ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀರ್ಘಕಾಲದ ಸಂತೋಷಕರ ಜೀವನಕ್ಕೆ ಸೂತ್ರ

ದೀರ್ಘಕಾಲದ ಸಂತೋಷಕರ ಜೀವನಕ್ಕೆ ಸೂತ್ರ

ದೀರ್ಘಕಾಲದ ಸಂತೋಷಕರ ಜೀವನಕ್ಕೆ ಸೂತ್ರ

ಎಲ್ಲರಿಗೂ ದೊಡ್ಡವರಾಗಬೇಕೆಂಬ ಆಸೆಯಿದೆ, ಆದರೆ ಯಾರಿಗೂ ವೃದ್ಧರಾಗುವ ಆಸೆಯಿಲ್ಲ ಎಂದು ಕೆಲವರು ಹೇಳುತ್ತಾರೆ. ನಿವೃತ್ತಿ ಪ್ರಾಯಕ್ಕೆ ಸಮೀಪಿಸುತ್ತಿರುವ ಅನೇಕ ಜನರು, ತಮ್ಮ ಬಳಿ ಹೆಚ್ಚು ಸಮಯ ಮತ್ತು ಕಡಿಮೆ ಜವಾಬ್ದಾರಿಗಳಿರುವ ಸಮಯಕ್ಕಾಗಿ ಎದುರುನೋಡುತ್ತಿರುತ್ತಾರೆ. ಆದರೆ ತಾವು ಗುರಿಯಿಲ್ಲದವರೂ ನಿಷ್ಪ್ರಯೋಜಕರೂ ಆಗುವೆವೆಂಬ ಆತಂಕ ಸಹ ಅವರಿಗಿದೆ. ಏಕಾಂತತೆ, ಅಸಂತೋಷ, ಮತ್ತು ಕ್ಷೀಣಿಸುವ ಆರೋಗ್ಯದ ಚಿಂತೆಯೂ ಅವರನ್ನು ಕಾಡಿಸುತ್ತದೆ.

ಹಾಗಾದರೆ ಸಂತೋಷಕರ ಜೀವನದ ರಹಸ್ಯವೇನು? ಒಳ್ಳೇ ಮಿತ್ರರು ಮತ್ತು ಒಂದು ಪ್ರೀತಿಪರ ಕುಟುಂಬವು, ಆಬಾಲವೃದ್ಧರೆಲ್ಲರಿಗೆ ಸಂತೋಷವನ್ನು ತರಲು ಸಹಾಯಮಾಡುತ್ತದೆ. ಆದರೆ ಒಬ್ಬ ವೃದ್ಧ ವ್ಯಕ್ತಿಯ ಜೀವನಕ್ಕೆ ಇತರರು ಯಾವ ನೆರವನ್ನು ನೀಡುತ್ತಾರೆಂಬುದು ಅತಿ ಪ್ರಾಮುಖ್ಯವಲ್ಲ. ಬದಲಾಗಿ ಆ ವೃದ್ಧ ವ್ಯಕ್ತಿಯು ಇತರರಿಗಾಗಿ ಏನನ್ನು ಮಾಡಬಲ್ಲನೆಂಬುದೇ ಹೆಚ್ಚು ಮುಖ್ಯವಾಗಿದೆ.

