ನಾವು ಏಕೆ ಎಡೆಬಿಡದೆ ಪ್ರಾರ್ಥಿಸಬೇಕು?
ನಾವು ಏಕೆ ಎಡೆಬಿಡದೆ ಪ್ರಾರ್ಥಿಸಬೇಕು?
“ಎಡೆಬಿಡದೆ ಪ್ರಾರ್ಥನೆಮಾಡಿರಿ. ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ.”—1 ಥೆಸಲೊನೀಕ 5:16-18.
1, 2. ತಾನು ಪ್ರಾರ್ಥನೆಯ ಸುಯೋಗವನ್ನು ಅಮೂಲ್ಯವಾಗಿ ಪರಿಗಣಿಸುತ್ತೇನೆ ಎಂಬುದನ್ನು ದಾನಿಯೇಲನು ಹೇಗೆ ತೋರಿಸಿದನು, ಮತ್ತು ಅದು ದೇವರೊಂದಿಗಿನ ಅವನ ಸಂಬಂಧದ ಮೇಲೆ ಯಾವ ಪರಿಣಾಮವನ್ನು ಬೀರಿತು?
ಪ್ರವಾದಿಯಾದ ದಾನಿಯೇಲನು ದಿನಕ್ಕೆ ಮೂರಾವರ್ತಿ ದೇವರಿಗೆ ಪ್ರಾರ್ಥನೆಮಾಡುವುದು ವಾಡಿಕೆಯಾಗಿತ್ತು. ಅವನು ತನ್ನ ಮಹಡಿಯ ಕೋಣೆಯಲ್ಲಿ ಯೆರೂಸಲೇಮ್ ಪಟ್ಟಣದ ಕಡೆಗಿದ್ದ ಕಿಟಕಿಯ ಬಳಿ ಮೊಣಕಾಲೂರಿ ದೇವರಿಗೆ ವಿಜ್ಞಾಪನೆಗಳನ್ನು ಮಾಡುತ್ತಿದ್ದನು. (1 ಅರಸುಗಳು 8:46-49; ದಾನಿಯೇಲ 6:10) ಮೇದ್ಯಯ ರಾಜನಾದ ದಾರ್ಯಾವೆಷನಿಗೆ ಹೊರತು ಬೇರೆ ಯಾರಿಗೂ ವಿಜ್ಞಾಪನೆ ಮಾಡುವುದನ್ನು ನಿಷೇಧಿಸಿದಂಥ ಒಂದು ರಾಜಾಜ್ಞೆಯು ಹೊರಡಿಸಲ್ಪಟ್ಟಾಗಲೂ, ದಾನಿಯೇಲನು ಒಂದು ಕ್ಷಣವೂ ವಿಚಲಿತನಾಗಲಿಲ್ಲ. ಅದು ಅವನ ಜೀವವನ್ನು ಅಪಾಯಕ್ಕೊಡ್ಡಿರಲಿ ಇಲ್ಲದಿರಲಿ, ಪ್ರಾರ್ಥಿಸುವ ಪರಿಪಾಟವಿದ್ದ ಈ ಮನುಷ್ಯನು ಮಾತ್ರ ಎಡೆಬಿಡದೆ ಯೆಹೋವನಿಗೆ ವಿಜ್ಞಾಪನೆಯನ್ನು ಮಾಡಿದನು.
2 ದಾನಿಯೇಲನ ಬಗ್ಗೆ ಯೆಹೋವನಿಗೆ ಯಾವ ದೃಷ್ಟಿಕೋನವಿತ್ತು? ದಾನಿಯೇಲನ ಪ್ರಾರ್ಥನೆಗಳಲ್ಲಿ ಒಂದನ್ನು ಉತ್ತರಿಸಲಿಕ್ಕಾಗಿ ಗಬ್ರಿಯೇಲನೆಂಬ ದೇವದೂತನು ಬಂದಾಗ, ಅವನು ಈ ಪ್ರವಾದಿಯನ್ನು “ನೀನು [ದೇವರಿಗೆ] ಅತಿಪ್ರಿಯ” ಅಥವಾ “ತುಂಬ ಪ್ರಿಯನಾಗಿರುವ ಒಬ್ಬ ಮನುಷ್ಯ” ಎಂದು ವರ್ಣಿಸಿದನು. (ದಾನಿಯೇಲ 9:20-23; ದ ನ್ಯೂ ಇಂಗ್ಲಿಷ್ ಬೈಬಲ್) ಯೆಹೆಜ್ಕೇಲನ ಪ್ರವಾದನೆಯಲ್ಲಿ, ಯೆಹೋವನು ದಾನಿಯೇಲನನ್ನು ಒಬ್ಬ ನೀತಿವಂತ ವ್ಯಕ್ತಿಯೆಂದು ಸಂಬೋಧಿಸಿದನು. (ಯೆಹೆಜ್ಕೇಲ 14:14, 20, NW) ದಾನಿಯೇಲನ ಜೀವಮಾನಕಾಲದಲ್ಲಿ, ಅವನ ಪ್ರಾರ್ಥನೆಗಳು ದೇವರೊಂದಿಗೆ ಒಂದು ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಮಾಡಿದವು ಎಂಬುದಂತೂ ಸುಸ್ಪಷ್ಟ. ಈ ನಿಜತ್ವವು ದಾರ್ಯಾವೆಷನಿಂದಲೂ ಅಂಗೀಕರಿಸಲ್ಪಟ್ಟಿತ್ತು.—ದಾನಿಯೇಲ 6:16.
3. ಒಬ್ಬ ಮಿಷನೆರಿಯ ಅನುಭವದಿಂದ ತೋರಿಸಲ್ಪಟ್ಟಿರುವಂತೆ, ಸಮಗ್ರತೆಯನ್ನು ಕಾಪಾಡಿಕೊಳ್ಳಲು ಪ್ರಾರ್ಥನೆಯು ನಮಗೆ ಹೇಗೆ ಸಹಾಯಮಾಡಬಲ್ಲದು?
3 ಕ್ರಮವಾದ ಪ್ರಾರ್ಥನೆಯು ಕಠಿನ ಪರೀಕ್ಷೆಗಳನ್ನು ಎದುರಿಸುವಂತೆಯೂ ನಮಗೆ ಸಹಾಯಮಾಡಸಾಧ್ಯವಿದೆ. ಉದಾಹರಣೆಗೆ, ಚೀನಾದಲ್ಲಿ ಒಬ್ಬ ಮಿಷನೆರಿಯಾಗಿದ್ದು, ಐದು ವರ್ಷಗಳ ಏಕಾಂತವಾಸದ ಶಿಕ್ಷೆಯನ್ನು ಅನುಭವಿಸಿದ ಹೆರಲ್ಡ್ ಕಿಂಗ್‌ರನ್ನು ಪರಿಗಣಿಸಿರಿ. ತಮ್ಮ ಅನುಭವದ ಕುರಿತು ಸಹೋದರ ಕಿಂಗ್ ಹೇಳಿದ್ದು: “ನನ್ನನ್ನು ಜೊತೆಮಾನವರಿಂದ ಪ್ರತ್ಯೇಕಿಸುವ ಸಾಧ್ಯತೆಯಿದೆ, ಆದರೆ ಯಾರೊಬ್ಬರೂ ನನ್ನನ್ನು ದೇವರಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. . . . ಆದುದರಿಂದ, ನನ್ನ ಸೆರೆಕೋಣೆಯ ಮುಂದಿನಿಂದ ಹಾದುಹೋಗಬಹುದಾದ ಎಲ್ಲರ ಕಣ್ಣೆದುರಿಗೇ, ನಾನು ದಿನವೊಂದಕ್ಕೆ ಮೂರು ಸಲ ಮೊಣಕಾಲೂರಿ ಗಟ್ಟಿಯಾಗಿ ಪ್ರಾರ್ಥಿಸುತ್ತಿದ್ದೆ, ಮತ್ತು ಹೀಗೆ ಮಾಡುತ್ತಿದ್ದಾಗ ಬೈಬಲು ಯಾರ ಕುರಿತಾಗಿ
ಮಾತಾಡುತ್ತದೋ ಆ ದಾನಿಯೇಲನು ನನ್ನ ಮನಸ್ಸಿನಲ್ಲಿದ್ದನು. . . . ಅಂಥ ಸಂದರ್ಭಗಳಲ್ಲಿ ದೇವರಾತ್ಮವು ನನ್ನ ಮನಸ್ಸನ್ನು ಅತ್ಯಂತ ಪ್ರಯೋಜನಾರ್ಹವಾದ ವಿಷಯಗಳ ಕಡೆಗೆ ಮಾರ್ಗದರ್ಶಿಸಿ, ನನಗೆ ಸಮಾಧಾನಚಿತ್ತವನ್ನು ನೀಡಿತೋ ಎಂಬಂತೆ ತೋರಿತು. ಪ್ರಾರ್ಥನೆಯು ನನಗೆ ಎಷ್ಟು ಆತ್ಮಿಕ ಬಲವನ್ನು ಹಾಗೂ ಸಾಂತ್ವನವನ್ನು ತಂದಿತು!”4. ಈ ಲೇಖನದಲ್ಲಿ ಪ್ರಾರ್ಥನೆಯ ಕುರಿತು ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸುವೆವು?
