ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೃತರ ಕುರಿತಾದ ದೇವರ ದೃಷ್ಟಿಕೋನ

ಮೃತರ ಕುರಿತಾದ ದೇವರ ದೃಷ್ಟಿಕೋನ

ಮೃತರ ಕುರಿತಾದ ದೇವರ ದೃಷ್ಟಿಕೋನ

ಪ್ರಿಯ ವ್ಯಕ್ತಿಯೊಬ್ಬರ ಮರಣವು ನಿಜವಾಗಿಯೂ ದುಃಖಕರವಾಗಿದೆ. ಅಂಥ ಸಮಯದಲ್ಲಿ, ಶೂನ್ಯಭಾವ, ಒಂಟಿತನ, ಮತ್ತು ಅವರ ನಷ್ಟದ ಪ್ರಜ್ಞೆಯು ತೀವ್ರವಾಗಿರುತ್ತದೆ. ಒಬ್ಬರಿಗೆ ಎಷ್ಟೇ ಐಶ್ವರ್ಯ, ಅಧಿಕಾರ ಅಥವಾ ಪ್ರಭಾವವಿರುವುದಾದರೂ ಮರಣದಲ್ಲಿ ಪ್ರಿಯರೊಬ್ಬರನ್ನು ಕಳೆದುಕೊಳ್ಳುವುದು ಅವರಲ್ಲಿ ನಿಸ್ಸಹಾಯಕ ಭಾವನೆಯನ್ನು ಮೂಡಿಸಬಲ್ಲದು. ಈ ಭೂಮಿಯಲ್ಲಿರುವ ಯಾರೊಬ್ಬರೂ ಮೃತ ವ್ಯಕ್ತಿಯನ್ನು ಪುನಃ ಉಜ್ಜೀವಿಸಸಾಧ್ಯವಿಲ್ಲ.

ಹಾಗಿದ್ದರೂ, ನಮ್ಮ ಸೃಷ್ಟಿಕರ್ತನಾದರೋ ಈ ವಿಷಯವನ್ನು ವಿಭಿನ್ನವಾಗಿ ವೀಕ್ಷಿಸುತ್ತಾನೆ. ಮೊದಲನೆಯ ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿದವನಾದ ಆತನು, ಮೃತ ವ್ಯಕ್ತಿಯನ್ನು ಪುನಃ ಸೃಷ್ಟಿಸುವ ಸಾಮರ್ಥ್ಯವನ್ನು ಸಹ ಹೊಂದಿದ್ದಾನೆ. ಈ ಕಾರಣದಿಂದಲೇ, ದೇವರು ಮೃತರನ್ನು ಇನ್ನೂ ಜೀವದಿಂದಿರುವವರಂತೆ ವೀಕ್ಷಿಸುತ್ತಾನೆ. ಮೃತಪಟ್ಟಿರುವ ಹಿಂದಿನ ನಂಬಿಗಸ್ತ ಸೇವಕರ ಕುರಿತು ತಿಳಿಸುವಾಗ, ಯೇಸು ಹೇಳಿದ್ದು: “ಆತನಿಗೆ [ದೇವರಿಗೆ] ಎಲ್ಲರೂ ಜೀವಿಸುವವರೇ.”​—ಲೂಕ 20:​38.

ಯೇಸು ಭೂಮಿಯಲ್ಲಿದ್ದಾಗ, ಮೃತರನ್ನು ಪುನರುತ್ಥಾನಗೊಳಿಸುವ ಶಕ್ತಿಯನ್ನು ಹೊಂದಿದ್ದನು. (ಯೋಹಾನ 5:21) ಆದುದರಿಂದಲೇ, ನಂಬಿಗಸ್ತರಾಗಿ ಸತ್ತವರ ಕುರಿತು ದೇವರಿಗಿರುವಂಥ ದೃಷ್ಟಿಕೋನವನ್ನೇ ಯೇಸುವೂ ಹೊಂದಿದ್ದಾನೆ. ಉದಾಹರಣೆಗೆ, ಅವನ ಸ್ನೇಹಿತನಾದ ಲಾಜರನು ಸತ್ತಾಗ, ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ.” (ಯೋಹಾನ 11:11) ಮಾನವರ ದೃಷ್ಟಿಯಲ್ಲಿ ಲಾಜರನು ಸತ್ತಿದ್ದನು, ಆದರೆ ಯೆಹೋವನ ಮತ್ತು ಯೇಸುವಿನ ದೃಷ್ಟಿಯಲ್ಲಿ ಲಾಜರನು ನಿದ್ರಿಸುತ್ತಿದ್ದನು.

ಯೇಸುವಿನ ರಾಜ್ಯದಾಳಿಕೆಯ ಕೆಳಗೆ, ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.’ (ಅ. ಕೃತ್ಯಗಳು 24:15) ತದನಂತರ, ಪುನರುತ್ಥಾನವಾದವರು ದೈವಿಕ ಶಿಕ್ಷಣವನ್ನು ಪಡೆದುಕೊಳ್ಳುವರು ಮತ್ತು ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆ ಅವರಿಗಿರುವುದು.​—ಯೋಹಾನ 5:​28, 29.

ಹೌದು, ಪ್ರಿಯರೊಬ್ಬರ ಮರಣವು ನಮಗೆ ಅನೇಕ ವರುಷಗಳ ವರೆಗೆ ದುಃಖ ಮತ್ತು ವೇದನೆಯನ್ನು ಉಂಟುಮಾಡಸಾಧ್ಯವಿದೆ. ಆದರೆ, ಮೃತರ ಕುರಿತಾದ ದೇವರ ದೃಷ್ಟಿಕೋನವನ್ನು ತಿಳಿಯುವುದು, ನಮಗೆ ಭಾರೀ ಸಾಂತ್ವನವನ್ನು ಮತ್ತು ನಿರೀಕ್ಷೆಯನ್ನು ನೀಡಸಾಧ್ಯವಿದೆ.​—2 ಕೊರಿಂಥ 1:​3, 4.