ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರ ಹೃದಯವನ್ನು ಸ್ಪರ್ಶಿಸಲಿಕ್ಕಾಗಿರುವ ಒಂದು ವಿಡಿಯೋ

ಯುವ ಜನರ ಹೃದಯವನ್ನು ಸ್ಪರ್ಶಿಸಲಿಕ್ಕಾಗಿರುವ ಒಂದು ವಿಡಿಯೋ

ಯುವ ಜನರ ಹೃದಯವನ್ನು ಸ್ಪರ್ಶಿಸಲಿಕ್ಕಾಗಿರುವ ಒಂದು ವಿಡಿಯೋ

ಯುವ ಜನರು ಪ್ರಶ್ನಿಸುವುದು​—ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ? (ಇಂಗ್ಲಿಷ್‌) * ಎಂಬ ವಿಡಿಯೋದಲ್ಲಿ, ದೃಢವಾದ ಶಾಸ್ತ್ರೀಯ ಸಲಹೆ, ಯುವ ಕ್ರೈಸ್ತರ ವೈಯಕ್ತಿಕ ಅಭಿವ್ಯಕ್ತಿಗಳು, ಮತ್ತು ದೀನಳ ಕುರಿತಾದ ಬೈಬಲ್‌ ವೃತ್ತಾಂತದ ಮೇಲಾಧರಿತವಾದ ಪ್ರಚೋದಿಸುವಂಥ ನವಕಾಲೀನ ಡ್ರಾಮ ಇದೆ. (ಆದಿಕಾಂಡ, ಅಧ್ಯಾಯ 34) ಆ ವಿಡಿಯೋವಿನ ಕುರಿತಾದ ಈ ಮುಂದಿನ ಅಭಿವ್ಯಕ್ತಿಗಳು ಮೆಕ್ಸಿಕೊ ದೇಶದಿಂದ ಬಂದವುಗಳು.

ಮಾರ್ಥ ಹೇಳುವುದು: “ಆ ವಿಡಿಯೋ ನನ್ನ ಹೃದಯವನ್ನು ಗಾಢವಾಗಿ ಸ್ಪರ್ಶಿಸಿತು. ಅದು ನನಗಾಗಿಯೇ ತಯಾರಿಸಲ್ಪಟ್ಟಂತಿತ್ತು. ನನ್ನ ಶಿಕ್ಷಕರಿಗೆ ಮತ್ತು ಶಾಲಾಸಂಗಾತಿಗಳಿಗೆ ನಾನೊಬ್ಬ ಯೆಹೋವನ ಸಾಕ್ಷಿಯೆಂದು ತಿಳಿದರೆ ಮಾತ್ರ ಸಾಕು ಎಂದು ನಾನು ನೆನಸುತ್ತಿದ್ದೆ. ಅವರಿಗೆ ಸಾಕ್ಷಿಯನ್ನು ಕೊಡುವ ಮೂಲಕ ಅದನ್ನು ರುಜುಪಡಿಸಲು ನಾನು ತಪ್ಪಿಹೋದೆ. ಯೆಹೋವನು ಒದಗಿಸುವಂಥ ಎಲ್ಲಾ ಮಾಹಿತಿಗಾಗಿ ನಾನು ತುಂಬ ಆಭಾರಿಯಾಗಿದ್ದೇನೆ, ಮತ್ತು ವಿಶೇಷವಾಗಿ ಅದು, ಈ ವಿಡಿಯೋವಿನಂತೆ ನಮ್ಮನ್ನು ಗಾಢವಾಗಿ ಸ್ಪರ್ಶಿಸುವಾಗ ಸತ್ಯವಾಗಿದೆ.”

