ಎಲ್ಲರಲ್ಲಿಯೂ ಒಳ್ಳೇದನ್ನು ಹುಡುಕಿರಿ
ಎಲ್ಲರಲ್ಲಿಯೂ ಒಳ್ಳೇದನ್ನು ಹುಡುಕಿರಿ
“ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು [“ಒಳ್ಳೇದನ್ನು,” NW] ನೆನಪುಮಾಡಿಕೋ.”—ನೆಹೆಮೀಯ 13:31.
1. ಯೆಹೋವನು ಎಲ್ಲರ ಕಡೆಗೆ ಒಳ್ಳೇತನದಿಂದ ವರ್ತಿಸುವುದು ಹೇಗೆ?
ಮೋಡ ಕವಿದಿದ್ದು ಮಬ್ಬು ಮುಸುಕಿದ ಅನೇಕ ದಿವಸಗಳ ಬಳಿಕ ಪ್ರಕಾಶಿಸುವ ಸೂರ್ಯನ ಬೆಳಕನ್ನು ಎಲ್ಲರೂ ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ. ಜನರಲ್ಲಿ ಕಳೆ ತುಂಬುವ ಕಾರಣ ಅವರಿಗೆ ಸುಖಾನುಭವವವಾಗುತ್ತದೆ. ಅದೇ ರೀತಿ, ಧಗಧಗಿಸುವ ಬಿಸಿಲು ಮತ್ತು ಒಣಹವೆಯ ದೀರ್ಘ ಸಮಯಾವಧಿಗಳನ್ನು ಅನುಸರಿಸಿ ಮಳೆ ಬರುವಾಗ, ಅದು ಬಿರುಮಳೆಯಾದರೂ ಚೈತನ್ಯ ಮತ್ತು ಉಪಶಮನವನ್ನು ತರುತ್ತದೆ. ನಮ್ಮ ಪ್ರಿಯ ದೇವರಾದ ಯೆಹೋವನು ಹವಾಮಾನದ ಈ ಅದ್ಭುತಕರವಾದ ಕೊಡುಗೆಯನ್ನು ಭೂಮಿಯ ವಾತಾವರಣದಲ್ಲಿ ವಿನ್ಯಾಸಿಸಿದ್ದಾನೆ. ಯೇಸು ದೇವರ ಔದಾರ್ಯಕ್ಕೆ ಗಮನ ಸೆಳೆಯುತ್ತಾ ಕಲಿಸಿದ್ದು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾಯ 5:43-45) ಹೌದು, ಯೆಹೋವನು ಎಲ್ಲರ ಕಡೆಗೆ ಒಳ್ಳೇತನದಿಂದ ವರ್ತಿಸುತ್ತಾನೆ. ಆತನ ಸೇವಕರು ಇತರರಲ್ಲಿರುವ ಒಳ್ಳೇದನ್ನು ಹುಡುಕುವ ಮೂಲಕ ಆತನನ್ನು ಅನುಕರಿಸಲು ಪ್ರಯತ್ನಿಸಬೇಕು.
2. (ಎ) ಯೆಹೋವನು ಯಾವ ಆಧಾರದ ಮೇರೆಗೆ ಒಳ್ಳೇತನದಿಂದ ವರ್ತಿಸುತ್ತಾನೆ? (ಬಿ) ನಾವು ಯೆಹೋವನ ಒಳ್ಳೇತನಕ್ಕೆ ತೋರಿಸುವ ಪ್ರತಿಕ್ರಿಯೆಯ ವಿಷಯದಲ್ಲಿ ಆತನು ಏನನ್ನು ಗಮನಿಸುತ್ತಾನೆ?
2 ಯೆಹೋವನು ಯಾವ ಆಧಾರದ ಮೇರೆಗೆ ಒಳ್ಳೇತನದಿಂದ ವರ್ತಿಸುತ್ತಾನೆ? ಆದಾಮನು ಪಾಪಕ್ಕೆ ಸಿಕ್ಕಿ ಬಿದ್ದಂದಿನಿಂದ, ಯೆಹೋವನು ಜನರಲ್ಲಿ ಒಳ್ಳೇದನ್ನು ಹುಡುಕಲು ತಪ್ಪಿಹೋಗಿರುವುದಿಲ್ಲ. (ಕೀರ್ತನೆ 130:3, 4) ಏಕೆಂದರೆ ವಿಧೇಯ ಮಾನವಕುಲವನ್ನು ಪರದೈಸಿನ ಜೀವನಕ್ಕೆ ಪುನಸ್ಸ್ಥಾಪಿಸುವುದು ಆತನ ಉದ್ದೇಶವಾಗಿದೆ. (ಎಫೆಸ 1:9, 10) ಆತನ ಅಪಾತ್ರ ದಯೆಯು ವಾಗ್ದತ್ತ ಸಂತಾನದ ಮೂಲಕ ಪಾಪ ಮತ್ತು ಅಪರಿಪೂರ್ಣತೆಯಿಂದ ನಮ್ಮನ್ನು ಬಿಡುಗಡೆ ಮಾಡಿದೆ. (ಆದಿಕಾಂಡ 3:15; ರೋಮಾಪುರ 5:12, 15) ವಿಮೋಚನಾ ಬೆಲೆಯ ಏರ್ಪಾಡು ಕ್ರಮೇಣ ನಾವು ಪರಿಪೂರ್ಣತೆಗೆ ಹಿಂದಿರುಗುವ ದಾರಿಯನ್ನು ತೆರೆಯುತ್ತದೆ. ಇನ್ನಿತರ ವಿಷಯಗಳೊಂದಿಗೆ, ಆತನ ಔದಾರ್ಯಕ್ಕೆ ನಮ್ಮ ಪ್ರತಿಕ್ರಿಯೆಯೇನು ಎಂಬುದನ್ನು ಯೆಹೋವನು ಈಗ ನಮ್ಮಲ್ಲಿ ಪ್ರತಿಯೊಬ್ಬನಲ್ಲಿ ಗಮನಿಸುತ್ತಿದ್ದಾನೆ. (1 ಯೋಹಾನ ) ಆತನ ಒಳ್ಳೇತನಕ್ಕಾಗಿ ಕೃತಜ್ಞತೆ ತೋರಿಸಲು ನಾವು ಏನೇ ಮಾಡಲಿ ಅದನ್ನು ಆತನು ಗಮನಿಸುತ್ತಾನೆ. ಅಪೊಸ್ತಲ ಪೌಲನು ಬರೆದದ್ದು: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”— 3:16ಇಬ್ರಿಯ 6:10.
3. ಯಾವ ಪ್ರಶ್ನೆಯು ನಮ್ಮ ಪರಿಗಣನೆಗೆ ಅರ್ಹವಾಗಿದೆ?
3 ಹಾಗಾದರೆ, ಇತರರಲ್ಲಿ ಒಳ್ಳೇದನ್ನು ಹುಡುಕುವ ವಿಷಯದಲ್ಲಿ ನಾವು ಹೇಗೆ ಯೆಹೋವನನ್ನು ಅನುಕರಿಸಬಲ್ಲೆವು? ಈ ಪ್ರಶ್ನೆಗೆ ಉತ್ತರಗಳನ್ನು ಜೀವನದ ಈ ನಾಲ್ಕು ಕ್ಷೇತ್ರಗಳಲ್ಲಿ ಪರಿಗಣಿಸೋಣ: (1) ಕ್ರೈಸ್ತ ಶುಶ್ರೂಷೆ, (2) ಕುಟುಂಬ, (3) ಸಭೆ, ಮತ್ತು (4) ಇತರರೊಂದಿಗಿನ ನಮ್ಮ ಸಂಬಂಧಗಳು.
ಸಾರುವುದರಲ್ಲಿ ಮತ್ತು ಶಿಷ್ಯರನ್ನಾಗಿ ಮಾಡುವುದರಲ್ಲಿ
4. ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವಿಕೆಯು ಇತರರಲ್ಲಿ ಒಳ್ಳೇದನ್ನು ಹುಡುಕುವ ಒಂದು ವಿಧವಾಗಿರುವುದು ಹೇಗೆ?
4 ಯೇಸು, ಗೋದಿ ಮತ್ತು ಹಣಜಿಯ ಸಾಮ್ಯದ ಅರ್ಥವನ್ನು ತನ್ನ ಶಿಷ್ಯರಿಗೆ ವಿವರಿಸುತ್ತಿದ್ದಾಗ “ಹೊಲವೆಂದರೆ ಈ ಲೋಕ,” ಎಂದು ಹೇಳಿದನು. ಕ್ರಿಸ್ತನ ಆಧುನಿಕ ದಿನಗಳ ಶಿಷ್ಯರಾಗಿರುವ ನಾವು ನಮ್ಮ ಶುಶ್ರೂಷೆಯಲ್ಲಿ ತೊಡಗುವಾಗ ಈ ಸತ್ಯವನ್ನು ಗ್ರಹಿಸುತ್ತೇವೆ. (ಮತ್ತಾಯ 13:36-38; 28:19, 20) ನಮ್ಮ ಕ್ಷೇತ್ರ ಶುಶ್ರೂಷೆಯಲ್ಲಿ ನಮ್ಮ ನಂಬಿಕೆಯ ಬಹಿರಂಗ ಘೋಷಣೆಯೂ ಒಳಗೂಡಿದೆ. ಯೆಹೋವನ ಸಾಕ್ಷಿಗಳು ಮನೆಮನೆಯ ಸೇವೆ ಮತ್ತು ಬೀದಿಸೇವೆಗಾಗಿ ಈಗ ಪ್ರಸಿದ್ಧರೆಂಬ ನಿಜತ್ವವು ತಾನೇ, ರಾಜ್ಯ ಸಂದೇಶಕ್ಕೆ ಅರ್ಹರಾಗಿರುವ ಜನರನ್ನು ಹುಡುಕಲು ನಾವು ತೋರಿಸುವ ಶ್ರದ್ಧೆಗೆ ಸಾಕ್ಷ್ಯವನ್ನು ಒದಗಿಸುತ್ತದೆ. ಹೌದು, ಯೇಸು ತಾನೇ ಈ ಸೂಚನೆಯನ್ನು ಕೊಟ್ಟಿದ್ದನು: “ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ.”—ಮತ್ತಾಯ 10:11; ಅ. ಕೃತ್ಯಗಳು 17:17; 20:20.
5, 6. ಜನರ ಮನೆಗಳಿಗೆ ಪದೇ ಪದೇ ಭೇಟಿಕೊಡುವುದರಲ್ಲಿ ನಾವು ಪಟ್ಟುಹಿಡಿಯುವುದೇಕೆ?
5 ನಾವು ಜನರನ್ನು ಅನಿರೀಕ್ಷಿತವಾಗಿ ಭೇಟಿ ನೀಡುವಾಗ, ನಮ್ಮ ಸಂದೇಶಕ್ಕೆ ಅವರ ಪ್ರತಿವರ್ತನೆಯೇನೆಂಬದನ್ನು ನಾವು ಅವಲೋಕಿಸುತ್ತೇವೆ. ಕೆಲವೊಮ್ಮೆ, ಕುಟುಂಬದ ಸದಸ್ಯನೊಬ್ಬನು ನಮಗೆ ಕಿವಿಗೊಡುತ್ತಿರುವಾಗ, ಮನೆಯೊಳಗಿಂದ ಯಾರೊ ಒಬ್ಬರು “ನಮಗೆ ಆಸಕ್ತಿಯಿಲ್ಲ” ಎಂದು ಕೂಗಿ ಹೇಳುತ್ತಾರೆ ಮತ್ತು ನಮ್ಮ ಭೇಟಿ ಅಲ್ಲಿಗೆ ಕೊನೆಗೊಳ್ಳುತ್ತದೆ. ಹೀಗೆ, ಒಬ್ಬನ ವಿರೋಧವೊ ನಿರಾಸಕ್ತಿಯೊ ಇನ್ನೊಬ್ಬ ವ್ಯಕ್ತಿಯ ಪ್ರತಿಕ್ರಿಯೆಯನ್ನು ಬಾಧಿಸುವ ಕಾರಣ ನಮಗೆಷ್ಟು ದುಃಖವಾಗುತ್ತದೆ! ಹಾಗಾದರೆ, ಎಲ್ಲರಲ್ಲಿಯೂ ಒಳ್ಳೆಯದನ್ನು ಹುಡುಕುವುದರಲ್ಲಿ ಪಟ್ಟುಹಿಡಿಯಲು ನಾವೇನು ಮಾಡಬಲ್ಲೆವು?
6 ಆ ಕ್ಷೇತ್ರದಲ್ಲಿ ನಾವು ಇನ್ನೊಮ್ಮೆ ಸಾರುವಾಗ ಅದೇ ಮನೆಗೆ ಕೊಡುವ ಭೇಟಿಯು, ಹಿಂದಿನ ಬಾರಿ ನಮ್ಮ ಭೇಟಿಯಲ್ಲಿ ಅಡ್ಡಬಂದವನೊಂದಿಗೇ ನೇರವಾಗಿ ಮಾತಾಡುವ ಅವಕಾಶವನ್ನು ಕೊಡಬಹುದು. ಹಿಂದಿನ ಬಾರಿ ಏನು ನಡೆಯಿತೊ ಅದನ್ನು ಜ್ಞಾಪಿಸಿಕೊಳ್ಳುವುದು ನಾವು ತಯಾರಿಸುವಂತೆ ಸಹಾಯಮಾಡಬಲ್ಲದು. ಹಾಗೆ ವಿರೋಧಿಸಿದವನು ಒಂದುವೇಳೆ ಸದುದ್ದೇಶದಿಂದಲೇ, ಯೋಹಾನ 6:44; 1 ತಿಮೊಥೆಯ 2:4.
ಅಂದರೆ ರಾಜ್ಯ ಸುವಾರ್ತೆಯನ್ನು ಕೇಳುತ್ತಿದ್ದವನು ಅದಕ್ಕೆ ಕಿವಿಗೊಡದಂತೆ ತಡೆಯುವುದು ತನ್ನ ಕರ್ತವ್ಯವೆಂದು ನಂಬಿ ಹಾಗೆ ತಡೆದಿರಬಹುದು. ಬಹುಶಃ ಅವನ ಅಭಿಪ್ರಾಯಗಳು ನಮ್ಮ ಉದ್ದೇಶಗಳ ಬಗ್ಗೆ ಅವನಿಗಿದ್ದ ತಪ್ಪು ಮಾಹಿತಿಯಿಂದ ರೂಪಿಸಲ್ಪಟ್ಟಿದ್ದವು. ಆದರೆ ಅದು ನಾವು ರಾಜ್ಯ ಸುವಾರ್ತೆಯನ್ನು ಪಟ್ಟುಹಿಡಿದು ಸಾರುವುದರಿಂದ, ತಪ್ಪಾಭಿಪ್ರಾಯಗಳನ್ನು ಸರಿಪಡಿಸಲು ಪ್ರಯತ್ನಿಸುವುದರಿಂದ ನಮ್ಮನ್ನು ತಡೆಹಿಡಿಯುವುದಿಲ್ಲ. ದೇವರ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ಎಲ್ಲರಿಗೂ ಸಹಾಯಮಾಡುವುದೇ ನಮ್ಮ ಆಸಕ್ತಿಯಾಗಿದೆ. ಪ್ರಾಯಶಃ ಆಗ ಆ ವ್ಯಕ್ತಿಯನ್ನು ಯೆಹೋವನೇ ತನ್ನ ಸಮೀಪಕ್ಕೆ ಎಳೆಯುವನು.—7. ನಾವು ಜನರನ್ನು ಸಮೀಪಿಸುವಾಗ ಸಕಾರಾತ್ಮಕರಾಗಿರುವಂತೆ ನಮಗೆ ಏನು ಸಹಾಯಮಾಡಬಲ್ಲದು?
