ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಯು ಅನಿವಾರ್ಯ

ಪ್ರೀತಿಯು ಅನಿವಾರ್ಯ

ಪ್ರೀತಿಯು ಅನಿವಾರ್ಯ

ಮನುಷ್ಯರು ಯಾವುದೇ ವಯಸ್ಸು, ಸಂಸ್ಕೃತಿ, ಭಾಷೆ ಇಲ್ಲವೆ ಜಾತಿಯವರಾಗಿರಲಿ, ಎಲ್ಲರಲ್ಲೂ ಪ್ರೀತಿಗಾಗಿ ಹಂಬಲವಿದೆ. ಅದನ್ನು ತಣಿಸದಿದ್ದಲ್ಲಿ, ಅವರು ಸಂತೋಷಿತರಾಗಿರುವುದಿಲ್ಲ. ಒಬ್ಬ ವೈದ್ಯಕೀಯ ಸಂಶೋಧಕನು ಬರೆದುದು: “ನಮ್ಮನ್ನು ಅಸ್ವಸ್ಥಗೊಳಿಸುವ ಮತ್ತು ಗುಣಪಡಿಸುವ, ನಮಗೆ ದುಃಖವನ್ನುಂಟುಮಾಡುವ ಮತ್ತು ಸಂತೋಷವನ್ನು ತರುವ, ನಾವು ಬಾಧೆಯನ್ನು ಅನುಭವಿಸುವಂತೆ ಮಾಡುವ ಮತ್ತು ವಾಸಿಯಾಗುವಿಕೆಗೆ ನಡೆಸುವ ನಿರ್ಣಾಯಕ ಅಂಶಗಳು ಪ್ರೀತಿ ಮತ್ತು ಆಪ್ತತೆಗಳೇ ಆಗಿವೆ. ಇದೇ ರೀತಿಯ ಪ್ರಭಾವವನ್ನು ಬೀರಬಲ್ಲ ಒಂದು ಹೊಸ ಔಷಧವು ತಯಾರಿಸಲ್ಪಡುವಲ್ಲಿ, ದೇಶದಲ್ಲಿರುವ ಪ್ರತಿಯೊಬ್ಬ ವೈದ್ಯನು ಈ ಔಷಧವನ್ನು ತನ್ನ ರೋಗಿಗಳಿಗೆ ಬರೆದು ಕೊಡುವನು. ಅದನ್ನು ಅವರಿಗೆ ಬರೆದು ಕೊಡದಿರುವುದು ಅನುಚಿತವಾದ ಚಿಕಿತ್ಸೆಯಾಗಿರುವುದು.”