4 ಬೈಬಲ್ ಹೇಳುವುದು: “ಎಡೆಬಿಡದೆ ಪ್ರಾರ್ಥನೆಮಾಡಿರಿ. ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ.” (1 ಥೆಸಲೊನೀಕ 5:16-18) ಈ ಸಲಹೆಯ ದೃಷ್ಟಿಕೋನದಲ್ಲಿ, ನಾವೀಗ ಈ ಮುಂದಿನ ಪ್ರಶ್ನೆಗಳನ್ನು ಪರಿಗಣಿಸೋಣ: ನಮ್ಮ ಪ್ರಾರ್ಥನೆಗಳಿಗೆ ನಾವೇಕೆ ಗಮನಕೊಡಬೇಕು? ಸತತವಾಗಿ ಯೆಹೋವನನ್ನು ಸಮೀಪಿಸಲು ನಮಗೆ ಯಾವ ಕಾರಣಗಳಿವೆ? ಮತ್ತು ನಮ್ಮ ಕುಂದುಕೊರತೆಗಳ ಕಾರಣದಿಂದ ದೇವರಿಗೆ ಪ್ರಾರ್ಥಿಸಲು ನಾವು ಅನರ್ಹರಾಗಿದ್ದೇವೆ ಎಂಬ ಅನಿಸಿಕೆ ನಮಗಾಗುವಾಗ ನಾವೇನು ಮಾಡಬೇಕು?
ಪ್ರಾರ್ಥನೆಯ ಮೂಲಕ ಸ್ನೇಹವನ್ನು ಬೆಳೆಸಿಕೊಳ್ಳಿರಿ
5. ಯಾವ ಅಪೂರ್ವ ಸ್ನೇಹವನ್ನು ನಾವು ಆನಂದಿಸುವಂತೆ ಪ್ರಾರ್ಥನೆಯು ನಮಗೆ ಸಹಾಯಮಾಡುತ್ತದೆ?
5 ಯೆಹೋವನು ನಿಮ್ಮನ್ನು ತನ್ನ ಸ್ನೇಹಿತರಾಗಿ ಪರಿಗಣಿಸುವಂತೆ ನೀವು ಬಯಸುತ್ತೀರೋ? ಮೂಲಪಿತನಾಗಿದ್ದ ಅಬ್ರಹಾಮನ ವಿಷಯದಲ್ಲಿ ಅವನು ಅದೇ ರೀತಿ ಮಾತಾಡಿದನು. (ಯೆಶಾಯ 41:8; ಯಾಕೋಬ 2:23) ನಾವು ಯೆಹೋವನೊಂದಿಗೆ ಆ ರೀತಿಯ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಆತನು ಬಯಸುತ್ತಾನೆ. ವಾಸ್ತವದಲ್ಲಿ ತನ್ನ ಸಮೀಪಕ್ಕೆ ಬರುವಂತೆ ಆತನು ನಮ್ಮನ್ನು ಆಮಂತ್ರಿಸುತ್ತಾನೆ. (ಯಾಕೋಬ 4:8) ಆ ಆಮಂತ್ರಣವು, ಪ್ರಾರ್ಥನೆಯ ಅಮೂಲ್ಯ ಸುಯೋಗದ ಕುರಿತು ಜಾಗರೂಕತೆಯಿಂದ ಆಲೋಚಿಸುವಂತೆ ನಮ್ಮನ್ನು ಪ್ರಚೋದಿಸಬಾರದೋ? ಒಬ್ಬ ಪ್ರಮುಖ ಸರಕಾರೀ ಅಧಿಕಾರಿಯ ಸ್ನೇಹಿತರಾಗುವುದಿರಲಿ, ಅವನೊಂದಿಗೆ ಮಾತಾಡಲಿಕ್ಕಾಗಿಯೂ ಒಂದು ಅಪಾಯಿಂಟ್‌ಮೆಂಟ್ ಸಿಗುವುದು ಎಷ್ಟು ಕಷ್ಟಕರವಾಗಿರುತ್ತದೆ! ಆದರೂ, ನಾವು ಬಯಸಿದಾಗಲೆಲ್ಲಾ ಅಥವಾ ಅಗತ್ಯವಿರುವಾಗೆಲ್ಲಾ ಈ ವಿಶ್ವದ ಸೃಷ್ಟಿಕರ್ತನನ್ನು ಯಾವುದೇ ಹಿಂಜರಿಕೆಯಿಲ್ಲದೆ ಪ್ರಾರ್ಥನೆಯಲ್ಲಿ ಸಮೀಪಿಸುವಂತೆ ಆತನು ನಮ್ಮನ್ನು ಉತ್ತೇಜಿಸುತ್ತಾನೆ. (ಕೀರ್ತನೆ 37:5) ನಾವು ಎಡೆಬಿಡದೆ ಪ್ರಾರ್ಥಿಸುವುದು, ಯೆಹೋವನೊಂದಿಗೆ ಒಂದು ಆಪ್ತ ಸ್ನೇಹವನ್ನು ಪಡೆದುಕೊಳ್ಳಲು ನಮಗೆ ಸಹಾಯಮಾಡುತ್ತದೆ.
6. ‘ಪ್ರಾರ್ಥಿಸುತ್ತಾ ಇರುವ’ ಆವಶ್ಯಕತೆಯ ಕುರಿತು ಯೇಸುವಿನ ಮಾದರಿಯು ನಮಗೆ ಏನನ್ನು ಕಲಿಸುತ್ತದೆ?
6 ಆದರೂ, ಪ್ರಾರ್ಥನೆಯನ್ನು ನಾವು ಎಷ್ಟು ಸುಲಭವಾಗಿ ಅಲಕ್ಷಿಸಸಾಧ್ಯವಿದೆ! ದೈನಂದಿನ ಜೀವಿತದ ಒತ್ತಡಗಳೊಂದಿಗೆ ವ್ಯವಹರಿಸುವುದು, ನಾವು ದೇವರೊಂದಿಗೆ ಮಾತಾಡಲು ಪ್ರಯತ್ನಿಸದೇ ಇರುವಷ್ಟರ ಮಟ್ಟಿಗೆ ನಮ್ಮ ಗಮನವನ್ನು ಸೆಳೆಯಬಲ್ಲದು. “ಪ್ರಾರ್ಥಿಸುತ್ತಾ ಇರಿ” ಎಂದು ಯೇಸು ತನ್ನ ಶಿಷ್ಯರನ್ನು ಉತ್ತೇಜಿಸಿದನು ಮತ್ತು ಸ್ವತಃ ಅವನೇ ಹಾಗೆ ಮಾಡಿದನು. (ಮತ್ತಾಯ 26:41, NW) ಬೆಳಗ್ಗಿನಿಂದ ರಾತ್ರಿಯ ವರೆಗೆ ಅವನು ಬಿಡುವೇ ಇಲ್ಲದಷ್ಟು ಕಾರ್ಯಮಗ್ನನಾಗಿದ್ದನಾದರೂ, ತನ್ನ ಸ್ವರ್ಗೀಯ ಪಿತನೊಂದಿಗೆ ಮಾತಾಡಲಿಕ್ಕಾಗಿ ಅವನು ಸಮಯವನ್ನು ಬದಿಗಿರಿಸಿದನು. ಕೆಲವೊಮ್ಮೆ ಯೇಸು ಪ್ರಾರ್ಥಿಸಲಿಕ್ಕಾಗಿ ‘ಮುಂಜಾನೆ ಇನ್ನೂ ಮೊಬ್ಬಿರುವಾಗಲೇ ಏಳುತ್ತಿದ್ದನು.’ (ಮಾರ್ಕ 1:35) ಬೇರೆ ಸಂದರ್ಭಗಳಲ್ಲಿ, ಯೆಹೋವನೊಂದಿಗೆ ಮಾತಾಡಲಿಕ್ಕಾಗಿ ಅವನು ಸಾಯಂಕಾಲಗಳಂದು ಏಕಾಂತವಾದ ಸ್ಥಳಕ್ಕೆ ಹೋಗುತ್ತಿದ್ದನು. (ಮತ್ತಾಯ 14:23) ಯೇಸು ಯಾವಾಗಲೂ ಪ್ರಾರ್ಥನೆಗಾಗಿ ಸಮಯವನ್ನು ಮಾಡಿಕೊಂಡನು, ಮತ್ತು ನಾವು ಸಹ ಹಾಗೆಯೇ ಮಾಡತಕ್ಕದ್ದು.—1 ಪೇತ್ರ 2:21.
7. ಯಾವ ಸನ್ನಿವೇಶಗಳು ನಾವು ನಮ್ಮ ಸ್ವರ್ಗೀಯ ಪಿತನೊಂದಿಗೆ ದಿನಾಲೂ ಮಾತಾಡುವಂತೆ ನಮ್ಮನ್ನು ಪ್ರಚೋದಿಸತಕ್ಕದ್ದು?
ಎಫೆಸ 6:18) ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಾವು ದೇವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ, ಆತನೊಂದಿಗಿನ ನಮ್ಮ ಸ್ನೇಹವು ಖಂಡಿತವಾಗಿಯೂ ಬೆಳೆಯುತ್ತದೆ. ಒಂದುವೇಳೆ ಇಬ್ಬರು ಸ್ನೇಹಿತರು ಒಟ್ಟಿಗೇ ಸಮಸ್ಯೆಗಳನ್ನು ಎದುರಿಸುವುದಾದರೆ, ಅವರ ನಡುವೆ ಇರುವ ಸ್ನೇಹದ ಬಂಧವು ಇನ್ನಷ್ಟು ಬಲಗೊಳ್ಳುವುದಿಲ್ಲವೇ? (ಜ್ಞಾನೋಕ್ತಿ 17:17) ನಾವು ಯೆಹೋವನ ಮೇಲೆ ಆತುಕೊಂಡು, ಆತನ ಸಹಾಯವನ್ನು ಅನುಭವಿಸುವಾಗ ನಮ್ಮ ವಿಷಯದಲ್ಲಿಯೂ ಇದು ನಿಜವಾಗುತ್ತದೆ.—2 ಪೂರ್ವಕಾಲವೃತ್ತಾಂತ 14:11.
7 ಪ್ರತಿ ದಿನ ನಾವು ಸಮಸ್ಯೆಗಳನ್ನು ಎದುರಿಸುವಾಗ, ಶೋಧನೆಗಳು ಎದುರಾಗುವಾಗ, ಮತ್ತು ನಿರ್ಣಯಗಳನ್ನು ಮಾಡುವಾಗ, ಖಾಸಗಿ ಪ್ರಾರ್ಥನೆಯನ್ನು ಮಾಡಲು ಅನೇಕ ಸೂಕ್ತವಾದ ಕ್ಷಣಗಳು ನಮಗೆ ಲಭ್ಯವಾಗುತ್ತವೆ. (8. ನೆಹೆಮೀಯ, ಯೇಸು ಹಾಗೂ ಹನ್ನರ ಉದಾಹರಣೆಗಳಿಂದ, ನಮ್ಮ ವೈಯಕ್ತಿಕ ಪ್ರಾರ್ಥನೆಗಳು ಎಷ್ಟು ಉದ್ದವಾಗಿರಬೇಕು ಎಂಬುದರ ಕುರಿತು ಏನನ್ನು ಕಲಿತುಕೊಳ್ಳುತ್ತೇವೆ?
8 ನಾವು ಎಷ್ಟು ದೀರ್ಘವಾಗಿ ಅಥವಾ ಎಷ್ಟು ಬಾರಿ ಪ್ರಾರ್ಥನೆಯಲ್ಲಿ ಆತನೊಂದಿಗೆ ಮಾತಾಡಬಹುದು ಎಂಬ ವಿಷಯದಲ್ಲಿ ದೇವರು ನಿರ್ಬಂಧಗಳನ್ನು ಹಾಕದಿರುವುದಕ್ಕಾಗಿ ನಾವೆಷ್ಟು ಸಂತೋಷಿತರಾಗಿರಸಾಧ್ಯವಿದೆ! ಪಾರಸಿಯ ಅರಸನ ಮುಂದೆ ಒಂದು ವಿಜ್ಞಾಪನೆಯನ್ನು ಮಾಡಿಕೊಳ್ಳುವುದಕ್ಕೆ ಮುಂಚೆ ನೆಹೆಮೀಯನು ಆ ಕೂಡಲೆ ಮನಸ್ಸಿನಲ್ಲೇ ಮೌನವಾಗಿ ಒಂದು ಚಿಕ್ಕ ಪ್ರಾರ್ಥನೆಯನ್ನು ಮಾಡಿದನು. (ನೆಹೆಮೀಯ 2:4, 5) ಲಾಜರನನ್ನು ಪುನರುತ್ಥಾನಗೊಳಿಸಲಿಕ್ಕಾಗಿ ಶಕ್ತಿಯನ್ನು ದಯಪಾಲಿಸುವಂತೆ ಯೇಸು ಯೆಹೋವನ ಬಳಿ ವಿನಂತಿಸಿಕೊಂಡಾಗ, ಅವನು ಸಹ ಒಂದು ಚಿಕ್ಕ ಪ್ರಾರ್ಥನೆಯನ್ನು ಮಾಡಿದನು. (ಯೋಹಾನ 11:41, 42) ಇನ್ನೊಂದು ಕಡೆಯಲ್ಲಿ, ಹನ್ನಳು ‘ಯೆಹೋವನ ಮುಂದೆ ದೀರ್ಘವಾದ ಪ್ರಾರ್ಥನೆಯನ್ನು ಮಾಡುವ’ ಮೂಲಕ ಆತನ ಮುಂದೆ ತನ್ನ ಹೃದಯವನ್ನು ತೋಡಿಕೊಂಡಳು. (1 ಸಮುವೇಲ 1:12, 15, 16) ನಮ್ಮ ವೈಯಕ್ತಿಕ ಪ್ರಾರ್ಥನೆಗಳು, ಅಗತ್ಯಕ್ಕನುಸಾರ ಮತ್ತು ಪರಿಸ್ಥಿತಿಗಳಿಗನುಸಾರ ಚುಟುಕಾಗಿರಬಲ್ಲವು ಅಥವಾ ದೀರ್ಘವಾಗಿರಬಲ್ಲವು.
9. ನಮ್ಮ ಪ್ರಾರ್ಥನೆಗಳಲ್ಲಿ, ಯೆಹೋವನು ನಮಗಾಗಿ ಮಾಡಿರುವುದೆಲ್ಲದ್ದಕ್ಕಾಗಿ ಸ್ತುತಿ ಹಾಗೂ ಧನ್ಯವಾದವು ಒಳಗೂಡಿರಬೇಕು ಏಕೆ?
9 ಬೈಬಲಿನಲ್ಲಿರುವ ಅನೇಕ ಪ್ರಾರ್ಥನೆಗಳು, ಯೆಹೋವನ ಪರಮೋಚ್ಛ ಸ್ಥಾನ ಹಾಗೂ ಆತನ ಮಹತ್ಕಾರ್ಯಗಳಿಗಾಗಿ ಹೃತ್ಪೂರ್ವಕವಾದ ಗಣ್ಯತೆಯನ್ನು ವ್ಯಕ್ತಪಡಿಸುತ್ತವೆ. (ವಿಮೋಚನಕಾಂಡ 15:1-19; 1 ಪೂರ್ವಕಾಲವೃತ್ತಾಂತ 16:7-36; ಕೀರ್ತನೆ 145) ದರ್ಶನವೊಂದರಲ್ಲಿ ಅಪೊಸ್ತಲ ಯೋಹಾನನು, 24 ಮಂದಿ ಹಿರಿ ಯರು—ತಮ್ಮ ಸ್ವರ್ಗೀಯ ಸ್ಥಾನದಲ್ಲಿರುವ ಅಭಿಷಿಕ್ತ ಕ್ರೈಸ್ತರ ಪೂರ್ಣ ಸಂಖ್ಯೆ—ಹೀಗೆ ಹೇಳುತ್ತಾ ಯೆಹೋವನನ್ನು ಸ್ತುತಿಸುವುದನ್ನು ನೋಡುತ್ತಾನೆ: “ಕರ್ತನೇ [“ಯೆಹೋವನೇ,” NW], ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” (ಪ್ರಕಟನೆ 4:10, 11) ಸೃಷ್ಟಿಕರ್ತನನ್ನು ಕ್ರಮವಾಗಿ ಸ್ತುತಿಸಲು ನಮಗೂ ಸಕಾರಣವಿದೆ. ಒಂದು ಮಗುವಿಗಾಗಿ ಹೆತ್ತವರು ಮಾಡಿರುವ ಯಾವುದಾದರೊಂದು ಸಂಗತಿಗಾಗಿ, ಆ ಮಗುವು ಅವರಿಗೆ ಹೃತ್ಪೂರ್ವಕ ಧನ್ಯವಾದವನ್ನು ಅರ್ಪಿಸುವಾಗ ಅವರೆಷ್ಟು ಸಂತೋಷಿಸುತ್ತಾರೆ! ಯೆಹೋವನ ಕೃಪೆಗಳ ಕುರಿತು ಗಣ್ಯತಾಪೂರ್ವಕವಾಗಿ ಮನನಮಾಡುವುದು ಮತ್ತು ಅವುಗಳಿಗಾಗಿ ಹೃತ್ಪೂರ್ವಕವಾದ ಕೃತಜ್ಞತೆಯನ್ನು ವ್ಯಕ್ತಪಡಿಸುವುದು, ನಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸುವ ಅತ್ಯುತ್ತಮ ವಿಧವಾಗಿದೆ.
“ಎಡೆಬಿಡದೆ ಪ್ರಾರ್ಥನೆಮಾಡಿರಿ”
10. ನಮ್ಮ ನಂಬಿಕೆಯನ್ನು ಬಲಗೊಳಿಸುವುದರಲ್ಲಿ ಪ್ರಾರ್ಥನೆಯು ಯಾವ ಪಾತ್ರವನ್ನು ವಹಿಸುತ್ತದೆ?
10 ಕ್ರಮವಾದ ಪ್ರಾರ್ಥನೆಯು ನಮ್ಮ ನಂಬಿಕೆಗೆ ಅತ್ಯಗತ್ಯವಾಗಿದೆ. “ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡು”ವ ಲೂಕ 18:1-8) ಅರ್ಥಭರಿತವಾದ, ಹೃತ್ಪೂರ್ವಕ ಪ್ರಾರ್ಥನೆಯು ನಂಬಿಕೆಯನ್ನು ಕಟ್ಟುತ್ತದೆ. ಮೂಲಪಿತನಾಗಿದ್ದ ಅಬ್ರಹಾಮನು ವೃದ್ಧನಾಗುತ್ತಿದ್ದು, ಇನ್ನೂ ಯಾವುದೇ ಸಂತತಿಯನ್ನು ಪಡೆದಿರದಿದ್ದಾಗ, ಈ ವಿಷಯದ ಕುರಿತು ಅವನು ದೇವರೊಂದಿಗೆ ಮಾತಾಡಿದನು. ಇದಕ್ಕೆ ಉತ್ತರವಾಗಿ ಯೆಹೋವನು ಅವನಿಗೆ, ಮೊದಲಾಗಿ ಆಕಾಶದ ಕಡೆಗೆ ನೋಡಿ ನಕ್ಷತ್ರಗಳನ್ನು ಲೆಕ್ಕಿಸುವಂತೆ ಹೇಳಿದನು. ತದನಂತರ ದೇವರು ಅಬ್ರಹಾಮನಿಗೆ ಪುನರಾಶ್ವಾಸನೆ ನೀಡಿದ್ದು: “ನಿನ್ನ ಸಂತಾನವು ಅಷ್ಟಾಗುವದು.” ಇದರ ಫಲಿತಾಂಶವೇನು? ಅಬ್ರಹಾಮನು “ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು.” (ಆದಿಕಾಂಡ 15:5, 6) ಒಂದುವೇಳೆ ನಾವು ಪ್ರಾರ್ಥನೆಯಲ್ಲಿ ಯೆಹೋವನ ಮುಂದೆ ನಮ್ಮ ಹೃದಯಗಳನ್ನು ತೋಡಿಕೊಳ್ಳುವಲ್ಲಿ, ಬೈಬಲಿನ ಮೂಲಕ ಆತನು ಕೊಡುವ ಆಶ್ವಾಸನೆಗಳನ್ನು ಅಂಗೀಕರಿಸುವಲ್ಲಿ, ಮತ್ತು ಆತನಿಗೆ ವಿಧೇಯರಾಗುವಲ್ಲಿ, ಆತನು ನಮ್ಮ ನಂಬಿಕೆಯನ್ನು ಬಲಗೊಳಿಸುವನು.
ಆವಶ್ಯಕತೆಯನ್ನು ದೃಷ್ಟಾಂತಿಸಿದ ಬಳಿಕ ಯೇಸು ಕೇಳಿದ್ದು: “ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?” (11. ಸಮಸ್ಯೆಗಳನ್ನು ನಿಭಾಯಿಸಲು ಪ್ರಾರ್ಥನೆಗಳು ನಮಗೆ ಹೇಗೆ ಸಹಾಯಮಾಡಬಲ್ಲವು?
11 ಸಮಸ್ಯೆಗಳನ್ನು ನಿಭಾಯಿಸಲು ಸಹ ಪ್ರಾರ್ಥನೆಯು ನಮಗೆ ಸಹಾಯಮಾಡಸಾಧ್ಯವಿದೆ. ನಿಮ್ಮ ದೈನಂದಿನ ಜೀವನವು ಹೊರೆದಾಯಕವಾಗಿದೆಯೋ ಅಥವಾ ನೀವು ಎದುರಿಸುವ ಪರಿಸ್ಥಿತಿಗಳು ತಾಳಿಕೊಳ್ಳಲು ಕಷ್ಟಕರವಾಗಿವೆಯೋ? ಬೈಬಲ್ ನಮಗೆ ಹೇಳುವುದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಕಷ್ಟಕರವಾದ ನಿರ್ಣಯಗಳನ್ನು ಮಾಡಲಿಕ್ಕಿರುವಾಗ ನಾವು ಯೇಸುವಿನ ಮಾದರಿಯನ್ನು ಅನುಕರಿಸಸಾಧ್ಯವಿದೆ. ತನ್ನ 12 ಮಂದಿ ಅಪೊಸ್ತಲರನ್ನು ಆರಿಸಿಕೊಳ್ಳುವುದಕ್ಕೆ ಮುಂಚೆ ಅವನು ಒಂದು ಇಡೀ ರಾತ್ರಿಯನ್ನು ಖಾಸಗಿ ಪ್ರಾರ್ಥನೆಯನ್ನು ಮಾಡುವುದರಲ್ಲಿ ಕಳೆದನು. (ಲೂಕ 6:12-16) ಅಷ್ಟುಮಾತ್ರವಲ್ಲ, ಯೇಸು ಮರಣಪಡುವುದಕ್ಕೆ ಮುಂಚಿನ ರಾತ್ರಿ ಎಷ್ಟು ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದನೆಂದರೆ, ‘ಅವನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು.’ (ಲೂಕ 22:44) ಫಲಿತಾಂಶವೇನು? ಅವನು “ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.” (ಇಬ್ರಿಯ 5:7) ಶ್ರದ್ಧಾಪೂರ್ವಕವಾದ ಹಾಗೂ ಎಡೆಬಿಡದೆ ಮಾಡಲ್ಪಡುವ ನಮ್ಮ ಪ್ರಾರ್ಥನೆಗಳು, ಒತ್ತಡಭರಿತ ಸನ್ನಿವೇಶಗಳನ್ನು ಮತ್ತು ಕಷ್ಟಕರ ಪರೀಕ್ಷೆಗಳನ್ನು ನಿಭಾಯಿಸಲು ನಮಗೆ ಸಹಾಯಮಾಡುವವು.
12. ಪ್ರಾರ್ಥನೆಯ ಸುಯೋಗವು ನಮ್ಮಲ್ಲಿ ಯೆಹೋವನಿಗಿರುವ ವೈಯಕ್ತಿಕ ಆಸಕ್ತಿಯನ್ನು ಹೇಗೆ ದೃಷ್ಟಾಂತಿಸುತ್ತದೆ?
12 ಪ್ರಾರ್ಥನೆಯ ಮೂಲಕ ಯೆಹೋವನಿಗೆ ಇನ್ನಷ್ಟು ಸಮೀಪವಾಗಲು ಇನ್ನೊಂದು ಕಾರಣವೇನೆಂದರೆ, ಆಗ ಆತನು ನಮ್ಮ ಸಮೀಪಕ್ಕೆ ಬರುತ್ತಾನೆ. (ಯಾಕೋಬ 4:8) ನಾವು ಪ್ರಾರ್ಥನೆಯಲ್ಲಿ ಯೆಹೋವನ ಮುಂದೆ ನಮ್ಮ ಹೃದಯ ಬಿಚ್ಚಿಮಾತಾಡುವಾಗ, ನಮ್ಮ ಆವಶ್ಯಕತೆಗಳ ಬಗ್ಗೆ ಆತನು ಆಸಕ್ತನಾಗಿದ್ದಾನೆ ಮತ್ತು ಕೋಮಲ ರೀತಿಯಲ್ಲಿ ನಮ್ಮನ್ನು ಪರಾಮರಿಸುತ್ತಾನೆ ಎಂಬುದು ನಮ್ಮ ಅರಿವಿಗೆ ಬರುವುದಿಲ್ಲವೋ? ವೈಯಕ್ತಿಕವಾಗಿ ನಾವು ದೇವರ ಪ್ರೀತಿಯನ್ನು ಅನುಭವಿಸುತ್ತೇವೆ. ತಮ್ಮ ಸ್ವರ್ಗೀಯ ಪಿತನೋಪಾದಿ ಯೆಹೋವನಿಗೆ ಆತನ ಸೇವಕರು ಮಾಡುವ ಪ್ರತಿಯೊಂದು ಪ್ರಾರ್ಥನೆಯನ್ನು ಆಲಿಸುವ ಜವಾಬ್ದಾರಿಯನ್ನು ಆತನು ಬೇರಾರಿಗೂ ವಹಿಸಿಕೊಟ್ಟಿಲ್ಲ. (ಕೀರ್ತನೆ 66:19, 20; ಲೂಕ 11:2) ಇದಲ್ಲದೆ ‘ಆತನು ನಿಮಗೋಸ್ಕರ ಚಿಂತಿಸುವುದರಿಂದ ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕುವಂತೆ’ ಆತನು ನಿಮಗೆ ಕರೆಕೊಡುತ್ತಾನೆ.—1 ಪೇತ್ರ 5:6, 7.
13, 14. ಎಡೆಬಿಡದೆ ಪ್ರಾರ್ಥಿಸಲು ನಮಗೆ ಯಾವ ಸಕಾರಣಗಳಿವೆ?
13 ಪ್ರಾರ್ಥನೆಯು, ಸಾರ್ವಜನಿಕ ಶುಶ್ರೂಷೆಗಾಗಿ ಮಹತ್ತರವಾದ ಅ. ಕೃತ್ಯಗಳು 4:23-31) ಪ್ರಾರ್ಥನೆಯು “ಸೈತಾನನ ತಂತ್ರೋಪಾಯಗಳ” ವಿರುದ್ಧ ಸಹ ನಮ್ಮನ್ನು ಕಾಪಾಡಬಲ್ಲದು. (ಎಫೆಸ 6:11, 17, 18) ದೈನಂದಿನ ಪರೀಕ್ಷೆಗಳನ್ನು ನಿಭಾಯಿಸಲು ಹೋರಾಡುತ್ತಿರುವಾಗ, ನಮ್ಮನ್ನು ಬಲಪಡಿಸುವಂತೆ ನಾವು ಸತತವಾಗಿ ಯೆಹೋವನನ್ನು ಬೇಡಿಕೊಳ್ಳಸಾಧ್ಯವಿದೆ. ಯೇಸುವಿನ ಮಾದರಿ ಪ್ರಾರ್ಥನೆಯಲ್ಲಿ, ‘ಕೆಡುಕನಾಗಿರುವ’ ಪಿಶಾಚನಾದ ಸೈತಾನನಿಂದ ‘ನಮ್ಮನ್ನು ತಪ್ಪಿಸು’ವಂತೆ ಯೆಹೋವನ ಬಳಿ ವಿನಂತಿಸಿಕೊಳ್ಳುವುದೂ ಸೇರಿದೆ.—ಮತ್ತಾಯ 6:13.
ಹುರುಪನ್ನು ತೋರಿಸುವಂತೆ ನಮ್ಮನ್ನು ಪ್ರಚೋದಿಸಬಲ್ಲದು ಮತ್ತು ಅನಾಸಕ್ತಿ ಅಥವಾ ವಿರೋಧದಿಂದಾಗಿ ನಾವು ಪ್ರಯತ್ನವನ್ನು ಬಿಟ್ಟುಬಿಡುವಂಥ ಅನಿಸಿಕೆಯು ನಮ್ಮಲ್ಲಿ ಹುಟ್ಟುವಾಗ ನಮ್ಮನ್ನು ಬಲಪಡಿಸಬಲ್ಲದು. (14 ನಮ್ಮ ಪಾಪಪೂರ್ಣ ಪ್ರವೃತ್ತಿಗಳನ್ನು ನಿಯಂತ್ರಿಸುವುದರಲ್ಲಿ ಸಹಾಯಕ್ಕಾಗಿ ಪ್ರಾರ್ಥಿಸುತ್ತಾ ಇರುವುದಾದರೆ ನಾವು ಯೆಹೋವನ ಸಹಾಯಹಸ್ತವನ್ನು ಅನುಭವಿಸುವೆವು. ನಮಗೆ ಈ ಆಶ್ವಾಸನೆಯಿದೆ: “ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:13) ಸ್ವತಃ ಅಪೊಸ್ತಲ ಪೌಲನೇ ಬೇರೆ ಬೇರೆ ರೀತಿಯ ಸನ್ನಿವೇಶದ ಕೆಳಗೆ ಯೆಹೋವನ ಬಲವರ್ಧಕ ಪರಾಮರಿಕೆಯನ್ನು ಅನುಭವಿಸಿದನು. ಅವನು ಹೇಳಿದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13; 2 ಕೊರಿಂಥ 11:23-29.