“ಇತರರ ಜೀವನಕ್ಕೆ ನೆರವುನೀಡುವುದು ನಮ್ಮ ಸ್ವಂತ ಜೀವನಗಳನ್ನು ಲಂಬಿಸಲು ಸಹಾಯಮಾಡಬಹುದು” ಎಂದು, 423 ಮಂದಿ ವೃದ್ಧ ದಂಪತಿಗಳನ್ನೊಳಗೊಂಡ ಒಂದು ದೀರ್ಘಕಾಲಿಕ ಅಧ್ಯಯನವು ಸೂಚಿಸಿತು. ಆ ಅಧ್ಯಯನವನ್ನು ನಡೆಸಿದ ಸ್ಟೆಫನಿ ಬ್ರೌನ್‌ ವಿವರಿಸುವುದು: “ಇತರರೊಂದಿಗಿರುವ ಸಂಬಂಧಗಳಿಂದ ನಮಗೇನು ಸಿಗುತ್ತದೊ ಅದಲ್ಲ, ಬದಲಾಗಿ ನಾವೇನು ಕೊಡುತ್ತೇವೊ ಅದೇ ಉಪಯುಕ್ತವಾಗಿದೆ ಎಂದು ಈ ಕಂಡುಹಿಡಿತಗಳು ಸೂಚಿಸುತ್ತವೆ.” ಇಂಥ ಕೊಡುವಿಕೆಯಲ್ಲಿ, ಮನೆಕೆಲಸದಲ್ಲಿ ಇತರರಿಗೆ ಸಹಾಯನೀಡುವುದು, ಮಕ್ಕಳ ಆರೈಕೆಮಾಡುವುದು, ಅವರಿಗೋಸ್ಕರ ಹೊರಗಿನ ಕೆಲಸಗಳನ್ನು ಮಾಡುವುದು, ವಾಹನದಲ್ಲಿ ಕೊಂಡೊಯ್ಯುವುದು, ಇಲ್ಲವೆ ತಮ್ಮ ಮನಸ್ಸಿನ ಭಾರವನ್ನು ಇಳಿಸಲು ಬಯಸುವ ಒಬ್ಬರಿಗೆ ಕಿವಿಗೊಡುವುದು ಸೇರಿರಬಹುದು.

ಸುಮಾರು 2,000 ವರ್ಷಗಳ ಹಿಂದೆ ಯೇಸು ಕ್ರಿಸ್ತನು ಹೇಳಿದ್ದು: “ತೆಗೆದುಕೊಳ್ಳುವದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅ. ಕೃತ್ಯಗಳು 20:35) ದೀರ್ಘಕಾಲದ ಸಂತೋಷಕರ ಜೀವನಕ್ಕಾಗಿರುವ ಸೂತ್ರದಲ್ಲಿ, ಒಂದು ದೊಡ್ಡ ಬ್ಯಾಂಕ್‌ ಅಕೌಂಟ್‌ ಅಥವಾ ವೃದ್ಧಾಪ್ಯವನ್ನು ತಡೆಯುವಂಥ ಚಿಕಿತ್ಸೆಗಳು ಮತ್ತು ಪಥ್ಯಗಳು ಸೇರಿರುವುದಿಲ್ಲ. ಬದಲಾಗಿ, ಕ್ರಿಯಾಶೀಲರಾಗಿರುವುದು ಮತ್ತು ಇತರರ ಜೀವನಗಳನ್ನು ಹಸನಾಗಿಸಲು ಸಮಯ, ಚೈತನ್ಯ ಹಾಗೂ ಶಕ್ತಿಯನ್ನು ಕೊಡುವುದು ಒಳಗೂಡಿದೆ.

ಹಾಗಿದ್ದರೂ, ವೃದ್ಧಾಪ್ಯ, ಕಾಯಿಲೆ ಹಾಗೂ ಮರಣದಿಂದ ನಮ್ಮನ್ನು ರಕ್ಷಿಸಲು ಕೊಡುವಿಕೆಗಿಂತ ಹೆಚ್ಚಿನದ್ದು ಆವಶ್ಯಕ. ಕೇವಲ ದೇವರ ರಾಜ್ಯವೊಂದೇ ಅಂಥ ವಿಷಯಗಳನ್ನು ತೆಗೆದುಹಾಕುವುದು. ಆ ಆಳ್ವಿಕೆಯಡಿಯಲ್ಲಿ, ಅಸ್ವಸ್ಥತೆಯು ಇಲ್ಲವಾಗುವುದು ಮತ್ತು ‘ಮರಣವೂ ಇರುವುದಿಲ್ಲ.’ (ಪ್ರಕಟನೆ 21:​3, 4; ಯೆಶಾಯ 33:24) ವಾಸ್ತವದಲ್ಲಿ, ವಿಧೇಯ ಮಾನವರು ಭೂಪರದೈಸಿನಲ್ಲಿ ಸಂತೋಷದಿಂದ ಸದಾಕಾಲ ಜೀವಿಸುವರು. (ಲೂಕ 23:43) ದೀರ್ಘಕಾಲದ ಸಂತೋಷಕರ ಜೀವನದ ಈ ಬೈಬಲ್‌ ಆಧಾರಿತ ಸೂತ್ರವನ್ನು ಇತರರಿಗೆ ತಿಳಿಸಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ.