ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಟೆಲಿವಿಷನ್‌ ಕಾರ್ಯಕ್ರಮವು ಅವಳು ದೇವರನ್ನು ಘನಪಡಿಸುವಂತೆ ಮಾಡಿತು

ಒಂದು ಟೆಲಿವಿಷನ್‌ ಕಾರ್ಯಕ್ರಮವು ಅವಳು ದೇವರನ್ನು ಘನಪಡಿಸುವಂತೆ ಮಾಡಿತು

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಒಂದು ಟೆಲಿವಿಷನ್‌ ಕಾರ್ಯಕ್ರಮವು ಅವಳು ದೇವರನ್ನು ಘನಪಡಿಸುವಂತೆ ಮಾಡಿತು

“ಕೆಲವರು ಹೊಟ್ಟೆಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಭಾವನೆಯಿಂದ ಬೇರೆ ಕೆಲವರು ಒಳ್ಳೇ ಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ” ಎಂದು ಅಪೊಸ್ತಲ ಪೌಲನು ಹೇಳಿದನು. (ಫಿಲಿಪ್ಪಿ 1:15) ಕೆಲವು ಸಂದರ್ಭಗಳಲ್ಲಿ, ಯೆಹೋವನ ಜನರನ್ನು ಅಪಕೀರ್ತಿಗೊಳಪಡಿಸಲು ಪ್ರಯತ್ನಿಸಿದ ಜನರು ತಮಗರಿವಿಲ್ಲದೆಯೇ ಸಹೃದಯದ ಜನರು ಸತ್ಯದ ಕಡೆಗೆ ಆಕರ್ಷಿತರಾಗುವಂತೆ ಮಾಡಿದ್ದಾರೆ.

ಇಸವಿ 1998ರ ನವೆಂಬರ್‌ ತಿಂಗಳಿನಲ್ಲಿ, ಫ್ರಾನ್ಸ್‌ನ ಲೂವೀಏಯಲ್ಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಸೌಕರ್ಯವಾದ ಬೆತೆಲ್‌ನ ಕುರಿತಾದ ಚಿತ್ರಣಗಳನ್ನು ತೋರಿಸಿದ ಟೆಲಿವಿಷನ್‌ ಕಾರ್ಯಕ್ರಮವೊಂದು ಫ್ರೆಂಚ್‌ ನ್ಯಾಷನಲ್‌ ಟೆಲಿವಿಷನ್‌ನಲ್ಲಿ ಪ್ರಸಾರವಾಯಿತು. ಇದಕ್ಕೆ ವಿವಿಧ ರೀತಿಯ ಪ್ರತಿಕ್ರಿಯೆಗಳು ದೊರೆತವಾದರೂ, ಆ ಕಾರ್ಯಕ್ರಮದಿಂದ ಎದುರುನೋಡದಂಥ ರೀತಿಯಲ್ಲಿ ಸಕಾರಾತ್ಮಕ ಫಲಿತಾಂಶಗಳು ಉಂಟಾದವು.

