ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತುಂಬ ಆಸಕ್ತಿಕರವಾದ ಒಂದು ದಿನಚರಿ ಪುಸ್ತಕ

ತುಂಬ ಆಸಕ್ತಿಕರವಾದ ಒಂದು ದಿನಚರಿ ಪುಸ್ತಕ

ತುಂಬ ಆಸಕ್ತಿಕರವಾದ ಒಂದು ದಿನಚರಿ ಪುಸ್ತಕ

ಪರಿಶೋಧಕ ರಿಚರ್ಡ್‌ ಇ. ಬರ್ಡ್‌ ಎಂಬವರು 1928ರಿಂದ 1956ರ ವರೆಗೆ ಐದು ಧ್ರುವಪ್ರದೇಶಗಳ ಕಾರ್ಯಯಾತ್ರೆಗಳನ್ನು ನಡೆಸಿದರು. ಒಂದು ವೈಯಕ್ತಿಕ ದಾಖಲೆಯನ್ನು ಮತ್ತು ನಿಷ್ಕೃಷ್ಟವಾದ ದಿನಚರಿ ಪುಸ್ತಕಗಳನ್ನಿಡುವ ಮೂಲಕ ಅವರು ಹಾಗೂ ಅವರ ತಂಡದವರು ಗಾಳಿಯ ಚಲನೆಯನ್ನು ನಿರ್ಧರಿಸಲು, ಭೂಪಟಗಳನ್ನು ತಯಾರಿಸಲು ಮತ್ತು ದಕ್ಷಿಣ ಧ್ರುವ ಭೂಖಂಡದ ಕುರಿತು ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಲು ಶಕ್ತರಾದರು.

ಬರ್ಡ್‌ರವರ ಕಾರ್ಯಯಾತ್ರೆಗಳು, ದಿನಚರಿ ಪುಸ್ತಕವನ್ನಿಡುವುದರ ಮೌಲ್ಯವನ್ನು ದೃಷ್ಟಾಂತಿಸುತ್ತವೆ. ಸಮುದ್ರ ಅಥವಾ ವಿಮಾನ ಪ್ರಯಾಣದ ಸವಿವರಗಳ ಒಂದು ದಾಖಲೆಯನ್ನು ದಿನಚರಿ ಪುಸ್ತಕದಲ್ಲಿ ಸಂಗ್ರಹಿಸಿಡಲಾಗುವುದು. ಆ ಸಂದರ್ಭದಲ್ಲಿ ಏನು ನಡೆಯಿತೆಂಬುದನ್ನು ಪರಿಶೀಲಿಸಲು ಅಥವಾ ಮುಂದಿನ ಪ್ರಯಾಣಗಳಿಗೆ ಉಪಯುಕ್ತಕರವಾದ ಮಾಹಿತಿಯನ್ನು ವಿಶ್ಲೇಷಿಸಲು ಈ ಮಾಹಿತಿಯನ್ನು ಉಪಯೋಗಿಸಸಾಧ್ಯವಿದೆ.

ನೋಹನ ದಿನಗಳ ಜಲಪ್ರಳಯದ ಬಗ್ಗೆ ತುಂಬ ಆಸಕ್ತಿಕರವಾದ ಒಂದು ವಿವರವನ್ನು ಶಾಸ್ತ್ರವಚನಗಳು ಒದಗಿಸುತ್ತವೆ. ಆ ಭೌಗೋಳಿಕ ಜಲಪ್ರಳಯದ ನೀರು ಒಂದು ವರುಷಕ್ಕಿಂತಲೂ ಹೆಚ್ಚು ಕಾಲಾವಧಿಯ ವರೆಗೆ ಉಳಿಯಿತು. ಜಲಪ್ರಳಯಕ್ಕೆ ಪೂರ್ವತಯಾರಿಯೋಪಾದಿ, ನೋಹ, ಅವನ ಹೆಂಡತಿ, ಮೂವರು ಗಂಡುಮಕ್ಕಳು, ಮತ್ತು ಅವರ ಹೆಂಡತಿಯರು, ಒಂದು ತೇಲು ಪೆಟ್ಟಿಗೆಯನ್ನು ಅಂದರೆ ಸುಮಾರು 40,000 ಘನ ಮೀಟರ್‌ ಪರಿಮಾಣದ ಬೃಹದಾಕಾರದ ನಾವೆಯನ್ನು ಕಟ್ಟಲು 50 ಅಥವಾ 60 ವರುಷಗಳನ್ನು ವಿನಿಯೋಗಿಸಿದರು. ಈ ನಾವೆಯ ಉದ್ದೇಶವೇನಾಗಿತ್ತು? ಕೆಲವು ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ಜಲಪ್ರಳಯದಿಂದ ಪಾರುಮಾಡುವುದೇ ಇದರ ಉದ್ದೇಶವಾಗಿತ್ತು.​—ಆದಿಕಾಂಡ 7:​1-3.

ಜಲಪ್ರಳಯವು ಆರಂಭಗೊಂಡಂದಿನಿಂದ ನೋಹನೂ ಅವನ ಕುಟುಂಬವೂ ನಾವೆಯಿಂದ ಹೊರಬರುವವರೆಗೂ ಏನು ಸಂಭವಿಸಿತೋ ಆ ಎಲ್ಲಾ ವಿಷಯಗಳನ್ನು ಒಳಗೊಂಡ ನೋಹನ ದಿನಚರಿ ಪುಸ್ತಕವೆಂದು ಕರೆಯಲ್ಪಡುವ ದಾಖಲೆಯು ಬೈಬಲಿನ ಆದಿಕಾಂಡ ಪುಸ್ತಕದಲ್ಲಿದೆ. ಇಂದಿರುವ ನಮಗೆ ಇದರಲ್ಲಿ ಮಹತ್ವಪೂರ್ಣವಾದ ಯಾವ ವಿಷಯವಾದರೂ ಒಳಗೊಂಡಿದೆಯೇ?