ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದು ಕೇವಲ ಒಂದು ಪದ್ಧತಿಯೋ ಅಥವಾ ಲಂಚಗಾರಿಕೆಯೋ?

ಇದು ಕೇವಲ ಒಂದು ಪದ್ಧತಿಯೋ ಅಥವಾ ಲಂಚಗಾರಿಕೆಯೋ?

ಇದು ಕೇವಲ ಒಂದು ಪದ್ಧತಿಯೋ ಅಥವಾ ಲಂಚಗಾರಿಕೆಯೋ?

ಪೋಲೆಂಡಿನ ಕೆಲವು ಕಾಲೇಜುಗಳಲ್ಲಿ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವ ನಿರೀಕ್ಷೆಯಿಂದ ರೂಢಿಯೋಪಾದಿ ತಮ್ಮ ಶಿಕ್ಷಕರಿಗಾಗಿ ಉಡುಗೊರೆಗಳನ್ನು ಖರೀದಿಸಲು ಹಣವನ್ನು ಸಂಗ್ರಹಿಸುತ್ತಾರೆ. ಆದುದರಿಂದ, ಕಾಟಾರ್‌ಸೈನಾ ಎಂಬ ಹೆಸರಿನ ಒಬ್ಬ ಕ್ರೈಸ್ತ ಯುವತಿಯು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದದ್ದರಲ್ಲಿ ಆಶ್ಚರ್ಯವೇನಿಲ್ಲ. “ನಾನು ಹಣ ಕೊಡಬೇಕೋ ಬಾರದೋ?” ಎಂಬುದಾಗಿ ಅವಳು ಪ್ರಶ್ನಿಸತೊಡಗಿದಳು. ಅವಳ ಜೊತೆ ವಿದ್ಯಾರ್ಥಿಗಳು, “ಇದೊಂದು ಸಾಮಾನ್ಯ ಪದ್ಧತಿಯಾಗಿದೆ. ಈ ರೀತಿ ಕೊಡುವ ಮೂಲಕ ನೀನು ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಬಹಳಷ್ಟು ಲಾಭಪಡೆಯಬಲ್ಲೆ. ಹಾಗಿರುವುದರಿಂದ, ನಿನಗೆ ಯಾಕೆ ಇದರಲ್ಲಿ ಸಂಶಯವಿದೆ?” ಎಂಬುದಾಗಿ ಹೇಳಿ ತರ್ಕಿಸಿದರು.

ಕಾಟಾರ್‌ಸೈನಾ ಅನುಮೋದಿಸುವುದು: “ನನ್ನ ವಿದ್ಯಾಭ್ಯಾಸದ ಮೊದಲನೆಯ ವರುಷದಲ್ಲಿ ಹಣ ಸಂಗ್ರಹಿಸುವ ಈ ವಿಷಯದಲ್ಲಿ ನಾನೂ ಭಾಗವಹಿಸಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಈ ರೀತಿ ಮಾಡುವ ಮೂಲಕ, ಬೈಬಲಿನಲ್ಲಿ ಯಾವುದು ಖಂಡಿಸಲ್ಪಟ್ಟಿದೆಯೋ ಆ ಲಂಚಗಾರಿಕೆಯನ್ನು ನಾನು ಬೆಂಬಲಿಸಿದೆನೆಂದು ನಂತರ ನಾನು ಗ್ರಹಿಸಿಕೊಂಡೆ.” ಯೆಹೋವನು ಲಂಚಗಾರಿಕೆಯನ್ನು ಬಲವಾಗಿ ಖಂಡಿಸುತ್ತಾನೆ ಎಂಬುದನ್ನು ತೋರಿಸುವ ಶಾಸ್ತ್ರವಚನಗಳನ್ನು ಅವಳು ನೆನಪಿಸಿಕೊಂಡಳು. (ಧರ್ಮೋಪದೇಶಕಾಂಡ 10:17; 16:19; 2 ಪೂರ್ವಕಾಲವೃತ್ತಾಂತ 19:7) ಕಾಟಾರ್‌ಸೈನಾ ಹೇಳುವುದು: “ಸಮಾನಸ್ಥರ ಒತ್ತಡಕ್ಕೆ ಬಲಿಯಾಗುವುದು ಎಷ್ಟು ಸುಲಭವಾಗಿದೆ ಎಂಬುದನ್ನು ನಾನು ತಿಳಿದುಕೊಂಡೆ. ಈ ವಿಷಯವನ್ನು ಪುನಃ ಪರಿಗಣಿಸಿದೆ ಮತ್ತು ಅಂದಿನಿಂದ ಮುಂದೆಂದೂ ಆ ಪದ್ಧತಿಯಲ್ಲಿ ಪುನಃ ಭಾಗವಹಿಸಲಿಲ್ಲ.” ಕಳೆದ ಮೂರು ವರುಷಗಳಿಂದ, ತನ್ನ ಬೈಬಲಾಧಾರಿತ ನಂಬಿಕೆಗಳ ಕಾರಣ ಈ ರೀತಿಯ “ಉಡುಗೊರೆ”ಗಾಗಿ ಹಣವನ್ನು ಸಂಗ್ರಹಿಸುವುದರಲ್ಲಿ ತಾನು ಭಾಗವಹಿಸುವುದಿಲ್ಲವೆಂಬುದನ್ನು, ಇತರ ವಿದ್ಯಾರ್ಥಿಗಳ ಕುಚೋದ್ಯದ ಹೊರತಾಗಿಯೂ ಕೆಲವರಿಗೆ ಅವಳು ವಿವರಿಸಶಕ್ತಳಾದಳು.

ಕೆಲವರು ಕಾಟಾರ್‌ಸೈನಾಳ ಮೇಲೆ, ಸ್ವಾರ್ಥತೆ ಮತ್ತು ಸಮಾಜವಿರೋಧಿ ಮನೋಭಾವದವಳು ಎಂಬುದಾಗಿ ಆರೋಪ ಹೊರಿಸಿದರು. ಅವಳು ತಿಳಿಸುವುದು: “ಅವರಲ್ಲಿ ಕೆಲವರು ಇಂದಿಗೂ ನನ್ನೊಂದಿಗೆ ಸ್ನೇಹಭಾವದಿಂದ ಇಲ್ಲ. ಆದರೆ ಅನೇಕರು ನನ್ನ ದೃಷ್ಟಿಕೋನವನ್ನು ಗೌರವಿಸುತ್ತಾರೆ. ಇದು ನನ್ನನ್ನು ಸಂತೋಷಗೊಳಿಸುತ್ತದೆ.” ಕಾಟಾರ್‌ಸೈನಾಳು, ದಿನನಿತ್ಯದ ಜೀವಿತದಲ್ಲಿ ಬೈಬಲಿನ ಮೂಲತತ್ತ್ವಗಳನ್ನು ಅನುಸರಿಸುವ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ಗುರುತಿಸಲ್ಪಟ್ಟಳು.