7 ಯೇಸು ಶಿಷ್ಯರಿಗೆ ಕೊಟ್ಟ ಸೂಚನೆಗಳಲ್ಲಿ ಕುಟುಂಬ ವಿರೋಧವೂ ಒಳಗೊಂಡಿತ್ತು. “ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದ ಹುಟ್ಟಿಸುವದಕ್ಕೆ ಬಂದೆನು” ಎಂದು ಅವನು ಹೇಳಲಿಲ್ಲವೆ? ಯೇಸು ಕೂಡಿಸಿ ಹೇಳಿದ್ದು: “ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.” (ಮತ್ತಾಯ 10:35, 36) ಆದರೂ, ಪರಿಸ್ಥಿತಿಗಳೂ ಮನೋಭಾವಗಳೂ ಬದಲಾಗುತ್ತವೆ. ಅನಿರೀಕ್ಷಿತ ಅಸ್ವಸ್ಥತೆ, ಸಂಬಂಧಿಯ ಮರಣ, ವಿಪತ್ತುಗಳು, ಭಾವಾತ್ಮಕ ಬಿಕ್ಕಟ್ಟುಗಳು ಮತ್ತು ಇನ್ನಿತರ ಅಸಂಖ್ಯಾತ ಸಂಗತಿಗಳು ನಮ್ಮ ಸಾರುವಿಕೆಗೆ ಜನರು ತೋರಿಸುವ ಪ್ರತಿಕ್ರಿಯೆಯನ್ನು ಪ್ರಭಾವಿಸುತ್ತವೆ. ನಮಗೆ ನಕಾರಾತ್ಮಕ ದೃಷ್ಟಿಕೋನವಿರುವಲ್ಲಿ, ಅಂದರೆ ನಾವು ಸಾರುವ ಜನರು ಎಂದಿಗೂ ಕಿವಿಗೊಡದಿರುವರು ಎಂಬ ಅಭಿಪ್ರಾಯ ನಮಗಿರುವಲ್ಲಿ, ನಾವು ಅವರಲ್ಲಿ ನಿಜವಾಗಿಯೂ ಒಳ್ಳೇದನ್ನು ಹುಡುಕುತ್ತಿದ್ದೇವೊ? ಆದುದರಿಂದ ಅವರ ಮನೆಯನ್ನು ಹರ್ಷಚಿತ್ತದಿಂದ ಇನ್ನೊಮ್ಮೆ ಏಕೆ ಸಂದರ್ಶಿಸಬಾರದು? ಆಗ ನಾವು ಒಂದುವೇಳೆ ಭಿನ್ನವಾದ ಪ್ರತಿಕ್ರಿಯೆಯನ್ನು ಪಡೆಯುವೆವು. ಕೆಲವು ಸಲ, ನಾವು ಏನು ಹೇಳುತ್ತೇವೊ ಅದು ಮಾತ್ರವಲ್ಲ, ಅದನ್ನು ನಾವು ಹೇಗೆ ಹೇಳುತ್ತೇವೊ ಅದರಿಂದಾಗಿಯೂ ಉತ್ತಮ ಪ್ರತಿಕ್ರಿಯೆಯು ಸಿಗುತ್ತದೆ. ನಾವು ಸಾರುವುದಕ್ಕೆ ಮುಂಚೆ ಯೆಹೋವನಿಗೆ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವಲ್ಲಿ, ಅದು ಖಂಡಿತವಾಗಿಯೂ ನಾವು ಸಕಾರಾತ್ಮಕರಾಗಿರುವಂತೆ ಮತ್ತು ರಾಜ್ಯವಾರ್ತೆಯನ್ನು ಎಲ್ಲರಿಗೂ ಆಕರ್ಷಕವಾದ ರೀತಿಯಲ್ಲಿ ನೀಡುವಂತೆ ಸಹಾಯ ಮಾಡುವುದು.—ಕೊಲೊಸ್ಸೆ 4:6; 1 ಥೆಸಲೊನೀಕ 5:16.
8. ತಮ್ಮ ಅವಿಶ್ವಾಸಿ ಸಂಬಂಧಿಗಳಲ್ಲಿ ಕ್ರೈಸ್ತರು ಒಳ್ಳೇದನ್ನು ಹುಡುಕುವಾಗ ಏನು ಪರಿಣಮಿಸಬಲ್ಲದು?
8 ಕೆಲವು ಸಭೆಗಳಲ್ಲಿ ಒಂದೇ ಕುಟುಂಬದ ಅನೇಕ ಸದಸ್ಯರು ಯೆಹೋವನನ್ನು ಸೇವಿಸುತ್ತಾರೆ. ಅನೇಕವೇಳೆ, ಕುಟುಂಬದ ಒಬ್ಬ ಹಿರಿಯ ಸಂಬಂಧಿಕನು/ಳು ತೋರಿಸಿದಂಥ ಪಟ್ಟುಹಿಡಿಯುವಿಕೆ ಹಾಗೂ ಕುಟುಂಬದಲ್ಲಿ ಮತ್ತು ವಿವಾಹ ಬಂಧದಲ್ಲಿ ಅವರಿಗಿದ್ದ ಸುಸಂಬಂಧಗಳೇ ಕುಟುಂಬದಲ್ಲಿದ್ದ ಎಳೆಯರ ಮೆಚ್ಚುಗೆ ಮತ್ತು ಗೌರವವನ್ನು ಗಳಿಸಿ, ಆ ಎಳೆಯನು ಮನಸ್ಸನ್ನು ಬದಲಾಯಿಸುವಂತೆ ಮಾಡಿತು. ಅಪೊಸ್ತಲ ಪೇತ್ರನ ಸಲಹೆಗೆ ಕಿವಿಗೊಟ್ಟದ್ದರಿಂದಾಗಿ, ಅನೇಕ ಕ್ರೈಸ್ತ ಪತ್ನಿಯರು ತಮ್ಮ ಗಂಡಂದಿರನ್ನು “ವಾಕ್ಯೋಪದೇಶವಿಲ್ಲದೆ” ಗೆಲ್ಲುವಂತೆ ಸಹಾಯಮಾಡಿದೆ.—1 ಪೇತ್ರ 3:1, 2.
ಕುಟುಂಬದಲ್ಲಿ
9, 10. ಯಾಕೋಬನೂ ಯೋಸೇಫನೂ ತಮ್ಮ ಕುಟುಂಬದವರಲ್ಲಿ ಒಳ್ಳೇದನ್ನು ಹುಡುಕಿದ್ದು ಹೇಗೆ?