ಕುಂದುಕೊರತೆಗಳಿದ್ದರೂ ಪ್ರಾರ್ಥನೆಯಲ್ಲಿ ನಿರತರಾಗಿರಿ
15. ನಮ್ಮ ನಡತೆಯು ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿರಲು ತಪ್ಪಿಹೋಗುವಾಗ ಏನು ಸಂಭವಿಸಸಾಧ್ಯವಿದೆ?
15 ನಮ್ಮ ಪ್ರಾರ್ಥನೆಗಳು ಒಳ್ಳೇ ರೀತಿಯಲ್ಲಿ ಆಲಿಸಲ್ಪಡಬೇಕಾದರೆ, ದೇವರ ವಾಕ್ಯದ ಸಲಹೆಯನ್ನು ನಾವು ತಿರಸ್ಕರಿಸಬಾರದು. ಅಪೊಸ್ತಲ ಯೋಹಾನನು ಬರೆದುದು: “ನಾವು ಆತನ ಆಜ್ಞೆಗಳನ್ನು ಕೈಕೊಂಡು ಆತನ ಎಣಿಕೆಯಲ್ಲಿ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವವರಾಗಿರುವದರಿಂದ ಏನು ಬೇಡಿಕೊಂಡರೂ ಆತನಿಂದ ಹೊಂದುವೆವು.” (1 ಯೋಹಾನ 3:22) ಆದರೂ, ನಮ್ಮ ನಡತೆಯು ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿರಲು ತಪ್ಪಿಹೋಗುವಲ್ಲಿ ಏನು ಸಂಭವಿಸಬಹುದು? ಏದೆನ್ ತೋಟದಲ್ಲಿ ಆದಾಮಹವ್ವರು ಪಾಪಮಾಡಿದ ಬಳಿಕ, ಅವರು ಅಡಗಿಕೊಂಡರು. ನಾವು ಸಹ ‘ಯೆಹೋವನಿಗೆ ಕಾಣಿಸಬಾರದೆಂದು’ ಅಡಗಿಕೊಳ್ಳುವ ಮತ್ತು ಪ್ರಾರ್ಥಿಸುವುದನ್ನು ನಿಲ್ಲಿಸುವ ಪ್ರವೃತ್ತಿಯುಳ್ಳವರಾಗಬಹುದು. (ಆದಿಕಾಂಡ 3:8) ಒಬ್ಬ ಅನುಭವಸ್ಥ ಸಂಚರಣ ಮೇಲ್ವಿಚಾರಕರಾಗಿರುವ ಕ್ಲೌಸ್ ಹೇಳಿದ್ದು: “ಯೆಹೋವನಿಂದ ಮತ್ತು ಆತನ ಸಂಸ್ಥೆಯಿಂದ ದೂರ ಹೋಗುವವರು ಯಾವಾಗಲೂ ತೆಗೆದುಕೊಳ್ಳುವ ಪ್ರಪ್ರಥಮ ತಪ್ಪು ಹೆಜ್ಜೆಯು ಅವರು ಪ್ರಾರ್ಥಿಸುವುದನ್ನು ನಿಲ್ಲಿಸಿಬಿಡುವುದೇ ಆಗಿದೆ ಎಂಬುದನ್ನು ನಾನು ಗಮನಿಸಿದ್ದೇನೆ.” (ಇಬ್ರಿಯ 2:1) ಹೋಸೇ ಆಂಕಾಲ್‌ನ ವಿಷಯದಲ್ಲಿ ಇದು ನಿಜವಾಗಿತ್ತು. ಅವನು ಹೇಳಿದ್ದು: “ಸುಮಾರು ಎಂಟು ವರ್ಷಗಳ ವರೆಗೆ ನಾನು ಯೆಹೋವನಿಗೆ ಪ್ರಾರ್ಥಿಸುವುದೇ ವಿರಳವಾಗಿತ್ತು. ಆತನು ನನ್ನ ಸ್ವರ್ಗೀಯ ಪಿತನಾಗಿದ್ದಾನೆ ಎಂದು ನಾನು ಇನ್ನೂ ಪರಿಗಣಿಸುತ್ತಿದ್ದೆನಾದರೂ, ಆತನೊಂದಿಗೆ ಮಾತಾಡಲು ನಾನು ಅಯೋಗ್ಯನೆಂಬ ಅನಿಸಿಕೆ ನನಗಿತ್ತು.”
16, 17. ಕ್ರಮವಾದ ಪ್ರಾರ್ಥನೆಗಳು ನಾವು ಆತ್ಮಿಕ ಬಲಹೀನತೆಯನ್ನು ಜಯಿಸಲು ನಮಗೆ ಹೇಗೆ ಸಹಾಯಮಾಡಬಲ್ಲವು ಎಂಬುದಕ್ಕೆ ಉದಾಹರಣೆಗಳನ್ನು ಕೊಡಿರಿ.
16 ಆತ್ಮಿಕ ಬಲಹೀನತೆಯಿಂದಾಗಿ ಅಥವಾ ನಾವು ತಪ್ಪುಗೈಯುವಿಕೆಯಲ್ಲಿ ತೊಡಗಿರುವುದರಿಂದ ನಮ್ಮಲ್ಲಿ ಕೆಲವರು ನಾವು ಪ್ರಾರ್ಥಿಸಲು ಅಯೋಗ್ಯರಾಗಿದ್ದೇವೆಂದು ನೆನಸಬಹುದು. ಆದರೆ ಪ್ರಾರ್ಥನೆಯ ಒದಗಿಸುವಿಕೆಯನ್ನು ನಾವು ಪೂರ್ಣ ರೀತಿಯಲ್ಲಿ ಸದುಪಯೋಗಿಸಬೇಕಾಗಿರುವುದು ಈ ಸಮಯದಲ್ಲೇ ಎಂಬುದರಲ್ಲಿ ಸಂಶಯವಿಲ್ಲ. ಯೋನನು ತನ್ನ ನೇಮಕದಿಂದ ಓಡಿಹೋದನು. ಆದರೆ ‘ಇಕ್ಕಟ್ಟಿನಲ್ಲಿ ಯೋನನು ಯೆಹೋವನಿಗೆ ಮೊರೆಯಿಟ್ಟನು; ಆತನು ಅವನಿಗೆ ಸದುತ್ತರವನ್ನು ದಯಪಾಲಿಸಿದನು; ಪಾತಾಳದ ಗರ್ಭದೊಳಗಿಂದ ಯೋನನು ಕೂಗಿಕೊಂಡನು, ಮತ್ತು ಯೆಹೋವನು ಅವನ ಧ್ವನಿಯನ್ನು ಲಾಲಿಸಿದನು.’ (ಯೋನ 2:2) ಯೋನನು ಪ್ರಾರ್ಥಿಸಿದನು, ಯೆಹೋವನು ಅವನ ಪ್ರಾರ್ಥನೆಗೆ ಸದುತ್ತರವನ್ನು ನೀಡಿದನು, ಮತ್ತು ಯೋನನು ಆತ್ಮಿಕವಾಗಿ ಪುನಃ ಚೇತರಿಸಿಕೊಂಡನು.