ಹಾಗಿದ್ದರೂ, ಆಧುನಿಕ ಸಮಾಜವು​—ವಿಶೇಷವಾಗಿ ಅದರ ವಾರ್ತಾ ಮಾಧ್ಯಮ ಮತ್ತು ಜನಪ್ರಿಯ ಆರಾಧ್ಯ ವ್ಯಕ್ತಿಗಳು​—ಅನುರಾಗದ, ಪ್ರೀತಿಪರ ಸಂಬಂಧಗಳಿಗಾಗಿ ಮನುಷ್ಯರಲ್ಲಿರುವ ಅಗತ್ಯಕ್ಕಿಂತಲೂ ಹೆಚ್ಚಾಗಿ ಧನ, ಪ್ರಖ್ಯಾತಿ ಮತ್ತು ಸೆಕ್ಸ್‌ಗೆ ಹೆಚ್ಚು ಮಹತ್ವವನ್ನು ಕೊಡುತ್ತದೆ. ಅನೇಕ ಶಿಕ್ಷಕರು, ಐಹಿಕ ಗುರಿಗಳನ್ನೂ ಜೀವನವೃತ್ತಿಗಳನ್ನೂ ಎತ್ತಿಹಿಡಿಯುತ್ತಾ, ಅದಕ್ಕನುಗುಣವಾಗಿ ಒಬ್ಬ ವ್ಯಕ್ತಿಯ ಯಶಸ್ಸನ್ನು ಅಳೆಯುತ್ತಾರೆ. ಶಿಕ್ಷಣ ಮತ್ತು ಒಬ್ಬನ ಪ್ರತಿಭೆಗಳ ವಿಕಸನವು ಪ್ರಾಮುಖ್ಯವೆಂಬುದು ನಿಜ. ಆದರೆ ಇವುಗಳನ್ನು, ಕುಟುಂಬ ಮತ್ತು ಸ್ನೇಹಿತರಿಗಾಗಿ ಸಮಯವನ್ನು ಕೊಡಲಾಗದಷ್ಟು ದೃಢಸಂಕಲ್ಪದೊಂದಿಗೆ ಬೆನ್ನಟ್ಟಿಕೊಂಡುಹೋಗಬೇಕೊ? ಮಾನವ ಸ್ವಭಾವವನ್ನು ತುಂಬ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಪುರಾತನಕಾಲದ ಒಬ್ಬ ವಿದ್ಯಾವಂತ ಲೇಖಕನು, ಪ್ರತಿಭಾವಂತನಾದರೂ ಪ್ರೀತಿಯಿಲ್ಲದ ಒಬ್ಬ ವ್ಯಕ್ತಿಯನ್ನು ‘ನಾದಕೊಡುವ ಕಂಚಿಗೂ ಗಣಗಣಿಸುವ ತಾಳಕ್ಕೂ’ ಹೋಲಿಸಿದನು. (1 ಕೊರಿಂಥ 13:1) ಅಂಥ ಜನರು ಧನಿಕರು, ಮತ್ತು ಪ್ರಸಿದ್ಧರೂ ಆಗಿರಬಹುದು. ಆದರೆ ಅವರೆಂದಿಗೂ ನಿಜವಾಗಿ ಸಂತೋಷಿತರಾಗುವುದಿಲ್ಲ.

ಮಾನವರ ಬಗ್ಗೆ ಗಾಢವಾದ ತಿಳಿವಳಿಕೆ ಮತ್ತು ಅವರಿಗಾಗಿ ವಿಶೇಷವಾದ ವಾತ್ಸಲ್ಯವನ್ನು ಹೊಂದಿದ್ದ ಯೇಸು ಕ್ರಿಸ್ತನು, ದೇವರಿಗಾಗಿ ಮತ್ತು ನೆರೆಯವನಿಗಾಗಿರುವ ಪ್ರೀತಿಯನ್ನು ತನ್ನ ಬೋಧನೆಯ ಕೇಂದ್ರ ವಿಷಯವನ್ನಾಗಿ ಮಾಡಿದನು. ಅವನಂದದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು . . . ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:37-39) ಈ ಮಾತುಗಳನ್ನು ಅನುಸರಿಸಿದವರು ಮಾತ್ರ ನಿಜವಾಗಿಯೂ ಯೇಸುವಿನ ಹಿಂಬಾಲಕರಾಗಿರುವರು. ಹೀಗಿರುವುದರಿಂದ ಅವನಂದದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”​—ಯೋಹಾನ 13:35.

ಆದರೆ ಇಂದಿನ ಲೋಕದಲ್ಲಿ ಒಬ್ಬ ವ್ಯಕ್ತಿಯು ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು? ಹೆತ್ತವರು ತಮ್ಮ ಮಕ್ಕಳಿಗೆ ಪ್ರೀತಿಯನ್ನು ಹೇಗೆ ಕಲಿಸಬಲ್ಲರು? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಚರ್ಚಿಸುವುದು.

[ಪುಟ 3ರಲ್ಲಿರುವ ಚಿತ್ರಗಳು]

ಲೋಭವು ರಾರಾಜಿಸುತ್ತಿರುವಂಥ ಒಂದು ಲೋಕದಲ್ಲಿ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಒಂದು ಪಂಥಾಹ್ವಾನವಾಗಿದೆ