ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನ ನಾಮದ ಪ್ರಸಿದ್ಧಿಗಾಗಿ”

“ಯೆಹೋವನ ನಾಮದ ಪ್ರಸಿದ್ಧಿಗಾಗಿ”

“ಯೆಹೋವನ ನಾಮದ ಪ್ರಸಿದ್ಧಿಗಾಗಿ”

ಲೋಕದಾದ್ಯಂತ ಕಾವಲಿನಬುರುಜು ಮತ್ತು ಅದರ ಜೊತೆ ಪತ್ರಿಕೆಯಾದ ಎಚ್ಚರ!ವನ್ನು, ಅವುಗಳಲ್ಲಿರುವ ಆಧ್ಯಾತ್ಮಿಕ ವಿಷಯ ಹಾಗೂ ಬೋಧಪ್ರದ ಮೌಲ್ಯಕ್ಕಾಗಿ ಮೆಚ್ಚಲಾಗುತ್ತದೆ. ಇದನ್ನೇ ತಿಳಿಸುತ್ತಾ, ಫ್ರಾನ್ಸ್‌ನಲ್ಲಿನ ಒಬ್ಬ ವಾಚಕಳು ಇತ್ತೀಚೆಗೆ ಈ ಮುಂದಿನ ಪತ್ರವನ್ನು ಬರೆದಳು:

“ನಾನು ಮೂಲತಃ ಆಫ್ರಿಕದ ಯುವತಿ. ತೀರ ಕಡಿಮೆ ವಿದ್ಯಾಭ್ಯಾಸವುಳ್ಳವಳು. ಸ್ವಲ್ಪ ಸಮಯದ ಹಿಂದೆ ನಾನು ನಿಮ್ಮ ಪತ್ರಿಕೆಗಳನ್ನು ಓದಲಾರಂಭಿಸಿದೆ. ಅದರಲ್ಲಿರುವ ವಿಷಯಗಳಿಂದ ಆಕರ್ಷಿತಳಾಗಿ, ವಾಚನದ ಮೌಲ್ಯವೇನೆಂಬುದನ್ನು ನಾನು ಕಂಡುಹಿಡಿಯುತ್ತಾ ಇದ್ದೇನೆ. ನಿಮ್ಮ ಪತ್ರಿಕೆಗಳಿಂದಾಗಿಯೇ ನನ್ನ ಶಬ್ದಭಂಡಾರವು ಹೆಚ್ಚಾಗಿದೆ ಮತ್ತು ಈಗ ಪತ್ರಗಳನ್ನು ಬರೆಯುವಾಗ ಮೊದಲಿನಷ್ಟು ತಪ್ಪುಗಳನ್ನು ಮಾಡದಿರಲು ಸಾಧ್ಯವಾಗಿದೆ.

“ಮಾನವರು, ಭೂಗ್ರಹ, ಮತ್ತು ಸೃಷ್ಟಿಕರ್ತನಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ನೀವು ಲೇಖನಗಳನ್ನು ಪ್ರಕಾಶಿಸುತ್ತಿರುವುದನ್ನು ನೋಡಿ ನಾನು ಬೆರಗಾಗುತ್ತೇನೆ. ಈ ಲೇಖನಗಳು ಎಷ್ಟು ಸರಳವೂ ಸ್ಪಷ್ಟವೂ ಆಗಿವೆಯೆಂದರೆ, ಅವು ಒಬ್ಬ ವ್ಯಕ್ತಿಯನ್ನು ಹುರುಪಿನ ವಾಚಕನಾಗುವಂತೆ ಮಾಡುತ್ತವೆ. ಎಲ್ಲಾ ವಿಧಗಳ ಜನರಿಗೆ ಏಕಕಾಲದಲ್ಲಿ ಕಲಿಸುವ ಈ ಸಾಮರ್ಥ್ಯ ಬೇರೆ ಯಾರಿಗೂ ಇಲ್ಲ.

“ಮತ್ತು ಇದೆಲ್ಲವೂ ಯಾವುದೇ ಲಾಭಕ್ಕಾಗಿ ಅಲ್ಲ, ಬದಲಾಗಿ ಯೆಹೋವನ ನಾಮದ ಪ್ರಸಿದ್ಧಿಗಾಗಿ ಮಾತ್ರ ಮಾಡಲಾಗುತ್ತಿದೆ ಎಂಬುದನ್ನು ನೋಡಿಯೂ ನಾನು ಬೆರಗಾಗುತ್ತೇನೆ. ನಿಮಗೆ ಆತನ ಅನುಗ್ರಹವಿದೆಯೆಂದು ನನಗೆ ಗೊತ್ತು. ನಿಮಗೆ ಉಪಕಾರ. ಕಲಿಸಲಿಕ್ಕಾಗಿ ಬೇಕಾದ ಶಕ್ತಿಯನ್ನು ಸೃಷ್ಟಿಕರ್ತನಿಂದ ಪಡೆಯುತ್ತಾ ಇರಿ.”

ಸದ್ಯದಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಬೈಬಲ್‌ ಶೈಕ್ಷಣಿಕ ಕೆಲಸವನ್ನು 235 ದೇಶಗಳಲ್ಲಿ ನಡೆಸುತ್ತಿದ್ದಾರೆ. ಕಾವಲಿನಬುರುಜು ಪತ್ರಿಕೆಯು 148 ಭಾಷೆಗಳಲ್ಲಿ ಮತ್ತು ಎಚ್ಚರ! ಪತ್ರಿಕೆಯು 87 ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತಿದೆ. ಈ ಪತ್ರಿಕೆಗಳು ಯಾವ ಮನುಷ್ಯನಿಗೂ ಸ್ತುತಿಯನ್ನು ತರಲಿಕ್ಕಾಗಿ ಮುದ್ರಿಸಲ್ಪಡುವುದಿಲ್ಲ. ಅವುಗಳಲ್ಲಿರುವ ಬೈಬಲ್‌ ಆಧಾರಿತ ಸಲಹೆ ಹಾಗೂ ಸದ್ಯೋಚಿತ ಮಾಹಿತಿಯು ಸೃಷ್ಟಿಕರ್ತನಿಗೆ ಕೀರ್ತಿಯನ್ನು ತರಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ. ಆತನು ಹೇಳುವುದು: ‘ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸುವವನಾಗಿದ್ದೇನೆ.’ (ಯೆಶಾಯ 48:17) ನೀವು ಪವಿತ್ರ ಶಾಸ್ತ್ರಗಳನ್ನು ಈ ಬೈಬಲ್‌ ಅಧ್ಯಯನ ಸಹಾಯಕಗಳೊಂದಿಗೆ ಕ್ರಮವಾಗಿ ಓದುವುದನ್ನು ಮುಂದುವರಿಸುತ್ತಾ, ಪ್ರಯೋಜನವನ್ನು ಪಡೆಯುವಂತಾಗಲಿ.