17 ಹೋಸೇ ಸಹ ಸಹಾಯಕ್ಕಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದನು. ಅವನು ಹೀಗೆ ಜ್ಞಾಪಿಸಿಕೊಳ್ಳುತ್ತಾನೆ: “ನಾನು ನನ್ನ ಹೃದಯವನ್ನು ಬರಿದುಮಾಡಿಕೊಂಡು, ದೇವರ ಬಳಿ ಕ್ಷಮಾಪಣೆಯನ್ನು ಕೇಳಿದೆ. ಮತ್ತು ಆತನು ನನಗೆ ನಿಜವಾಗಿಯೂ ಸಹಾಯಮಾಡಿದನು. ಪ್ರಾರ್ಥನೆಯ ಸಹಾಯವಿಲ್ಲದೆ ನಾನು ಸತ್ಯಕ್ಕೆ ಹಿಂದಿರುಗುತ್ತಿದ್ದೆ ಎಂದು ನನಗನಿಸುವುದಿಲ್ಲ. ಈಗ ನಾನು ಕ್ರಮವಾಗಿ ಪ್ರತಿ ದಿನ ಪ್ರಾರ್ಥಿಸುತ್ತೇನೆ, ಮತ್ತು ಈ ಸಮಯಗಳಿಗಾಗಿ ಎದುರುನೋಡುತ್ತೇನೆ.” ನಮ್ಮ ತಪ್ಪುಗಳ ಕುರಿತು ದೇವರೊಂದಿಗೆ ಮನಬಿಚ್ಚಿ ಮಾತಾಡಲು ಮತ್ತು ಆತನ ಕ್ಷಮಾಪಣೆಗಾಗಿ ದೀನಭಾವದಿಂದ ಬೇಡಿಕೊಳ್ಳಲು ನಾವು ಎಂದಿಗೂ ಹಿಂಜರಿಯಬಾರದು. ಅರಸನಾದ ದಾವೀದನು ತನ್ನ ಲೋಪದೋಷಗಳನ್ನು ನಿವೇದಿಸಿಕೊಂಡಾಗ, ಯೆಹೋವನು ಅವನ ಪಾಪಗಳನ್ನು ಮನ್ನಿಸಿಬಿಟ್ಟನು. (ಕೀರ್ತನೆ 32:3-5) ಯೆಹೋವನು ನಮ್ಮನ್ನು ಖಂಡಿಸಲಿಕ್ಕಾಗಿ ಅಲ್ಲ, ಬದಲಾಗಿ ನಮಗೆ ಸಹಾಯಮಾಡಲು ಬಯಸುತ್ತಾನೆ. (1 ಯೋಹಾನ 3:19, 20) ಮತ್ತು ಸಭೆಯ ಹಿರೀ ಪುರುಷರ ಪ್ರಾರ್ಥನೆಗಳು ನಮಗೆ ಆತ್ಮಿಕವಾಗಿ ಸಹಾಯಮಾಡಬಲ್ಲವು, ಏಕೆಂದರೆ ಅವರ ಪ್ರಾರ್ಥನೆಗಳಿಗೆ ‘ಬಹಳ ಬಲವಿರುತ್ತದೆ.’—ಯಾಕೋಬ 5:13-16.
18. ದೇವರ ಸೇವಕರು ಎಷ್ಟೇ ದೂರ ಸರಿದಿರಲಿ, ಅವರು ಯಾವ ದೃಢಭರವಸೆಯನ್ನು ಹೊಂದಿರಸಾಧ್ಯವಿದೆ?
18 ಒಂದು ತಪ್ಪನ್ನು ಮಾಡಿದ ಬಳಿಕ ಸಹಾಯ ಮತ್ತು ಬುದ್ಧಿವಾದಕ್ಕಾಗಿ ತನ್ನ ಬಳಿಗೆ ಬರುವಂಥ ಒಬ್ಬ ಮಗನನ್ನು ಯಾವ ತಂದೆಯು ತಾನೇ ತಿರಸ್ಕರಿಸುವನು? ನಾವು ಎಷ್ಟೇ ದೂರ ಸರಿದಿರುವುದಾದರೂ, ಪುನಃ ನಮ್ಮ ಸ್ವರ್ಗೀಯ ಪಿತನ ಬಳಿಗೆ ಹಿಂದಿರುಗುವುದಾದರೆ ಆತನು ಮಹದಾನಂದಪಡುತ್ತಾನೆ ಎಂಬುದನ್ನು ಪೋಲಿಹೋದ ಮಗನ ಸಾಮ್ಯವು ತೋರಿಸುತ್ತದೆ. (ಲೂಕ 15:21, 22, 32) ತಪ್ಪುಮಾಡುತ್ತಿರುವವರೆಲ್ಲರೂ ತನಗೆ ಬಿನ್ನಹಮಾಡಿಕೊಳ್ಳುವಂತೆ ಯೆಹೋವನು ಅವರನ್ನು ಉತ್ತೇಜಿಸುತ್ತಾನೆ, ಏಕೆಂದರೆ “ಆತನು ಮಹಾಕೃಪೆಯಿಂದ ಕ್ಷಮಿಸುವನು.” (ಯೆಶಾಯ 55:6, 7) ದಾವೀದನು ಅನೇಕ ಗಂಭೀರ ಪಾಪಗಳನ್ನು ಮಾಡಿದನಾದರೂ, “ದೇವರೇ, ನನ್ನ ಮೊರೆಯನ್ನು ಲಾಲಿಸು; ನನ್ನ ವಿಜ್ಞಾಪನೆಗೆ ಕಿವಿಮುಚ್ಚಿಕೊಳ್ಳಬೇಡ” ಎಂದು ಹೇಳುವ ಮೂಲಕ ಅವನು ಯೆಹೋವನ ಬಳಿ ವಿನಂತಿಸಿಕೊಂಡನು. ಅವನು ಇನ್ನೂ ಹೇಳಿದ್ದು: ‘ತ್ರಿಕಾಲದಲ್ಲಿಯೂ ಹಂಬಲಿಸುತ್ತಾ ಮೊರೆಯಿಡುವೆನು. [ಯೆಹೋವನು] ಹೇಗೂ ನನ್ನ ಮೊರೆಯನ್ನು ಕೇಳುವನು.’ (ಕೀರ್ತನೆ 55:1, 17) ಎಷ್ಟು ಪುನರಾಶ್ವಾಸನಾದಾಯಕ ಮಾತುಗಳಿವು!
19. ಉತ್ತರಿಸಲ್ಪಡದಿರುವಂತೆ ತೋರುವ ಪ್ರಾರ್ಥನೆಗಳು ಯಾವಾಗಲೂ ದೇವರ ಅಸಮ್ಮತಿಯ ಪುರಾವೆಯಾಗಿವೆ ಎಂಬ ತೀರ್ಮಾನಕ್ಕೆ ನಾವು ಬರಬಾರದೇಕೆ?
