“ಹೆದರಬೇಡಿರಿ, ಕಳವಳಗೊಳ್ಳಬೇಡಿರಿ”
“ಹೆದರಬೇಡಿರಿ, ಕಳವಳಗೊಳ್ಳಬೇಡಿರಿ”
“ಹೆದರಬೇಡಿರಿ, ಕಳವಳಗೊಳ್ಳಬೇಡಿರಿ. . . . ಯೆಹೋವನು ನಿಮ್ಮ ಸಂಗಡ ಇರುವನು.”—2 ಪೂರ್ವಕಾಲವೃತ್ತಾಂತ 20:17.
1. ಭಯೋತ್ಪಾದನೆಯು ಜನರ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ, ಮತ್ತು ಅವರ ಭಯವನ್ನು ಅರ್ಥಮಾಡಿಕೊಳ್ಳಬಹುದು ಏಕೆ?
ಭಯೋತ್ಪಾದನೆ! ಈ ಪದದ ಉಪಯೋಗವೇ ನಮ್ಮಲ್ಲಿ ಭಯವನ್ನು ಉಂಟುಮಾಡುತ್ತದೆ, ಮತ್ತು ಅಭದ್ರತೆ ಹಾಗೂ ನಿಸ್ಸಹಾಯಕತೆಯ ಭಾವನೆಗಳನ್ನು ಮೂಡಿಸುತ್ತದೆ. ಇದು ಭೀತಿ, ದುಃಖ ಹಾಗೂ ಕೋಪದ ಮಿಶ್ರ ಭಾವನೆಗಳನ್ನು ಬಡಿದೆಬ್ಬಿಸುತ್ತದೆ. ಮತ್ತು ಮುಂದೆ ಅನೇಕ ವರ್ಷಗಳ ವರೆಗೆ ತಮ್ಮನ್ನು ಯಾವುದು ಕಾಡಿಸುತ್ತದೆಂದು ಅನೇಕರು ಹೆದರುತ್ತಾರೋ ಅದನ್ನು ವರ್ಣಿಸುವಂಥ ಪದವು ಇದಾಗಿದೆ. ಕೆಲವು ದೇಶಗಳು ಅನೇಕ ವರ್ಷಗಳಿಂದ ವಿಭಿನ್ನ ರೀತಿಯ ಭಯೋತ್ಪಾದನೆಯನ್ನು ಇಲ್ಲವಾಗಿಸಲು ಶತಪ್ರಯತ್ನ ಮಾಡುತ್ತಿವೆಯಾದರೂ, ಇದರಲ್ಲಿ ಸಂಪೂರ್ಣವಾಗಿ ಯಶಸ್ಸನ್ನು ಪಡೆದಿರುವುದಿಲ್ಲ ಎಂಬ ವಾಸ್ತವಾಂಶವು ತಾನೇ ಇಂಥ ಭಯಕ್ಕೆ ಆಧಾರವನ್ನು ನೀಡುತ್ತದೆ.
2. ಭಯೋತ್ಪಾದನೆಯ ಸಮಸ್ಯೆಗೆ ಯೆಹೋವನ ಸಾಕ್ಷಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ, ಮತ್ತು ಇದು ಯಾವ ಪ್ರಶ್ನೆಗಳಿಗೆ ನಡೆಸುತ್ತದೆ?
2 ಆದರೂ, ನಿರೀಕ್ಷೆಗೆ ನಿಜವಾದ ಕಾರಣವಿದೆ. ಭೂಮಿಯ 234 ದೇಶಗಳಲ್ಲಿ ಮತ್ತು ಟೆರಿಟೊರಿಗಳಲ್ಲಿ ಕ್ರಿಯಾಶೀಲರಾಗಿ ಸಾರುತ್ತಿರುವ ಯೆಹೋವನ ಸಾಕ್ಷಿಗಳು ಆಶಾವಾದಿಗಳಾಗಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಭಯೋತ್ಪಾದನೆಯನ್ನು ಎಂದೂ ನಿರ್ಮೂಲಮಾಡಸಾಧ್ಯವಿಲ್ಲ ಎಂದು ಭಯಪಡುವುದಕ್ಕೆ ಬದಲಾಗಿ, ಅದು ಅತಿ ಬೇಗನೆ ಖಂಡಿತವಾಗಿಯೂ ನಿರ್ಮೂಲವಾಗುವುದು ಎಂಬ ದೃಢಭರವಸೆ ಅವರಿಗಿದೆ. ಇದೇ ರೀತಿಯ ಆಶಾವಾದವನ್ನು ಹೊಂದುವುದು ವಾಸ್ತವಿಕವಾದದ್ದಾಗಿದೆಯೋ? ಲೋಕವನ್ನು ಈ ಉಪದ್ರವದಿಂದ ಮುಕ್ತಗೊಳಿಸುವುದರಲ್ಲಿ ಯಾರು ಸಫಲರಾಗಸಾಧ್ಯವಿದೆ, ಮತ್ತು ಇದು ಹೇಗೆ ಸಂಭವಿಸಬಲ್ಲದು? ಬಹುಶಃ ಒಂದಲ್ಲ
ಒಂದು ರೀತಿಯ ಹಿಂಸಾಚಾರವು ನಮ್ಮೆಲ್ಲರ ಮೇಲೂ ಪರಿಣಾಮ ಬೀರಿರುವುದರಿಂದ, ಅಂಥ ಆಶಾವಾದಕ್ಕೆ ಆಧಾರವೇನು ಎಂಬುದನ್ನು ಪರೀಕ್ಷಿಸುವುದು ಸೂಕ್ತವಾದದ್ದಾಗಿರುವುದು.3. ಯಾವ ಕಾರಣಗಳಿಗಾಗಿ ಭಯವಿದೆ, ಮತ್ತು ನಮ್ಮ ಸಮಯದ ಕುರಿತು ಏನನ್ನು ಮುಂತಿಳಿಸಲಾಗಿದೆ?