ಹ್ವಾನ್‌ ಕಾರ್ಲೋಸ್‌ ಹೇಳುವುದು: “ಈ ವಿಡಿಯೋ ನಿಜವಾಗಿಯೂ ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಒಬ್ಬ ಯುವಕನೋಪಾದಿ ನಾನು, ಆ ಡ್ರಾಮದಲ್ಲಿದ್ದ ಪಾತ್ರಧಾರಿಗಳಲ್ಲಿ ಕೆಲವರಂತೆ ಇದ್ದೆ. ಕೆಲವು ವರ್ಷಗಳ ಹಿಂದೆ ನಾನೊಂದು ಇಬ್ಬಗೆಯ ಜೀವನ ನಡೆಸುತ್ತಿದ್ದೆ. ಆದರೆ ಅಂಥ ಜೀವನವು ಕೆಟ್ಟ ಫಲಿತಾಂಶಗಳನ್ನು ತರಬಲ್ಲದೆಂಬುದನ್ನು ನಾನು ಗ್ರಹಿಸಿದೆ. ಆ ವಿಡಿಯೋವನ್ನು ನೋಡಿದ ನಂತರ, ನಾನೀಗ ಯೆಹೋವನಿಗೆ ನಂಬಿಗಸ್ತನಾಗಿರಲು ದೃಢಮನಸ್ಸು ಮಾಡಿದ್ದೇನೆ.”

ಸೂಲೆಮ್‌ ಎಂಬವಳು ಒಪ್ಪಿಕೊಳ್ಳುವುದು: “ಆ ವಿಡಿಯೋವನ್ನು ನೋಡಿದಾಗ, ನಾನು ಭಾವೋದ್ರೇಕಿತಳಾದೆ. ಈ ಹಿಂದೆ ನಾನು ಬೈಬಲ್‌ ಓದುವುದನ್ನು ನಿಲ್ಲಿಸಿದ್ದೆ ಮತ್ತು ಯೆಹೋವನಿಗೆ ಅಷ್ಟೊಂದು ಪ್ರಾರ್ಥನೆಯನ್ನೂ ಮಾಡುತ್ತಿರಲಿಲ್ಲ. ಆ ವಿಡಿಯೋದಲ್ಲಿ ಯುವ ಜನರು ಮಾಡಿದ ಹೇಳಿಕೆಗಳಿಗೆ ಕಿವಿಗೊಟ್ಟಾಗ, ನಾನು ಪುನಃ ಬೈಬಲನ್ನು ಅಭ್ಯಾಸಿಸಲು ಮತ್ತು ಯೆಹೋವನಿಗೆ ಪ್ರಾರ್ಥಿಸಲು ಆರಂಭಿಸುವಂತೆ ಪ್ರಚೋದಿಸಲ್ಪಟ್ಟೆ.”

ಇಂದು ಯುವ ಜನರು ತುಂಬ ಪಂಥಾಹ್ವಾನಗಳನ್ನು ಎದುರಿಸುತ್ತಾರೆ, ಮತ್ತು ಅವರು ಆಯ್ಕೆಮಾಡುವ ಸ್ನೇಹಿತರು, ತಮ್ಮ ಬದುಕನ್ನು ನಡೆಸುವ ರೀತಿಯ ಮೇಲೆ ಬಲವಾದ ಪ್ರಭಾವವನ್ನು ಬೀರಬಲ್ಲರು. (ಕೀರ್ತನೆ 26:4; ಜ್ಞಾನೋಕ್ತಿ 13:20) ಈ ವಿಷಯದಲ್ಲಿ ಒಳ್ಳೆಯ ನಿರ್ಣಯಗಳನ್ನು ಮಾಡುವಂತೆ ಯುವ ಜನರು ಪ್ರಶ್ನಿಸುವುದು​—ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ? ಎಂಬ ವಿಡಿಯೋ ಅನೇಕರಿಗೆ ಸಹಾಯಮಾಡುತ್ತಿದೆ.

[ಪಾದಟಿಪ್ಪಣಿ]

^ ಪ್ಯಾರ. 2 ಯೆಹೋವನ ಸಾಕ್ಷಿಗಳಿಂದ ತಯಾರಿಸಲ್ಪಟ್ಟದ್ದು.