9 ಕುಟುಂಬದ ಸದಸ್ಯರನ್ನು ಒಟ್ಟಾಗಿರಿಸುವ ನಿಕಟ ಸಂಬಂಧಗಳು ಇತರರಲ್ಲಿ ಒಳ್ಳೇದನ್ನು ಹುಡುಕುವ ಇನ್ನೊಂದು ಕ್ಷೇತ್ರವಾಗಿದೆ. ಯಾಕೋಬನು ತನ್ನ ಗಂಡುಮಕ್ಕಳೊಂದಿಗೆ ವ್ಯವಹರಿಸಿದ ವಿಧದಿಂದ ಒಂದು ಪಾಠವನ್ನು ಪರಿಗಣಿಸಿರಿ. ಆದಿಕಾಂಡ 37ನೆಯ ಅಧ್ಯಾಯದ 3 ಮತ್ತು 4ನೆಯ ವಚನಗಳಲ್ಲಿ, ಯಾಕೋಬನು ಯೋಸೇಫನನ್ನು ವಿಶೇಷವಾಗಿ ಪ್ರೀತಿಸಿದನೆಂಬುದನ್ನು ಬೈಬಲ್ ಸೂಚಿಸುತ್ತದೆ. ಆದರೆ ಯೋಸೇಫನ ಅಣ್ಣಂದಿರು ಇದಕ್ಕೆ ಅಸೂಯೆಯಿಂದ ಪ್ರತಿಕ್ರಿಯಿಸುತ್ತಾ, ತಮ್ಮ ತಮ್ಮನನ್ನು ಕೊಲ್ಲಲು ಒಳಸಂಚು ಹೂಡುವಷ್ಟರ ವರೆಗೂ ಹೋದರು. ಆದರೂ, ಯಾಕೋಬ ಮತ್ತು ಯೋಸೇಫರು ತಮ್ಮ ಮುಂದಿನ ಬದುಕಿನಲ್ಲಿ ತೋರಿಸಿದ ಮನೋಭಾವವನ್ನು ಗಮನಿಸಿರಿ. ಇವರಿಬ್ಬರೂ ತಮ್ಮ ಕುಟುಂಬದವರಲ್ಲಿ ಒಳ್ಳೇಯದನ್ನು ಹುಡುಕಿದರು.
10 ಯೋಸೇಫನು ಬರಗಾಲಪೀಡಿತ ಐಗುಪ್ತದಲ್ಲಿ ಪ್ರಧಾನ ಆಹಾರಾಧಿಕಾರಿಯಾಗಿ ಸೇವೆಮಾಡುತ್ತಿದ್ದಾಗ, ತನ್ನ ಸಹೋದರರನ್ನು ಸ್ವಾಗತಿಸಿದನು. ಒಡನೆ ತನ್ನ ಗುರುತನ್ನು ತಿಳಿಸಿಕೊಡದಿದ್ದರೂ, ಅವರು ಒಳ್ಳೆಯದಾಗಿ ಉಪಚರಿಸಲ್ಪಡುವಂತೆಯೂ ಹಿಂದಿರುಗಿ ಹೋಗುವಾಗ ತಮ್ಮ ವೃದ್ಧ ತಂದೆಗೋಸ್ಕರ ಆಹಾರವನ್ನು ತೆಗೆದುಕೊಂಡು ಹೋಗುವಂತೆಯೂ ಅವನು ಆದಿಕಾಂಡ 41:53–42:8; 45:23) ಅದೇ ರೀತಿ, ಯಾಕೋಬನು ಮರಣಶಯ್ಯೆಯಲ್ಲಿದ್ದಾಗ ಎಲ್ಲಾ ಪುತ್ರರಿಗೆ ಪ್ರವಾದನಾರ್ಥದ ಆಶೀರ್ವಾದಗಳನ್ನು ಕೊಟ್ಟನು. ಅವರ ಕೆಟ್ಟ ವರ್ತನೆಗಳ ಕಾರಣ ಕೆಲವು ಆಶೀರ್ವಾದಗಳು ಹಿಡಿದಿಡಲ್ಪಟ್ಟರೂ, ವಾಗ್ದತ್ತ ದೇಶದಲ್ಲಿ ಅವರವರ ಬಾಧ್ಯತೆಯ ಭೂಮಿಯನ್ನು ಪಡೆಯದೇ ಹೋಗಲಿಲ್ಲ. (ಆದಿಕಾಂಡ 49:3-28) ಯಾಕೋಬನು ಬಾಳುವಂಥ ಪ್ರೀತಿಯ ಎಂಥ ಅದ್ಭುತವಾದ ಅಭಿವ್ಯಕ್ತಿಯನ್ನು ತೋರಿಸಿದನು!
ಏರ್ಪಡಿಸಿದನು. ಹೌದು, ಆ ಸಹೋದರರ ದ್ವೇಷಕ್ಕೆ ತಾನು ಬಲಿಯಾಗಿದ್ದರೂ, ಯೋಸೇಫನು ಅವರ ಹಿತಕ್ಕಾಗಿ ಕ್ರಿಯೆಗೈದನು. (11, 12. (ಎ) ಕುಟುಂಬದವರಲ್ಲಿ ಒಳ್ಳೇದನ್ನು ಹುಡುಕುವುದರ ಮಹತ್ವವನ್ನು ಯಾವ ಪ್ರವಾದನಾತ್ಮಕ ಮಾದರಿ ಒತ್ತಿಹೇಳುತ್ತದೆ? (ಬಿ) ಪೋಲಿಹೋದ ಮಗನ ಕುರಿತಾದ ಯೇಸುವಿನ ಸಾಮ್ಯದಲ್ಲಿನ ತಂದೆಯ ಮಾದರಿಯಿಂದ ನಾವು ಯಾವ ಪಾಠ ಕಲಿಯುತ್ತೇವೆ?
