್ನು ಹೇಗೆ ನಿಭಾಯಿಸಿದೆವು ಎಂಬುದನ್ನು ತಿಳಿಸಿದರು.” ಈ ಸಹಾಯಕ್ಕಾಗಿ ರೆಮೀಕ್ಯೋ ಬಹಳ ಸಂತೋಷಪಟ್ಟರು. ಈ ಪ್ರಶ್ನೋತ್ತರ ಚರ್ಚೆಯು ಎರಡು ತಾಸುಗಳವರೆಗೆ ಮುಂದುವರಿಯಿತು.
ಈ ದೇಶದಾದ್ಯಂತ ಈಗ 21 ಕಮಿಟಿಗಳಿವೆ ಮತ್ತು ಇದರಲ್ಲಿ ಒಟ್ಟು 77 ಸಹೋದರರು ಸೇವೆಸಲ್ಲಿಸುತ್ತಿದ್ದಾರೆ. ಒಬ್ಬ ಸಾಕ್ಷಿಯೂ ವೈದ್ಯರೂ ಆಗಿದ್ದ ಡ್ಯಾನೀಲೋ ಎಂಬವರು ಹೇಳುವುದು: “ತಮ್ಮ ಸಾಕ್ಷಿ ರೋಗಿಗಳು, ಅವರ ಕಡೆಗೆ ಪ್ರೀತಿಪೂರ್ವಕ ಕಾಳಜಿವಹಿಸುವ ಒಂದು ಸಂಸ್ಥಾಪನೆಯಿಂದ ಬೆಂಬಲಿಸಲ್ಪಟ್ಟಿದ್ದಾರೆ ಎಂಬುದನ್ನು ವೈದ್ಯರು ಗ್ರಹಿಸುತ್ತಾರೆ.” ರಕ್ತಪೂರಣವಿಲ್ಲದೆ ಸಹೋದರನೊಬ್ಬನಿಗೆ ಶಸ್ತ್ರಚಿಕಿತ್ಸೆಯನ್ನು ನೀಡಲು ಒಬ್ಬ ವೈದ್ಯನು ಆರಂಭದಲ್ಲಿ ಹಿಂಜರಿದನು. ಹಾಗಿದ್ದರೂ, ಈ ಸಹೋದರನು ತನ್ನ ನಿಲುವಿನಲ್ಲಿ ದೃಢವಾಗಿದ್ದನು. ಈ ಕಾರಣದಿಂದ, ರಕ್ತರಹಿತ ಶಸ್ತ್ರಚಿಕಿತ್ಸೆಯು ನಡಿಸಲ್ಪಟ್ಟಿತು ಮತ್ತು ಅದು ಯಶಸ್ವಿಕರವಾಗಿತ್ತು. ಫಿಲಿಪ್ಪೀನ್ಸ್ ಬ್ರಾಂಚ್ನ ಹಾಸ್ಪಿಟಲ್ ಇನ್ಫರ್ಮೇಷನ್ ಸರ್ವಿಸಸ್ ವರದಿಸುವುದು: “ಈ ಸಹೋದರನು ಗುಣಮುಖವಾದದ್ದನ್ನು ನೋಡಿ, ಆ ವೈದ್ಯನು ಆಶ್ಚರ್ಯಚಕಿತನಾದನು. ಅವನಂದದ್ದು: ‘ಇಲ್ಲಿ ಸಂಭವಿಸಿದ ಸಂಗತಿಯ ಆಧಾರದ ಮೇಲೆ, ಇನ್ನು ಮುಂದೆ ನಿಮ್ಮ ಸದಸ್ಯರಲ್ಲಿ ಯಾರಿಗಾದರೂ ಈ ರೀತಿಯ ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾದಲ್ಲಿ ನಾನದನ್ನು ಮಾಡಲು ಸಂತೋಷಪಡುವೆನು.’”