3 ಇಂದು ಜನರು ಬೇರೆ ಬೇರೆ ಕಾರಣಗಳಿಂದಾಗಿ ಹೆದರಿದ್ದಾರೆ ಮತ್ತು ಕಳವಳಗೊಂಡಿದ್ದಾರೆ. ವೃದ್ಧಾಪ್ಯದ ಕಾರಣದಿಂದ ಸ್ವತಃ ತಮ್ಮನ್ನು ಪರಾಮರಿಸಿಕೊಳ್ಳಲು ಅಶಕ್ತರಾಗಿರುವ, ಗುಣಪಡಿಸಲಾಗದಂಥ ರೋಗಗಳಿಂದಾಗಿ ಕ್ಷಯಿಸುತ್ತಿರುವ ವ್ಯಕ್ತಿಗಳು, ಮತ್ತು ಜೀವನಾವಶ್ಯಕತೆಗಳನ್ನು ಪೂರೈಸಲು ಆರ್ಥಿಕವಾಗಿ ಹೋರಾಡುತ್ತಿರುವ ಕುಟುಂಬಗಳ ಕುರಿತು ತುಸು ಆಲೋಚಿಸಿರಿ. ಅಷ್ಟೇಕೆ, ಜೀವಿತದ ಅನಿಶ್ಚಿತತೆಯ ಕುರಿತಾಗಿಯೇ ಸ್ವಲ್ಪ ಯೋಚಿಸಿರಿ! ಅಪಘಾತ ಅಥವಾ ವಿಪತ್ತಿನಿಂದ ಅನಿರೀಕ್ಷಿತ ಮರಣವು ಸದಾ ಹೊಂಚುಹಾಕುತ್ತಿದ್ದು, ನಾವು ತುಂಬ ಪ್ರೀತಿಸುವಂಥ ಎಲ್ಲದ್ದಕ್ಕೂ ಒಂದು ಅಂತ್ಯವನ್ನು ತರಲು ಸಿದ್ಧವಾಗಿರುವಂತೆ ತೋರಬಹುದು. ಅಂಥ ಭಯ ಹಾಗೂ ಚಿಂತೆ, ಮತ್ತು ಅದರೊಂದಿಗೆ ಅನೇಕಾನೇಕ ವೈಯಕ್ತಿಕ ಸಂಘರ್ಷಗಳು ಹಾಗೂ ಆಶಾಭಂಗಗಳು, ನಮ್ಮ ಸಮಯಗಳನ್ನು ಅಪೊಸ್ತಲ ಪೌಲನು ವರ್ಣಿಸಿದ ವಿಷಯಗಳಿಗೆ ಅನುರೂಪವಾಗುವಂತೆ ಮಾಡಿವೆ: “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ . . . ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ” ಆಗಿರುವರು.—2 ತಿಮೊಥೆಯ 3:1-3.
4. ಎರಡನೆಯ ತಿಮೊಥೆಯ 3:1-3ರಲ್ಲಿ ಕೊಡಲ್ಪಟ್ಟಿರುವ ಕರಾಳ ಚಿತ್ರಣಕ್ಕೆ ಯಾವ ಸಕಾರಾತ್ಮಕ ಅಂಶವಿದೆ?
4 ಈ ಶಾಸ್ತ್ರವಚನವು ಒಂದು ಕರಾಳ ಚಿತ್ರಣವನ್ನು ವರ್ಣಿಸುತ್ತದಾದರೂ, ಇದು ನಿರೀಕ್ಷೆಯ ಕಡೆಗೆ ಕೈತೋರಿಸುತ್ತದೆ. ಈ ಕಠಿನ ಕಾಲಗಳು ಸೈತಾನನ ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಅಸ್ತಿತ್ವದಲ್ಲಿರುವವು ಎಂಬುದನ್ನು ಗಮನಿಸಿರಿ. ಇದು, ಬಿಡುಗಡೆಯು ಸಮೀಪವಿದೆ ಮತ್ತು ಅತಿ ಬೇಗನೆ ದುಷ್ಟ ಲೋಕ ವ್ಯವಸ್ಥೆಯು ತೆಗೆದುಹಾಕಲ್ಪಟ್ಟು, ಯೇಸು ತನ್ನ ಹಿಂಬಾಲಕರು ಯಾವುದಕ್ಕಾಗಿ ಪ್ರಾರ್ಥಿಸುವಂತೆ ಕಲಿಸಿದನೋ ಆ ದೇವರ ಪರಿಪೂರ್ಣ ರಾಜ್ಯದ ಆಳಿಕೆಯು ಅದರ ಸ್ಥಾನದಲ್ಲಿ ಬರಲಿದೆ ಎಂಬುದನ್ನು ಅರ್ಥೈಸುತ್ತದೆ. (ಮತ್ತಾಯ 6:9, 10) ಆ ರಾಜ್ಯವು ದೇವರ ಸ್ವರ್ಗೀಯ ಸರಕಾರವಾಗಿದ್ದು, “ಅದು ಎಂದಿಗೂ ಅಳಿಯದು” ಮತ್ತು ಅದು “[ಮಾನವ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು” ಎಂದು ಪ್ರವಾದಿಯಾದ ದಾನಿಯೇಲನು ಹೇಳುತ್ತಾನೆ.—ದಾನಿಯೇಲ 2:44.
ಭಯೋತ್ಪಾದನೆಗೆ ಪ್ರತಿಯಾಗಿ ಕ್ರೈಸ್ತ ತಾಟಸ್ಥ್ಯ
5. ಇತ್ತೀಚೆಗೆ ದೇಶಗಳು ಭಯೋತ್ಪಾದನೆಯ ಬೆದರಿಕೆಗೆ ಹೇಗೆ ಪ್ರತಿಕ್ರಿಯಿಸಿವೆ?
5 ದಶಕಗಳಿಂದಲೂ ಭಯೋತ್ಪಾದನೆಯು ಸಾವಿರಾರು ಜನರನ್ನು ಬಲಿತೆಗೆದುಕೊಂಡಿದೆ. ಇಸವಿ 2001ರ, ಸೆಪ್ಟೆಂಬರ್ 11ರಂದು ನ್ಯೂ ಯಾರ್ಕ್ ಸಿಟಿಯಲ್ಲಿ ಮತ್ತು ವಾಷಿಂಗ್‌ಟನ್ ಡಿ.ಸಿ.ಯಲ್ಲಿ ನಡೆದ ಆಕ್ರಮಣಗಳ ಬಳಿಕ, ಭಯೋತ್ಪಾದನೆಯ ಈ ಅಪಾಯದ ಕುರಿತಾದ ಲೋಕವ್ಯಾಪಕ ಅರಿವು ಗಮನಾರ್ಹವಾಗಿ ಅಧಿಕಗೊಂಡಿತು. ಭಯೋತ್ಪಾದನೆಯ ಪರಿಮಾಣ ಹಾಗೂ ವ್ಯಾಪ್ತಿಯನ್ನು ಗ್ರಹಿಸಿದ ಭೂಮಿಯಾದ್ಯಂತ ಇರುವ ಅನೇಕ ದೇಶಗಳು, ಅದರ ವಿರುದ್ಧ ಹೋರಾಡುವುದಕ್ಕಾಗಿ ಆ ಕೂಡಲೆ ಒಟ್ಟುಗೂಡಿದವು. ಉದಾಹರಣೆಗೆ, ವಾರ್ತಾ ಮಾಧ್ಯಮದ ವರದಿಗಳಿಗನುಸಾರ, 2001ರ ಡಿಸೆಂಬರ್ 4ರಂದು “55 ಐರೋಪ್ಯ, ಉತ್ತರ ಅಮೆರಿಕ ಹಾಗೂ ಮಧ್ಯ ಏಷ್ಯಾದ ದೇಶಗಳಿಂದ ಬಂದ ವಿದೇಶೀ ಮಂತ್ರಿಗಳು ಒಂದು ಯೋಜನೆಯನ್ನು ಐಕ್ಯಭಾವದಿಂದ ಹೊಂದಿಸಿಕೊಂಡರು.” ಈ ಯೋಜನೆಯು ಅವರ ಪ್ರಯತ್ನಗಳನ್ನು ಸುಸಂಘಟಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿತ್ತು. ಅಮೆರಿಕದ ಉಚ್ಚ ಅಧಿಕಾರಿಯೊಬ್ಬನು ಈ ಕ್ರಮವನ್ನು, ಭಯೋತ್ಪಾದನೆಯ ವಿರುದ್ಧ ಪ್ರಯತ್ನವನ್ನು ಕೈಗೊಳ್ಳಲು “ಹೊಸ ಪ್ರಮಾಣದಲ್ಲಿ ಶಕ್ತಿಯನ್ನು” ಕೊಡುವುದೆಂದು ಹೊಗಳಿದನು. ಆಗ ಇದ್ದಕ್ಕಿದ್ದಂತೆ ಕೋಟಿಗಟ್ಟಲೆ ಜನರು, “ಒಂದು ಐತಿಹಾಸಿಕ ಕದನದ ಆರಂಭ” ಎಂದು ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಸಿನ್ ಯಾವುದನ್ನು ಕರೆಯುತ್ತದೋ ಅದರಲ್ಲಿ ಒಳಗೂಡಿದರು. ಅಂಥ ಪ್ರಯತ್ನಗಳು ಎಷ್ಟು ಸಫಲವಾಗುವವು ಎಂಬುದನ್ನು ಕಾದುನೋಡಬೇಕಾಗಿದೆ. ಆದರೂ, ಭಯೋತ್ಪಾದನೆಗೆ ವಿರುದ್ಧವಾಗಿ ನಡೆಸುವ ಅಂಥ ಹೋರಾಟದ ಪರಿಣಾಮಗಳು ಅನೇಕರಲ್ಲಿ ಭಯ ಹಾಗೂ ಚಿಂತೆಯ ಅನಿಸಿಕೆಗಳನ್ನು ಉಂಟುಮಾಡಿವೆ. ಯೆಹೋವನಲ್ಲಿ ಭರವಸೆಯಿಡುವವರಿಗಾದರೋ ಅಂಥ ಅನಿಸಿಕೆಗಳಿರುವುದಿಲ್ಲ.