11 ನಂಬಿಕೆಹೀನ ಇಸ್ರಾಯೇಲ್ ಜನಾಂಗದೊಂದಿಗೆ ವ್ಯವಹರಿಸಿದಾಗ ಯೆಹೋವನು ತೋರಿಸಿದ ದೀರ್ಘಶಾಂತಿಯು, ಆತನು ತನ್ನ ಜನರಲ್ಲಿ ಒಳ್ಳೇದನ್ನು ಹೇಗೆ ಹುಡುಕುತ್ತಾನೆಂಬ ವಿಷಯದಲ್ಲಿ ಹೆಚ್ಚಿನ ಒಳನೋಟವನ್ನು ಒದಗಿಸುತ್ತದೆ. ಹೋಶೇಯ ಪ್ರವಾದಿಯ ಕೌಟುಂಬಿಕ ಪರಿಸ್ಥಿತಿಗಳನ್ನು ಉಪಯೋಗಿಸುತ್ತಾ, ಯೆಹೋವನು ತನ್ನ ಬಾಳುವ ಪ್ರೀತಿಯನ್ನು ದೃಷ್ಟಾಂತಿಸಿದನು. ಹೋಶೇಯನ ಹೆಂಡತಿ ಗೋಮೆರಳು ಪದೇ ಪದೇ ವ್ಯಭಿಚಾರ ಮಾಡಿದಳು. ಆದರೂ ಯೆಹೋವನು ಹೋಶೇಯನಿಗೆ ಹೇಳಿದ್ದು: “ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು ದೀಪದ್ರಾಕ್ಷೆಯ ಅಡೆಗಳನ್ನು ಪ್ರೀತಿಸುವ ಇಸ್ರಾಯೇಲ್ಯರನ್ನು ಯೆಹೋವನು ಪ್ರೀತಿಸುವ ಪ್ರಕಾರ ನೀನು ಮಿಂಡನಿಗೆ ಪ್ರಿಯಳೂ ವ್ಯಭಿಚಾರಾಸಕ್ತಳೂ ಆದ ಹೆಂಗಸನ್ನು ಪ್ರೀತಿಸುತ್ತಾ ಬಾ.” (ಹೋಶೇಯ 3:1) ಈ ರೀತಿಯ ಸೂಚನೆಗಳೇಕೆ? ಏಕೆಂದರೆ, ತನ್ನ ಮಾರ್ಗಗಳಿಂದ ದೂರ ಸರಿದಿದ್ದ ಆ ಜನಾಂಗದವರಲ್ಲಿ ಕೆಲವು ವ್ಯಕ್ತಿಗಳು ತನ್ನ ತಾಳ್ಮೆಗೆ ಪ್ರತಿಕ್ರಿಯೆ ತೋರಿಸುವರೆಂದು ಯೆಹೋವನಿಗೆ ತಿಳಿದಿತ್ತು. ಹೋಶೇಯನು ಹೇಳಿದ್ದು: “ಅನಂತರ ಅವರು ತಮ್ಮ ದೇವರಾದ ಯೆಹೋವನನ್ನೂ ತಮ್ಮ ರಾಜನಾದ ದಾವೀದನನ್ನೂ ಪುನಃ ಆಶ್ರಯಿಸುವರು; ಹೌದು, ಅಂತ್ಯಕಾಲದಲ್ಲಿ ಯೆಹೋವನನ್ನೂ ಆತನ ದಯೆಯನ್ನೂ [“ಒಳ್ಳೇತನವನ್ನು,” NW] ಭಯಭಕ್ತಿಯಿಂದ ಮರೆಹೊಗುವರು.” (ಹೋಶೇಯ 3:5) ಕುಟುಂಬ ತಾಪತ್ರಯಗಳನ್ನು ಎದುರಿಸುವಾಗ ಜ್ಞಾಪಿಸಿಕೊಳ್ಳಲು ಇದು ನಿಜವಾಗಿಯೂ ಉತ್ತಮ ಮಾದರಿಯಾಗಿದೆ. ಕುಟುಂಬದ ಇತರ ಸದಸ್ಯರಲ್ಲಿ ಒಳ್ಳೇದನ್ನು ಹುಡುಕುತ್ತಾ ಹೋಗುವುದು ಕಡಮೆಪಕ್ಷ ತಾಳ್ಮೆಯ ವಿಷಯದಲ್ಲಿ ಒಂದು ಉತ್ತಮ ಮಾದರಿಯನ್ನಾದರೂ ಇಡುವುದು.
12 ಪೋಲಿಹೋದ ಮಗನ ಕುರಿತಾದ ಯೇಸುವಿನ ಸಾಮ್ಯವು ನಮ್ಮ ಸ್ವಂತ ಕುಟುಂಬದವರಲ್ಲಿ ನಾವು ಹೇಗೆ ಒಳ್ಳೇದನ್ನು ಹುಡುಕಬಲ್ಲೆವು ಎಂಬುದಕ್ಕೆ ಇನ್ನೂ ಹೆಚ್ಚಿನ ಒಳನೋಟವನ್ನು ಕೊಡುತ್ತದೆ. ಆ ಕಿರೀಮಗನು ತನ್ನ ದುಂದುವೆಚ್ಚದ ಜೀವನವನ್ನು ತೊರೆದ ಬಳಿಕ ಮನೆಗೆ ಹಿಂದಿರುಗಿ ಬಂದನು. ಆಗ ತಂದೆ ಅವನಿಗೆ ಕರುಣೆ ತೋರಿಸಿ ಸತ್ಕರಿಸಿದನು. ತನ್ನ ಕುಟುಂಬವನ್ನು ಎಂದಿಗೂ ಅಗಲದೆ ಇದ್ದ ಹಿರೀ ಮಗನ ದೂರಿಗೆ ತಂದೆ ಹೇಗೆ ಪ್ರತಿವರ್ತಿಸಿದನು? ಹಿರೀ ಮಗನನ್ನು ಸಂಬೋಧಿಸಿ ತಂದೆ ಹೇಳಿದ್ದು: “ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ಮತ್ತು ನನ್ನದೆಲ್ಲಾ ನಿನ್ನದೇ.” ಇದು ಮುನಿದು ಮಾಡಿದ ಮುಖಭಂಗವಾಗಿರದೆ ಆ ಲೂಕ 15:11-32.
ತಂದೆಯ ಪ್ರೀತಿಯನ್ನು ದೃಢೀಕರಿಸಿದ ಹೇಳಿಕೆಯಾಗಿತ್ತು. ಅವನು ಮುಂದುವರಿಸಿದ್ದು: “ಆದರೆ ಉಲ್ಲಾಸಪಡುವದೂ ಸಂತೋಷಗೊಳ್ಳುವದೂ ನ್ಯಾಯವಾದದ್ದೇ; ಯಾಕಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿ ಹೋಗಿದ್ದನು, ಸಿಕ್ಕಿದನು.” ಇದೇ ರೀತಿಯಲ್ಲಿ ನಾವೂ, ಇತರರಲ್ಲಿ ಒಳ್ಳೇದನ್ನು ಹುಡುಕುತ್ತಾ ಇರಬಲ್ಲೆವು.—ಕ್ರೈಸ್ತ ಸಭೆಯಲ್ಲಿ
13, 14. ಕ್ರೈಸ್ತ ಸಭೆಯೊಳಗೆ ಪ್ರೀತಿಯ ರಾಜಾಜ್ಞೆಯನ್ನು ಪಾಲಿಸುವ ಒಂದು ವಿಧ ಯಾವುದು?
13 ಕ್ರೈಸ್ತರಾದ ನಾವು ಪ್ರೀತಿಯ ರಾಜಾಜ್ಞೆಯನ್ನು ಪಾಲಿಸುವ ಗುರಿಯುಳ್ಳವರಾಗಿದ್ದೇವೆ. (ಯಾಕೋಬ 2:1-9) ನಿಜ, ನಮ್ಮ ಸಭೆಯಲ್ಲಿ ನಮಗಿಂತ ಭಿನ್ನವಾದ ಆರ್ಥಿಕ ಸ್ಥಿತಿಯಲ್ಲಿರುವ ಸದಸ್ಯರನ್ನು ನಾವು ಅಂಗೀಕರಿಸಬಹುದು. ಆದರೆ, ಕುಲಸಂಬಂಧವಾದ, ಸಾಂಸ್ಕೃತಿಕ, ಅಥವಾ ಧಾರ್ಮಿಕ ಹಿನ್ನೆಲೆಗಳ ಮೇಲೂ ಆಧರಿತವಾದ “ಭೇದ” ನಮ್ಮಲ್ಲಿ ಇನ್ನೂ ಇದೆಯೆ? ಹಾಗಾದರೆ ನಾವು ಯಾಕೋಬನ ಸಲಹೆಯನ್ನು ಹೇಗೆ ಪಾಲಿಸಬಲ್ಲೆವು?
