ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು ನಿಮ್ಮ ಮನೆಗೆ ಪುನಃ ಪುನಃ ಬರುವುದೇಕೆ?

ಯೆಹೋವನ ಸಾಕ್ಷಿಗಳು ನಿಮ್ಮ ಮನೆಗೆ ಪುನಃ ಪುನಃ ಬರುವುದೇಕೆ?

ಯೆಹೋವನ ಸಾಕ್ಷಿಗಳು ನಿಮ್ಮ ಮನೆಗೆ ಪುನಃ ಪುನಃ ಬರುವುದೇಕೆ?

ಯೆಹೋವನ ಸಾಕ್ಷಿಗಳು ತಮ್ಮ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ತೋರಿಸುವ ಪಟ್ಟುಹಿಡಿಯುವಿಕೆಯು ಲೋಕವ್ಯಾಪಕವಾಗಿ ಪ್ರಸಿದ್ಧವಾಗಿದೆ. ‘ಸಾಕ್ಷಿಗಳು ಏಕಪ್ಪಾ ನಮ್ಮಲ್ಲಿಗೆ ಬರುತ್ತ ಇರುತ್ತಾರೆ, ಅದರಲ್ಲೂ ನಾವು ಈ ಹಿಂದೆ ಅವರ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸದಿದ್ದರೂ ಏಕೆ ಬರುತ್ತಾರೆ?,’ ಎಂದು ಕೆಲವರು ಯೋಚಿಸುತ್ತಾರೆ. ರಷ್ಯಾದಿಂದ ಬಂದಿರುವ ಎರಡು ಪತ್ರಗಳು ಇದಕ್ಕೆ ಕಾರಣವನ್ನು ಕಂಡುಹಿಡಿಯಲು ಸಹಾಯಮಾಡುತ್ತವೆ.

ಕಬಾರಫ್‌ಸ್ಕ್‌ನಲ್ಲಿ ವಾಸಿಸುವ 19 ವರ್ಷ ಪ್ರಾಯದ ಮಾಷಾ ಒಪ್ಪಿಕೊಳ್ಳುವುದು: “ಸತ್ಯವಾಗಿ ಹೇಳುವುದಾದರೆ, ಈ ಹಿಂದೆ ನಾನು ಯೆಹೋವನ ಸಾಕ್ಷಿಗಳನ್ನು, ಅವರು ಒಂದು ಪೀಡೆಯಾಗಿದ್ದಾರೊ ಎಂಬಂತೆ ದೂರವಿರಿಸುತ್ತಿದ್ದೆ.” ಆದರೆ ಸಾಕ್ಷಿಗಳಿಂದ ಪ್ರಕಾಶಿಸಲ್ಪಡುವ ಪತ್ರಿಕೆಗಳ ಕೆಲವು ಪ್ರತಿಗಳನ್ನು ಓದಿದ ಬಳಿಕ ಆಕೆ ತನ್ನ ಮನೋಭಾವವನ್ನು ಬದಲಾಯಿಸಿದಳು. ಮಾಷಾ ಬರೆಯುವುದು: “ನಾನು ಪತ್ರಿಕೆಗಳಲ್ಲಿ ಓದಿದಂಥ ಎಲ್ಲಾ ವಿಷಯಗಳು ತುಂಬ ಆಸಕ್ತಿಭರಿತವೂ ತಿಳಿವಳಿಕೆಯನ್ನು ಕೊಡುವಂಥದ್ದೂ ಆಗಿದ್ದವು. ಆದರೆ ಅತಿ ಪ್ರಾಮುಖ್ಯ ವಿಷಯವೇನಂದರೆ ಅವು, ಒಬ್ಬ ವ್ಯಕ್ತಿಯು ಲೋಕವನ್ನು ಭಿನ್ನವಾದ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತವೆ. ಬದುಕಿನ ಉದ್ದೇಶವೇನು ಎಂಬುದನ್ನು ನಾನು ನಿಧಾನವಾಗಿ ತಿಳಿದುಕೊಳ್ಳತೊಡಗಿದೆ.”

ವ್ಲಾಡವಸ್ಟಾಕ್‌ನ 80 ಕಿಲೊಮೀಟರ್‌ ಉತ್ತರಕ್ಕಿರುವ ಊಸುರೀಸ್ಕ್‌ನಲ್ಲಿರುವ ಸ್ವೆಟ್ಲಾನಾ ಬರೆದುದು: “ನಾನು ಇತ್ತೀಚೆಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದಲು ಆರಂಭಿಸಿದ್ದೇನೆ. ನಮ್ಮ ಈ ಪ್ರಸ್ತುತ ಸಮಯದಲ್ಲಿ ಈ ಪತ್ರಿಕೆಗಳು ಅತ್ಯಗತ್ಯ. ನಾನು ಎಲ್ಲಾ ಲೇಖನಗಳನ್ನು ಓದಿ ಸಂತೋಷಿಸುತ್ತೇನೆ. ಅವು ಆಸಕ್ತಿಭರಿತವೂ, ಬೋಧಪ್ರದವೂ, ಜ್ಞಾನೋದಯಗೊಳಿಸುವಂಥವೂ ಆಗಿವೆ. ನಿಮಗೆ ಉಪಕಾರ! ಈ ಜಗತ್ತಿನಲ್ಲಿದ್ದುಕೊಂಡು ಇಂತಹ ದಯಾಪರ ಹಾಗೂ ಅತ್ಯಾವಶ್ಯಕವಾದ ಕೆಲಸದಲ್ಲಿ ತೊಡಗಿರುವುದಕ್ಕೆ ನಿಮಗೆ ತುಂಬ ಉಪಕಾರ.”

ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು, “ಸಾರಿ ಹೇಳುವವನಿಲ್ಲದೆ [ಜನರು] ಕೇಳುವದು ಹೇಗೆ?” ಎಂಬ ಅಪೊಸ್ತಲ ಪೌಲನ ವಿಚಾರಪ್ರೇರಕ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (ರೋಮಾಪುರ 10:14) ಈ ಸಾಕ್ಷಿಗಳು ಇನ್ನೊಮ್ಮೆ ನಿಮಗೆ ಭೇಟಿಕೊಡುವಾಗ ನೀವು ಅವರಿಗೆ ಕೆಲವು ನಿಮಿಷ ಏಕೆ ಕಿವಿಗೊಡಬಾರದು? ಆಗ ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸಾಂತ್ವನದ ಸಂದೇಶವನ್ನು ನೀವೂ ಇಷ್ಟಪಟ್ಟೀರಿ.