6. (ಎ) ಕೆಲವೊಮ್ಮೆ ಯೆಹೋವನ ಸಾಕ್ಷಿಗಳಿಂದ ತೆಗೆದುಕೊಳ್ಳಲ್ಪಡುವ ಕ್ರೈಸ್ತ ತಾಟಸ್ಥ್ಯದ ನಿಲುವನ್ನು ಅಂಗೀಕರಿಸುವುದನ್ನು ಕೆಲವರು ಏಕೆ ಕಷ್ಟಕರವಾದದ್ದಾಗಿ ಕಂಡುಕೊಳ್ಳಬಹುದು? (ಬಿ) ರಾಜಕೀಯ ಚಟುವಟಿಕೆಯ ವಿಷಯದಲ್ಲಿ ಯೇಸು ತನ್ನ ಹಿಂಬಾಲಕರಿಗೆ ಯಾವ ಮಾದರಿಯನ್ನಿಟ್ಟನು?
6 ಯೆಹೋವನ ಸಾಕ್ಷಿಗಳು ತಮ್ಮ ರಾಜಕೀಯ ತಾಟಸ್ಥ್ಯಕ್ಕೆ ಸುಪ್ರಸಿದ್ಧರಾಗಿದ್ದಾರೆ. ಅವರ ಈ ನಿಲುವನ್ನು ಶಾಂತಿಯುತ ಸಮಯಗಳಲ್ಲಿ ಅಧಿಕಾಂಶ ಜನರು ಅಂಗೀಕರಿಸಲು ಸಿದ್ಧರಾಗಿದ್ದಾರಾದರೂ, ಯೋಹಾನ 15:19; 17:14-16; 18:36; ಯಾಕೋಬ 4:4) ಇದು ಅವರು ರಾಜಕೀಯ ಅಥವಾ ಸಾಮಾಜಿಕ ವಿಷಯಗಳಲ್ಲಿ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವುದನ್ನು ಕೇಳಿಕೊಳ್ಳುತ್ತದೆ. ಯೇಸು ತಾನೇ ಈ ವಿಷಯದಲ್ಲಿ ಯೋಗ್ಯವಾದ ಮಾದರಿಯನ್ನಿಟ್ಟನು. ಅವನಿಗಿದ್ದ ಪರಿಪೂರ್ಣ ವಿವೇಕ ಮತ್ತು ಅಸಾಮಾನ್ಯ ಸಾಮರ್ಥ್ಯಗಳನ್ನು ಪರಿಗಣಿಸುವಾಗ, ಅವನು ತನ್ನ ದಿನದ ಮಾನವ ಸ್ಥಿತಿಗತಿಗಳನ್ನು ಉತ್ತಮಗೊಳಿಸಸಾಧ್ಯವಿತ್ತು. ಆದರೂ, ಅವನು ರಾಜಕೀಯದಲ್ಲಿ ಒಳಗೂಡಲು ನಿರಾಕರಿಸಿದನು. ಅವನ ಭೂಶುಶ್ರೂಷೆಯ ಆರಂಭದಲ್ಲಿ, ಲೋಕದ ಎಲ್ಲಾ ರಾಜ್ಯಗಳ ಮೇಲಿನ ಅಧಿಕಾರವನ್ನು ನೀಡುವುದರ ಕುರಿತಾದ ಸೈತಾನನ ಪ್ರಸ್ತಾಪವನ್ನು ಅವನು ನಿರಾಕರಿಸಿದನು. ಸಮಯಾನಂತರ, ರಾಜಕೀಯ ಅಧಿಕಾರಕ್ಕಾಗಿ ಒತ್ತಾಯಪೂರ್ವಕವಾಗಿ ಮಾಡಲ್ಪಟ್ಟ ಆಯ್ಕೆಯನ್ನು ಸಹ ಅವನು ಖಡಾಖಂಡಿತವಾಗಿ ತಳ್ಳಿಹಾಕಿದನು.—ಮತ್ತಾಯ 4:8-10; ಯೋಹಾನ 6:14, 15.
ಅಸಾಮಾನ್ಯವಾದ ಸನ್ನಿವೇಶಗಳು ಏಳುವಾಗ ಇದರ ಕಡೆಗಿನ ಅವರ ಸಹಿಷ್ಣುತೆ ಕಡಿಮೆಯಾಗುತ್ತದೆ. ಅನೇಕವೇಳೆ ಯುದ್ಧದಿಂದ ಉಂಟುಮಾಡಲ್ಪಟ್ಟ ಭಯ ಹಾಗೂ ಅನಿಶ್ಚಿತತೆಯು, ರಾಷ್ಟ್ರೀಯತೆಯ ಬಲವಾದ ಭಾವಾತಿರೇಕವನ್ನು ಬಡಿದೆಬ್ಬಿಸುತ್ತದೆ. ಇದು, ಯಾರೇ ಆಗಲಿ ಜನಪ್ರಿಯ ರಾಷ್ಟ್ರೀಯ ಚಳುವಳಿಗಳನ್ನು ಬೆಂಬಲಿಸಲು ಏಕೆ ಹಿಂಜರಿಯುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದನ್ನು ಕೆಲವರಿಗೆ ಕಷ್ಟಕರವನ್ನಾಗಿ ಮಾಡಬಹುದು. ಹಾಗಿದ್ದರೂ, ‘ಲೋಕದ ಕಡೆಯವರಾಗಿರಬಾರದು’ ಎಂಬ ಯೇಸುವಿನ ಆಜ್ಞೆಗೆ ತಾವು ವಿಧೇಯರಾಗಬೇಕು ಎಂಬುದು ಸತ್ಯ ಕ್ರೈಸ್ತರಿಗೆ ತಿಳಿದಿದೆ. (7, 8. (ಎ) ಯೆಹೋವನ ಸಾಕ್ಷಿಗಳಿಂದ ತೋರಿಸಲ್ಪಡುವ ರಾಜಕೀಯ ತಾಟಸ್ಥ್ಯವು ಏನನ್ನು ಅರ್ಥೈಸುವುದಿಲ್ಲ, ಮತ್ತು ಏಕೆ? (ಬಿ) ಸರಕಾರಗಳ ವಿರುದ್ಧವಾದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ರೋಮಾಪುರ 13:1, 2 ಹೇಗೆ ನಿಷೇಧಿಸುತ್ತದೆ?
