ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸೇವಕರು ವೃಕ್ಷಗಳಂತಿದ್ದಾರೆ ಯಾವ ವಿಧಗಳಲ್ಲಿ?

ದೇವರ ಸೇವಕರು ವೃಕ್ಷಗಳಂತಿದ್ದಾರೆ ಯಾವ ವಿಧಗಳಲ್ಲಿ?

ದೇವರ ಸೇವಕರು ವೃಕ್ಷಗಳಂತಿದ್ದಾರೆ ಯಾವ ವಿಧಗಳಲ್ಲಿ?

ಬೈಬಲ್‌ ಮೂಲತತ್ತ್ವಗಳಲ್ಲಿ ಹರ್ಷಪಟ್ಟು, ಅವುಗಳನ್ನು ತನ್ನ ಜೀವಿತದಲ್ಲಿ ಅನ್ವಯಿಸಿಕೊಳ್ಳುವ ಒಬ್ಬ ವ್ಯಕ್ತಿಯ ಕುರಿತು ಕೀರ್ತನೆಗಾರನು ಹೀಗೆಂದನು: “ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತನೆ 1:1-3) ಈ ಹೋಲಿಕೆಯು ಸೂಕ್ತವಾಗಿದೆ ಏಕೆ?

ವೃಕ್ಷಗಳು ದೀರ್ಘಕಾಲ ಜೀವಿಸಬಲ್ಲವು. ಉದಾಹರಣೆಗೆ, ಭೂಮಧ್ಯ ಸಾಗರ ಪ್ರದೇಶದಲ್ಲಿರುವ ಕೆಲವೊಂದು ಆಲಿವ್‌ ಮರಗಳು ಒಂದರಿಂದ ಎರಡು ಸಾವಿರ ವರ್ಷ ಹಳೆಯವು ಎಂದು ಹೇಳಲಾಗುತ್ತದೆ. ಅದೇ ರೀತಿ ಮಧ್ಯ ಆಫ್ರಿಕದ ಬೇಅಬ್ಯಾಬ್‌ ಮರಗಳು ಬಹಳ ವರ್ಷಕಾಲ ಬದುಕುತ್ತವೆ ಮತ್ತು ಕ್ಯಾಲಿಫಾರ್ನಿಯದಲ್ಲಿರುವ ಒಂದು ಬ್ರಿಸ್‌ಲ್‌ಕೋನ್‌ ಪೀತದಾರು ಮರದ ಆಯಸ್ಸು 4,600 ವರುಷಗಳೆಂದು ನಂಬಲಾಗುತ್ತದೆ. ಒಂದು ಕಾಡಿನಲ್ಲಿ ಪೂರ್ತಿಯಾಗಿ ಬೆಳೆದಿರುವ ವೃಕ್ಷಗಳು ಅನೇಕವೇಳೆ ಅವುಗಳ ಪರಿಸರಕ್ಕೆ ಪ್ರಯೋಜನದಾಯಕವಾಗಿರುತ್ತವೆ. ಉದಾಹರಣೆಗೆ, ಎತ್ತರವಾಗಿ ಬೆಳೆದಿರುವ ಮರಗಳು ಸಸಿಗಳಿಗೆ ರಕ್ಷಾಕವಚದಂಥ ನೆರಳನ್ನು ಕೊಡುತ್ತವೆ, ಮಾತ್ರವಲ್ಲ ಆ ಮರಗಳಿಂದ ಉದುರುವ ಎಲೆಗಳು ಕೆಳಗಿರುವ ಮಣ್ಣನ್ನು ಫಲವತ್ತಾಗಿ ಮಾಡುತ್ತವೆ.

ಜಗತ್ತಿನ ಅತಿ ಎತ್ತರವಾದ ವೃಕ್ಷಗಳು ಸಾಮಾನ್ಯವಾಗಿ ಕಾಡಿನಲ್ಲಿ ಒಟ್ಟಿಗೆ ಬೆಳೆದು ಒಂದಕ್ಕೊಂದು ಆಸರೆಯಾಗಿರುತ್ತವೆ. ಬಹುಶಃ ಅವುಗಳ ಬೇರುಗಳು ಒಂದಕ್ಕೊಂದು ಹೆಣೆದುಕೊಂಡಿರುವುದರಿಂದ ಅನೇಕ ಮರಗಳು ಒಟ್ಟುಗೂಡಿ, ಹುಲ್ಲುಗಾವಲಿನಲ್ಲಿರುವ ಒಂಟಿ ಮರಕ್ಕಿಂತಲೂ ಹೆಚ್ಚು ಉತ್ತಮವಾಗಿ ಬಿರುಗಾಳಿಯೊಂದನ್ನು ಎದುರಿಸಬಹುದು. ವಿಸ್ತೃತ ಬೇರಿನ ವ್ಯವಸ್ಥೆಯು ಒಂದು ವೃಕ್ಷವು ಸಾಕಷ್ಟು ನೀರು ಮತ್ತು ಮಣ್ಣಿನಿಂದ ಪೋಷಕ ಪದಾರ್ಥಗಳನ್ನು ಪಡೆಯುವಂತೆ ಸಹ ಸಾಧ್ಯಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ಬೇರುಗಳು ಆ ಮರದ ಎತ್ತರಕ್ಕಿಂತಲೂ ಹೆಚ್ಚು ಆಳವಾಗಿ ನೆಲವನ್ನು ತೂರಿಹೋಗಬಹುದು ಅಥವಾ ಬೇರುಗಳು ಸಮತಲವಾಗಿ ವೃಕ್ಷದ ಎಲೆಗುಂಪಲಿನ ಹರವಿಗಿಂತಲೂ ಹೆಚ್ಚು ವ್ಯಾಪಕವಾಗಿ ಹರಡಿರಬಹುದು.