14 ಕ್ರೈಸ್ತ ಕೂಟಗಳಿಗೆ ಉಪಸ್ಥಿತರಾಗುವ ಸಕಲರನ್ನು ಸ್ವಾಗತಿಸುವುದು ನಮ್ಮ ಉದಾರಮನಸ್ಸಿನ ಸಾಕ್ಷ್ಯವನ್ನು ಕೊಡುತ್ತದೆ. ರಾಜ್ಯ ಸಭಾಗೃಹಕ್ಕೆ ಬರುವ ಹೊಸಬರೊಂದಿಗೆ ಮಾತಾಡಲು ನಾವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವಾಗ, ಅವರಲ್ಲಿ ಆರಂಭದಲ್ಲಿರುವ ಹೆದರಿಕೆ ಮತ್ತು ಸಂಕೋಚ ಸ್ವಭಾವವು ಮಾಯವಾಗಿ ಹೋಗಬಹುದು. ಮೊತ್ತಮೊದಲು ಕ್ರೈಸ್ತ ಕೂಟಕ್ಕೆ ಹಾಜರಾಗುವ ಕೆಲವರು ಹೀಗೆ ಹೇಳುತ್ತಾರೆ: “ಎಲ್ಲರೂ ಎಷ್ಟು ಸ್ನೇಹಭಾವದವರಾಗಿದ್ದರು! ಎಲ್ಲರಿಗೂ ಮೊದಲಿನಿಂದಲೇ ನನ್ನ ಪರಿಚಯವಿದ್ದಂತೆ ತೋರುತ್ತಿತ್ತು. ನನಗೆ ಹಾಯೆನಿಸಿತು.”
15. ಸಭೆಯಲ್ಲಿರುವ ಯುವ ಜನರು ಪ್ರಾಯಸ್ಥರಲ್ಲಿ ಆಸಕ್ತಿ ವಹಿಸುವಂತೆ ಹೇಗೆ ಸಹಾಯಮಾಡಸಾಧ್ಯವಿದೆ?
15 ಕೆಲವು ಸಭೆಗಳಲ್ಲಿ, ಕೆಲವು ಯುವ ಜನರು ಕೂಟ ಮುಗಿದಾಗ ರಾಜ್ಯ ಸಭಾಗೃಹದ ಒಳಗೆ ಅಥವಾ ಹೊರಗೆ ಗುಂಪುಗೂಡಿ, ಪ್ರಾಯಸ್ಥರೊಂದಿಗೆ ಜೊತೆಗೂಡುವುದನ್ನು ತಪ್ಪಿಸಬಹುದು. ಇಂತಹ ಪ್ರವೃತ್ತಿಯನ್ನು ಜಯಿಸಲು, ಯಾವುದಾದರೂ ಸಕಾರಾತ್ಮಕ ಸಂಗತಿಯನ್ನು ಹೇಗೆ ಮಾಡಬಹುದು? ಪ್ರಥಮ ಹೆಜ್ಜೆಯು, ಹೆತ್ತವರು ಮಕ್ಕಳನ್ನು ಕೂಟಗಳಿಗಾಗಿ ಮನೆಯಲ್ಲೇ ತಯಾರಿಸುತ್ತಾ ತರಬೇತುಗೊಳಿಸುವುದೇ. (ಜ್ಞಾನೋಕ್ತಿ 22:6) ಕೂಟಗಳಿಗೆ ಒಯ್ಯಲು ಎಲ್ಲರಿಗೆ ಬೇಕಾಗಿರುವ ವಿವಿಧ ಸಾಹಿತ್ಯಗಳನ್ನು ಸಿದ್ಧವಾಗಿಡುವ ಕೆಲಸವನ್ನು ಅವರಿಗೆ ಕೊಡಬಹುದು. ತಮ್ಮ ಮಕ್ಕಳು ರಾಜ್ಯ ಸಭಾಗೃಹದಲ್ಲಿ ಪ್ರಾಯಸ್ಥರೊಂದಿಗೆ ಮತ್ತು ಅಶಕ್ತರೊಂದಿಗೆ ಸ್ವಲ್ಪವಾದರೂ ಮಾತಾಡುವಂತೆ ಪ್ರೋತ್ಸಾಹಿಸಲಿಕ್ಕಾಗಿಯೂ ಹೆತ್ತವರೇ ಉತ್ತಮ ಸ್ಥಾನದಲ್ಲಿದ್ದಾರೆ. ಅಂಥವರೊಂದಿಗೆ ಅರ್ಥಭರಿತವಾದ ವಿಷಯಗಳನ್ನು ಮಾತಾಡುವುದು ಮಕ್ಕಳಿಗೆ ಸಂತೃಪ್ತಿಯ ಅನುಭವವನ್ನು ಕೊಡಬಲ್ಲದು.
16, 17. ಸಭೆಯಲ್ಲಿರುವ ಯುವ ಜನರಲ್ಲಿ ವಯಸ್ಕರು ಒಳ್ಳೇದನ್ನು ಹೇಗೆ ಹುಡುಕಬಲ್ಲರು?
16 ಪ್ರಾಯಸ್ಥ ಸಹೋದರ ಸಹೋದರಿಯರು, ಸಭೆಯ ಯುವ ಜನರಲ್ಲಿ ಆಸಕ್ತಿ ವಹಿಸಬೇಕು. (ಫಿಲಿಪ್ಪಿ 2:4) ಕಿರಿಯರಿಗೆ ಪ್ರೋತ್ಸಾಹದಾಯಕವಾಗಿ ಮಾತಾಡುವುದಕ್ಕಾಗಿ ಮೊದಲ ಹೆಜ್ಜೆಯನ್ನು ಅವರು ತೆಗೆದುಕೊಳ್ಳಸಾಧ್ಯವಿದೆ. ಸಾಮಾನ್ಯವಾಗಿ ಕೂಟದಲ್ಲಿ ಕೆಲವು ಗಮನಾರ್ಹ ವಿಚಾರಗಳನ್ನು ವಿಕಸಿಸಸಲಾಗುತ್ತದೆ. ಆದುದರಿಂದ, ಅವರು ಕೂಟವನ್ನು ಆನಂದಿಸಿದರೊ ಮತ್ತು ಅವರು ವಿಶೇಷವಾಗಿ ಇಷ್ಟಪಟ್ಟ ಹಾಗೂ ಅನ್ವಯಿಸಸಾಧ್ಯವಿರುವ ವಿಷಯಗಳಿದ್ದವೊ ಎಂದು ಯುವ ಜನರನ್ನು ಕೇಳಸಾಧ್ಯವಿದೆ. ಯುವ ಜನರು ಸಭೆಯ ಅವಿಭಾಜ್ಯ ಅಂಗವಾಗಿರುವುದರಿಂದ, ಅವರ ಏಕಾಗ್ರತೆಯನ್ನು ಗಣ್ಯಮಾಡಿ, ಅವರು ಕೊಡುವ ಉತ್ತರಗಳಿಗಾಗಿ ಅಥವಾ ಕಾರ್ಯಕ್ರಮದಲ್ಲಿ ಅವರಿಗಿರುವ ಯಾವುದೇ ಭಾಗಗಳಿಗಾಗಿ ಅವರನ್ನು ಶ್ಲಾಘಿಸಬೇಕು. ಯುವ ಜನರು ಸಭೆಯ ವೃದ್ಧ ವ್ಯಕ್ತಿಗಳೊಂದಿಗೆ ನಡೆದುಕೊಳ್ಳುವ ರೀತಿ ಮತ್ತು ಸರಳವಾದ ಮನೆಗೆಲಸಗಳನ್ನು ಮಾಡುವ ರೀತಿಯು, ಅವರು ಜೀವನದಲ್ಲಿ ಮುಂದಕ್ಕೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಸಾಧ್ಯವಿದೆಯೋ ಎಂಬುದನ್ನು ತೋರಿಸಿಕೊಡುವುದು.—ಲೂಕ 16:10.
