ನಿಮಗೆ ನೆನಪಿದೆಯೇ?
ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:
• ಕೋಂಪ್ಲೂಟೆನ್‌ಸೀಆನ್ ಪಾಲೀಗ್ಲೋಟ್ ಏನಾಗಿತ್ತು, ಮತ್ತು ಇದು ಗಮನಾರ್ಹವಾದದ್ದಾಗಿತ್ತು ಏಕೆ?
ಇದು ಬಹುಭಾಷೆಯ ಬೈಬಲಿನ ಮುದ್ರಿತ ಪ್ರತಿಯಾಗಿದ್ದು, ಇದರಲ್ಲಿ ಸಮಾಂತರವಾದ, ಅಕ್ಕಪಕ್ಕದ ಅಂಕಣಗಳಲ್ಲಿ ಆಗ ಲಭ್ಯವಿದ್ದ ಹೀಬ್ರು, ಗ್ರೀಕ್, ಮತ್ತು ಲ್ಯಾಟಿನ್ ಭಾಷೆಯ—ಇದರೊಂದಿಗೆ ಕೆಲವು ಭಾಗಗಳು ಅರಮೇಯಿಕ್ ಭಾಷೆಯಲ್ಲಿ—ಅತ್ಯುತ್ತಮ ಮೂಲಪಾಠವು ಒಳಗೂಡಿತ್ತು. ಈ ಪಾಲೀಗ್ಲೋಟ್ ಬೈಬಲ್, ಮೂಲ ಭಾಷೆಗಳ ಹೆಚ್ಚು ನಿಷ್ಕೃಷ್ಟವಾದ ಮೂಲಪಾಠವನ್ನು ಉತ್ಪಾದಿಸುವುದರಲ್ಲಿ ಒಂದು ಪ್ರಮುಖ ಮುನ್ನೆಜ್ಜೆಯಾಗಿತ್ತು.—4/15, ಪುಟಗಳು 28-31.
• ಮಾನವರು ದೇವರನ್ನು ಹೇಗೆ ಸಂತೋಷಪಡಿಸಸಾಧ್ಯವಿದೆ?
ಯೆಹೋವನು ಒಬ್ಬ ನೈಜ, ಜೀವಂತ ವ್ಯಕ್ತಿಯಾಗಿರಲಾಗಿ, ಯೋಚಿಸಲು, ಕ್ರಿಯೆಗೈಯಲು ಮತ್ತು ಭಾವನೆಗಳನ್ನು ವ್ಯಕ್ತಿಪಡಿಸಲು ಸಮರ್ಥನಾಗಿದ್ದಾನೆ. ಆತನು “ಸಂತೋಷಭರಿತ ದೇವರು” ಆಗಿದ್ದಾನೆ ಮತ್ತು ತನ್ನ ಉದ್ದೇಶವನ್ನು ಪೂರೈಸುವುದರಲ್ಲಿ ಸಂತೋಷಪಡುತ್ತಾನೆ. (1 ತಿಮೊಥೆಯ 1:11, NW; ಕೀರ್ತನೆ 104:31) ನಾವು ದೇವರ ಭಾವನೆಗಳ ಬಗ್ಗೆ ಹೆಚ್ಚೆಚ್ಚು ಕಲಿತಂತೆ, ಆತನ ಮನಸ್ಸನ್ನು ಸಂತೋಷಪಡಿಸಲು ನಾವೇನು ಮಾಡಬೇಕೆಂಬುದು ನಮಗೆ ಇನ್ನೂ ಹೆಚ್ಚೆಚ್ಚಾಗಿ ತಿಳಿದುಬರುವುದು.—5/15, ಪುಟಗಳು 4-7.
• ದಾವೀದನು ತನ್ನ ಹೆಂಡತಿಯಾದ ಮೀಕಲಳು ಪೂಜೆಯ ಬೊಂಬೆಯನ್ನು ಅಥವಾ ವಿಗ್ರಹವನ್ನು ಇಟ್ಟುಕೊಳ್ಳುವಂತೆ ಏಕೆ ಅನುಮತಿಸಿದನು?