7 ಯೆಹೋವನ ಸಾಕ್ಷಿಗಳ ತಟಸ್ಥ ನಿಲುವನ್ನು, ಅವರು ಹಿಂಸಾತ್ಮಕ ಕೃತ್ಯಗಳನ್ನು ಬೆಂಬಲಿಸುತ್ತಾರೆ ಅಥವಾ ಅಲಕ್ಷಿಸುತ್ತಾರೆ ಎಂದು ಅಪಾರ್ಥಮಾಡಿಕೊಳ್ಳಬಾರದು. ಏಕೆಂದರೆ ಅವರು ಹಾಗೆ ಮಾಡುವುದು, ‘ಪ್ರೀತಿಯ ಹಾಗೂ ಶಾಂತಿಯ ದೇವರ’ ಸೇವಕರು ತಾವೆಂದು ಅವರು ಹೇಳಿಕೊಳ್ಳುವುದಕ್ಕೆ ತದ್ವಿರುದ್ಧವಾಗಿರುವುದು. (2 ಕೊರಿಂಥ 13:11) ಹಿಂಸಾಚಾರದ ಕುರಿತು ಯೆಹೋವನಿಗೆ ಹೇಗನಿಸುತ್ತದೆ ಎಂಬುದು ಅವರಿಗೆ ತಿಳಿದಿದೆ. ಕೀರ್ತನೆಗಾರನು ಬರೆದುದು: “ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು [“ಹಿಂಸಾಚಾರಿಗಳನ್ನು,” NW] ದ್ವೇಷಿಸುತ್ತಾನೆ.” (ಕೀರ್ತನೆ 11:5) ಇದಲ್ಲದೆ ಯೇಸು ಅಪೊಸ್ತಲ ಪೇತ್ರನಿಗೆ ಏನು ಹೇಳಿದನೋ ಅದರ ಅರಿವೂ ಅವರಿಗಿದೆ: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.”—ಮತ್ತಾಯ 26:52.
8 ನಕಲಿ ಕ್ರೈಸ್ತರು ಅನೇಕವೇಳೆ “ಕತ್ತಿಯನ್ನು” ಅವಲಂಬಿಸಿದ್ದಾರೆ ಎಂದು ಇತಿಹಾಸವು ಸ್ಪಷ್ಟವಾಗಿ ತೋರಿಸುತ್ತದಾದರೂ, ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಅದು ಸತ್ಯವಾಗಿಲ್ಲ. ಅಂಥ ಎಲ್ಲಾ ಚಟುವಟಿಕೆಗಳಿಂದ ಅವರು ದೂರವಿರುತ್ತಾರೆ. ಸಾಕ್ಷಿಗಳು ರೋಮಾಪುರ 13:1, 2ರ ಆಜ್ಞೆಗೆ ನಂಬಿಗಸ್ತಿಕೆಯಿಂದ ವಿಧೇಯರಾಗುತ್ತಾರೆ: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ [ಸರಕಾರೀ ನಾಯಕರಿಗೆ] ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು. ಆದದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮಕವನ್ನು ಎದುರಿಸುತ್ತಾನೆ; ಎದುರಿಸುವವರು ಶಿಕ್ಷೆಗೊಳಗಾಗುವರು.”
9. ಯಾವ ಎರಡು ವಿಧಗಳಲ್ಲಿ ಯೆಹೋವನ ಸಾಕ್ಷಿಗಳು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಾರೆ?
9 ಆದರೂ, ಭಯೋತ್ಪಾದನೆಯು ತುಂಬ ಕೆಡುಕಿನ ಸಂಗತಿಯಾಗಿರುವುದರಿಂದ, ಅದನ್ನು ಕ್ರಿಯಾಶೀಲವಾಗಿ ಪ್ರತಿರೋಧಿಸಲು ಸಹಾಯಮಾಡಲಿಕ್ಕಾಗಿ ಯೆಹೋವನ ಸಾಕ್ಷಿಗಳು ಏನಾದರೂ ಮಾಡಬಾರದೋ? ಖಂಡಿತವಾಗಿಯೂ ಮಾಡಲೇಬೇಕು, ಮತ್ತು ಅವರು ಮಾಡುತ್ತಿದ್ದಾರೆ. ಮೊದಲನೆಯದಾಗಿ, ಅಂಥ ಯಾವುದೇ ಚಟುವಟಿಕೆಯಲ್ಲಿ ಅವರೆಂದೂ ಭಾಗವಹಿಸುವುದಿಲ್ಲ. ಎರಡನೆಯದಾಗಿ, ಯಾವ ಕ್ರೈಸ್ತ ಮೂಲತತ್ತ್ವಗಳನ್ನು ಪಾಲಿಸುವುದಾದರೆ ಎಲ್ಲಾ ರೀತಿಯ ಹಿಂಸಾಚಾರಗಳು ಸಂಪೂರ್ಣವಾಗಿ ಇಲ್ಲವಾಗುವವೋ ಅಂಥ ಮೂಲತತ್ತ್ವಗಳನ್ನು ಅವರು ಜನರಿಗೆ ಕಲಿಸುತ್ತಾರೆ. * ಕಳೆದ ವರ್ಷ, ಈ ಕ್ರೈಸ್ತ ಜೀವನ ರೀತಿಯನ್ನು ತಿಳಿದುಕೊಳ್ಳುವಂತೆ ಜನರಿಗೆ ಸಹಾಯಮಾಡುವುದರಲ್ಲಿ ಸಾಕ್ಷಿಗಳು 1,20,23,81,302 ತಾಸುಗಳನ್ನು ವ್ಯಯಿಸಿದರು. ಇದು ವ್ಯರ್ಥವಾದ ಕಾಲಹರಣವಾಗಿರಲಿಲ್ಲ, ಏಕೆಂದರೆ ಈ ಚಟುವಟಿಕೆಯ ಫಲಿತಾಂಶವಾಗಿ, 2,65,469 ವ್ಯಕ್ತಿಗಳು ಯೆಹೋವನ ಸಾಕ್ಷಿಗಳೋಪಾದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು ಮತ್ತು ಹೀಗೆ ಹಿಂಸಾಚಾರವನ್ನು ತಾವು ಸಂಪೂರ್ಣವಾಗಿ ತ್ಯಜಿಸುತ್ತೇವೆ ಎಂಬುದನ್ನು ಬಹಿರಂಗವಾಗಿ ತೋರಿಸಿದರು.
