ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಪ್ರಾರ್ಥನೆಗಳು ಒಂದು ಗಂಭೀರ ಪರಿಸ್ಥಿತಿಯನ್ನು ಬದಲಾಯಿಸಬಲ್ಲವೋ?

ನಿಮ್ಮ ಪ್ರಾರ್ಥನೆಗಳು ಒಂದು ಗಂಭೀರ ಪರಿಸ್ಥಿತಿಯನ್ನು ಬದಲಾಯಿಸಬಲ್ಲವೋ?

ನಿಮ್ಮ ಪ್ರಾರ್ಥನೆಗಳು ಒಂದು ಗಂಭೀರ ಪರಿಸ್ಥಿತಿಯನ್ನು ಬದಲಾಯಿಸಬಲ್ಲವೋ?

ಹತೋಟಿ ಮೀರಿದಂಥ ಗಂಭೀರವಾದ ಪರಿಸ್ಥಿತಿಯನ್ನು ನಮ್ಮಲ್ಲಿ ಯಾರು ತಾನೇ ಎದುರಿಸಿಲ್ಲ? ಪ್ರಾರ್ಥನೆಯು, ಅಂಥ ಗಂಭೀರವಾದ ಪರಿಸ್ಥಿತಿಯನ್ನು ಪ್ರಭಾವಿಸಬಲ್ಲದೆಂದು ಅಪೊಸ್ತಲ ಪೌಲನಿಗೆ ತಿಳಿದಿತ್ತು ಎಂಬುದನ್ನು ಬೈಬಲ್‌ ತೋರಿಸುತ್ತದೆ.

ರೋಮಾಪುರದಲ್ಲಿ ಪೌಲನು ಅನ್ಯಾಯವಾಗಿ ಸೆರೆಮನೆಗೆ ಹಾಕಲ್ಪಟ್ಟಾಗ, ತನಗಾಗಿ ಪ್ರಾರ್ಥಿಸುವಂತೆ ಅವನು ಜೊತೆ ವಿಶ್ವಾಸಿಗಳನ್ನು ಕೇಳಿಕೊಂಡನು. ಅದಕ್ಕೆ ಕೂಡಿಸಿ ಅವನಂದದ್ದು: “ಪ್ರಾರ್ಥನೆಮಾಡಬೇಕೆಂದು ನಿಮ್ಮನ್ನು ಬಹು ವಿಶೇಷವಾಗಿ ಬೇಡಿಕೊಳ್ಳುತ್ತೇನೆ, ಯಾಕಂದರೆ ನಿಮ್ಮ ಪ್ರಾರ್ಥನೆಗಳ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರಿಗಿ ಬಂದೇನು.” (ಇಬ್ರಿಯ 13:​18, 19) ಇನ್ನೊಂದು ಸಂದರ್ಭದಲ್ಲಿ, ತನ್ನ ಶೀಘ್ರ ಬಿಡುಗಡೆಗಾಗಿ ಮಾಡಲ್ಪಟ್ಟ ಪ್ರಾರ್ಥನೆಗಳಿಗೆ ದೇವರು ಪ್ರತಿಕ್ರಿಯಿಸುವನೆಂಬ ಭರವಸೆಯನ್ನು ಪೌಲನು ವ್ಯಕ್ತಪಡಿಸಿದನು. (ಫಿಲೆಮೋನ 22) ಅಂತೆಯೇ, ಪೌಲನು ಬೇಗನೆ ಬಿಡುಗಡೆಹೊಂದಿ, ತನ್ನ ಮಿಷನೆರಿ ಕೆಲಸವನ್ನು ಪುನಃ ಮುಂದುವರಿಸಿದನು.