ಅರಸನಾದ ಸೌಲನು ದಾವೀದನನ್ನು ಕೊಲ್ಲಲು ಒಳಸಂಚು ನಡೆಸಿದಾಗ, ಬಹುಶಃ ಒಬ್ಬ ಪುರುಷನ ಆಕಾರದ್ದಾಗಿದ್ದ ಒಂದು ಬೊಂಬೆಯನ್ನು ಹಾಸಿಗೆಯ ಮೇಲೆ ಮಲಗಿಸುವ ಮೂಲಕ ಅವನು ತಪ್ಪಿಸಿಕೊಳ್ಳಲು ಮೀಕಲಳು ಅವನಿಗೆ ಸಹಾಯಮಾಡಿದಳು. ಅವಳು ತನ್ನ ಬಳಿ ಪೂಜೆಯ ಬೊಂಬೆಯನ್ನು ಇಟ್ಟುಕೊಂಡಿರಲು ಒಂದು ಕಾರಣವು ಏನಾಗಿರಬಹುದೆಂದರೆ, ಅವಳ ಹೃದಯವು ಸಂಪೂರ್ಣವಾಗಿ ಯೆಹೋವನ ಕಡೆಗಿರಲಿಲ್ಲ. ದಾವೀದನಿಗೆ ಈ ಪ್ರತಿಮೆಯ ಕುರಿತು ಏನೂ ತಿಳಿದಿರಲಿಲ್ಲ, ಅಥವಾ ಅವಳು ಅರಸನಾದ ಸೌಲನ ಮಗಳಾಗಿದ್ದರಿಂದ ಅವನು ಅದನ್ನು ಸಹಿಸಿಕೊಂಡಿದ್ದಿರಬಹುದು ಅಷ್ಟೆ. (1 ಪೂರ್ವಕಾಲವೃತ್ತಾಂತ 16:25, 26)—6/1, ಪುಟ 29.
• ರಕ್ತದ ಕುರಿತಾದ ದೇವರ ಆಜ್ಞೆಗಳ ಹಿಂದೆ ಯಾವ ಮೂಲಭೂತ ಸತ್ಯವಿತ್ತು?
ದೇವರು ಜಲಪ್ರಳಯದ ನಂತರ, ಮೋಶೆಯ ಧರ್ಮಶಾಸ್ತ್ರದಲ್ಲಿ, ಮತ್ತು ಅಪೊಸ್ತಲ ಕೃತ್ಯಗಳು 15:28, 29ರಲ್ಲಿ ಕಂಡುಬರುವ ಆಜ್ಞೆಯಲ್ಲಿ ಏನು ಹೇಳಿದನೋ ಅದರ ಮೂಲಕ, ಯೇಸುವಿನಿಂದ ಸುರಿಸಲ್ಪಟ್ಟ ರಕ್ತವನ್ನು ಒಳಗೂಡಿರುವ ಯಜ್ಞದ ಕಡೆಗೆ ನಮ್ಮ ಗಮನವನ್ನು ಸೆಳೆದನು. ಆ ರಕ್ತದ ಮೂಲಕ ಮಾತ್ರ ನಾವು ಕ್ಷಮೆಯನ್ನು ಪಡೆಯಸಾಧ್ಯವಿದೆ ಮತ್ತು ದೇವರೊಂದಿಗೆ ಸಮಾಧಾನವನ್ನು ಹೊಂದಸಾಧ್ಯವಿದೆ. (ಕೊಲೊಸ್ಸೆ 1:20)—6/15, ಪುಟಗಳು 14-19.
• ಬೈಬಲಿನಲ್ಲಿ ಯೇಸುವಿನ ಎಷ್ಟು ಅದ್ಭುತಕಾರ್ಯಗಳ ಕುರಿತು ತಿಳಿಸಲಾಗಿದೆ?
ಸುವಾರ್ತೆ ಪುಸ್ತಕಗಳ ವೃತ್ತಾಂತಗಳು, ಯೇಸು ನಡಿಸಿದ 35 ಅದ್ಭುತಗಳ ಬಗ್ಗೆ ತಿಳಿಸುತ್ತವೆ. ಆದರೆ ಅವನು ನಡೆಸಿದ ಅದ್ಭುತಗಳ—ವರದಿಸಲ್ಪಟ್ಟಿರದಂಥವುಗಳನ್ನೂ ಒಳಗೊಂಡು—ನಿಷ್ಕೃಷ್ಟ ಸಂಖ್ಯೆಯನ್ನು ತಿಳಿಸಲಾಗಿಲ್ಲ. (ಮತ್ತಾಯ 14:14)—7/15, ಪುಟ 5.