ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ದೇವರು ಕೈಯಿಂದ ಕಟ್ಟಿದ ಗುಡಿಗಳಲ್ಲಿ ವಾಸಮಾಡುವವನಲ್ಲ’

‘ದೇವರು ಕೈಯಿಂದ ಕಟ್ಟಿದ ಗುಡಿಗಳಲ್ಲಿ ವಾಸಮಾಡುವವನಲ್ಲ’

‘ದೇವರು ಕೈಯಿಂದ ಕಟ್ಟಿದ ಗುಡಿಗಳಲ್ಲಿ ವಾಸಮಾಡುವವನಲ್ಲ’

ಅಪೊಸ್ತಲ ಪೌಲನಿಗೆ ಅಥೀನ ದೇವತೆಯ ಆಲಯಗಳ ಪರಿಚಯವಿದ್ದದ್ದು ನಿಸ್ಸಂದೇಹ. ಏಕೆಂದರೆ ಅವನು ತನ್ನ ಮಿಷನೆರಿ ಪ್ರಯಾಣಗಳಲ್ಲಿ ಭೇಟಿಮಾಡಿದ ಅನೇಕ ನಗರಗಳಲ್ಲಿ ಅವುಗಳನ್ನು ಕಾಣಬಹುದಾಗಿತ್ತು. ದಿ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕಕ್ಕನುಸಾರ, ಅಥೀನಳು ಯುದ್ಧ ಮತ್ತು ವಿವೇಕದ ದೇವತೆಯಾಗಿದ್ದುದು ಮಾತ್ರವಲ್ಲ, “ಶಿಲ್ಪಕಲೆ ಮತ್ತು ಶಾಂತಿಕಾಲದಲ್ಲಿನ ಸಾಮಾನ್ಯವಾದ ಕೌಶಲಭರಿತ ಹವ್ಯಾಸ”ಗಳ ದೇವತೆಯಾಗಿ ಪ್ರಸಿದ್ಧಳಾಗಿದ್ದಳು.

ಅಥೀನಳ ಅತಿ ಪ್ರಸಿದ್ಧ ಆಲಯವು ಪಾರ್ಥಿನಾನ್‌ ಆಗಿತ್ತು. ಅದನ್ನು ಆ ದೇವತೆಯ ಹೆಸರಿನ ನಗರವಾದ ಆ್ಯಥೆನ್ಸ್‌ನಲ್ಲಿ ಕಟ್ಟಲಾಗಿತ್ತು. ಪುರಾತನ ಲೋಕದ ಅತ್ಯಂತ ಮಹಾನ್‌ ಆಲಯಗಳಲ್ಲಿ ಒಂದಾಗಿ ಎಣಿಸಲ್ಪಟ್ಟಿದ್ದ ಪಾರ್ಥಿನಾನ್‌ನಲ್ಲಿ 12 ಮೀಟರ್‌ ಎತ್ತರದ, ಚಿನ್ನ ಮತ್ತು ದಂತದಿಂದ ಮಾಡಿದ ಅಥೀನೆಯ ಪ್ರತಿಮೆಯಿತ್ತು. ಪೌಲನು ಆ್ಯಥೆನ್ಸ್‌ಗೆ ಭೇಟಿಕೊಟ್ಟಾಗ, ಈ ಬಿಳಿ ಚಂದ್ರಕಾಂತ ಶಿಲೆಯ ದೇವಸ್ಥಾನವು ಆಗಲೇ ಸುಮಾರು 500 ವರುಷಗಳಿಂದ ಆ ನಗರದ ಪ್ರಧಾನ ಹೆಗ್ಗುರುತಾಗಿತ್ತು.