ಈ ಕಾರ್ಯಕ್ರಮವನ್ನು ವೀಕ್ಷಿಸಿದವರಲ್ಲಿ, ಬೆತೆಲ್‌ನಿಂದ ಕೇವಲ 60 ಕಿಲೊಮೀಟರ್‌ ದೂರದಲ್ಲಿ ವಾಸಿಸುತ್ತಿದ್ದ ಆ್ಯನ್ನ ಪೋಲಳು ಒಬ್ಬಳಾಗಿದ್ದಳು. ಆ್ಯನ್ನ ಪೋಲಳು ಇಬ್ಬರು ಮಕ್ಕಳಿದ್ದ ವಿಚ್ಛೇದಿತ ತಾಯಿಯಾಗಿದ್ದಳು ಮತ್ತು ಅವಳು ಒಂದು ಉದ್ಯೋಗಕ್ಕಾಗಿ ಹುಡುಕುತ್ತಿದ್ದಳು. ಈ ಕಾರ್ಯಕ್ರಮವನ್ನು ವೀಕ್ಷಿಸಿದ ಮರುದಿನ ಬೆಳಗ್ಗೆ ಅವಳು ಬೆತೆಲಿಗೆ ಕರೆಮಾಡಿ, ತನಗೆ ಅಲ್ಲಿ ಏನಾದರೂ ಕೆಲಸ ಸಿಗಬಹುದೋ ಎಂದು ವಿಚಾರಿಸಿದಳು. “ಅದೊಂದು ಯೋಗ್ಯವಾದ ಸ್ಥಳವಾಗಿದೆ ಮತ್ತು ಅಲ್ಲಿ ನಡೆಸಲಾಗುವ ಕೆಲಸವು ಉಪಯುಕ್ತಕರವಾಗಿದೆ ಎಂಬ ಅಭಿಪ್ರಾಯವು ನನಗಿತ್ತು” ಎಂದು ಅವಳು ತಿಳಿಸುತ್ತಾಳೆ. ಆದರೆ ಬೆತೆಲ್‌ನಲ್ಲಿ ಕೆಲಸಮಾಡುವ ಪ್ರತಿಯೊಬ್ಬರೂ ಶುಶ್ರೂಷಕರಾಗಿದ್ದು ತಮ್ಮ ಸಮಯವನ್ನು ಸ್ವಇಚ್ಛೆಯಿಂದ ನೀಡುತ್ತಾರೆಂದು ತಿಳಿದೊಡನೆ ಅವಳು ಆಶ್ಚರ್ಯಚಕಿತಳಾದಳು. ಯೆಹೋವನ ಸಾಕ್ಷಿಗಳ ಚಟುವಟಿಕೆಗಳ ಕುರಿತಾದ ಒಂದು ಸಂಕ್ಷಿಪ್ತ ಚರ್ಚೆಯ ನಂತರ, ಸಾಕ್ಷಿಗಳು ಅವಳನ್ನು ಭೇಟಿಯಾಗಲು ಒಪ್ಪಿಕೊಂಡಳು.

ಸ್ಥಳಿಕ ಸಭೆಯ ಪೂರ್ಣ ಸಮಯದ ಶುಶ್ರೂಷಕಿಯಾದ ಲೇನ ಎಂಬವಳು ಅವಳನ್ನು ಭೇಟಿಮಾಡಿದಾಗ, ಅವರ ಮಧ್ಯೆ ಒಂದು ದೀರ್ಘಾವಧಿಯ ಸಂಭಾಷಣೆ ನಡೆಯಿತು ಮತ್ತು ಕೊನೆಯಲ್ಲಿ ಆ್ಯನ್ನ ಪೋಲ ನಿತ್ಯಜೀವಕ್ಕೆ ನಡೆಸುವ ಜ್ಞಾನ * ಎಂಬ ಪುಸ್ತಕವನ್ನು ಸ್ವೀಕರಿಸಿದಳು. ಮುಂದಿನ ಭೇಟಿಯೊಳಗಾಗಿ ಅವಳು ಇಡೀ ಪುಸ್ತಕವನ್ನು ಓದಿ ಮುಗಿಸಿದ್ದಳು ಮತ್ತು ಅವಳಲ್ಲಿ ಅನೇಕ ಪ್ರಶ್ನೆಗಳಿದ್ದವು. ಅವಳು ಕೂಡಲೆ ಒಂದು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದಳು. ಆ್ಯನ್ನ ಪೋಲ ಹೇಳಿದ್ದು: “ನನಗಾದರೋ ಅದು ದೇವರ ವಾಕ್ಯವನ್ನು ಆವಿಷ್ಕರಿಸುವ ಸುಯೋಗವಾಗಿತ್ತು. ಹಿಂದೆಂದೂ ನಾನು ಒಂದು ಬೈಬಲನ್ನು ಹೊಂದಿರಲಿಲ್ಲ.”

