ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯಾರಾಧನೆಯು ಕುಟುಂಬವನ್ನು ಐಕ್ಯಗೊಳಿಸುತ್ತದೆ

ಸತ್ಯಾರಾಧನೆಯು ಕುಟುಂಬವನ್ನು ಐಕ್ಯಗೊಳಿಸುತ್ತದೆ

ಸತ್ಯಾರಾಧನೆಯು ಕುಟುಂಬವನ್ನು ಐಕ್ಯಗೊಳಿಸುತ್ತದೆ

ಮಾರೀಅ 13 ವರುಷ ಪ್ರಾಯದವಳಾಗಿದ್ದಾಗ, ಅವಳು ಮತ್ತು ಅವಳ ತಂಗಿ ಲೂಸಿ ಅವರ ಸಂಬಂಧಿಕನಿಂದ ಯೆಹೋವನ ಕುರಿತು ಮೊದಲಬಾರಿ ಕೇಳಿಸಿಕೊಂಡರು. ಅವನು ಅವರಿಗೆ ಯೆಹೋವನ ಕುರಿತು ಮಾತ್ರವಲ್ಲದೆ ಭೂಪರದೈಸಿನ ನಿರೀಕ್ಷೆಯ ಕುರಿತೂ ತಿಳಿಸಿದನು. ಕುತೂಹಲದಿಂದ ಅವರು ಅವನೊಂದಿಗೆ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಹೋದರು. ಅಲ್ಲಿ ಕೊಡಲ್ಪಟ್ಟ ಸ್ಪಷ್ಟವಾದ ಬೋಧನೆಯಿಂದ ಮಾರೀಅ ತುಂಬ ಪ್ರಭಾವಿತಳಾದಳು. ಎಲ್ಲಿ ಹಾಡುವುದನ್ನು ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲವೋ ಅಂಥ ಚರ್ಚ್‌ಗಿಂತ ಇದು ಭಿನ್ನವಾಗಿತ್ತು! ಬೇಗನೆ, ಈ ಇಬ್ಬರೂ ಮಕ್ಕಳು ಯೆಹೋವನ ಸಾಕ್ಷಿಯೊಬ್ಬಳೊಂದಿಗೆ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದರು.

ಅವರ ಅಣ್ಣನಾದ ಯೂಗೋ, ತತ್ತ್ವಜ್ಞಾನ ಮತ್ತು ವಿಕಾಸವಾದದಲ್ಲಿ ಬಹಳ ಆಸಕ್ತನಾಗಿದ್ದನು. ಅವನು ತನ್ನನ್ನು ನಾಸ್ತಿಕನೆಂದು ಪರಿಗಣಿಸುತ್ತಿದ್ದನು. ಆದರೆ ಅವನು ಮಿಲಿಟರಿ ಸೇವೆಯಲ್ಲಿದ್ದಾಗ, ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್‌) * ಎಂಬ ಪುಸ್ತಕವನ್ನು ಓದಿದನು. ಬೇರೆ ಯಾವುದೇ ಧರ್ಮವು ನೀಡಸಾಧ್ಯವಿರದ ಪ್ರಶ್ನೆಗಳಿಗೆ ಉತ್ತರವನ್ನು ಅವನು ಇದರಲ್ಲಿ ಕಂಡುಕೊಂಡನು. ತನ್ನ ಮಿಲಿಟರಿ ಸೇವೆಯನ್ನು ಮುಗಿಸಿದ ಬಳಿಕ, ಅವನು ಹೊಸದಾಗಿ ಕಂಡುಕೊಂಡ ದೇವರಲ್ಲಿನ ತನ್ನ ನಂಬಿಕೆಯನ್ನು ಬಲಗೊಳಿಸುವ ಸಲುವಾಗಿ ಬೈಬಲನ್ನು ಅಧ್ಯಯನಮಾಡಲು ಮತ್ತು ತನ್ನ ತಂಗಿಯರೊಂದಿಗೆ ಕೂಟಗಳಿಗೆ ಹಾಜರಾಗಲು ಆರಂಭಿಸಿದನು. ಮಾರೀಅ ಮತ್ತು ಲೂಸಿ, ತಾವು ಮೊದಲಾಗಿ ಸತ್ಯದ ಕುರಿತು ಆಲಿಸಿಕೊಂಡ ಎರಡು ವರುಷಗಳ ನಂತರ, ಅಂದರೆ 1992ರಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಅವರು ದೀಕ್ಷಾಸ್ನಾನ ಪಡೆದುಕೊಂಡ ಎರಡು ವರುಷಗಳ ನಂತರ ಅವರ ಅಣ್ಣನೂ ದೀಕ್ಷಾಸ್ನಾನ ಪಡೆದುಕೊಂಡನು.

