ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು ಮೆಚ್ಚಿಸಲಿಕ್ಕಾಗಿ ಮಾನವಕುಲದ ಅನ್ವೇಷಣೆ

ದೇವರನ್ನು ಮೆಚ್ಚಿಸಲಿಕ್ಕಾಗಿ ಮಾನವಕುಲದ ಅನ್ವೇಷಣೆ

ದೇವರನ್ನು ಮೆಚ್ಚಿಸಲಿಕ್ಕಾಗಿ ಮಾನವಕುಲದ ಅನ್ವೇಷಣೆ

“ದೇವರಲ್ಲಿ ನಂಬಿಕೆ ಅಂದರೆ ಆತನು ನಿಯಂತ್ರಕನು ಮತ್ತು ಸೃಷ್ಟಿಕರ್ತನು ಎಂಬ ನಂಬಿಕೆ ಇದ್ದಿರದ ಮಾನವ ಸಮಾಜವು ಎಂದೂ ಅಸ್ತಿತ್ವದಲ್ಲಿರಲಿಲ್ಲ. ಉದ್ದೇಶಪೂರ್ವಕವಾಗಿ ನಾಸ್ತಿಕವಾದವನ್ನು ಆಯ್ಕೆಮಾಡಿರುವ ಸಮಾಜಗಳ ವಿಷಯದಲ್ಲೂ ಇದು ಸತ್ಯ.” ಹೀಗೆಂದು ಜಾನ್‌ ಬೋಕರ್‌ರವರು ದೇವರು​—⁠ಒಂದು ಚುಟುಕಾದ ಇತಿಹಾಸ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ. ಮಾನವ ನಡವಳಿಕೆಯಲ್ಲಿ, ದೇವರನ್ನು ಕಂಡುಹಿಡಿದು ಆತನ ಅನುಗ್ರಹವನ್ನು ಗಿಟ್ಟಿಸಿಕೊಳ್ಳಲಿಕ್ಕಾಗಿರುವ ಅನ್ವೇಷಣೆಯು, ಒಂದು ಬಟ್ಟೆಯಲ್ಲಿ ಹೆಣೆಯಲ್ಪಟ್ಟಿರುವ ನೂಲಿನಂತಿರುತ್ತದೆ. ಲೋಕದ ಸುತ್ತಲೂ ಅನೇಕರಿಗೆ ದೇವರನ್ನು ಮೆಚ್ಚಿಸುವ ಪ್ರಾಮಾಣಿಕ ಇಚ್ಛೆಯಿದೆ. ಆದರೆ ಅವರಿದನ್ನು ಮಾಡಲು ಪ್ರಯತ್ನಿಸುವ ವಿಧವು, ಅವರವರ ನಂಬಿಕೆಗಳಿಗನುಸಾರ ಭಿನ್ನಭಿನ್ನವಾಗಿರುತ್ತದೆ ಎಂಬುದು ನಿಜ.

ದೇವರ ಅನುಗ್ರಹವನ್ನು ಪಡೆಯಲಿಕ್ಕಾಗಿ ಒಳ್ಳೆಯ ವ್ಯಕ್ತಿಗಳಾಗಿ ಜೀವನ ನಡೆಸುವುದಷ್ಟೇ ಅಗತ್ಯ ಎಂಬುದು ಕೆಲವರ ಅಭಿಪ್ರಾಯ. ಬಡವರಿಗೆ ದಾನಧರ್ಮವನ್ನು ಮಾಡುವ ಮೂಲಕ ದೇವರ ಮೆಚ್ಚುಗೆಯನ್ನು ಗಳಿಸಬಹುದೆಂಬುದು ಇನ್ನಿತರರ ಅನಿಸಿಕೆ. ಅಷ್ಟುಮಾತ್ರವಲ್ಲ, ಕೋಟ್ಯಂತರ ಜನರಿಗೆ ಧಾರ್ಮಿಕ ಸಮಾರಂಭ ಮತ್ತು ವಿಧಿಸಂಸ್ಕಾರಗಳು ಪ್ರಾಮುಖ್ಯವಾಗಿವೆ.

ಇನ್ನೊಂದು ಬದಿಯಲ್ಲಿ, ದೇವರು ತಮ್ಮ ನಿಲುಕಿಗೆ ಮೀರಿದವನು, ಅಂದರೆ ಸಾಮಾನ್ಯ ಜನರ ಕಡೆಗೆ ಗಮನಕೊಡಲಾಗದಷ್ಟು ತೀರ ದೂರದಲ್ಲಿರುವವನು, ಇಲ್ಲವೆ ಆತನು ಇತರ ವಿಷಯಗಳಲ್ಲಿ ತೀರ ತಲ್ಲೀನನಾಗಿದ್ದಾನೆ ಎಂಬುದಾಗಿ ನಂಬುವ ವ್ಯಕ್ತಿಗಳೂ ಇದ್ದಾರೆ. ‘ದೇವತೆಗಳು ಒಳಿತನ್ನಾಗಲಿ ಕೇಡನ್ನಾಗಲಿ ಮಾಡಲಾಗದಷ್ಟು ದೂರದಲ್ಲಿದ್ದಾರೆ’ ಎಂದು ಪುರಾತನಕಾಲದ ತತ್ತ್ವಜ್ಞಾನಿ ಎಪಿಕ್ಯೂರಸನು ನಂಬುತ್ತಿದ್ದನೆಂದು ಹೇಳಲಾಗುತ್ತದೆ. ಹೀಗಿದ್ದರೂ, ಇಂಥೆಲ್ಲ ವಿಚಾರಗಳುಳ್ಳ ಅನೇಕರು ಧಾರ್ಮಿಕ ವ್ಯಕ್ತಿಗಳಾಗಿದ್ದಾರೆ. ಇವರಲ್ಲಿ ಕೆಲವರು ತಮ್ಮ ಮೃತ ಪೂರ್ವಜರನ್ನು ಸಮಾಧಾನಪಡಿಸುವ ನಿರೀಕ್ಷೆಯಿಂದ ಬಲಿಗಳನ್ನೂ ಅರ್ಪಿಸಬಹುದು, ಮತ್ತು ಧಾರ್ಮಿಕ ಸಂಸ್ಕಾರಗಳನ್ನೂ ನಡೆಸಬಹುದು.

ನಿಮ್ಮ ಅಭಿಪ್ರಾಯವೇನು? ದೇವರ ಅನುಗ್ರಹಕ್ಕೆ ಪಾತ್ರರಾಗಲಿಕ್ಕಾಗಿ ನಾವು ಮಾಡುವ ಪ್ರಯತ್ನಗಳನ್ನು ಆತನು ಲಕ್ಷಿಸುತ್ತಾನೊ? ದೇವರ ಮನಸ್ಸನ್ನು ಸ್ಪರ್ಶಿಸಿ, ಆತನನ್ನು ಮೆಚ್ಚಿಸಲು ನಮಗೆ ಸಾಧ್ಯವೊ?