ಆದರೆ, ಪ್ರಾರ್ಥನೆಯು ನಿಜವಾಗಿಯೂ ನಿಮ್ಮ ಪರಿಸ್ಥಿತಿಗಳನ್ನು ಬದಲಾಯಿಸಬಲ್ಲದೋ? ಪ್ರಾಯಶಃ ಬದಲಾಯಿಸಬಲ್ಲದು. ಆದರೆ ನೆನಪಿನಲ್ಲಿಡಿರಿ, ಪ್ರಾರ್ಥನೆ ಎಂಬುದು ಬರಿಯ ವಿಧಿವಿಹಿತವಾದ ಧಾರ್ಮಿಕ ಪರಿಪಾಠವಲ್ಲ. ಅದು, ಸ್ವರ್ಗದಲ್ಲಿರುವ ನಮ್ಮ ಪ್ರೀತಿಯ ಮತ್ತು ಶಕ್ತಿಶಾಲಿಯಾಗಿರುವ ತಂದೆಯೊಂದಿಗಿನ ನೈಜ ಸಂವಾದವಾಗಿದೆ. ನಮ್ಮ ಪ್ರಾರ್ಥನೆಗಳಲ್ಲಿ ನಾವು ನಿರ್ದಿಷ್ಟ ಸಮಸ್ಯೆಯನ್ನು ತಿಳಿಸಬೇಕು, ಆದರೆ ನಂತರ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆಂದು ತಾಳ್ಮೆಯಿಂದ ಕಾದುನೋಡಬೇಕು.

ಪ್ರತಿಯೊಂದು ಪ್ರಾರ್ಥನೆಗೆ ದೇವರು ನೇರವಾಗಿ ಪ್ರತಿಕ್ರಿಯಿಸದೆ ಇರಬಹುದು, ಅಥವಾ ನಾವು ನಿರೀಕ್ಷಿಸಿದ ರೀತಿಯಲ್ಲಿ ಇಲ್ಲವೆ ಸಮಯದಲ್ಲಿ ಆತನು ಯಾವಾಗಲೂ ಉತ್ತರಿಸದೆ ಇರಬಹುದು. ಉದಾಹರಣೆಗೆ ಪೌಲನು, ‘ತನ್ನ ಶರೀರದಲ್ಲಿ ನಾಟಿದ ಶೂಲದ’ ಕುರಿತು ಸತತವಾಗಿ ಪ್ರಾರ್ಥಿಸಿದನು. ಪೌಲನ ಆ ಸಮಸ್ಯೆಯು ಏನೇ ಆಗಿದ್ದಿರಲಿ ದೇವರು ಅದನ್ನು ತೆಗೆದುಬಿಡಲಿಲ್ಲ. ಆದರೆ ಪೌಲನನ್ನು ಈ ಬಲವರ್ಧಕ ಮಾತುಗಳಿಂದ ಆತನು ಸಾಂತ್ವನಗೊಳಿಸಿದನು: “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.”​—⁠2 ಕೊರಿಂಥ 12:​7-9.

ಅದೇ ರೀತಿಯಲ್ಲಿ, ನಮ್ಮ ನಿರ್ದಿಷ್ಟ ಸಮಸ್ಯೆಯನ್ನು ದೇವರು ತೆಗೆದುಹಾಕದಿದ್ದರೂ, ‘ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಆತನು ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು’ ಎಂಬ ಭರವಸೆ ನಮಗೂ ಇರಸಾಧ್ಯವಿದೆ. (1 ಕೊರಿಂಥ 10:13) ಬೇಗನೆ ದೇವರು ಮಾನವಕುಲದ ಎಲ್ಲಾ ಸಂಕಷ್ಟಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವನು. ಅಷ್ಟರ ತನಕ, ‘ಪ್ರಾರ್ಥನೆಯನ್ನು ಕೇಳುವಾತನ’ ಕಡೆಗೆ ತಿರುಗುವುದು, ನಾವು ಎದುರಿಸುವ ಗಂಭೀರವಾದ ಪರಿಸ್ಥಿತಿಯನ್ನು ಬದಲಾಯಿಸಬಲ್ಲದು.​—⁠ಕೀರ್ತನೆ 65:⁠2.