10. ಇಂದಿನ ಲೋಕದಲ್ಲಿ ಹಿಂಸಾಚಾರವನ್ನು ನಿರ್ಮೂಲನಮಾಡಲು ಯಾವ ಪ್ರತೀಕ್ಷೆಗಳಿವೆ?
10 ಇದಕ್ಕೆ ಕೂಡಿಸಿ, ಕೆಡುಕನ್ನು ಇಡೀ ಭೂಮಿಯಿಂದಲೇ ಇಲ್ಲವಾಗಿಸುವುದು ಕೇವಲ ತಮ್ಮ ಪ್ರಯತ್ನದಿಂದ ಮಾತ್ರವೇ ಸಾಧ್ಯವಿಲ್ಲವೆಂಬುದನ್ನು ಯೆಹೋವನ ಸಾಕ್ಷಿಗಳು ಮನಗಂಡಿದ್ದಾರೆ. ಆದುದರಿಂದಲೇ ಅವರು ಭರವಸಾರ್ಹನಾದ ಯೆಹೋವ ದೇವರ ಮೇಲೆ ತಮ್ಮ ಸಂಪೂರ್ಣ ಭರವಸೆಯನ್ನಿಡುತ್ತಾರೆ. (ಕೀರ್ತನೆ 83:18) ಮಾನವರು ಎಷ್ಟೇ ಯಥಾರ್ಥ ಪ್ರಯತ್ನಗಳನ್ನು ಮಾಡುವುದಾದರೂ, ಅವರು ಹಿಂಸಾಚಾರಕ್ಕೆ ಸಂಪೂರ್ಣ ಅಂತ್ಯವನ್ನು ತರಲಾರರು. ನಮ್ಮ ಸಮಯದ ಕುರಿತು ಅಂದರೆ “ಕಡೇ ದಿವಸಗಳ” ಕುರಿತು ಪ್ರೇರಿತ ಬೈಬಲ್ ಬರಹಗಾರನು ನಮ್ಮನ್ನು ಮುನ್ನೆಚ್ಚರಿಸುತ್ತಾ ಹೇಳುವುದು: “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:1, 13) ಈ ದೃಷ್ಟಿಕೋನದಿಂದ ನೋಡುವಾಗ, ಕೆಡುಕಿನ ವಿರುದ್ಧ ನಡೆಸುವ ಹೋರಾಟದಲ್ಲಿ ಜಯಗಳಿಸಲಿಕ್ಕಾಗಿರುವ ಮಾನವ ಪ್ರತೀಕ್ಷೆಗಳು ಅಷ್ಟೇನೂ ಆಶಾದಾಯಕವಾಗಿಲ್ಲ. ಆದರೆ ಈ ಹಿಂಸಾಚಾರವನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಇಲ್ಲವಾಗಿಸಲು ನಾವು ಯೆಹೋವನ ಮೇಲೆ ಆತುಕೊಳ್ಳಸಾಧ್ಯವಿದೆ.—ಕೀರ್ತನೆ 37:1, 2, 9-11; ಜ್ಞಾನೋಕ್ತಿ 24:19, 20; ಯೆಶಾಯ 60:18.
ಸನ್ನಿಹಿತ ಆಕ್ರಮಣದ ಎದುರಿನಲ್ಲಿ ನಿರ್ಭೀತರು
11. ಹಿಂಸಾಚಾರವನ್ನು ನಿರ್ಮೂಲನಮಾಡಲಿಕ್ಕಾಗಿ ಯೆಹೋವನು ಈಗಾಗಲೇ ಯಾವ ಸೂಕ್ತಕ್ರಮಗಳನ್ನು ಕೈಗೊಂಡಿದ್ದಾನೆ?
11 ಶಾಂತಿಯ ದೇವರು ಹಿಂಸಾಚಾರವನ್ನು ದ್ವೇಷಿಸುತ್ತಾನಾದ್ದರಿಂದ, ಅದರ ಮೂಲ ಕಾರಣಕರ್ತನಾಗಿರುವ ಪಿಶಾಚನಾದ ಸೈತಾನನನ್ನು ನಾಶಮಾಡಲು ಆತನು ಏಕೆ ಸೂಕ್ತಕ್ರಮಗಳನ್ನು ಕೈಗೊಂಡಿದ್ದಾನೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಸಾಧ್ಯವಿದೆ. ವಾಸ್ತವದಲ್ಲಿ, ಸಿಂಹಾಸನಾರೂಢನಾಗಿರುವ ದೇವರ ಹೊಸ ಅರಸನಾದ ಯೇಸು ಕ್ರಿಸ್ತನ, ಅಂದರೆ ಪ್ರಧಾನ ದೇವದೂತನಾಗಿದ್ದ ಮೀಕಾಯೇಲನ ಕೈಗಳಲ್ಲಿ ಸೈತಾನನು ಈಗಾಗಲೇ ಅವಮಾನಕರ ಅಪಜಯವನ್ನು ಅನುಭವಿಸುವಂತೆ ಆತನು ಮಾಡಿದ್ದಾನೆ. ಬೈಬಲು ಇದನ್ನು ಈ ರೀತಿ ವರ್ಣಿಸುತ್ತದೆ: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.”—ಪ್ರಕಟನೆ 12:7-9.
12, 13. (ಎ) ಇಸವಿ 1914 ಗಮನಾರ್ಹವಾದದ್ದಾಗಿದೆ ಏಕೆ? (ಬಿ) ದೇವರ ರಾಜ್ಯವನ್ನು ಯಾರು ಬೆಂಬಲಿಸುತ್ತಾರೋ ಅವರಿಗಾಗಿ ಯೆಹೆಜ್ಕೇಲನ ಪ್ರವಾದನೆಯು ಏನನ್ನು ಮುಂತಿಳಿಸುತ್ತದೆ?
