ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅದು ನನ್ನ ಹೃದಯದ ಶೂನ್ಯತೆಯನ್ನು ತುಂಬಿತು”

“ಅದು ನನ್ನ ಹೃದಯದ ಶೂನ್ಯತೆಯನ್ನು ತುಂಬಿತು”

“ಅದು ನನ್ನ ಹೃದಯದ ಶೂನ್ಯತೆಯನ್ನು ತುಂಬಿತು”

ಯೆಹೋವನ ಸಮೀಪಕ್ಕೆ ಬನ್ನಿರಿ (ಇಂಗ್ಲಿಷ್‌) ಎಂಬ ಅತ್ಯುತ್ತಮವಾದ ಉಡುಗೊರೆಗಾಗಿ ನನ್ನ ಹೃದಯದಾಳದಿಂದ ಉಪಕಾರ ಹೇಳುತ್ತೇನೆ. ಅದು ಯೆಹೋವನ ಪ್ರೀತಿಯನ್ನು ಮತ್ತು ಮೆಚ್ಚಿಕೆಯನ್ನು ಪಡೆಯಲು ನನ್ನ ಹೃದಯದಲ್ಲಿದ್ದ ಶೂನ್ಯತೆಯನ್ನು ತುಂಬಿತು. ಈಗ ನನಗೆ ಯೆಹೋವನೊಂದಿಗೆ ಮತ್ತು ಆತನ ಪ್ರಿಯ ಪುತ್ರನೊಂದಿಗೆ ಆಪ್ತ ಸಂಬಂಧವನ್ನು ಹೊಂದಿರುವ ಅನಿಸಿಕೆಯಾಗುತ್ತಿದೆ. ನಾನು ಈ ಪುಸ್ತಕದ ಕುರಿತು ಪ್ರತಿಯೊಬ್ಬರಿಗೂ ಹೇಳಲು ಮತ್ತು ನನ್ನ ಪ್ರಿಯ ಜನರೆಲ್ಲರಿಗೂ ಈ ಪುಸ್ತಕದ ಒಂದು ಪ್ರತಿಯನ್ನು ಕೊಡಲು ಬಯಸುತ್ತೇನೆ.” ಇದು, 2002/03ನೆಯ ಇಸವಿಯಲ್ಲಿ ನಡೆದ “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆಮಾಡಲ್ಪಟ್ಟ 320 ಪುಟದ ಹೊಸ ಪುಸ್ತಕದ ಕುರಿತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಿಗೆ ಆದ ಅನಿಸಿಕೆಯಾಗಿದೆ. ಈ ಹೊಸ ಪುಸ್ತಕದ ಕೆಲವು ವೈಶಿಷ್ಟ್ಯಗಳನ್ನು ಮತ್ತು ಇದು ಏಕೆ ಪ್ರಕಾಶಿಸಲ್ಪಟ್ಟಿತು ಎಂಬ ಕಾರಣವನ್ನು ನಾವೀಗ ಪರೀಕ್ಷಿಸೋಣ.

