ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಜವಾಗಿಯೂ ದೇವರ ವಾಕ್ಯವು ಎಷ್ಟೊಂದು ಶಕ್ತಿಶಾಲಿಯಾಗಿದೆ!”

“ನಿಜವಾಗಿಯೂ ದೇವರ ವಾಕ್ಯವು ಎಷ್ಟೊಂದು ಶಕ್ತಿಶಾಲಿಯಾಗಿದೆ!”

“ನಿಜವಾಗಿಯೂ ದೇವರ ವಾಕ್ಯವು ಎಷ್ಟೊಂದು ಶಕ್ತಿಶಾಲಿಯಾಗಿದೆ!”

“ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಆಗಿದೆ. (ಇಬ್ರಿಯ 4:12) ದೇವರ ವಾಕ್ಯದ ಎದುರಿಸಲಸಾಧ್ಯವಾದ ಶಕ್ತಿಗೆ ರುಜುವಾತಾಗಿ, 2003ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್‌ (ಇಂಗ್ಲಿಷ್‌) ಲೋಕದ ಸುತ್ತಲಿನಿಂದ ಆರಿಸಲ್ಪಟ್ಟ ಆರು ನಿಜ ಜೀವನ ಕಥೆಗಳನ್ನು ಕೊಟ್ಟಿತು. “ಅಂದು ಮತ್ತು ಇಂದು” ಎಂಬ ಶೀರ್ಷಿಕೆಯ ಕೆಳಗೆ, ಯೆಹೋವನ ಸಾಕ್ಷಿಗಳ ಶಿಕ್ಷಣ ಕೆಲಸವು ಜನರಿಗೆ ಅವರ ನೈತಿಕತೆಯನ್ನು ಉತ್ತಮಗೊಳಿಸಲು, ಧ್ವಂಸಕಾರಿ ಜೀವನ ಶೈಲಿಗಳನ್ನು ಬಿಟ್ಟುಬಿಡಲು, ಅವರ ಕುಟುಂಬ ಜೀವನವನ್ನು ಬಲಪಡಿಸಲು, ಮತ್ತು ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಹೇಗೆ ಸಹಾಯನೀಡುತ್ತದೆಂಬದನ್ನು ಆ ಕ್ಯಾಲೆಂಡರ್‌ ತೋರಿಸಿತು.

ಇಸವಿ 2003ರ ಕ್ಯಾಲೆಂಡರ್‌ನ ಕುರಿತು ಗಣ್ಯತೆಯನ್ನು ವ್ಯಕ್ತಪಡಿಸುವ ಅನೇಕ ಪತ್ರಗಳು ಬಂದಿವೆ. ಕೆಲವೊಂದು ಹೇಳಿಕೆಗಳು ಹೀಗಿವೆ:

“ತಮ್ಮಂತೆಯೇ ಇತರರು ಸಹ ನಂಬಿಕೆಗಾಗಿ ಕಠಿನ ಹೋರಾಟವನ್ನು ಮಾಡಿದ್ದಾರೆ ಎಂಬುದರ ರುಜುವಾತನ್ನು ಈ ಕ್ಯಾಲೆಂಡರ್‌ ನಿಜ ಕ್ರೈಸ್ತರಿಗೆ ನೀಡುತ್ತದೆ. ಈಗ ಅವರು ಕ್ಯಾಲೆಂಡರ್‌ನಲ್ಲಿರುವ ಚಿತ್ರಗಳನ್ನು ನೋಡಿ, ಕೆಲವರು ತಮ್ಮ ಜೀವಿತದಲ್ಲಿ ಮಾಡಬೇಕಾಗಿಬಂದ ಬದಲಾವಣೆಗಳ ಕುರಿತು ಜ್ಞಾಪಿಸಿಕೊಳ್ಳಸಾಧ್ಯವಿದೆ.”​—ಸ್ಟೀವನ್‌, ಅಮೆರಿಕ.