12 ಪರಲೋಕದಲ್ಲಿ ಆ ಯುದ್ಧವು ನಡೆದ ಸಮಯವು 1914ನೇ ವರ್ಷವಾಗಿತ್ತೆಂದು ಸೂಚಿಸುವುದರಲ್ಲಿ, ಬೈಬಲ್ ಕಾಲಗಣನೆ ಹಾಗೂ ಲೋಕದ ಘಟನೆಗಳು ತಾಳೆಬೀಳುತ್ತವೆ. ಅಂದಿನಿಂದ, ಲೋಕದ ಪರಿಸ್ಥಿತಿಗಳು ಏಕಪ್ರಕಾರವಾಗಿ ಹದಗೆಟ್ಟಿವೆ. ಇದಕ್ಕೆ ಕಾರಣವೇನು ಎಂಬುದನ್ನು ವಿವರಿಸುತ್ತಾ ಪ್ರಕಟನೆ 12:12 ಹೇಳುವುದು: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”
13 ಪಿಶಾಚನ ರೌದ್ರವು ಪ್ರಥಮವಾಗಿ ದೇವರ ಅಭಿಷಿಕ್ತ ಆರಾಧಕರು ಹಾಗೂ ಅವರ “ಬೇರೆ ಕುರಿ” ಸಂಗಾತಿಗಳ ವಿರುದ್ಧ ವ್ಯಕ್ತಪಡಿಸಲ್ಪಡುತ್ತದೆ ಎಂಬುದು ಅರ್ಥಮಾಡಿಕೊಳ್ಳತಕ್ಕ ಸಂಗತಿಯಾಗಿದೆ. (ಯೋಹಾನ 10:16; ಪ್ರಕಟನೆ 12:17) ದೇವರ ಸ್ಥಾಪಿತ ರಾಜ್ಯವನ್ನು ಬೆಂಬಲಿಸುವ ಹಾಗೂ ಅದರಲ್ಲಿ ತಮ್ಮ ಭರವಸೆಯನ್ನಿಡುವವರೆಲ್ಲರ ವಿರುದ್ಧ ಪಿಶಾಚನು ತೀವ್ರವಾದ ಆಕ್ರಮಣವನ್ನು ಆರಂಭಿಸುವಾಗ, ಈ ವಿರೋಧವು ಅತಿ ಬೇಗನೆ ಅದರ ಪರಮಾವಧಿಗೇರುವುದು. ಯೆಹೆಜ್ಕೇಲ 38ನೆಯ ಅಧ್ಯಾಯದಲ್ಲಿ ಈ ನಿರ್ಧಾರಿತ ಆಕ್ರಮಣವನ್ನು, ‘ಮಾಗೋಗ್ ದೇಶದ ಗೋಗನ’ ಆಕ್ರಮಣವೆಂದು ಸೂಚಿಸಲಾಗಿದೆ.
14. ಗತ ಸಮಯಗಳಲ್ಲಿ ಯೆಹೋವನ ಸಾಕ್ಷಿಗಳು ಯಾವ ಸಂರಕ್ಷಣಾತ್ಮಕ ಪ್ರಯತ್ನಗಳಲ್ಲಿ ಆನಂದಿಸಿದ್ದಾರೆ, ಮತ್ತು ಇದು ಯಾವಾಗಲೂ ಹೀಗೆಯೇ ಇರುತ್ತದೋ?
14 ಸೈತಾನನು ಪರಲೋಕದಿಂದ ದೊಬ್ಬಲ್ಪಟ್ಟಂದಿನಿಂದ, ಪ್ರಕಟನೆ 12:15, 16ರಲ್ಲಿ ಸಾಂಕೇತಿಕ ಭಾಷೆಯಲ್ಲಿ ವರ್ಣಿಸಲ್ಪಟ್ಟಿರುವ ನಿರ್ದಿಷ್ಟ ರಾಜಕೀಯ ಗುಂಪುಗಳ ಪ್ರಯತ್ನಗಳ ಮೂಲಕ ಸೈತಾನನು ನಡೆಸಿರುವ ಆಕ್ರಮಣಗಳಿಂದ ದೇವಜನರು ಕೆಲವೊಮ್ಮೆ ಸಂರಕ್ಷಿಸಲ್ಪಟ್ಟಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಸೈತಾನನ ಅಂತಿಮ ಆಕ್ರಮಣದ ಸಮಯದಲ್ಲಿ, ಯಾರು ಯೆಹೋವನಲ್ಲಿ ಭರವಸೆಯಿಡುತ್ತಾರೋ ಅವರನ್ನು ಸಂರಕ್ಷಿಸಲಿಕ್ಕಾಗಿ ಯಾವುದೇ ಮಾನವ ನಿಯೋಗಗಳು ಸಹಾಯಕ್ಕೆ ಬರಲಾರವು ಎಂದು ಬೈಬಲ್ ಸೂಚಿಸುತ್ತದೆ. ಇದು ಕ್ರೈಸ್ತರು ಹೆದರುವಂತೆ ಅಥವಾ ಕಳವಳಪಡುವಂತೆ ಮಾಡಬೇಕೋ? ಖಂಡಿತವಾಗಿಯೂ ಇಲ್ಲ!
15, 16. (ಎ) ಯೆಹೋಷಾಫಾಟನ ದಿನಗಳಲ್ಲಿ ಯೆಹೋವನು ತನ್ನ ಜನರಿಗೆ ನುಡಿದ ಪುನರಾಶ್ವಾಸಕ ಮಾತುಗಳು, ಇಂದು ಕ್ರೈಸ್ತರಿಗೆ ಆಶಾವಾದಕ್ಕಾಗಿ ಯಾವ ಕಾರಣವನ್ನು ನೀಡುತ್ತವೆ? (ಬಿ) ಯೆಹೋಷಾಫಾಟನೂ ಅವನ ಜನರೂ ಇಂದಿನ ದೇವರ ಸೇವಕರಿಗಾಗಿ ಯಾವ ನಮೂನೆಯನ್ನಿಟ್ಟರು?
15 ದೇವರು ತನ್ನ ಪ್ರತಿನಿಧಿರೂಪದ ಜನಾಂಗವನ್ನು ಅರಸನಾದ ಯೆಹೋಷಾಫಾಟನ ದಿನದಲ್ಲಿ ಬೆಂಬಲಿಸಿದಷ್ಟೇ ಖಚಿತವಾಗಿ ಆತನು ತನ್ನ ಜನರನ್ನು ಬೆಂಬಲಿಸುವನು. ನಾವು ಓದುವುದು: “ಎಲ್ಲಾ ಯೆಹೂದ್ಯರೇ, ಯೆರೂಸಲೇಮಿನವರೇ, ಅರಸನಾದ 2 ಪೂರ್ವಕಾಲವೃತ್ತಾಂತ 20:15-17, NW.