ಇಸವಿ 1999ರ ಜನವರಿಯಲ್ಲಿ ಆ್ಯನ್ನ ಪೋಲ ಬೆತೆಲಿಗೆ ಭೇಟಿ ನೀಡಿದಳು ಮತ್ತು ನಂತರದ ವಾರದಲ್ಲಿ ಅವಳು ತನ್ನ ಮೊದಲ ಕ್ರೈಸ್ತ ಕೂಟಕ್ಕೆ ಹಾಜರಾದಳು. ನಂತರ ಸ್ವಲ್ಪ ಸಮಯದಲ್ಲಿಯೇ ಅವಳು ತನ್ನ ಮಕ್ಕಳೊಂದಿಗೆ ಬೈಬಲನ್ನು ಅಧ್ಯಯನಮಾಡಲು ಮತ್ತು ತನ್ನ ಸ್ನೇಹಿತರಿಗೆ ಸಾಕ್ಷಿನೀಡಲು ಆರಂಭಿಸಿದಳು. “ನಾನೇನನ್ನು ಕಲಿಯುತ್ತಿದ್ದೆನೋ ಅದನ್ನು ನನ್ನಲ್ಲಿಯೇ ಇಟ್ಟುಕೊಳ್ಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ನಾನು ಬೈಬಲಿನ ಸತ್ಯಗಳನ್ನು ಜನರೊಂದಿಗೆ ಹಂಚಿಕೊಳ್ಳಲು ಮತ್ತು ಅವರನ್ನು ಸಂತೈಸಲು ಬಯಸಿದೆ” ಎಂಬುದಾಗಿ ಅವಳು ಹೇಳುತ್ತಾಳೆ. ಹಲವಾರು ವೈಯಕ್ತಿಕ ಸಮಸ್ಯೆಗಳನ್ನು ಜಯಿಸಲು ಹೋರಾಡಿದ ನಂತರ, ಆ್ಯನ್ನ ಪೋಲ ಕ್ರಮವಾಗಿ ಕೂಟಗಳಿಗೆ ಹಾಜರಾಗಲು ಆರಂಭಿಸಿದಳು. ಅವಳು ತ್ವರಿತಗತಿಯಲ್ಲಿ ಪ್ರಗತಿಯನ್ನು ಮಾಡಿ, 2002ರ ಮೇ 5ರಂದು ದೀಕ್ಷಾಸ್ನಾನವನ್ನು ಪಡೆದುಕೊಂಡಳು.

ಇದಕ್ಕೆ ಕೂಡಿಕೆಯಾಗಿ, ಆ್ಯನ್ನ ಪೋಲಳ ಉತ್ತಮ ಮಾದರಿ ಮತ್ತು ಸಾರುವಿಕೆಯಲ್ಲಿ ಅವಳು ತೋರಿಸುವ ಹುರುಪಿನ ಫಲಿತಾಂಶವಾಗಿ ಅವಳ ತಾಯಿಯೂ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದಳು ಮತ್ತು ಶೀಘ್ರದಲ್ಲಿಯೇ ದೀಕ್ಷಾಸ್ನಾನ ಪಡೆದುಕೊಂಡಳು. ಆ್ಯನ್ನ ಪೋಲ ತಿಳಿಸುವುದು: “ನಾನು ಅನುಭವಿಸುತ್ತಿರುವ ಆನಂದವನ್ನು ಮಾತುಗಳಿಂದ ವ್ಯಕ್ತಪಡಿಸಲು ಅಸಾಧ್ಯ. ಯೆಹೋವನು ನನ್ನ ಜೀವನದಲ್ಲಿ ಪ್ರವೇಶಿಸಿದ್ದಕ್ಕಾಗಿ ಮತ್ತು ಆತನು ನನಗೆ ನೀಡಿದ ಎಲ್ಲಾ ಆಶೀರ್ವಾದಗಳಿಗಾಗಿ ನಾನಾತನಿಗೆ ಆಭಾರಿಯಾಗಿದ್ದೇನೆ.”

[ಪಾದಟಿಪ್ಪಣಿ]

^ ಪ್ಯಾರ. 6 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 8ರಲ್ಲಿರುವ ಚಿತ್ರಗಳು]

ಮೇಲೆ: ಆ್ಯನ್ನ ಪೋಲ

ಕೆಳಗೆ: ಫ್ರಾನ್ಸ್‌ನ ಬ್ರಾಂಚ್‌ ಆಫೀಸಿನ ಪ್ರವೇಶದ್ವಾರ