17 ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ, ಕೆಲವು ಯುವ ಜನರು ಎಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡುತ್ತಾರೆಂದರೆ, ಅವರ ಆತ್ಮಿಕ ಗುಣಗಳು ಅವರನ್ನು ಹೆಚ್ಚು ಮಹತ್ವಪೂರ್ಣ ನೇಮಕಗಳಿಗೆ ಅರ್ಹರನ್ನಾಗಿ ಮಾಡುತ್ತದೆ. ಮತ್ತು 2 ತಿಮೊಥೆಯ 2:22) ಇಂತಹ ನೇಮಕಗಳು ಶುಶ್ರೂಷಾ ಸೇವಕರಾಗಿ ಸೇವೆಸಲ್ಲಿಸಲು ಪ್ರಯತ್ನಿಸುತ್ತಿರುವವರ ಅರ್ಹತೆಯನ್ನು ‘ಪರೀಕ್ಷಿಸುವುದನ್ನು’ ಸಾಧ್ಯಮಾಡೀತು. (1 ತಿಮೊಥೆಯ 3:10) ಕೂಟಗಳಲ್ಲಿ ಅವರ ಸಿದ್ಧಮನಸ್ಸಿನ ಭಾಗವಹಿಸುವಿಕೆ, ಶುಶ್ರೂಷೆಯಲ್ಲಿ ಅವರು ತೋರಿಸುವ ಹುರುಪು ಹಾಗೂ ಸಭೆಯಲ್ಲಿರುವ ಎಲ್ಲರ ಕಡೆಗೆ ಅವರ ಕಾಳಜಿಭರಿತ ಮನೋಭಾವವು, ಅವರಿಗೆ ಹೆಚ್ಚಿನ ನೇಮಕಗಳನ್ನು ಕೊಡುವುದರ ಬಗ್ಗೆ ಹಿರಿಯರು ಪರಿಗಣಿಸುವಾಗ ಅವರ ಸಾಮರ್ಥ್ಯಗಳನ್ನು ವಿವೇಚಿಸುವಂತೆ ಸಾಧ್ಯಮಾಡುತ್ತದೆ.
ಅವರಿಗೆ ಮಾಡಲು ಕೆಲಸಗಳನ್ನು ಕೊಡುವುದು ಸಹ ಅವರು ಬುದ್ಧಿಹೀನ ನಡತೆಗಿಳಿಯುವುದರಿಂದ ಅವರನ್ನು ತಡೆದೀತು. (ಎಲ್ಲರಲ್ಲೂ ಒಳ್ಳೇದನ್ನು ಹುಡುಕುವುದು
18. ನ್ಯಾಯ ತೀರಿಸುವ ವಿಷಯದಲ್ಲಿ ಯಾವ ಪಾಶದಿಂದ ತಪ್ಪಿಸಿಕೊಳ್ಳಬೇಕು, ಮತ್ತು ಏಕೆ?
18 “ನ್ಯಾಯವಿಚಾರಣೆಯಲ್ಲಿ ಪಕ್ಷಪಾತವು ಧರ್ಮವಲ್ಲ,” ಎನ್ನುತ್ತದೆ ಜ್ಞಾನೋಕ್ತಿ 24:23. ಸಭೆಯಲ್ಲಿ ನ್ಯಾಯವಿಚಾರಿಸುವಾಗ ಹಿರಿಯರು ಪಕ್ಷಪಾತದಿಂದ ದೂರವಿರಬೇಕೆಂದು ಸ್ವರ್ಗೀಯ ವಿವೇಕವು ಆದೇಶಿಸುತ್ತದೆ. ಯಾಕೋಬನು ತಿಳಿಯಪಡಿಸಿದ್ದು: “ಮೇಲಣಿಂದ ಬರುವ ಜ್ಞಾನವು [“ವಿವೇಕ,” NW] ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ; ಅದರಲ್ಲಿ ಚಂಚಲವೂ [“ಪಾಕ್ಷಿಕ ಭೇದಗಳೂ,” NW] ಕಪಟವೂ ಇಲ್ಲ.” (ಯಾಕೋಬ 3:17) ಇತರರಲ್ಲಿ ಒಳ್ಳೆಯದನ್ನು ಹುಡುಕುವಾಗಲಾದರೊ ಹಿರಿಯರು ತಮ್ಮ ನ್ಯಾಯತೀರ್ಪು, ವ್ಯಕ್ತಿಪರ ಸಂಬಂಧಗಳಿಂದಾಗಲಿ ಭಾವಾವೇಶದಿಂದಾಗಲಿ ಮಬ್ಬಾಗದಂತೆ ನೋಡಿಕೊಳ್ಳಬೇಕೆಂಬುದು ಸ್ಪಷ್ಟ. ಕೀರ್ತನೆಗಾರ ಆಸಾಫನು ಬರೆದದ್ದು: “ದೇವರು ತನ್ನ ಸಭೆಯಲ್ಲಿ ನಿಂತುಕೊಂಡವನಾಗಿ ದೇವರುಗಳೊಳಗೆ [“ದೇವಸದೃಶರೊಳಗೆ,” NW ಪಾದಟಿಪ್ಪಣಿ; ಇದು ಮಾನವ ನ್ಯಾಯಾಧೀಶರಿಗೆ ಸೂಚಿಸುತ್ತದೆ] ನ್ಯಾಯವಿಧಿಸುತ್ತಾನೆ—ನೀವು ಅನ್ಯಾಯವಾಗಿ ತೀರ್ಪುಕೊಡುವದೂ ದುಷ್ಟರಿಗೆ ಮುಖದಾಕ್ಷಿಣ್ಯತೋರಿಸುವದೂ ಇನ್ನೆಷ್ಟರ ವರೆಗೆ?” (ಕೀರ್ತನೆ 82:1, 2) ಇದರಂತೆಯೇ ಕ್ರೈಸ್ತ ಹಿರಿಯರು, ಮಿತ್ರರ ಅಥವಾ ಸಂಬಂಧಿಗಳ ವಿಷಯದಲ್ಲಿ ಪಕ್ಷಪಾತದ ಯಾವ ಸುಳಿವನ್ನೂ ಕೊಡುವುದಿಲ್ಲ. ಈ ರೀತಿಯಲ್ಲಿ ಅವರು ಸಭೆಯ ಐಕ್ಯವನ್ನು ಕಾಪಾಡಿ, ಅಲ್ಲಿ ಯೆಹೋವನ ಆತ್ಮವು ಸರಾಗವಾಗಿ ಹರಿಯುವಂತೆ ಬಿಡುತ್ತಾರೆ.—1 ಥೆಸಲೊನೀಕ 5:23.
19. ಇತರರಲ್ಲಿ ನಾವು ಒಳ್ಳೇದನ್ನು ಯಾವ ವಿಧಗಳಲ್ಲಿ ಹುಡುಕಬಲ್ಲೆವು?