“ಇಸವಿ 2003ರ ಕ್ಯಾಲೆಂಡರ್‌ ಎಷ್ಟರ ಮಟ್ಟಿಗೆ ನನ್ನ ಹೃದಯವನ್ನು ಸ್ಪರ್ಶಿಸಿದೆ ಎಂಬುದನ್ನು ನಿಮಗೆ ತಿಳಿಯಪಡಿಸಲು ಈ ಕೆಲವು ಮಾತುಗಳನ್ನು ನಾನು ಬರೆಯಲೇಬೇಕಾಯಿತು. ಹಿಂದೆಂದೂ ಒಂದು ಕ್ಯಾಲೆಂಡರ್‌ ನನ್ನ ಮೇಲೆ ಇಷ್ಟು ಪ್ರಭಾವವನ್ನು ಬೀರಿರಲಿಲ್ಲ. ಬೈಬಲ್‌, ವ್ಯಕ್ತಿಗಳ ಮೇಲೆ ನಿಜವಾಗಿಯೂ ಪ್ರಭಾವ ಬೀರಶಕ್ತವಾಗಿದೆ ಎಂಬುದನ್ನು ರುಜುಪಡಿಸುವ ಈ ಜೀವಂತ ಮತ್ತು ಮನಸ್ಪರ್ಶಿಸುವ ಸಾಕ್ಷ್ಯವನ್ನು ಜನರಿಗೆ ತೋರಿಸುವುದಕ್ಕಾಗಿ, ಕ್ಷೇತ್ರ ಸೇವೆಗೆ ತೆಗೆದುಕೊಂಡು ಹೋಗುವ ಬ್ಯಾಗ್‌ನಲ್ಲಿ ಈ ಜೀವನ ಕಥೆಗಳನ್ನು ನಾನು ಇನ್ನು ಮುಂದೆ ಯಾವಾಗಲೂ ಇಡುವೆ.”​—ಮಾರ್ಕ್‌, ಬೆಲ್ಜಿಯಮ್‌.

“ಕ್ಯಾಲೆಂಡರ್‌ನಿಂದ ನಾನು ಬಹಳ ಪ್ರಭಾವಿತಳಾದೆ. ಈ ವ್ಯಕ್ತಿಗಳನ್ನು ಯೆಹೋವನು ಯಾವ ರೀತಿಯಲ್ಲಿ ಪರಿವರ್ತಿಸಿದ್ದನು ಎಂಬುದನ್ನು ಓದಿನೋಡುವಾಗ ನಾನು ಭಾವಪರವಶಳಾದೆ. ಇದರ ಪರಿಣಾಮವಾಗಿ, ನನ್ನ ಸ್ವಂತ ಜೀವನದಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡುತ್ತಾ ಮುಂದುವರಿಯುವಂತೆ ನನಗೆ ಸ್ಫೂರ್ತಿ ಸಿಕ್ಕಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ, ನನಗೆ ನಾನೊಂದು ಲೋಕವ್ಯಾಪಕ ಸಹೋದರತ್ವದ ಭಾಗವಾಗಿದ್ದೇನೆಂಬ ಅನಿಸಿಕೆಯಾಗುತ್ತಿದೆ.”​—ಮೇರಿ, ಅಮೆರಿಕ.

“ಜನಸಮೂಹಗಳ ಆತ್ಮಿಕ ಸ್ಥಿತಿಯನ್ನು ನೋಡಿ ಯೇಸುವಿನ ಮನಮರುಗಿತು. ನಮ್ಮ 2003ರ ಕ್ಯಾಲೆಂಡರ್‌ನಲ್ಲಿ ಕಂಡುಬರುವ ಜೀವನ ಕಥೆಗಳನ್ನು ಪ್ರಕಾಶಿಸುವ ಮೂಲಕ ಕ್ರಿಸ್ತನ ಮಾದರಿಯನ್ನು ಅನುಕರಿಸಿದ್ದಕ್ಕಾಗಿ ನಿಮಗೆ ಉಪಕಾರ. ನನ್ನ ಜೀವನದಲ್ಲಿ ಹಿಂದೆಂದೂ ಒಂದು ಕ್ಯಾಲೆಂಡರ್‌ ನನಗೆ ಕಣ್ಣೀರು ಬರಿಸಿರಲಿಲ್ಲ.”​—ಕ್ಯಾಸ್ಯಾಂಡ್ರ, ಅಮೆರಿಕ.

