ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ವಿಸ್ಮಯಕರ ಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದೀರೋ?

ನೀವು ವಿಸ್ಮಯಕರ ಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದೀರೋ?

ನೀವು ವಿಸ್ಮಯಕರ ಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದೀರೋ?

ದೇವರ ಕೆಲಸಗಳನ್ನೂ ಗುಣಾತಿಶಯಗಳನ್ನೂ ಅನುಮೋದಿಸುತ್ತಿರುವಾಗ, ಬೈಬಲ್‌ ಲೇಖಕರು ಆಗಿಂದಾಗ್ಗೆ ಒಂದು ವಿಸ್ಮಯಕರ ಭಾವನೆಯನ್ನು ಹುಟ್ಟಿಸುವುದನ್ನು ನೀವು ಗಮನಿಸಿದ್ದೀರೋ? “ನಾನು ಅದ್ಭುತಕರವಾದ ರೀತಿಯಲ್ಲಿ ರಚಿಸಲ್ಪಟ್ಟಿದ್ದೇನೆ” ಎಂದು ಕೀರ್ತನೆಗಾರನು ಪ್ರಕಟಿಸಿದನು. (ಕೀರ್ತನೆ 139:​14, NW) “ಯೆಹೋವನೇ, ನೀನೇ ನನ್ನ ದೇವರು; ನೀನು . . . ಅದ್ಭುತಗಳನ್ನು ನಡಿಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಗೊಳಿಸುವೆನು” ಎಂದು ಪ್ರವಾದಿಯಾದ ಯೆಶಾಯನು ಬರೆದನು. (ಯೆಶಾಯ 25:1) ಅಥವಾ ಅಪೊಸ್ತಲ ಪೌಲನ ಮಾತುಗಳಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ವಿಸ್ಮಯತೆ ಹಾಗೂ ಭಯಚಕಿತ ಭಾವದ ಕುರಿತು ಸ್ವಲ್ಪ ಆಲೋಚಿಸಿರಿ: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ!”​—ರೋಮಾಪುರ 11:33.

ದಿ ಆಕ್ಸ್‌ಫರ್ಡ್‌ ಎನ್‌ಸೈಕ್ಲಪೀಡಿಕ್‌ ಇಂಗ್ಲಿಷ್‌ ಡಿಕ್ಷನೆರಿಯು “ವಿಸ್ಮಯ” ಎಂಬ ಪದಕ್ಕೆ “ಅನಿರೀಕ್ಷಿತವಾದ, ಅಪರಿಚಿತವಾದ ಅಥವಾ ಅವಿವರಣೀಯವಾದ, ಅದರಲ್ಲೂ ವಿಶೇಷವಾಗಿ ಮೆಚ್ಚುಗೆ ಅಥವಾ ಕುತೂಹಲದಿಂದ ಕೂಡಿರುವ ಆಶ್ಚರ್ಯಭಾವದಿಂದ ಪ್ರಚೋದಿಸಲ್ಪಡುವಂಥ ಒಂದು ಭಾವನೆ” ಎಂಬರ್ಥವನ್ನು ಕೊಡುತ್ತದೆ.

ಚಿಕ್ಕ ಮಕ್ಕಳು ತಮಗೆ ಹೊಸದಾಗಿ ಕಾಣುವಂಥ, ಅನಿಸುವಂಥ ಅಥವಾ ಕೇಳುವಂಥ ವಿಷಯಗಳ ಕುರಿತು ಕಣ್ಣಗಲಿಸಿ ಆಶ್ಚರ್ಯವನ್ನು ಸೂಚಿಸುವುದನ್ನು ನೋಡುವುದು ಮನಸ್ಸಿಗೆ ಮುದನೀಡುವುದಿಲ್ಲವೋ? ದುಃಖಕರವಾಗಿಯೇ, ಅವರು ದೊಡ್ಡವರಾಗುತ್ತಾ ಹೋದಂತೆ ಕುತೂಹಲ ಅಥವಾ ನವೀನತೆಯ ಮೇಲಾಧಾರಿತವಾದ ಅಂಥ ವಿಸ್ಮಯಕರ ಭಾವನೆಯು ಅನೇಕವೇಳೆ ಕಡಿಮೆಯಾಗುತ್ತಾ ಹೋಗುತ್ತದೆ.

ಆದರೂ, ಈಗಷ್ಟೇ ಉಲ್ಲೇಖಿಸಲ್ಪಟ್ಟಿರುವಂಥ ಬೈಬಲ್‌ ಲೇಖಕರಿಗಾದರೋ ಭಯವಿಸ್ಮಿತ ಭಾವನೆಯು ಅವರ ಆಂತರಿಕ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ಎಷ್ಟೇ ವರ್ಷಗಳು ಕಳೆದರೂ ಅದು ಕುಂದಿಹೋಗಲಿಲ್ಲ. ಹಾಗೇಕೆ? ಏಕೆಂದರೆ ದೇವರ ಕಾರ್ಯಗಳ ಕುರಿತು ಗಣ್ಯತಾಭಾವದಿಂದ ಮನನಮಾಡುವ ಮೂಲಕ ಅವರು ವಿಸ್ಮಯಕರ ಭಾವನೆಯನ್ನು ಬೆಳೆಸಿಕೊಳ್ಳುತ್ತಾ ಮುಂದುವರಿದರು. ಕೀರ್ತನೆಗಾರನು ಪ್ರಾರ್ಥಿಸಿದ್ದು: “ಹಳೇ ದಿನಗಳನ್ನು ನೆನಸಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ [“ಅದ್ಭುತಕರ,” NW] ಕೈಕೆಲಸಗಳನ್ನು ಸ್ಮರಿಸುತ್ತೇನೆ.”​—ಕೀರ್ತನೆ 143:5.

ಆಧುನಿಕ ಸಮಯದ ದೇವರ ಆರಾಧಕರಲ್ಲಿ ಈ ವಿಸ್ಮಯಕರ ಭಾವನೆಯನ್ನು ಕಂಡುಕೊಳ್ಳಸಾಧ್ಯವಿರುವುದು ಎಷ್ಟು ಪ್ರಶಂಸನೀಯವಾದ ಸಂಗತಿಯಾಗಿದೆ! ನಿಮ್ಮಲ್ಲಿಯೂ ಆ ಗುಣವಿದೆಯೋ? ನೀವೂ ಇದನ್ನು ಬೆಳೆಸಿಕೊಳ್ಳುತ್ತಿದ್ದೀರೋ?