ಈ ಸಮಯದಲ್ಲಿ, ಅವರ ಹೆತ್ತವರು ಕ್ಯಾಥೊಲಿಕ್‌ ಸಂಪ್ರದಾಯವನ್ನು ಅನುಸರಿಸುತ್ತಿದ್ದರು. ಅವರಿಗೆ ಸತ್ಯದಲ್ಲಿ ಯಾವುದೇ ಆಸಕ್ತಿಯಿರಲಿಲ್ಲ. ತಮ್ಮ ಮಕ್ಕಳು, ಮನೆಗೆ ಆಮಂತ್ರಿಸುತ್ತಿದ್ದ ಯುವ ಸಾಕ್ಷಿಗಳ ಸೌಜನ್ಯತೆ ಮತ್ತು ಉಡುಪು ಧರಿಸುವ ವಿಷಯದಲ್ಲಿ ಅವರ ಸಭ್ಯತೆ ಇವೆಲ್ಲವನ್ನು ಅವರು ಮೆಚ್ಚುತ್ತಿದ್ದರಾದರೂ, ಯೆಹೋವನ ಸಾಕ್ಷಿಗಳೆಂದರೆ ಕಾಡಿಸುವವರು ಎಂಬುದಾಗಿ ಅವರು ಪರಿಗಣಿಸುತ್ತಿದ್ದರು. ಆದರೆ, ಊಟದ ಸಮಯದಲ್ಲಿ ಮಕ್ಕಳು ತಾವು ಕೂಟದಲ್ಲಿ ಕಲಿತ ವಿಷಯವನ್ನು ಹೆತ್ತವರೊಂದಿಗೆ ಹಂಚಿಕೊಳ್ಳುವಾಗ ಅವರ ಆಸಕ್ತಿಯು ಕೆರಳಿಸಲ್ಪಡುತ್ತಿತ್ತು.

ಹಾಗಿದ್ದರೂ, ಇಬ್ಬರು ಹೆತ್ತವರೂ ಮಾಟಮಂತ್ರದಲ್ಲಿ ಆಸಕ್ತರಾಗಿದ್ದರು. ತಂದೆಯು ಕುಡುಕನಾಗಿದ್ದನು ಮತ್ತು ತಾಯಿಯನ್ನು ಹೊಡೆಯುತ್ತಿದ್ದನು. ಕುಟುಂಬವು ಒಡೆಯುವ ಹಂತಕ್ಕೆ ತಲಪಿತು. ಆ ಸಮಯದಲ್ಲಿ, ತಂದೆಯು ಕುಡಿದು ಕೆಟ್ಟರೀತಿಯಲ್ಲಿ ವ್ಯವಹರಿಸಿದ ಕಾರಣ ಸೆರೆಮನೆಯಲ್ಲಿ ಎರಡು ವಾರಗಳನ್ನು ಕಳೆದನು. ಸೆರೆಮನೆಯಲ್ಲಿರುವಾಗ, ಅವನು ಬೈಬಲನ್ನು ಓದಿದನು. ಅವನು ಓದುತ್ತಿದ್ದಂತೆ ಕಡೇ ದಿವಸಗಳ ಸೂಚನೆಯ ಕುರಿತಾದ ಯೇಸುವಿನ ಮಾತುಗಳನ್ನು ಗಮನಿಸಿದನು. ಇದು ಅವನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಎಬ್ಬಿಸಿತು. ತಂದೆ ಮತ್ತು ತಾಯಿ ಇಬ್ಬರೂ ರಾಜ್ಯ ಸಭಾಗೃಹಕ್ಕೆ ಹೋದರು ಮತ್ತು ಒಂದು ಮನೆ ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದರು. ಸತ್ಯವನ್ನು ಕಲಿಯುತ್ತಿದ್ದಂತೆ, ಅವರು ತಮ್ಮಲ್ಲಿದ್ದ ಮಾಟಮಂತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ನಾಶಮಾಡಿದರು ಮತ್ತು ಯೆಹೋವನ ಹೆಸರನ್ನು ಕರೆಯುತ್ತಾ ದೆವ್ವಗಳ ಪ್ರಭಾವದಿಂದ ಬಿಡುಗಡೆಯನ್ನು ಕಂಡುಕೊಂಡರು. ಅವರು ತಮ್ಮ ವ್ಯಕ್ತಿತ್ವಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲು ಆರಂಭಿಸಿದರು.

ಇಸವಿ 1999ರಲ್ಲಿ ಬೊಲಿವಿಯದಲ್ಲಿ ನಡೆದ ಜಿಲ್ಲಾ ಅಧಿವೇಶನದಲ್ಲಿ ತಮ್ಮ ಹೆತ್ತವರು ಯೂಗೋವಿನಿಂದ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದನ್ನು ವೀಕ್ಷಿಸುವಾಗ, ಮಾರೀಅ ಮತ್ತು ಲೂಸಿಗೆ ಎಷ್ಟು ಆನಂದವಾಗಿರಬಹುದು ಎಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರೋ? ಮಾರೀಅ ಮತ್ತು ಲೂಸಿ, ಯೆಹೋವನ ಮತ್ತು ಆತನ ವಾಗ್ದಾನಗಳ ಕುರಿತು ಮೊದಲಾಗಿ ಕೇಳಿಸಿಕೊಂಡ ಸುಮಾರು ಒಂಬತ್ತು ವರುಷಗಳ ನಂತರ ಇದು ಸಂಭವಿಸಿತು. ಈಗ ಅವರ ಹೆತ್ತವರು ಯೂಗೋವಿನೊಂದಿಗೆ ಪೂರ್ಣ ಸಮಯದ ಶೂಶ್ರೂಷೆಯನ್ನು ಮಾಡುತ್ತಿದ್ದಾರೆ. ಸತ್ಯ ಆರಾಧನೆಯು ಅವರ ಕುಟುಂಬವನ್ನು ಐಕ್ಯಗೊಳಿಸಿದ ಕಾರಣ ಅವರೆಷ್ಟು ಸಂತೋಷಿತರು!

[ಪಾದಟಿಪ್ಪಣಿ]

^ ಪ್ಯಾರ. 3 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.