ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಕೆಯು ಒಬ್ಬ ರೋಗಿಯನ್ನು ಗುಣಪಡಿಸಬಲ್ಲದೋ?

ನಂಬಿಕೆಯು ಒಬ್ಬ ರೋಗಿಯನ್ನು ಗುಣಪಡಿಸಬಲ್ಲದೋ?

ನಂಬಿಕೆಯು ಒಬ್ಬ ರೋಗಿಯನ್ನು ಗುಣಪಡಿಸಬಲ್ಲದೋ?

ಅಸ್ವಸ್ಥರಾಗಿರುವಾಗ ನಾವು ಉಪಶಮನ ಮತ್ತು ವಾಸಿಯನ್ನು ಬಯಸುತ್ತೇವೆ. ಯೇಸು ಕ್ರಿಸ್ತನು ಅನೇಕಬಾರಿ ಎಲ್ಲಾ ರೀತಿಯ ಕಾಯಿಲೆಗಳನ್ನು ವಾಸಿಮಾಡುವ ಮೂಲಕ ಅನೇಕ ಅಸ್ವಸ್ಥರಿಗೆ ಉಪಶಮನವನ್ನು ತಂದನು ಎಂಬುದನ್ನು ನೀವು ಪ್ರಾಯಶಃ ಬೈಬಲಿನಿಂದ ತಿಳಿದುಕೊಂಡಿರುವಿರಿ. ಈ ರೀತಿಯ ಗುಣಪಡಿಸುವಿಕೆಗಳು ಸಂಭವಿಸಿದ್ದು ಹೇಗೆ? ‘ದೇವರ ಶಕ್ತಿಯಿಂದ’ ಎಂದು ಬೈಬಲು ಹೇಳುತ್ತದೆ. (ಲೂಕ 9:42, 43, NW; ಅ. ಕೃತ್ಯಗಳು 19:11, 12) ಆದುದರಿಂದ, ಅಲ್ಲಿ ವಾಸಿಯನ್ನು ಎಸಗಿದ್ದು ದೇವರಿಂದ ಬಂದ ಪವಿತ್ರಾತ್ಮವೇ ಹೊರತು ವಾಸಿಹೊಂದಲು ಬಯಸಿದ ವ್ಯಕ್ತಿಯ ನಂಬಿಕೆಯೊಂದೇ ಅಲ್ಲ. (ಅ. ಕೃತ್ಯಗಳು 28:7-9) ಆದುದರಿಂದಲೇ, ಅಸ್ವಸ್ಥ ವ್ಯಕ್ತಿಗಳು ಗುಣಹೊಂದಲಿಕ್ಕಾಗಿ ತನ್ನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಬೇಕು ಎಂದು ಯೇಸು ಅಗತ್ಯಪಡಿಸಲಿಲ್ಲ.

ನೀವು ಹೀಗೆ ಯೋಚಿಸಬಹುದು: ‘ಅದ್ಭುತಕರ ಗುಣಪಡಿಸುವಿಕೆಗಳು ಗತಕಾಲದ ಸಂಗತಿಯಾಗಿವೆಯೋ, ಅಥವಾ ಯೇಸು ಮಾಡಿದಂಥ ಗುಣಪಡಿಸುವಿಕೆಗಳು ಪುನಃ ನಡೆಯುವವೋ? ಒಂದು ವೇದನಾಭರಿತ ಅಥವಾ ಗುಣಪಡಿಸಲಾಗದ ರೋಗದಿಂದ ನರಳುತ್ತಿರುವವರಿಗೆ ಯಾವ ನಿರೀಕ್ಷೆಯಿದೆ?’

ಯೇಸು ಭೂಮಿಯಲ್ಲಿದ್ದಾಗ ನಡೆಸಿದ ಅದೇ ರೀತಿಯ ಅದ್ಭುತಕರ ಗುಣಪಡಿಸುವಿಕೆಗಳು ದೇವರ ನೀತಿಯ ಹೊಸ ಲೋಕದಲ್ಲಿ ಪುನಃ ನಡೆಯುವಂತೆ ದೇವರ ಶಕ್ತಿಯು ಸಾಧ್ಯಗೊಳಿಸುವುದು ಎಂಬುದಾಗಿ ಬೈಬಲು ವಿವರಿಸುತ್ತದೆ. ಎಲ್ಲಾ ರೋಗಗಳನ್ನೂ ಮಾತ್ರವಲ್ಲದೆ ಮರಣವನ್ನೂ ನಿರ್ಮೂಲಗೊಳಿಸಲು ಯಾವ ಪ್ರಾರ್ಥನಾಚಿಕಿತ್ಸಕನಿಗೂ ಅಸಾಧ್ಯವಾದ ವಿಷಯಗಳನ್ನು ದೇವರು ಹೇಗೆ ಮತ್ತು ಯಾವಾಗ ಮಾಡುವನೆಂಬುದನ್ನು ತೋರಿಸಲು ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ಸಂತೋಷಿಸುವರು. ಹೌದು, ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು.”​—⁠ಯೆಶಾಯ 25:⁠8.