ಯೆಹೋಷಾಫಾಟನೇ, ಯೆಹೋವನು ಹೇಳುವದನ್ನು ಕೇಳಿರಿ! ಈ ಮಹಾಸಮೂಹದ ನಿಮಿತ್ತವಾಗಿ ಕಳವಳಗೊಳ್ಳಬೇಡಿರಿ, ಹೆದರಬೇಡಿರಿ. ಯುದ್ಧವು ನಿಮ್ಮದಲ್ಲ, ದೇವರದೇ. . . . ಈ ಸಾರಿ ನೀವು ಯುದ್ಧಮಾಡುವದು ಅವಶ್ಯವಿಲ್ಲ. ಯೆಹೂದ್ಯರೇ, ಯೆರೂಸಲೇಮಿನವರೇ, ನಿಮ್ಮ ಸ್ಥಾನದಲ್ಲಿರಿ, ಸುಮ್ಮನೆ ನಿಂತುಕೊಳ್ಳಿರಿ ಮತ್ತು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿರಿ, ಕಳವಳಗೊಳ್ಳಬೇಡಿರಿ. ನಾಳೆ ಅವರೆದುರಿಗೆ ಹೊರಡಿರಿ, ಯೆಹೋವನು ನಿಮ್ಮ ಸಂಗಡ ಇರುವನು.”—16 ತಾವು ಹೋರಾಡುವ ಆವಶ್ಯಕತೆಯಿಲ್ಲ ಎಂಬ ಆಶ್ವಾಸನೆ ಯೆಹೂದದ ಜನರಿಗಿತ್ತು. ತದ್ರೀತಿಯಲ್ಲಿ, ದೇವಜನರು ಮಾಗೋಗ್ ದೇಶದ ಗೋಗನಿಂದ ಆಕ್ರಮಣಕ್ಕೊಳಗಾಗುವಾಗ, ಸ್ವರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವುದರಿಂದ ಅವರು ದೂರವಿರುವರು. ಅದಕ್ಕೆ ಬದಲಾಗಿ, ಅವರು “ಸುಮ್ಮನೆ ನಿಂತುಕೊಂಡು ಯೆಹೋವನು” ಅವರ ಪರವಾಗಿ “ನಡಿಸುವ ರಕ್ಷಣಾಕಾರ್ಯವನ್ನು” ನೋಡುವರು. ಸುಮ್ಮನೆ ನಿಂತುಕೊಳ್ಳುವುದು ಸಂಪೂರ್ಣ ನಿಷ್ಕ್ರಿಯೆಯನ್ನು ಸೂಚಿಸುವುದಿಲ್ಲ ಎಂಬುದಂತೂ ನಿಶ್ಚಯ. ಯೆಹೋಷಾಫಾಟನ ದಿನಗಳಲ್ಲಿದ್ದ ದೇವಜನರು ಸಹ ಸಂಪೂರ್ಣವಾಗಿ ನಿಷ್ಕ್ರಿಯರಾಗಿರಲಿಲ್ಲ. ನಾವು ಓದುವುದು: “ಆಗ ಯೆಹೋಷಾಫಾಟನು ನೆಲದ ಮಟ್ಟಿಗೂ ತಲೆಬಾಗಿಸಿದನು. ಎಲ್ಲಾ ಯೆಹೂದ್ಯರೂ ಯೆರೂಸಲೇಮಿನವರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. . . . ಆ ಮೇಲೆ ಅವನು [ಯೆಹೋಷಾಫಾಟನು] ಜನರ ಸಮ್ಮತಿಯಿಂದ ಯೆಹೋವನಿಗೋಸ್ಕರ ಗಾಯನಮಾಡುವದಕ್ಕಾಗಿ ಕೆಲವರನ್ನು ಆರಿಸಿಕೊಂಡು ಅವರಿಗೆ—ಪರಿಶುದ್ಧತ್ವವೆಂಬ ಭೂಷಣದೊಡನೆ ಭಟರ ಮುಂದೆ ಹೋಗುತ್ತಾ—ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಆತನ ಕೃಪೆಯು ಶಾಶ್ವತವಾಗಿದೆ ಎಂದು ಭಜಿಸಿರಿ ಎಂಬದಾಗಿ ಆಜ್ಞಾಪಿಸಿದನು.” (2 ಪೂರ್ವಕಾಲವೃತ್ತಾಂತ 20:18-21) ಹೌದು, ವೈರಿಗಳ ಆಕ್ರಮಣವನ್ನು ಎದುರಿಸುತ್ತಿದ್ದಾಗಲೂ, ಜನರು ಕ್ರಿಯಾಶೀಲರಾಗಿ ಯೆಹೋವನನ್ನು ಸ್ತುತಿಸುತ್ತಾ ಮುಂದುವರಿದರು. ಇದು, ಗೋಗನು ಯೆಹೋವನ ಸಾಕ್ಷಿಗಳ ವಿರುದ್ಧ ತನ್ನ ಆಕ್ರಮಣವನ್ನು ಆರಂಭಿಸುವಾಗ, ದೇವಜನರು ಅನುಸರಿಸಲು ಅವರಿಗೆ ಒಂದು ನಮೂನೆಯನ್ನು ಸ್ಥಾಪಿಸುತ್ತದೆ.
17, 18. (ಎ) ಗೋಗನ ಆಕ್ರಮಣದ ವಿಷಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಯಾವ ಸಕಾರಾತ್ಮಕ ಮನೋಭಾವವಿದೆ? (ಬಿ) ಇತ್ತೀಚೆಗೆ ಕ್ರೈಸ್ತ ಯುವ ಜನರಿಗೆ ಯಾವ ಮರುಜ್ಞಾಪನವು ಕೊಡಲ್ಪಟ್ಟಿತು?
17 ಅಷ್ಟರ ತನಕ ಮತ್ತು ಗೋಗನ ಆಕ್ರಮಣವು ಆರಂಭವಾದ ಬಳಿಕವೂ ಯೆಹೋವನ ಸಾಕ್ಷಿಗಳು ದೇವರ ರಾಜ್ಯಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸುವರು. ಲೋಕದಾದ್ಯಂತವಿರುವ 94,600ಕ್ಕಿಂತಲೂ ಹೆಚ್ಚಿನ ಸಭೆಗಳೊಂದಿಗೆ ಸಹವಾಸಮಾಡುವುದರಿಂದ ಅವರು ಬಲ ಹಾಗೂ ಸಂರಕ್ಷಣೆಯನ್ನು ಪಡೆಯುತ್ತಾ ಹೋಗುವರು. (ಯೆಶಾಯ 26:20) ಧೈರ್ಯದಿಂದ ಯೆಹೋವನನ್ನು ಸ್ತುತಿಸಲು ಇದು ನಿಜವಾಗಿಯೂ ಒಂದು ಸದವಕಾಶವಾಗಿದೆ! ಸನ್ನಿಹಿತವಾಗಿರುವ ಗೋಗನ ಆಕ್ರಮಣದ ನಿರೀಕ್ಷಣೆಯಲ್ಲಿ ಜೀವಿಸುವುದು, ಅವರು ಭಯದಿಂದ ಹಿಮ್ಮೆಟ್ಟುವಂತೆ ಖಂಡಿತವಾಗಿಯೂ ಮಾಡಲಾರದು. ಇದಕ್ಕೆ ಬದಲಾಗಿ, ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಸ್ತುತಿಯಜ್ಞವನ್ನು ಹೆಚ್ಚಿಸುತ್ತಾ ಮುಂದುವರಿಯುವಂತೆ ಇದು ಅವರನ್ನು ಹುರಿದುಂಬಿಸುತ್ತದೆ.—ಕೀರ್ತನೆ 146:2.
18 ಲೋಕದಾದ್ಯಂತ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿರುವ ಸಾವಿರಾರು ಯುವ ಜನರಿಂದ ಈ ಸಕಾರಾತ್ಮಕ ಮನೋಭಾವವು ಅತ್ಯುತ್ತಮವಾಗಿ ಪ್ರದರ್ಶಿಸಲ್ಪಟ್ಟಿದೆ. ಇಂಥ ಒಂದು ಕೀರ್ತನೆ 119:14, 24, 99, 119, 129, 146.
ಜೀವನ ಮಾರ್ಗವನ್ನು ಆಯ್ಕೆಮಾಡುವುದರ ಶ್ರೇಷ್ಠತೆಯನ್ನು ಎತ್ತಿತೋರಿಸಲಿಕ್ಕಾಗಿ, 2002ನೇ ಇಸವಿಯ ಜಿಲ್ಲಾ ಅಧಿವೇಶನಗಳಲ್ಲಿ ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ? ಎಂಬ ಟ್ರ್ಯಾಕ್ಟ್ ಬಿಡುಗಡೆಮಾಡಲ್ಪಟ್ಟಿತು. ಆಬಾಲವೃದ್ಧ ಕ್ರೈಸ್ತರೆಲ್ಲರೂ ಇಂಥ ಸಮಯೋಚಿತ ಮರುಜ್ಞಾಪನಗಳಿಗೆ ತುಂಬ ಕೃತಜ್ಞರಾಗಿದ್ದಾರೆ.—19, 20. (ಎ) ಕ್ರೈಸ್ತರು ಹೆದರಲು ಅಥವಾ ಕಳವಳಪಡಲು ಕಾರಣವಿಲ್ಲವೇಕೆ? (ಬಿ) ಮುಂದಿನ ಅಧ್ಯಯನ ಲೇಖನವು ಏನನ್ನು ಮಾಡುವುದು?
