ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರ್ಣಯಗಳನ್ನು ಮಾಡುವುದು ಎದುರಿಸಲೇಬೇಕಾದ ಒಂದು ಪಂಥಾಹ್ವಾನ

ನಿರ್ಣಯಗಳನ್ನು ಮಾಡುವುದು ಎದುರಿಸಲೇಬೇಕಾದ ಒಂದು ಪಂಥಾಹ್ವಾನ

ನಿರ್ಣಯಗಳನ್ನು ಮಾಡುವುದು ಎದುರಿಸಲೇಬೇಕಾದ ಒಂದು ಪಂಥಾಹ್ವಾನ

“ನಿರ್ಣಯಗಳನ್ನು ಮಾಡುವುದಕ್ಕಿಂತಲೂ ಹೆಚ್ಚು ಕಷ್ಟಕರವಾದ ಸಂಗತಿಯು ಬೇರೊಂದಿಲ್ಲ, ಆದರೆ ಇದನ್ನು ಮಾಡಸಾಧ್ಯವಿರುವವನಿಗೆ ಇದು ಅತ್ಯಮೂಲ್ಯವಾದ ಸಂಗತಿಯಾಗಿದೆ,” ಎಂದು 19ನೇ ಶತಮಾನದ ಫ್ರಾನ್ಸ್‌ನ ಸಾಮ್ರಾಟ ನೆಪೊಲಿಯನ್‌ ಬೊನಾಪಾರ್ಟ್‌ ಒಮ್ಮೆ ಹೇಳಿದನು. ನಿರ್ಣಯಗಳನ್ನು ಮಾಡುವ ವಿಷಯದಲ್ಲಿ ಈ ಎರಡೂ ಅಂಶಗಳು ಸತ್ಯವೆಂದು ನೀವು ಒಪ್ಪಿಕೊಳ್ಳಬಹುದು, ಏಕೆಂದರೆ ಜನರು ಸಾಮಾನ್ಯವಾಗಿ ಈ ರೀತಿಯಲ್ಲಿ ತಮ್ಮ ಸ್ವಂತ ಜೀವಿತಗಳ ಮೇಲೆ ನಿಯಂತ್ರಣವಿಡುವುದನ್ನು ಬಹಳಷ್ಟು ಅಮೂಲ್ಯವೆಂದೆಣಿಸುತ್ತಾರೆ. ಆದರೆ ಅದೇ ಸಮಯದಲ್ಲಿ, ಕೆಲವೊಮ್ಮೆ ನಿರ್ಣಯಗಳನ್ನು ಮಾಡುವುದು ತುಂಬ ಕಷ್ಟಕರವಾಗಿರುತ್ತದೆಂಬುದನ್ನು ಅವರು ಕಲಿತುಕೊಂಡಿದ್ದಾರೆ.

ಸುಲಭವಾಗಿರಲಿ ಕಷ್ಟಕರವಾಗಿರಲಿ ನೀವು ನಿರ್ಣಯಗಳನ್ನು ಮಾಡಲೇಬೇಕು. ನಾವು ಈ ಕೆಲಸವನ್ನು ಪ್ರತಿನಿತ್ಯವೂ ಮಾಡಬೇಕಾಗುತ್ತದೆ. ನಾವು ಬೆಳಗ್ಗೆ ಎದ್ದ ನಂತರ, ಯಾವ ಬಟ್ಟೆಯನ್ನು ಹಾಕಬೇಕು, ಏನು ತಿಂಡಿ ತಿನ್ನಬೇಕು, ಹಾಗೂ ದಿನದಾದ್ಯಂತ ಇನ್ನಿತರ ಹಲವಾರು ವಿಷಯಗಳನ್ನು ಹೇಗೆ ನಿರ್ವಹಿಸುವೆವು ಎಂಬುದನ್ನು ನಿರ್ಣಯಿಸಬೇಕಾಗಿರುತ್ತದೆ. ಅವುಗಳಲ್ಲಿ ಹೆಚ್ಚಿನ ನಿರ್ಣಯಗಳು, ತುಂಬ ಮಹತ್ವದ್ದಾಗಿರುವುದಿಲ್ಲ. ನಾವು ಅವುಗಳ ಬಗ್ಗೆ ಪುನಃ ಯೋಚಿಸುವ ಗೊಡವೆಗೂ ಹೋಗುವುದಿಲ್ಲ. ಅವುಗಳು ಒಳ್ಳೇ ನಿರ್ಣಯಗಳಾಗಿದ್ದವೋ ಅಥವಾ ಕೆಟ್ಟ ನಿರ್ಣಯಗಳಾಗಿದ್ದವೋ ಎಂದು ನಿದ್ದೆಗೆಟ್ಟು ಯೋಚಿಸುತ್ತಾ ಕುಳಿತುಕೊಳ್ಳುವುದಿಲ್ಲ.