ಹೊಸ ಪುಸ್ತಕದ ಕೆಲವು ವೈಶಿಷ್ಟ್ಯಗಳು

ಈ ಹೊಸ ಪುಸ್ತಕದಲ್ಲಿ ಏನೆಲ್ಲಾ ಅಡಕವಾಗಿದೆ? ಈ ಸಂಚಿಕೆಯಲ್ಲಿರುವ ಎರಡು ಅಧ್ಯಯನ ಲೇಖನದಲ್ಲಿ ಸಾದರಪಡಿಸಲ್ಪಟ್ಟ ಎಲ್ಲಾ ಮಾಹಿತಿಯಲ್ಲದೆ ಇನ್ನೂ ಬಹಳಷ್ಟು ವಿಷಯಗಳು ಅದರಲ್ಲಿ ಅಡಕವಾಗಿವೆ! ಈ ಪುಸ್ತಕದಲ್ಲಿ 31 ಅಧ್ಯಾಯಗಳಿವೆ. ಪ್ರತಿ ಅಧ್ಯಾಯವು ಕಾವಲಿನಬುರುಜು ಪತ್ರಿಕೆಯ ಒಂದು ಅಧ್ಯಯನ ಲೇಖನದಷ್ಟು ಉದ್ದವಾಗಿದೆ. ಪೀಠಿಕಾ ಪರಿಚಯ ಮತ್ತು ಮೊದಲಿನ ಮೂರು ಅಧ್ಯಾಯಗಳ ಬಳಿಕ, ಪುಸ್ತಕವನ್ನು ನಾಲ್ಕು ವಿಭಾಗಗಳಾಗಿ ಪ್ರತ್ಯೇಕಿಸಲಾಗಿದ್ದು, ಪ್ರತಿಯೊಂದು ವಿಭಾಗವು ಯೆಹೋವನ ಪ್ರಧಾನ ಗುಣಗಳಲ್ಲಿ ಪ್ರತಿಯೊಂದಕ್ಕೆ ಮೀಸಲಾಗಿರಿಸಲ್ಪಟ್ಟಿದೆ. ಪ್ರತಿಯೊಂದು ವಿಭಾಗವು ಆ ಗುಣದ ಸಾರಾಂಶದೊಂದಿಗೆ ಆರಂಭಗೊಳ್ಳುತ್ತದೆ. ಮುಂದಿನ ಕೆಲವು ಅಧ್ಯಾಯಗಳು, ಯೆಹೋವನು ಆ ಗುಣವನ್ನು ಹೇಗೆ ತೋರಿಸುತ್ತಾನೆಂಬುದನ್ನು ಚರ್ಚಿಸುತ್ತವೆ. ಪ್ರತಿಯೊಂದು ವಿಭಾಗದಲ್ಲಿ ಯೇಸುವಿನ ಕುರಿತಾದ ಒಂದು ಅಧ್ಯಾಯವಿದೆ. ಏಕೆ? ಯೇಸು ಹೇಳಿದ್ದು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾನ 14:9) ಯೇಸು ಯೆಹೋವನನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದ್ದರಿಂದ, ದೇವರ ಗುಣಗಳ ಎದ್ದುಕಾಣುವ ಉದಾಹರಣೆಗಳನ್ನು ಅವನು ನಮಗೆ ಕಾರ್ಯರೂಪದಲ್ಲಿ ಒದಗಿಸುತ್ತಾನೆ. ಪ್ರತಿಯೊಂದು ವಿಭಾಗವು, ಚರ್ಚಿಸಲ್ಪಡುತ್ತಿರುವ ಗುಣವನ್ನು ಪ್ರದರ್ಶಿಸುವುದರಲ್ಲಿ ನಾವು ಯೆಹೋವನನ್ನು ಹೇಗೆ ಅನುಕರಿಸಬಹುದೆಂದು ಕಲಿಸುವ ಒಂದು ಅಧ್ಯಾಯದೊಂದಿಗೆ ಅಂತ್ಯಗೊಳ್ಳುತ್ತದೆ. ಯೆಹೋವನ ಗುಣಗಳನ್ನು ಚರ್ಚಿಸುವಾಗ, ಈ ಹೊಸ ಪುಸ್ತಕವು ಬೈಬಲಿನ ಪ್ರತಿಯೊಂದು ಪುಸ್ತಕಕ್ಕೆ ಸೂಚಿಸುತ್ತದೆ.

ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕವು ಕೆಲವು ವಿಶೇಷ ವೈಶಿಷ್ಟ್ಯಗಳನ್ನೂ ಒಳಗೊಂಡಿದೆ. 2ನೆಯ ಅಧ್ಯಾಯದಿಂದ ಆರಂಭಿಸಿ, ಪ್ರತಿ ಅಧ್ಯಾಯದಲ್ಲಿ “ಮನನಕ್ಕಾಗಿ ಪ್ರಶ್ನೆಗಳು” ಎಂಬ ಮೇಲ್ಬರಹವಿರುವ ಒಂದು ಚೌಕವಿದೆ. ಅಲ್ಲಿ ಕೊಡಲ್ಪಟ್ಟಿರುವ ವಚನಗಳು ಮತ್ತು ಪ್ರಶ್ನೆಗಳು ಆ ಅಧ್ಯಾಯದ ಪುನರ್ವಿಮರ್ಶೆಗಾಗಿ ಕೊಡಲ್ಪಟ್ಟಿರುವುದಿಲ್ಲ. ಬದಲಾಗಿ, ಆ ವಿಷಯದ ಕುರಿತು ಗಾಢವಾಗಿ ಮನನಮಾಡಲು ನೀವು ಬೈಬಲನ್ನು ಉಪಯೋಗಿಸುವಂತೆ ನಿಮಗೆ ಸಹಾಯಮಾಡಲಿಕ್ಕಾಗಿ ಅವು ರೂಪಿಸಲ್ಪಟ್ಟಿವೆ. ನೀವು ಅಲ್ಲಿರುವ ವಚನಗಳ ಭಾಗಗಳನ್ನು ಜಾಗರೂಕತೆಯಿಂದ ಓದುವಂತೆ ಶಿಫಾರಸ್ಸುಮಾಡಲಾಗಿದೆ. ಬಳಿಕ ಪ್ರಶ್ನೆಯ ಬಗ್ಗೆ ಪರ್ಯಾಲೋಚಿಸಿ, ವೈಯಕ್ತಿಕ ಅನ್ವಯವನ್ನು ಮಾಡಿಕೊಳ್ಳಲು ಪ್ರಯತ್ನಿಸಿರಿ. ಅಂಥ ಮನನವು ನಿಮ್ಮ ಹೃದಯವನ್ನು ಪ್ರಚೋದಿಸಿ, ನೀವು ಯೆಹೋವನಿಗೆ ಇನ್ನೂ ಸಮೀಪವಾಗುವಂತೆ ಸಹಾಯಮಾಡಬಲ್ಲದು.​—ಕೀರ್ತನೆ 19:14.

ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದಲ್ಲಿರುವ ಚಿತ್ರಗಳು, ಬೋಧಿಸಲಿಕ್ಕಾಗಿ ಮತ್ತು ಪ್ರಚೋದಿಸಲಿಕ್ಕಾಗಿ ಜಾಗರೂಕತೆಯಿಂದ ಸಂಶೋಧಿಸಿ ತಯಾರಿಸಲ್ಪಟ್ಟವುಗಳಾಗಿವೆ. ಹದಿನೇಳು ಅಧ್ಯಾಯಗಳಲ್ಲಿ ಬೈಬಲ್‌ ದೃಶ್ಯಗಳ ಸುಂದರವಾದ ಇಡೀ ಪುಟದ ಚಿತ್ರಗಳಿವೆ.

ಏಕೆ ಪ್ರಕಾಶಿಸಲ್ಪಟ್ಟಿದೆ?

ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವು ಏಕೆ ಪ್ರಕಾಶಿಸಲ್ಪಟ್ಟಿದೆ? ಈ ಹೊಸ ಪ್ರಕಾಶನದ ಪ್ರಧಾನ ಉದ್ದೇಶವು, ನಾವು ಯೆಹೋವ ದೇವರ ಕುರಿತು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವಂತೆ ಮತ್ತು ಈ ಮೂಲಕ ನಮ್ಮ ದೇವರೊಂದಿಗೆ ಹೆಚ್ಚು ಬಲವಾದ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯಮಾಡುವುದೇ ಆಗಿದೆ.

ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದಿಂದ ಪ್ರಯೋಜನ ಪಡೆಯಬಹುದಾದ ಯಾರಾದರೊಬ್ಬರ ಕುರಿತು, ಬಹುಶಃ ಒಬ್ಬ ಬೈಬಲ್‌ ವಿದ್ಯಾರ್ಥಿ ಅಥವಾ ಒಬ್ಬ ಅಕ್ರಿಯ ಸಹೋದರ ಅಥವಾ ಸಹೋದರಿಯ ಕುರಿತು ನೀವು ಯೋಚಿಸಬಲ್ಲಿರೋ? ನಿಮ್ಮ ಕುರಿತಾಗಿ ಏನು? ಈ ಹೊಸ ಪುಸ್ತಕವನ್ನು ನೀವು ಓದಲು ಆರಂಭಿಸಿದ್ದೀರೋ? ಇಲ್ಲದಿರುವಲ್ಲಿ, ಸಾಧ್ಯವಿರುವಷ್ಟು ಬೇಗನೆ ಆರಂಭಿಸಲಿಕ್ಕಾಗಿ ಸಮಯವನ್ನು ಶೆಡ್ಯೂಲ್‌ ಮಾಡಬಾರದೇಕೆ? ನೀವು ಏನನ್ನು ಓದುತ್ತೀರೋ ಅದನ್ನು ಮನನಮಾಡಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳಿರಿ. ಈ ಹೊಸ ಪ್ರಕಾಶನವು ನೀವು ಯೆಹೋವ ದೇವರಿಗೆ ಇನ್ನಷ್ಟು ಸಮೀಪವಾಗಲು ಸಹಾಯಮಾಡಲಿ, ಮತ್ತು ಇದರಿಂದ ನೀವು ಆತನ ರಾಜ್ಯದ ಸುವಾರ್ತೆಯನ್ನು ಅತ್ಯಧಿಕ ಆನಂದ ಹಾಗೂ ಹುರುಪಿನಿಂದ ಘೋಷಿಸುವಂತಾಗಲಿ!