19 ನಮ್ಮ ಪ್ರಾರ್ಥನೆಗೆ ಆ ಕೂಡಲೆ ಉತ್ತರವು ಸಿಗದಿರುವಲ್ಲಿ ಆಗೇನು? ಆಗ, ನಮ್ಮ ಬೇಡಿಕೆಯು ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿದೆ ಮತ್ತು ಅದು ಯೇಸುವಿನ ಹೆಸರಿನಲ್ಲಿ ನಿವೇದಿಸಲ್ಪಡುತ್ತಿದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. (ಯೋಹಾನ 16:23; 1 ಯೋಹಾನ 5:14) ‘ದುರಭಿಪ್ರಾಯಪಟ್ಟು ಬೇಡಿಕೊಂಡದ್ದರಿಂದ’ ಯಾರ ಪ್ರಾರ್ಥನೆಗಳು ಉತ್ತರಿಸಲ್ಪಡದೇ ಹೋದವೋ ಅಂಥ ಕೆಲವು ಕ್ರೈಸ್ತರ ಕುರಿತು ಶಿಷ್ಯ ಯಾಕೋಬನು ಸೂಚಿಸಿ ಮಾತಾಡಿದನು. (ಯಾಕೋಬ 4:3) ಇನ್ನೊಂದು ಕಡೆಯಲ್ಲಿ, ಉತ್ತರಿಸಲ್ಪಡದಿರುವಂತೆ ತೋರುವ ಪ್ರಾರ್ಥನೆಗಳು ಯಾವಾಗಲೂ ದೇವರ ಅಸಮ್ಮತಿಯ ಪುರಾವೆಯಾಗಿವೆ ಎಂದು ನಾವು ಕೂಡಲೆ ತೀರ್ಮಾನಿಸಬಾರದು. ಕೆಲವೊಮ್ಮೆ ಯೆಹೋವನು, ತನ್ನ ಉತ್ತರವು ಸುವ್ಯಕ್ತವಾಗುವುದಕ್ಕೆ ಮೊದಲು, ನಂಬಿಗಸ್ತ ಆರಾಧಕರು ಒಂದು ನಿರ್ದಿಷ್ಟ ವಿಷಯದ ಕುರಿತು ಪ್ರಾರ್ಥಿಸುತ್ತಾ ಇರುವಂತೆ ಅನುಮತಿಸಬಹುದು. ‘ಬೇಡಿಕೊಳ್ಳುತ್ತಾ ಇರಿ, ನಿಮಗೆ ದೊರೆಯುವುದು’ ಎಂದು ಯೇಸು ಹೇಳಿದನು. (ಮತ್ತಾಯ 7:7, NW) ಆದುದರಿಂದ, ನಾವು ‘ಪ್ರಾರ್ಥನೆಯಲ್ಲಿ ನಿರತರಾಗಿರುವ’ ಆವಶ್ಯಕತೆಯಿದೆ.—ರೋಮಾಪುರ 12:12, NW.
ಕ್ರಮವಾಗಿ ಪ್ರಾರ್ಥಿಸಿರಿ
20, 21. (ಎ) ಈ “ಕಡೇ ದಿವಸಗಳಲ್ಲಿ” ನಾವು ಎಡೆಬಿಡದೆ ಏಕೆ ಪ್ರಾರ್ಥಿಸಬೇಕು? (ಬಿ) ಯೆಹೋವನ ಕೃಪಾಸನದ ಮುಂದೆ ನಾವು ದಿನಾಲೂ ಆತನನ್ನು ಸಮೀಪಿಸುವಾಗ ನಾವು ಏನನ್ನು ಪಡೆದುಕೊಳ್ಳುವೆವು?
20 ‘ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಕಾಲಗಳಿಂದ’ ಗುರುತಿಸಲ್ಪಟ್ಟಿರುವ ಈ “ಕಡೇ ದಿವಸಗಳಲ್ಲಿ” ಒತ್ತಡಗಳು ಮತ್ತು ಸಮಸ್ಯೆಗಳು ದಿನೇ ದಿನೇ ಅಧಿಕಗೊಳ್ಳುತ್ತಿವೆ. (2 ತಿಮೊಥೆಯ 3:1, NW) ಮತ್ತು ಪರೀಕ್ಷೆಗಳು ಸುಲಭವಾಗಿ ನಮ್ಮ ಮನಸ್ಸುಗಳನ್ನು ಆಕ್ರಮಿಸಿಬಿಡಬಲ್ಲವು. ಆದರೂ, ನಾವು ಎಡೆಬಿಡದೆ ಪ್ರಾರ್ಥಿಸುವುದು, ಒಂದೇ ಸಮನೆ ಎದುರಾಗುವ ಸಮಸ್ಯೆಗಳು, ಶೋಧನೆಗಳು, ಮತ್ತು ನಿರುತ್ತೇಜನದ ಮಧ್ಯೆಯೂ ನಮ್ಮ ಜೀವಿತಗಳನ್ನು ಆತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಲು ನಮಗೆ ಸಹಾಯಮಾಡುವವು. ಯೆಹೋವನಿಗೆ ನಾವು ಪ್ರತಿನಿತ್ಯವೂ ಮಾಡುವ ಪ್ರಾರ್ಥನೆಗಳು, ನಮಗೆ ಬೇಕಾಗಿರುವ ಅತ್ಯಾವಶ್ಯಕ ಬೆಂಬಲವನ್ನು ಒದಗಿಸಬಲ್ಲವು.
21 “ಪ್ರಾರ್ಥನೆಯನ್ನು ಕೇಳು”ವವನಾದ ಯೆಹೋವನು ಎಂದಿಗೂ, ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡಲಾಗದಷ್ಟು ಕಾರ್ಯಮಗ್ನನಾಗಿರುವುದಿಲ್ಲ. (ಕೀರ್ತನೆ 65:2) ಹೀಗಿರುವಾಗ, ಎಂದಿಗೂ ನಾವು ಆತನೊಂದಿಗೆ ಮಾತಾಡಲು ಸಮಯವಿಲ್ಲದಿರುವಷ್ಟು ಕಾರ್ಯಮಗ್ನರಾಗಿರದಿರೋಣ. ದೇವರೊಂದಿಗಿನ ನಮ್ಮ ಸ್ನೇಹವೇ ನಮಗಿರುವ ಅತ್ಯಮೂಲ್ಯ ಸಂಪತ್ತಾಗಿದೆ. ನಾವೆಂದಿಗೂ ಅದನ್ನು ಅಲ್ಪವಾದದ್ದಾಗಿ ಪರಿಗಣಿಸದಿರೋಣ. “ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ.”—ಇಬ್ರಿಯ 4:16.
ನೀವು ಹೇಗೆ ಉತ್ತರಿಸುವಿರಿ?
• ಪ್ರಾರ್ಥನೆಯ ಮೌಲ್ಯದ ಕುರಿತು ಪ್ರವಾದಿಯಾದ ದಾನಿಯೇಲನಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?
• ಯೆಹೋವನೊಂದಿಗಿನ ನಮ್ಮ ಸ್ನೇಹವನ್ನು ನಾವು ಹೇಗೆ ಬಲಗೊಳಿಸಬಲ್ಲೆವು?
• ನಾವು ಎಡೆಬಿಡದೆ ಪ್ರಾರ್ಥಿಸಬೇಕು ಏಕೆ?
• ಅನರ್ಹತೆಯ ಅನಿಸಿಕೆಗಳು ನಾವು ಯೆಹೋವನಿಗೆ ಪ್ರಾರ್ಥಿಸುವುದರಿಂದ ನಮ್ಮನ್ನು ತಡೆಹಿಡಿಯಬಾರದೇಕೆ?
[ಅಧ್ಯಯನ ಪ್ರಶ್ನೆಗಳು]
[ಪುಟ 16ರಲ್ಲಿರುವ ಚಿತ್ರ]
ಅರಸನೊಂದಿಗೆ ಮಾತಾಡುವುದಕ್ಕೆ ಮುಂಚೆ ನೆಹೆಮೀಯನು ಒಂದು ಚುಟುಕಾದ, ಮೌನ ಪ್ರಾರ್ಥನೆಯನ್ನು ಮಾಡಿದನು
[ಪುಟ 17ರಲ್ಲಿರುವ ಚಿತ್ರ]
ಹನ್ನಳು ‘ಬಲು ಹೊತ್ತಿನ ವರೆಗೆ ಯೆಹೋವನ ಮುಂದೆ ಪ್ರಾರ್ಥನೆಮಾಡಿದಳು’
[ಪುಟ 18ರಲ್ಲಿರುವ ಚಿತ್ರಗಳು]
ತನ್ನ 12 ಮಂದಿ ಅಪೊಸ್ತಲರನ್ನು ಆರಿಸಿಕೊಳ್ಳುವುದಕ್ಕೆ ಮುಂಚೆ ಯೇಸು ಇಡೀ ರಾತ್ರಿ ಪ್ರಾರ್ಥಿಸಿದನು
[ಪುಟ 20ರಲ್ಲಿರುವ ಚಿತ್ರಗಳು]
ಇಡೀ ದಿನ, ಪ್ರಾರ್ಥಿಸಲಿಕ್ಕಾಗಿ ಅನೇಕ ಅವಕಾಶಗಳು ತಾವಾಗಿಯೇ ಒದಗಿಬರುತ್ತವೆ