19 ನಮ್ಮ ಸಹೋದರ ಸಹೋದರಿಯರಲ್ಲಿ ಒಳ್ಳೇದನ್ನು ಹುಡುಕುವಾಗ, ಪೌಲನು ಥೆಸಲೊನೀಕ ಸಭೆಯನ್ನು ಸಂಬೋಧಿಸಿದಾಗ ತೋರಿಸಿದ ಮನೋಭಾವವನ್ನೇ ನಾವು ಪ್ರತಿಬಿಂಬಿಸುವೆವು. ಅವನಂದದ್ದು: “ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು.” (2 ಥೆಸಲೊನೀಕ 3:4) ನಾವು ಇತರರಲ್ಲಿ ಒಳ್ಳೇದನ್ನು ಹುಡುಕುವಾಗ, ಅವರ ದೋಷಗಳನ್ನು ಮನ್ನಿಸುವ ಸಾಧ್ಯತೆ ಇರುತ್ತದೆ. ನಾವು ನಮ್ಮ ಸಹೋದರರನ್ನು ಪ್ರಶಂಸಿಸುವ ವಿಷಯಗಳನ್ನು ಹುಡುಕಿ, ಟೀಕಾತ್ಮಕ ಮನೋವೃತ್ತಿಯನ್ನು ಖಂಡಿತವಾಗಿಯೂ ದೂರವಿರಿಸುವೆವು. ಪೌಲನು ಬರೆದುದು: “ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಲ್ಲವೇ.” (1 ಕೊರಿಂಥ 4:2) ಸಭೆಯ ಜವಾಬ್ದಾರಿಯಿರುವವರ ನಂಬಿಗಸ್ತಿಕೆ ಮಾತ್ರವಲ್ಲ ನಮ್ಮ ಎಲ್ಲಾ ಕ್ರೈಸ್ತ ಸಹೋದರ ಸಹೋದರಿಯರ ನಂಬಿಗಸ್ತಿಕೆಯೂ ಅವರನ್ನು ನಮಗೆ ಪ್ರಿಯರನ್ನಾಗಿ ಮಾಡುತ್ತದೆ. ಹೀಗೆ ನಾವು ಅವರ ಸಮೀಪಕ್ಕೆ ಸೆಳೆಯಲ್ಪಟ್ಟು, ಕ್ರೈಸ್ತ ಮಿತ್ರತ್ವದ ಬಂಧಗಳನ್ನು ಬಲಪಡಿಸುತ್ತೇವೆ. ಪೌಲನಿಗೆ ತನ್ನ ದಿನಗಳ ಸಹೋದರರ ಕುರಿತಾಗಿ ಇದ್ದ ದೃಷ್ಟಿಕೋನವನ್ನು ನಾವೂ ಆಯ್ದುಕೊಳ್ಳುತ್ತೇವೆ. ಅವರು “ದೇವರ ರಾಜ್ಯಾಭಿವೃದ್ಧಿಗಾಗಿ . . . ಜೊತೆಗೆಲಸದವರು” ಮತ್ತು ನಮಗೆ “ಬಲಪಡಿಸುವ ಸಹಾಯಕ”ರು (NW) ಆಗಿದ್ದಾರೆ. (ಕೊಲೊಸ್ಸೆ 4:11) ನಾವು ಹೀಗೆ ಯೆಹೋವನ ಮನೋಭಾವವನ್ನು ಪ್ರದರ್ಶಿಸುತ್ತೇವೆ.
20. ಎಲ್ಲರಲ್ಲಿಯೂ ಒಳ್ಳೇದನ್ನು ಹುಡುಕುವವರಿಗೆ ಯಾವ ಆಶೀರ್ವಾದಗಳು ಬರುವವು?
20 “ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು [“ಒಳ್ಳೇದನ್ನು,” NW] ನೆನಪುಮಾಡಿಕೋ” ಎಂಬ ನೆಹೆಮೀಯನ ಪ್ರಾರ್ಥನೆಯನ್ನು ನಾವು ನಿಶ್ಚಯವಾಗಿಯೂ ಪ್ರತಿಧ್ವನಿಸುತ್ತೇವೆ. (ನೆಹೆಮೀಯ 13:31) ಯೆಹೋವನು ಜನರಲ್ಲಿ ಒಳ್ಳೇದನ್ನು ಹುಡುಕುತ್ತಾನೆ ಎಂಬುದಕ್ಕಾಗಿ ನಾವೆಷ್ಟು ಹರ್ಷಭರಿತರು! (1 ಅರಸುಗಳು 14:13) ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ನಾವೂ ಅದೇ ರೀತಿಯಲ್ಲಿ ವರ್ತಿಸೋಣ. ಹಾಗೆ ಮಾಡುವುದು, ನಮಗೆ ವಿಮೋಚನೆಯ ಮತ್ತು ಈಗ ಎಷ್ಟೋ ಹತ್ತಿರವಾಗಿರುವ ನೂತನ ಲೋಕದಲ್ಲಿ ಅನಂತ ಜೀವನದ ಪ್ರತೀಕ್ಷೆಯನ್ನು ನೀಡುತ್ತದೆ.—ಕೀರ್ತನೆ 130:3-8.
ನೀವು ಹೇಗೆ ಉತ್ತರ ಕೊಡುವಿರಿ?
• ಯೆಹೋವನು ಯಾವ ಆಧಾರದ ಮೇರೆಗೆ ಎಲ್ಲರ ಕಡೆಗೆ ಒಳ್ಳೇತನದಿಂದ ವರ್ತಿಸುತ್ತಾನೆ?
• ಈ ಕೆಳಗಣ ಕ್ಷೇತ್ರಗಳಲ್ಲಿ ನಾವು ಇತರರಲ್ಲಿ ಹೇಗೆ ಒಳ್ಳೇದನ್ನು ಹುಡುಕಬಲ್ಲೆವು?
• ನಮ್ಮ ಶುಶ್ರೂಷೆಯಲ್ಲಿ
• ನಮ್ಮ ಕುಟುಂಬದಲ್ಲಿ
• ನಮ್ಮ ಸಭೆಯಲ್ಲಿ
• ನಮ್ಮ ಎಲ್ಲಾ ಸಂಬಂಧಗಳಲ್ಲಿ
[ಅಧ್ಯಯನ ಪ್ರಶ್ನೆಗಳು]
[ಪುಟ 18ರಲ್ಲಿರುವ ಚಿತ್ರ]
ಆರಂಭದಲ್ಲಿ ಯೋಸೇಫನ ಸಹೋದರರು ಅವನನ್ನು ದ್ವೇಷಿಸಿದರೂ, ಅವನು ಅವರಲ್ಲಿ ಒಳ್ಳೇದನ್ನು ಹುಡುಕಿದನು
[ಪುಟ 19ರಲ್ಲಿರುವ ಚಿತ್ರ]
ವಿರೋಧವು ಎಲ್ಲರಿಗೆ ಸಹಾಯಮಾಡುವುದರಿಂದ ನಮ್ಮನ್ನು ತಡೆಗಟ್ಟದು
[ಪುಟ 20ರಲ್ಲಿರುವ ಚಿತ್ರ]
ಯಾಕೋಬನ ಪುತ್ರರ ಗತಚರಿತ್ರೆ ಒಳ್ಳೆಯದಾಗಿರದಿದ್ದರೂ ಅವರಲ್ಲಿ ಯಾರಿಗೂ ಅವನು ಆಶೀರ್ವಾದಗಳನ್ನು ಕೊಡದೆ ಹೋಗಲಿಲ್ಲ
[ಪುಟ 21ರಲ್ಲಿರುವ ಚಿತ್ರ]
ಕ್ರೈಸ್ತ ಕೂಟಗಳಲ್ಲಿ ಎಲ್ಲರನ್ನೂ ಸ್ವಾಗತಿಸಿರಿ