19 ಲೋಕದ ಪರಿಸ್ಥಿತಿಗಳು ಹೇಗೇ ಇರಲಿ, ಕ್ರೈಸ್ತರು ಹೆದರಬೇಕಾಗಿಲ್ಲ ಅಥವಾ ಕಳವಳಗೊಳ್ಳಬೇಕಾಗಿಲ್ಲ. ಅತಿ ಬೇಗನೆ ಯೆಹೋವನ ರಾಜ್ಯವು ಎಲ್ಲಾ ರೀತಿಯ ಹಿಂಸಾಚಾರವನ್ನೂ ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ತೆಗೆದುಹಾಕುವುದು ಎಂಬುದು ಅವರಿಗೆ ತಿಳಿದಿದೆ. ಹಿಂಸಾಚಾರದಿಂದಾಗಿ ತಮ್ಮ ಜೀವಗಳನ್ನು ಕಳೆದುಕೊಂಡಿರುವ ಅನೇಕರನ್ನು ಪುನರುತ್ಥಾನವು ಉಜ್ಜೀವಿಸುವುದು ಎಂಬ ತಿಳಿವಳಿಕೆಯಿಂದ ಅವರು ಸಾಂತ್ವನವನ್ನು ಕಂಡುಕೊಳ್ಳುತ್ತಾರೆ. ಪುನರುತ್ಥಾನವು, ಕೆಲವರಿಗೆ ಯೆಹೋವನ ಕುರಿತು ತಿಳಿದುಕೊಳ್ಳಲು ಸಿಕ್ಕಿರುವ ಪ್ರಥಮ ಅವಕಾಶವಾಗಿರುವುದು, ಮತ್ತು ಅದೇ ಸಮಯದಲ್ಲಿ ಇನ್ನಿತರರು ಆತನ ಸಮರ್ಪಿತ ಸೇವೆಯ ಜೀವನ ಮಾರ್ಗದಲ್ಲಿ ಮುಂದುವರಿಯುತ್ತಾ ಹೋಗಲು ಶಕ್ತರನ್ನಾಗಿ ಮಾಡುವುದು.—ಅ. ಕೃತ್ಯಗಳು 24:15.
20 ಸತ್ಯ ಕ್ರೈಸ್ತರೋಪಾದಿ ನಾವು ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವುದರ ಆವಶ್ಯಕತೆಯನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಹಾಗೆ ಮಾಡಲು ದೃಢನಿರ್ಧಾರವುಳ್ಳವರಾಗಿದ್ದೇವೆ. ನಾವು ‘ಸುಮ್ಮನೆ ನಿಂತುಕೊಂಡು ಯೆಹೋವನು ನಡಿಸುವ ರಕ್ಷಣಾಕಾರ್ಯವನ್ನು’ ನೋಡಲು ಶಕ್ತರಾಗುವ ಅದ್ಭುತಕರ ಪ್ರತೀಕ್ಷೆಗೆ ಬಲವಾಗಿ ಅಂಟಿಕೊಳ್ಳಲು ಬಯಸುತ್ತೇವೆ. ಬೈಬಲ್ ಪ್ರವಾದನೆಯ ನೆರವೇರಿಕೆಯ ಕುರಿತು ಇನ್ನಷ್ಟು ಒಳನೋಟವನ್ನು ಪ್ರಗತಿಪರವಾಗಿ ನೀಡುತ್ತಾ ಇರುವಂಥ ಸದ್ಯದ ದಿನದ ಘಟನೆಗಳ ಕುರಿತು ನಮಗೆ ಅರಿವು ಹುಟ್ಟಿಸುವ ಮೂಲಕ, ಮುಂದಿನ ಲೇಖನವು ನಮ್ಮ ನಂಬಿಕೆಯನ್ನು ಇನ್ನಷ್ಟು ಬಲಪಡಿಸುವುದು.
[ಪಾದಟಿಪ್ಪಣಿ]
^ ಪ್ಯಾರ. 9 ಸಾಕ್ಷಿಗಳಾಗಲಿಕ್ಕಾಗಿ ಹಿಂಸಾತ್ಮಕ ಜೀವಿತಗಳನ್ನು ತೊರೆದಂಥ ವ್ಯಕ್ತಿಗಳ ಉದಾಹರಣೆಗಳಿಗಾಗಿ, ಕಾವಲಿನಬುರುಜು ಪತ್ರಿಕೆಯ 1996, ಜನವರಿ 1ರ ಸಂಚಿಕೆಯ 5ನೇ ಪುಟವನ್ನೂ 1998, ಆಗಸ್ಟ್ 1ರ 5ನೇ ಪುಟವನ್ನೂ ನೋಡಿರಿ.
ನೀವು ವಿವರಿಸಬಲ್ಲಿರೋ?
• ಇಂದು ಅನೇಕ ಜನರು ಏಕೆ ತುಂಬ ನಿರಾಶಾವಾದಿಗಳಾಗಿದ್ದಾರೆ?
• ಯೆಹೋವನ ಸಾಕ್ಷಿಗಳು ಭವಿಷ್ಯತ್ತಿನ ವಿಷಯದಲ್ಲಿ ಏಕೆ ಆಶಾವಾದಿಗಳಾಗಿದ್ದಾರೆ?
• ಎಲ್ಲಾ ಹಿಂಸಾಚಾರದ ಕಾರಣದ ಕುರಿತು ಯೆಹೋವನು ಈಗಾಗಲೇ ಏನು ಮಾಡಿದ್ದಾನೆ?
• ಗೋಗನ ಆಕ್ರಮಣದ ಬಗ್ಗೆ ಹೆದರಲು ನಮಗೆ ಯಾವುದೇ ಕಾರಣವಿಲ್ಲವೇಕೆ?
[ಅಧ್ಯಯನ ಪ್ರಶ್ನೆಗಳು]
[ಪುಟ 13ರಲ್ಲಿರುವ ಚಿತ್ರ]
ಕ್ರೈಸ್ತ ತಾಟಸ್ಥ್ಯದ ವಿಷಯದಲ್ಲಿ ಯೇಸು ಯೋಗ್ಯವಾದ ಮಾದರಿಯನ್ನಿಟ್ಟನು
[ಪುಟ 16ರಲ್ಲಿರುವ ಚಿತ್ರಗಳು]
ಸಾವಿರಾರು ಯುವ ಜನರು ಸಂತೋಷದಿಂದ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದ್ದಾರೆ
[ಪುಟ 12ರಲ್ಲಿರುವ ಚಿತ್ರ ಕೃಪೆ]
UN PHOTO 186226/M. Grafman