ಆದರೆ ಇನ್ನೊಂದು ಬದಿಯಲ್ಲಿ, ಕೆಲವು ನಿರ್ಣಯಗಳಾದರೋ ದೀರ್ಘಕಾಲಿಕ ಪರಿಣಾಮವುಳ್ಳವುಗಳಾಗಿರುತ್ತವೆ. ಇಂದಿನ ಲೋಕದಲ್ಲಿ ಅನೇಕ ಯುವ ಜನರು ತಾವು ಯಾವ ಗುರಿಗಳನ್ನು ಬೆನ್ನಟ್ಟಬೇಕು ಎಂಬುದನ್ನು ನಿರ್ಣಯಿಸಲೇಬೇಕಾಗಿದೆ. ಯಾವ ರೀತಿಯ ಶಿಕ್ಷಣವನ್ನು ಪಡೆದುಕೊಳ್ಳಬೇಕು, ಮತ್ತು ಎಲ್ಲಿಯ ವರೆಗೆ ಓದಬೇಕು ಎಂಬುದನ್ನೂ ಅವರು ನಿರ್ಣಯಿಸಬೇಕಾಗಬಹುದು. ಕಾಲಸಂದಂತೆ, ಅವರಲ್ಲಿ ಹೆಚ್ಚಿನವರು, ವಿವಾಹವಾಗುವುದೋ ಒಂಟಿಯಾಗಿಯೇ ಉಳಿಯುವುದೋ ಎಂದು ನಿರ್ಣಯಿಸಬೇಕಾಗುತ್ತದೆ. ಮದುವೆ ಮಾಡಿಕೊಳ್ಳುವ ಆಯ್ಕೆ ಮಾಡುವವರು, ‘ಮದುವೆಮಾಡಿಕೊಳ್ಳುವ ವಯಸ್ಸು ಮತ್ತು ಪ್ರೌಢತೆ ನನಗಿದೆಯೋ? ಯಾವ ರೀತಿಯ ಸಂಗಾತಿಯನ್ನು ನಾನು ಬಯಸುತ್ತೇನೆ, ಅಥವಾ ಅದಕ್ಕಿಂತಲೂ ಪ್ರಾಮುಖ್ಯವಾಗಿ, ನನಗೆ ಯಾವ ರೀತಿಯ ಸಂಗಾತಿಯ ಅಗತ್ಯವಿದೆ?’ ಎಂಬುದನ್ನು ನಿರ್ಣಯಿಸಬೇಕು. ವಿವಾಹ ಸಂಗಾತಿಯನ್ನು ಆಯ್ಕೆಮಾಡುವುದರಲ್ಲಿ ನಾವು ಮಾಡುವ ನಿರ್ಣಯವು ನಮ್ಮ ಜೀವನದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ.

ಹೆಚ್ಚು ಪ್ರಾಮುಖ್ಯವಾದ ವಿಚಾರಗಳಲ್ಲಿ ನಾವು ವಿವೇಕಯುತ ನಿರ್ಣಯಗಳನ್ನು ಮಾಡುವುದು ಪ್ರಾಮುಖ್ಯವಾಗಿದೆ, ಏಕೆಂದರೆ ನಮ್ಮ ಸಂತೋಷವು ಹೆಚ್ಚಿನ ಮಟ್ಟಿಗೆ ಅದರ ಮೇಲೆಯೇ ಅವಲಂಬಿಸಿರುತ್ತದೆ. ಕೆಲವರು, ತಾವು ಇಂತಹ ನಿರ್ಣಯಗಳನ್ನು ಮಾಡುವುದರಲ್ಲಿ ನಿಪುಣರೆಂದೆನಿಸುತ್ತಾ ಸಹಾಯವು ನೀಡಲ್ಪಡುವಾಗ ಅದನ್ನು ನಿರಾಕರಿಸಬಹುದು. ಹಾಗೆ ಮಾಡುವುದು ವಿವೇಕಯುತವಾಗಿದೆಯೋ? ನಾವಿದನ್ನು ಪರಿಗಣಿಸೋಣ.

[ಪುಟ 3ರಲ್ಲಿರುವ ಚಿತ್ರ ಕೃಪೆ]

ನೆಪೊಲಿಯನ್‌: From the book The Pictorial History of the World