ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ನಮ್ಮ ಕುರಿತು ಚಿಂತಿಸುತ್ತಾನೋ?

ದೇವರು ನಮ್ಮ ಕುರಿತು ಚಿಂತಿಸುತ್ತಾನೋ?

ದೇವರು ನಮ್ಮ ಕುರಿತು ಚಿಂತಿಸುತ್ತಾನೋ?

ನಿಮ್ಮ ಕುಟುಂಬ, ಆರೋಗ್ಯ, ಕೆಲಸ ಅಥವಾ ಇತರ ಭಾರವಾದ ಜವಾಬ್ದಾರಿಗಳೊಂದಿಗಿನ ಸಮಸ್ಯೆಗಳಿಂದ ನೀವು ಭಾವನಾತ್ಮಕ ಒತ್ತಡದ ಕೆಳಗೆ ಕುಗ್ಗಿಹೋಗಿರುವಂತೆ ನಿಮಗನಿಸುತ್ತದೋ? ಅನೇಕರಿಗೆ ಹಾಗನಿಸುತ್ತದೆ. ಅಷ್ಟುಮಾತ್ರವಲ್ಲ, ಇಂದು ಅನ್ಯಾಯ, ದುಷ್ಕೃತ್ಯ ಮತ್ತು ಹಿಂಸಾಚಾರದ ಪರಿಣಾಮವು ಯಾರನ್ನು ತಾನೇ ಬಲಿತೆಗೆದುಕೊಂಡಿಲ್ಲ? ಖಂಡಿತವಾಗಿಯೂ ಬೈಬಲ್‌ ಏನು ಹೇಳುತ್ತದೋ ಅದು ಸೂಕ್ತವಾದದ್ದಾಗಿದೆ: “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ” ಇದೆ. (ರೋಮಾಪುರ 8:22) ‘ದೇವರು ನಮ್ಮ ಕುರಿತು ಚಿಂತಿಸುತ್ತಾನೋ? ಆತನು ನಮ್ಮ ಸಹಾಯಕ್ಕೆ ಬರುವನೋ?’ ಎಂದು ಅನೇಕರು ಕೇಳುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಜ್ಞಾನಿಯಾದ ಅರಸ ಸೊಲೊಮೋನನು ಪ್ರಾರ್ಥನೆಯಲ್ಲಿ ದೇವರಿಗೆ ಹೇಳಿದ್ದು: ‘ನೀನೊಬ್ಬನೇ ಮನುಷ್ಯರ ಹೃದಯಗಳನ್ನು ಬಲ್ಲವನಾಗಿದ್ದೀ.’ ದೇವರಿಗೆ ನಮ್ಮ ಕುರಿತಾಗಿ ಗೊತ್ತಿದೆ ಮಾತ್ರವಲ್ಲ ನಮ್ಮಲ್ಲಿ ವ್ಯಕ್ತಿಗತವಾಗಿ ಪ್ರತಿಯೊಬ್ಬರ ಕುರಿತಾಗಿಯೂ ಆತನು ಚಿಂತಿಸುತ್ತಾನೆ ಎಂದು ಸೊಲೊಮೋನನು ನಂಬಿದ್ದನು. ‘ಪರಲೋಕದಿಂದ ಲಾಲಿಸುವಂತೆ’ ಮತ್ತು ‘ತಾವು ಅನುಭವಿಸುತ್ತಿರುವ ಉಪದ್ರವ ಹಾಗೂ ದುಃಖವನ್ನು’ ದೇವರ ಬಳಿ ಹೇಳಿಕೊಳ್ಳುವಂಥ ದೇವಭಕ್ತಿಯುಳ್ಳ ಜನರ ಪ್ರಾರ್ಥನೆಗಳನ್ನು ಉತ್ತರಿಸುವಂತೆ ಅವನು ದೇವರನ್ನು ಬೇಡಿಕೊಳ್ಳಶಕ್ತನಾಗಿದ್ದನು.​—⁠2 ಪೂರ್ವಕಾಲವೃತ್ತಾಂತ 6:​29, 30.

ಇಂದು ಸಹ ಯೆಹೋವ ದೇವರು ನಮ್ಮ ಕುರಿತು ಚಿಂತಿಸುತ್ತಾನೆ ಮತ್ತು ಪ್ರಾರ್ಥನೆಯಲ್ಲಿ ಆತನಿಗೆ ಮೊರೆಯಿಡುವಂತೆ ನಮ್ಮನ್ನು ಆಮಂತ್ರಿಸುತ್ತಾನೆ. (ಕೀರ್ತನೆ 50:15) ತನ್ನ ಚಿತ್ತಕ್ಕೆ ಹೊಂದಿಕೆಯಲ್ಲಿರುವ ಹೃತ್ಪೂರ್ವಕ ಪ್ರಾರ್ಥನೆಗಳಿಗೆ ಉತ್ತರ ಕೊಡುವೆನೆಂದು ಆತನು ವಾಗ್ದಾನಿಸುತ್ತಾನೆ. (ಕೀರ್ತನೆ 55:16, 22; ಲೂಕ 11:5-13; 2 ಕೊರಿಂಥ 4:7) ಹೌದು, ‘[ಆತನ] ಜನರಾಗಲಿ ಯಾವನೇ ಒಬ್ಬ ಮನುಷ್ಯನಾಗಲಿ ಮಾಡುವ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ’ ಯೆಹೋವನು ಕೇಳಿಸಿಕೊಳ್ಳುತ್ತಾನೆ. ಆದುದರಿಂದ, ನಾವು ದೇವರಲ್ಲಿ ಭರವಸೆಯಿಡುವುದಾದರೆ, ಆತನ ಸಹಾಯಕ್ಕಾಗಿ ಪ್ರಾರ್ಥಿಸುವುದಾದರೆ ಮತ್ತು ಆತನ ಸಮೀಪಕ್ಕೆ ಬರುವುದಾದರೆ, ನಾವಾತನ ಪ್ರೀತಿಯ ಆರೈಕೆಯನ್ನು ಹಾಗೂ ಮಾರ್ಗದರ್ಶನವನ್ನು ಖಂಡಿತವಾಗಿಯೂ ಅನುಭವಿಸುವೆವು. (ಜ್ಞಾನೋಕ್ತಿ 3:​5, 6) ಬೈಬಲ್‌ ಲೇಖಕನಾದ ಯಾಕೋಬನು ನಮಗೆ ಆಶ್ವಾಸನೆ ನೀಡುವುದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”​—⁠ಯಾಕೋಬ 4:⁠8.