ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿತ್ಯಜೀವವನ್ನು ಆಯ್ಕೆಮಾಡಿರಿ

ನಿತ್ಯಜೀವವನ್ನು ಆಯ್ಕೆಮಾಡಿರಿ

ನಿತ್ಯಜೀವವನ್ನು ಆಯ್ಕೆಮಾಡಿರಿ

ಅನೇಕರಿಗೆ ಹಿಂದೆಂದೂ ಇಷ್ಟೊಂದು ಆಯ್ಕೆಗಳಿರಲಿಲ್ಲ. ಉದಾಹರಣೆಗೆ, ನಾವು ಧರಿಸುವ ಬಟ್ಟೆಗಳು, ಉಣ್ಣುವ ಊಟ, ಎಲ್ಲಿ ಕೆಲಸಮಾಡಲು ಮತ್ತು ಜೀವಿಸಲು ಬಯಸುತ್ತೇವೆಂಬ ವಿಷಯ ಇವೆಲ್ಲವೂ ಅನೇಕವೇಳೆ ನಮ್ಮ ಆಯ್ಕೆಯ ಮೇಲೆ ಹೊಂದಿಕೊಂಡಿವೆ. ಲೋಕದ ಅನೇಕ ಭಾಗಗಳಲ್ಲಿ, ತಮ್ಮ ವಿವಾಹ ಸಂಗಾತಿಯನ್ನು ಆಯ್ಕೆಮಾಡುವುದು ಸಹ ಸಾಮಾನ್ಯ ವಿಷಯವಾಗಿದೆ. ಆದರೆ, ಎಲ್ಲಾ ಆಯ್ಕೆಗಳಿಗೆ ಮಿಗಿಲಾದ ಒಂದು ಆಯ್ಕೆಯನ್ನು ಬೈಬಲ್‌ ಮಾನವಕುಲದ ಮುಂದಿಡುತ್ತದೆ.

ಬೈಬಲ್‌ ತಿಳಿಸುವುದು: “ಧರ್ಮನಿರತನಿಗೆ ಜೀವ, ಅಧರ್ಮಾಸಕ್ತನಿಗೆ ಮರಣ.” (ಜ್ಞಾನೋಕ್ತಿ 11:19) ಯೇಸು ಕ್ರಿಸ್ತನು ತಿಳಿಸಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”​—ಯೋಹಾನ 17:3.

ಹೌದು, ನಿತ್ಯಜೀವಕ್ಕೆ ನಡೆಸುವ ಮಾರ್ಗವನ್ನು ಆಯ್ಕೆಮಾಡುವ ಸಂದರ್ಭವನ್ನು ನಮ್ಮ ಸೃಷ್ಟಿಕರ್ತನು ನಮ್ಮೆಲ್ಲರ ಮುಂದಿಟ್ಟಿದ್ದಾನೆ! ನಿತ್ಯಜೀವವನ್ನು ಪಡೆಯಬೇಕಾದರೆ ನಾವೇನು ಮಾಡಬೇಕು?

ಬೈಬಲಿಗನುಸಾರ, “ಧರ್ಮಮಾರ್ಗದಿಂದ ಜೀವಲಾಭ”ವಿದೆ. (ಜ್ಞಾನೋಕ್ತಿ 12:28) ನಿತ್ಯಜೀವದ ಮಾರ್ಗದಲ್ಲಿರುವ ನೀತಿವಂತರಲ್ಲಿ ನಾವೂ ಒಬ್ಬರಾಗಿರಸಾಧ್ಯವಿದೆ. ಹೇಗೆ? ನಮ್ಮ ಜೀವಿತವು ದೇವರ ಚಿತ್ತ ಮತ್ತು ಆಜ್ಞೆಗಳಿಗೆ ಹೊಂದಿಕೆಯಲ್ಲಿದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕವೇ. (ಮತ್ತಾಯ 7:​13, 14) ಆದುದರಿಂದ ನಾವು ಸರಿಯಾದ ಆಯ್ಕೆಯನ್ನು ಮಾಡಿ, ದೇವರ ಉಡುಗೊರೆಯಾದ ನಿತ್ಯಜೀವವನ್ನು ಪಡೆದುಕೊಳ್ಳೋಣ.​—ರೋಮಾಪುರ 6:​23.