“ನಾನು 11 ವರುಷ ಪ್ರಾಯದವಳಾಗಿದ್ದಾಗ ಧೂಮಪಾನಮಾಡಲು ಆರಂಭಿಸಿದೆ; ನಂತರ ಮಾದಕ ಪದಾರ್ಥಗಳನ್ನು ಸೇವಿಸಲಾರಂಭಿಸಿದೆ. ಅನೇಕಬಾರಿ ನಾನು ನನ್ನ ಜೀವವನ್ನು ಅಂತ್ಯಗೊಳಿಸುವ ಬಗ್ಗೆ ಯೋಚಿಸಿದೆ. ಆದರೆ ನಾನು ಯೆಹೋವನನ್ನು ತಿಳಿದುಕೊಂಡಾಗ ಈ ಎಲ್ಲಾ ಹವ್ಯಾಸಗಳನ್ನು ಬಿಟ್ಟುಬಿಡಲು ನನಗೆ ಸಹಾಯ ದೊರಕಿತು. ಈ ಕ್ಯಾಲೆಂಡರ್‌ ನನಗೆ ಬಹಳ ಪ್ರಾಮುಖ್ಯವಾಗಿದೆ. ಲೋಕದ ಸುತ್ತಲಿರುವ ನನ್ನ ಸಹೋದರ ಸಹೋದರಿಯರ ಅನುಭವಗಳು ನನ್ನನ್ನು ಬಲಗೊಳಿಸುತ್ತವೆ. ಈ ಹೋರಾಟದಲ್ಲಿ ನಾನು ಒಂಟಿಗಳಾಗಿಲ್ಲ ಎಂಬುದು ಮತ್ತು ಯೆಹೋವನಿಗಾಗಿ ಪ್ರೀತಿ ಹಾಗೂ ಆತನಿಗೆ ಪೂರ್ಣ ಹೃದಯದ ಸೇವೆಯೇ ಅತಿ ಪ್ರಾಮುಖ್ಯವಾದ ವಿಷಯವಾಗಿದೆಯೆಂದು ಈಗ ನನಗೆ ತಿಳಿದಿದೆ.”​—ಮಾರ್ಗರೇಟ್‌, ಪೋಲೆಂಡ್‌.

“ನಿಜವಾಗಿಯೂ ದೇವರ ವಾಕ್ಯವು ಎಷ್ಟೊಂದು ಶಕ್ತಿಶಾಲಿಯಾಗಿದೆ! 2003ರ ಕ್ಯಾಲೆಂಡರ್‌ ನನಗೆ ಸಿಕ್ಕಿದಾಗ, ನಾನು ನನ್ನ ಕಣ್ಣೀರನ್ನು ತಡೆಹಿಡಿಯಲು ತುಂಬ ಕಷ್ಟವಾಯಿತು. ಅದರಲ್ಲಿರುವ ಅನುಭವಗಳು ಮತ್ತು ಚಿತ್ರಗಳು ನಂಬಿಕೆಯನ್ನು ಬಹಳವಾಗಿ ಬಲಗೊಳಿಸುವಂಥದ್ದಾಗಿವೆ.”​—ಡಾರ್ಲೀನ್‌, ಅಮೆರಿಕ.

“ಇದರಲ್ಲಿ ತಿಳಿಸಿರುವ ಕೆಲವರ ಹಿಂದಿನ ಜೀವನರೀತಿಯು ನನ್ನ ಹಿಂದಿನ ಜೀವನರೀತಿಯನ್ನು ಬಹಳಷ್ಟು ಹೋಲುತ್ತದೆ. ಜಯಿಸಲಸಾಧ್ಯವೆಂದು ತೋರಿದ್ದ ದುರ್ಗುಣಗಳನ್ನು ಬಿಟ್ಟುಬಿಡಲು ಬೇಕಾಗಿರುವ ಬಲವನ್ನು ಯೆಹೋವನು ನನಗೆ ಒದಗಿಸಿದ್ದಾನೆ. ಈ ನಿಜ ಜೀವನ ಕಥೆಗಳಿಗಾಗಿ ನಿಮಗೆ ತುಂಬಾ ಉಪಕಾರ.”​—ವಿಲ್ಯಮ್‌, ಅಮೆರಿಕ.