ಈ ಪಾರ್ಥಿನಾನ್‌ ಕಣ್ಣಿಗೆ ಬೀಳುತ್ತಿದ್ದ ಸ್ಥಳದಿಂದ ಪೌಲನು ಆ್ಯಥೆನ್ಸ್‌ನ ನಿವಾಸಿಗಳಿಗೆ, ‘ದೇವರು ಕೈಯಿಂದ ಕಟ್ಟಿದ ಗುಡಿಗಳಲ್ಲಿ ವಾಸಮಾಡುವವನಲ್ಲ’ ಎಂದು ಸಾರಿಹೇಳಿದನು. (ಅ. ಕೃತ್ಯಗಳು 17:23, 24) ಪೌಲನ ಕೇಳುಗರಿಗೆ, ಪ್ರಾಯಶಃ ಅಥೀನಳ ದೇವಾಲಯಗಳ ವೈಭವ ಮತ್ತು ಆಕೆಯ ಮೂರ್ತಿಗಳ ಘನಗಾಂಭೀರ್ಯವು ಅವರಿಗೆ ತಿಳಿಯದಿದ್ದ ಅದೃಶ್ಯ ದೇವರಿಗಿಂತಲೂ ಅಥೀನಳೇ ಹೆಚ್ಚು ಮನಮೋಹಕವಾಗಿ ತೋರುವಂತೆ ಮಾಡಿದ್ದಿರಬಹುದು. ಆದರೆ ಪೌಲನು ಹೇಳಿದಂತೆ, ಮಾನವರ ಸೃಷ್ಟಿಕರ್ತನು “ಮನುಷ್ಯನ ಶಿಲ್ಪವಿದ್ಯೆಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲುಗಳಿಗೆ ಸಮಾನವೆಂದು” ಎಂದಿಗೂ ಭಾವಿಸಬಾರದು.​—⁠ಅ. ಕೃತ್ಯಗಳು 17:29.

ಅಥೀನಳಂತೆ, ಯಾರ ಮಹಿಮೆಯು ದೇವಾಲಯಗಳು ಮತ್ತು ಮೂರ್ತಿಗಳ ಮೇಲೆ ಅವಲಂಬಿತವಾಗಿದ್ದವೊ ಅಂಥ ಅನೇಕ ದೇವದೇವತೆಗಳು ಬಂದುಹೋಗಿವೆ. ಸಾ.ಶ. ಐದನೆಯ ಶತಮಾನದಲ್ಲಿ ಅಥೀನಳ ವಿಗ್ರಹವು ಪಾರ್ಥಿನಾನ್‌ನಿಂದ ಕಣ್ಮರೆಯಾಯಿತು. ಮತ್ತು ಆಕೆಯ ದೇವಾಲಯಗಳಲ್ಲಿ ಕೇವಲ ಕೆಲವೊಂದು ದೇವಾಲಯಗಳ ಅವಶೇಷಗಳು ಮಾತ್ರ ಉಳಿದಿವೆ. ಇಂದು ವಿವೇಕ ಮತ್ತು ಮಾರ್ಗದರ್ಶನಕ್ಕಾಗಿ ಅಥೀನಳ ಕಡೆಗೆ ನೋಡುವವರು ಯಾರಿದ್ದಾರೆ?

ಆದರೆ ಯಾವ ಮನುಷ್ಯನೂ ನೋಡಿರದ ‘ನಿತ್ಯ ದೇವರಾದ’ ಯೆಹೋವನ ಸಂಬಂಧದಲ್ಲಿ ವಿಷಯವು ಎಷ್ಟು ಭಿನ್ನವಾಗಿದೆ. (ರೋಮಾಪುರ 16:26; 1 ಯೋಹಾನ 4:12) ಕೋರಹನ ಪುತ್ರರು ಬರೆದುದು: “ದೇವರು . . . ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು, ನಿರಂತರವೂ ನಮ್ಮನ್ನು ನಡಿಸುವವನಾಗಿದ್ದಾನೆ.” (ಕೀರ್ತನೆ 48:14) ದೇವರ ಮಾರ್ಗದರ್ಶನವನ್ನು ಅನುಭವಿಸುವ ಒಂದು ವಿಧವು, ಆತನ ವಾಕ್ಯವಾದ ಬೈಬಲನ್ನು ಅಧ್ಯಯನ ಮಾಡಿ, ಅದರ ಬುದ್ಧಿವಾದವನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳುವುದೇ ಆಗಿದೆ.