ಕ್ರೈಸ್ತರು “[ಕ್ರಿಸ್ತನಲ್ಲಿ] ಬೇರೂರಿಕೊಂಡು ಭಕ್ತಿವೃದ್ಧಿಯನ್ನು ಹೊಂದಿ [ಅವರಿಗೆ] ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತನಂಬಿಕೆಯಲ್ಲಿ ನೆಲೆ”ಗೊಳ್ಳಬೇಕೆಂದು ಅಪೊಸ್ತಲ ಪೌಲನು ವಿವರಿಸಿದಾಗ, ಅವನು ಪರೋಕ್ಷವಾಗಿ ಒಂದು ವೃಕ್ಷಕ್ಕೆ ಸೂಚಿಸುತ್ತಿದ್ದಿರಬಹುದು. (ಕೊಲೊಸ್ಸೆ 2:6, 7) ಹೌದು, ಕ್ರೈಸ್ತರು ಕ್ರಿಸ್ತನಲ್ಲಿ ದೃಢವಾಗಿ ಬೇರೂರುವಲ್ಲಿ ಮಾತ್ರ ಸ್ಥಿರವಾಗಿ ನಿಲ್ಲಬಲ್ಲರು.​—⁠1 ಪೇತ್ರ 2:⁠21.

ದೇವರ ಸೇವಕರನ್ನು ಇನ್ನಾವ ವಿಧಗಳಲ್ಲಿ ವೃಕ್ಷಗಳಿಗೆ ಹೋಲಿಸಬಹುದು? ಒಂದು ತೋಟದಲ್ಲಿರುವ ಮರಗಳಿಗೆ ಹತ್ತಿರದ ಮರಗಳಿಂದ ಆಸರೆ ದೊರೆಯುವಂತೆಯೇ ಕ್ರೈಸ್ತ ಸಭೆಗೆ ನಿಕಟವಾಗಿರುವವರು ಜೊತೆವಿಶ್ವಾಸಿಗಳಿಂದ ಬೆಂಬಲವನ್ನು ಪಡೆಯುತ್ತಾರೆ. (ಗಲಾತ್ಯ 6:⁠2) ವ್ಯಾಪಕವಾದ ಆಧ್ಯಾತ್ಮಿಕ ಬೇರಿನ ವ್ಯವಸ್ಥೆಯಿರುವ ನಂಬಿಗಸ್ತ ಪ್ರೌಢ ಕ್ರೈಸ್ತರು, ಹೊಸ ವಿಶ್ವಾಸಿಗಳು ಬಿರುಗಾಳಿಸದೃಶ ವಿರೋಧದ ಎದುರಿನಲ್ಲಿಯೂ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲುವಂತೆ ಅವರಿಗೆ ಸಹಾಯಮಾಡುತ್ತಾರೆ. (ರೋಮಾಪುರ 1:​11, 12) ಹೊಸಬರಾಗಿರುವ ಕ್ರೈಸ್ತರು ಹೆಚ್ಚು ಅನುಭವಸ್ಥರಾದ ದೇವರ ಸೇವಕರ ರಕ್ಷಣೆ ನೀಡುವ “ನೆರಳಲ್ಲಿ” ಹುಲುಸಾಗಿ ಬೆಳೆಯಬಲ್ಲರು. (ರೋಮಾಪುರ 15:⁠1) ಮತ್ತು ಲೋಕವ್ಯಾಪಕವಾದ ಕ್ರೈಸ್ತ ಸಭೆಯ ಸದಸ್ಯರೆಲ್ಲರೂ, “ನೀತಿವೃಕ್ಷಗಳು” ಆಗಿರುವ ಅಭಿಷಿಕ್ತ ಉಳಿಕೆಯವರು ಒದಗಿಸುವ ಬಲದಾಯಕವಾದ ಆಧ್ಯಾತ್ಮಿಕ ಪೋಷಣೆಯಿಂದ ಪ್ರಯೋಜನ ಪಡೆಯುತ್ತಾರೆ.​—⁠ಯೆಶಾಯ 61:⁠3.

ಯೆಶಾಯ 65:22ರಲ್ಲಿ ಕಂಡುಬರುವ ವಾಗ್ದಾನದ ನೆರವೇರಿಕೆಯನ್ನು ಅನುಭವಿಸುವ ಪ್ರತೀಕ್ಷೆಯು ದೇವರ ಸೇವಕರೆಲ್ಲರಿಗಿದೆ ಎಂಬ ವಿಷಯವು ಅದೆಷ್ಟು ರೋಮಾಂಚಕವಾಗಿರುತ್ತದೆ! ಅದು ತಿಳಿಸುವುದು: “ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು.”

[ಪುಟ 28ರಲ್ಲಿರುವ ಚಿತ್ರ ಕೃಪೆ]

Godo-Foto